ಅಂತಾರಾಷ್ಟ್ರೀಯ

23rd Sep, 2018
ಲಂಡನ್, ಸೆ. 23: ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯಿಂದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್‌ರನ್ನು ರಶ್ಯಕ್ಕೆ ಸಾಗಿಸಲು ರಶ್ಯ ಅಧಿಕಾರಿಗಳು ಗುಪ್ತ ಯೋಜನೆಯೊಂದನ್ನು ರೂಪಿಸಿದ್ದರು ಎಂದು ‘ದ ಗಾರ್ಡಿಯನ್’ ಪತ್ರಿಕೆ ಹೇಳಿಕೊಂಡಿದೆ. ಅಸಾಂಜ್ ವಿರುದ್ಧ ಸ್ವೀಡನ್‌ನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ...
23rd Sep, 2018
ವಾಶಿಂಗ್ಟನ್, ಸೆ. 23: ಕೊರಿಯ ಪರ್ಯಾಯ ದ್ವೀಪವು ಪರಮಾಣುಮುಕ್ತವಾಗುವವರೆಗೆ ಉತ್ತರ ಕೊರಿಯದ ಮೇಲಿನ ಆರ್ಥಿಕ ದಿಗ್ಬಂಧನಗಳು ಮುಂದುವರಿಯುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.  ‘‘ನಾವು ಕೊನೆಯನ್ನು ತಲುಪುವವರೆಗೆ, ಉತ್ತರ ಕೊರಿಯ ಚೇರ್‌ಮನ್ ಕಿಮ್ ಜಾಂಗ್ ಉನ್ ಅಮೆರಿಕದ ಅಧ್ಯಕ್ಷ...
23rd Sep, 2018
 ಉಕಾರ (ತಾಂಝಾನಿಯ), ಸೆ. 23: ತಾಂಝಾನಿಯದ ವಿಕ್ಟೋರಿಯ ಸರೋವರದಲ್ಲಿ ಗುರುವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 207ಕ್ಕೆ ಏರಿದೆ. ಮುಳುಗುಗಾರರು ಶನಿವಾರ ಮಗುಚಿದ ದೋಣಿಯ ಒಳಗಿನಿಂದ ಓರ್ವ ವ್ಯಕ್ತಿಯನ್ನು ರಕ್ಷಿಸಿದರು. ದೋಣಿಯ ಸುತ್ತಮುತ್ತ ಮೃತದೇಹಗಳು ನಿರಂತರವಾಗಿ ಮೇಲಕ್ಕೆ ಬರುತ್ತಿವೆ. ದೋಣಿಯು 300ಕ್ಕೂ ಅಧಿಕ...
23rd Sep, 2018
ಲಂಡನ್, ಸೆ. 23: ಮೊದಲನೇ ಮಹಾಯುದ್ಧದಲ್ಲಿ ಬ್ರಿಟಿಶ್ ಸೇನೆಯಲ್ಲಿ ಹೋರಾಡಿದ ಭಾರತೀಯ ಉಪಖಂಡದ ಸೈನಿಕರ ವಿರುದ್ಧ ತಾರತಮ್ಯವನ್ನು ಸೂಚಿಸುವ ದಾಖಲೆಗಳನ್ನು ನಾವು ಪತ್ತೆಹಚ್ಚಿದ್ದೇವೆ ಎಂದು ಭಾರತೀಯ ಕಲಾವಿದರ ಗುಂಪೊಂದು ಹೇಳಿದೆ. 20ನೇ ಶತಮಾನದ ಆದಿಭಾಗದಲ್ಲಿ ನಡೆದ ಯುದ್ಧದ ಶತಮಾನೋತ್ಸವದಲ್ಲಿ ಭಾಗವಹಿಸಲು ಬ್ರಿಟನ್‌ಗೆ ಹೋಗಿರುವ...
23rd Sep, 2018
ಲಂಡನ್, ಸೆ. 23: 1948 ಮತ್ತು 1973ರ ನಡುವಿನ ಅವಧಿಯಲ್ಲಿ ಬ್ರಿಟನ್‌ಗೆ ಆಗಮಿಸಿದ 124 ಭಾರತೀಯರಿಗೆ ಬ್ರಿಟನ್ ಪೌರತ್ವ ನೀಡಿದೆ. ಅವರ ಅನಿಶ್ಚಿತ ವಾಸ್ತವ್ಯ ಸ್ಥಾನಮಾನದ ಹಿನ್ನೆಲೆಯಲ್ಲಿ ಅವರಿಗೆ ಈವರೆಗೆ ಪೌರತ್ವ ಲಭಿಸಿರಲಿಲ್ಲ. ಇದು ‘ವಿಂಡ್‌ರಶ್’ ವಿವಾದ ಎಂಬುದಾಗಿ ಜನಜನಿತವಾಗಿತ್ತು. ಈ ವಿವಾದವು...
23rd Sep, 2018
ಟೆಹರಾನ್, ಸೆ. 23: ಇರಾಕ್ ಗಡಿ ಸಮೀಪ ಶನಿವಾರ ನಡೆದ ಸೇನಾ ಕವಾಯತಿನ ವೇಳೆ ಆಗಂತುಕರು ನಡೆಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 29 ಮಂದಿ ಮೃತಪಟ್ಟ ಬಳಿಕ, ಈ ದಾಳಿಗೆ ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಅಧ್ಯಕ್ಷ ಹಸನ್...
23rd Sep, 2018
ವಾಶಿಂಗ್ಟನ್, ಸೆ. 23: ಆಹಾರ ಮತ್ತು ನಗದು ನೆರವು ಸೇರಿದಂತೆ ಸರಕಾರಿ ಸವಲತ್ತುಗಳನ್ನು ಪಡೆದಿರುವ ಹಾಗೂ ಮುಂದಕ್ಕೆ ಪಡೆಯಬಹುದಾದ ವಲಸಿಗರಿಗೆ ಅಮೆರಿಕದ ಟ್ರಂಪ್ ಸರಕಾರವು, ಹೊಸ ನಿಯಮಗಳ ಪ್ರಕಾರ ಹಸಿರು ಕಾರ್ಡ್‌ಗಳನ್ನು ನಿರಾಕರಿಸಬಹುದಾಗಿದೆ. ಇದು ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಭಾರತೀಯರ ಮೇಲೆ ಪರಿಣಾಮ...
22nd Sep, 2018
ಬೀಜಿಂಗ್, ಸೆ. 22: ಅಮೆರಿಕದೊಂದಿಗೆ ಮುಂದಿನ ವಾರ ನಡೆಯಲು ನಿಗದಿಯಾಗಿದ್ದ ವ್ಯಾಪಾರ ಮಾತುಕತೆಗಳನ್ನು ಚೀನಾ ರದ್ದುಗೊಳಿಸಿದೆ ಹಾಗೂ ಅದು ಉಪಪ್ರಧಾನಿ ಲಿಯು ಹೆಯನ್ನು ವಾಶಿಂಗ್ಟನ್‌ಗೆ ಕಳುಹಿಸುವುದಿಲ್ಲ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ. ಲಿಯು ಭೇಟಿಗೆ ಪೂರ್ವಭಾವಿಯಾಗಿ ಚೀನಾದ ಮಧ್ಯಮ...
22nd Sep, 2018
ಬರ್ಲಿನ್, ಸೆ. 22: ಎರಡನೇ ಮಹಾಯುದ್ಧದ ಅವಧಿಯಲ್ಲಿ ಸ್ಟತಾಫ್‌ನಲ್ಲಿನ ನಾಝಿ ಯಾತನಾ ಶಿಬಿರ (ಕಾನ್ಸಂಟ್ರೇಶನ್ ಕ್ಯಾಂಪ್)ದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಜರ್ಮನಿಯ ಮಾಜಿ ಭದ್ರತಾ ಸಿಬ್ಬಂದಿಯೋರ್ವನ ವಿಚಾರಣೆ ನವೆಂಬರ್‌ನಲ್ಲಿ ನಡೆಯಲಿದೆ ಎಂದು ಜರ್ಮನಿಯ ನ್ಯಾಯಾಲಯವೊಂದು ಶುಕ್ರವಾರ ತಿಳಿಸಿದೆ. 94...
22nd Sep, 2018
ಇಸ್ಲಾಮಾಬಾದ್, ಸೆ. 22: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸೇರ್ಪಡೆಗೊಳ್ಳಲು ಹಾಗೂ ಅದರ ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸೌದಿ ಅರೇಬಿಯ ಒಪ್ಪಿದೆ ಎಂದು ಪಾಕಿಸ್ತಾನ ಹೇಳಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಸೌದಿ ಅರೇಬಿಯಕ್ಕೆ ನೀಡಿದ್ದ ಭೇಟಿಯ ವೇಳೆ...
22nd Sep, 2018
ಇಸ್ಲಾಮಾಬಾದ್, ಸೆ. 22: ಈ ತಿಂಗಳ ಕೊನೆಯಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲು ನಿಗದಿಯಾಗಿದ್ದ ವಿದೇಶ ಸಚಿವರ ನಡುವಿನ ಸಭೆಯನ್ನು ರದ್ದುಪಡಿಸಿರುವ ಭಾರತದ ಕ್ರಮವನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಟೀಕಿಸಿದ್ದಾರೆ. ‘‘ಶಾಂತಿ ಮಾತುಕತೆಯನ್ನು ಪುನರಾರಂಭಿಸುವ ನನ್ನ ಕರೆಗೆ ಭಾರತ ನೀಡಿರುವ ಅಹಂಕಾರದ ಮತ್ತು...
22nd Sep, 2018
ವಾಶಿಂಗ್ಟನ್, ಸೆ. 22: ಎಚ್-4 ವೀಸಾದಾರರ ಉದ್ಯೋಗ ಪರವಾನಿಗೆಗಳನ್ನು ರದ್ದುಪಡಿಸುವ ಕುರಿತ ನಿರ್ಧಾರ ಇನ್ನು ಮೂರು ತಿಂಗಳಲ್ಲಿ ಹೊರಬೀಳಬಹುದಾಗಿದೆ ಎಂದು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಶನಿವಾರ ಫೆಡರಲ್ ನ್ಯಾಯಾಲಯವೊಂದಕ್ಕೆ ತಿಳಿಸಿದೆ. ಎಚ್-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆ ಎಚ್-4 ವೀಸಾಗಳನ್ನು ನೀಡಲಾಗುತ್ತದೆ ಹಾಗೂ...
22nd Sep, 2018
ಟೆಹರಾನ್,ಸೆ.22: 1980ರ ದಶಕದಲ್ಲಿ ಇರಾಕ್ ವಿರುದ್ಧ ಇರಾನ್‌ನ ಸುದೀರ್ಘ ಯುದ್ಧದ ಸ್ಮರಣಾರ್ಥ ಶನಿವಾರ ತೈಲಸಮೃದ್ಧ ಖುಝೆಸ್ತಾನ್ ಪ್ರಾಂತ್ಯದ ರಾಜಧಾನಿ ಅಹ್ವಾಝ್‌ನಲ್ಲಿ ನಡೆಯುತ್ತಿದ್ದ ವಾರ್ಷಿಕ ಮಿಲಿಟರಿ ಪರೇಡ್‌ನ ಮೇಲೆ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದು,ಇತರ 53 ಜನರು...
22nd Sep, 2018
ವಾಶಿಂಗ್ಟನ್, ಸೆ. 22: ಅಮೆರಿಕದಲ್ಲಿ ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ಸಂಗ್ರಹಿಸಿ, ಅವುಗಳನ್ನು ಸೇನಾ ಬಳಕೆಗಾಗಿ ಪಾಕಿಸ್ತಾನಕ್ಕೆ ಕಳಹಿಸಿದ ಆರೋಪದಲ್ಲಿ ಪಾಕಿಸ್ತಾನ ಮೂಲದ ಉದ್ಯಮಿಯೊಬ್ಬನಿಗೆ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದು ಮೂರು ವರ್ಷಗಳ ನಿಗಾ (ಪ್ರೊಬೇಶನ್) ಶಿಕ್ಷೆ ವಿಧಿಸಿದೆ. ಕನೆಕ್ಟಿಕಟ್ ರಾಜ್ಯದ ನಾರ್ತ್ ಹ್ಯಾವನ್ ನಿವಾಸಿ...
22nd Sep, 2018
ಹೊಸದಿಲ್ಲಿ, ಸೆ.22: ರಫೇಲ್ ಒಪ್ಪಂದದಲ್ಲಿ ಭಾರತದ ಪಾಲುದಾರನಾಗಿ ರಿಲಯೆನ್ಸ್ ಡಿಫೆನ್ಸ್ ಸಂಸ್ಥೆಯ ಆಯ್ಕೆಯಲ್ಲಿ ತನ್ನ ಪಾತ್ರವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಇದು ಅನಿಲ್ ಅಂಬಾನಿಯವರ ರಿಲಯನ್ಸ್ ಡಿಫೆನ್ಸ್ ಸಂಸ್ಥೆ ಹಾಗೂ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆಯ ನಡುವಿನ ಜಂಟಿ ಉದ್ಯಮಕ್ಕಾಗಿನ...
22nd Sep, 2018
ಲಾಗೊಸ್ (ನೈಜೀರಿಯ), ಸೆ. 22: ಈಶಾನ್ಯ ನೈಜೀರಿಯದಲ್ಲಿ ಕಾಲರಾ ರೋಗ ಸ್ಫೋಟಿಸಿದ್ದು, ಎರಡು ವಾರಗಳ ಅವಧಿಯಲ್ಲಿ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ ತಿಳಿಸಿದೆ. ಯೋಬೆ ಮತ್ತು ಬೊರ್ನೊ ರಾಜ್ಯಗಳನ್ನು ಒಳಗೊಂಡ ವಲಯದಲ್ಲಿ 3,000ಕ್ಕೂ ಅಧಿಕ ಕಾಲರಾ ರೋಗದ ಪ್ರಕರಣಗಳು...
22nd Sep, 2018
ಬೈರೂತ್, ಸೆ. 22: ಸುಮಾರು 36 ಸಿರಿಯನ್ ನಿರಾಶ್ರಿತರನ್ನು ಹೊತ್ತ ದೋಣಿಯೊಂದು ಶನಿವಾರ ಲೆಬನಾನ್ ಕರಾವಳಿಯಲ್ಲಿ ಮುಳುಗಿದ್ದು, ಹೆಚ್ಚಿನವರನ್ನು ಲೆಬನಾನ್ ಸೇನೆ ರಕ್ಷಿಸಿದೆ. ಆದಾಗ್ಯೂ, ಒಂದು ಮಗು ಮುಳುಗಿ ಮೃತಪಟ್ಟಿದೆ. ದೋಣಿಯು 180 ಕಿಲೋಮೀಟರ್ ದೂರದಲ್ಲಿರುವ ಸೈಪ್ರಸ್‌ಗೆ ನಿರಾಶ್ರಿತರನ್ನು ಅಕ್ರಮವಾಗಿ ಸಾಗಿಸುತ್ತಿತ್ತು ಎಂದು...
21st Sep, 2018
ನ್ಯೂಯಾರ್ಕ್, ಸೆ. 21: ಕೆಲವು ದೇಶಗಳ ನಾಗರಿಕರಿಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2017ರಲ್ಲಿ ಹೊರಡಿಸಿದ ಆದೇಶವನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಗೂಗಲ್ ಉದ್ಯೋಗಿಗಳು ಚರ್ಚೆ ನಡೆಸಿದ್ದರು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಶುಕ್ರವಾರ ವರದಿ ಮಾಡಿದೆ. ವಲಸಿಗರ...
21st Sep, 2018
ವಾಶಿಂಗ್ಟನ್, ಸೆ. 21: ಚೀನಾದ ವಸ್ತುಗಳ ಮೇಲೆ ಇನ್ನೊಂದು ಸುತ್ತಿನ ಆಮದು ಸುಂಕವನ್ನು ವಿಧಿಸಿದ ದಿನಗಳ ಬಳಿಕ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಕೆಂಡ ಕಾರುವುದನ್ನು ಮುಂದುವರಿಸಿದ್ದಾರೆ ಹಾಗೂ ವ್ಯಾಪಾರ ಸಮರ ಸದ್ಯಕ್ಕೆ ಮುಗಿಯುವುದಿಲ್ಲ ಎಂಬ ಸೂಚನೆಯನ್ನು ನೀಡಿದ್ದಾರೆ. ‘‘ಇದು...
21st Sep, 2018
ಮಾಸ್ಕೊ, ಸೆ. 21: ಅಮೆರಿಕದ ರಶ್ಯ ವಿರೋಧಿ ದಿಗ್ಬಂಧನಗಳು ಜಾಗತಿಕ ಸ್ಥಿರತೆಯನ್ನು ದುರ್ಬಲಗೊಳಿಸಿವೆ ಎಂದು ರಶ್ಯ ಶುಕ್ರವಾರ ಬಣ್ಣಿಸಿದೆ ಹಾಗೂ ‘ಬೆಂಕಿಯ ಜೊತೆ ಆಟ ಆಡದಂತೆ’ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. ‘‘ಜಾಗತಿಕ ಸ್ಥಿರತೆ ಎಂಬ ಕಲ್ಪನೆಯೊಂದಿದೆ ಎಂಬುದನ್ನು ನೆನಪು ಮಾಡಿಕೊಂಡರೆ ಅವರಿಗೆ ಒಳ್ಳೆಯದು....
21st Sep, 2018
ವಾಶಿಂಗ್ಟನ್, ಸೆ. 21: ರಶ್ಯದಿಂದ ಎಸ್-400 ರಕ್ಷಣಾ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವುದಕ್ಕಾಗಿ ಚೀನಾ ಸೇನೆಯ ವಿರುದ್ಧ ಅಮೆರಿಕ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಇದೇ ಎಸ್-400 ಕ್ಷಿಪಣಿಗಳನ್ನು ಖರೀದಿಸಲು ಭಾರತವೂ ಕಾಯುತ್ತಿದೆ. ಹಾಗಾಗಿ, ಈ ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಮುಂದಾಗಿರುವ...
21st Sep, 2018
ನೈರೋಬಿ (ಕೆನ್ಯ), ಸೆ. 21: ತಾಂಝಾನಿಯ ದೇಶದ ವಿಕ್ಟೋರಿಯ ಸರೋವರದಲ್ಲಿ ಗುರುವಾರ ದೋಣಿಯೊಂದು ಮುಳುಗಿದ್ದು, ಮೃತಪಟ್ಟವರ ಸಂಖ್ಯೆ ಶುಕ್ರವಾರ 100ನ್ನು ದಾಟಿದೆ. ತಾಂಝಾನಿಯ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ದೋಣಿಯು ಸುಮಾರು 200 ಪ್ರಯಾಣಿಕರನ್ನು ಒಯ್ಯುತ್ತಿದ್ದು ಎನ್ನಲಾಗಿದೆ. ಅದು ದೋಣಿಯ ಸಾಮರ್ಥ್ಯದ ದುಪ್ಪಟ್ಟಾಗಿದೆ. ದೋಣಿಯು...
21st Sep, 2018
ವಿಶ್ವಸಂಸ್ಥೆ, ಸೆ. 21: ಖಾನ್ ಅಲ್-ಅಹ್ಮರ್ ಎಂಬ ಫೆಲೆಸ್ತೀನ್ ಗ್ರಾಮವನ್ನು ಧ್ವಂಸಗೊಳಿಸುವ ಇಸ್ರೇಲ್‌ನ ಯೋಜನೆಗೆ ಐರೋಪ್ಯ ಒಕ್ಕೂಟದ 8 ದೇಶಗಳು ವಿರೋಧ ವ್ಯಕ್ತಪಡಿಸಿವೆ ಹಾಗೂ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಇಸ್ರೇಲ್ ಸರಕಾರವನ್ನು ಒತ್ತಾಯಿಸಿವೆ. ಇದಕ್ಕೆ ಸಂಬಂಧಿಸಿದ ಹೇಳಿಕೆಯೊಂದನ್ನು ವಿಶ್ವಸಂಸ್ಥೆಗೆ ನೆದರ್‌ಲ್ಯಾಂಡ್‌ನ ರಾಯಭಾರಿ ಕ್ಯಾರಲ್...
21st Sep, 2018
ಓರ್ಲಾಂಡೊ (ಫ್ಲೋರಿಡ), ಸೆ. 21: ಅಮೆರಿಕದ ಫ್ಲೋರಿಡ ರಾಜ್ಯದ ಓರ್ಲಾಂಡೊ ನಗರದ ವಿಮಾನ ನಿಲ್ದಾಣದಿಂದ 22 ವರ್ಷದ ವಿದ್ಯಾರ್ಥಿಯೊಬ್ಬ ಪ್ರಯಾಣಿಕ ವಿಮಾನವೊಂದನ್ನು ಕದಿಯಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ. ಅವನು ವಿಮಾನ ನಿಲ್ದಾಣದ ಬೇಲಿ ಹಾರಿ ವಿಮಾನವನ್ನು ಏರಿದನು, ಆದರೆ ಅವನನ್ನು ಕೂಡಲೇ ಬಂಧಿಸಲಾಯಿತು...
21st Sep, 2018
ನಗ (ಫಿಲಿಪ್ಪೀನ್ಸ್), ಸೆ. 21: ಮಧ್ಯ ಫಿಲಿಪ್ಪೀನ್ಸ್‌ನ ಪರ್ವತವೊಂದರ ಸಮೀಪ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಹತ್ತಾರು ಮನೆಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ ಹಾಗೂ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಮಣ್ಣಿನಡಿಯಲ್ಲಿ ಸಿಕ್ಕಿಹಾಕಿಕೊಂಡ ಕೆಲವರು ರಕ್ಷಣೆಗಾಗಿ ತುರ್ತು ಸಂದೇಶಗಳನ್ನು ಕಳುಹಿಸಿದ ಬಳಿಕ, ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ...
21st Sep, 2018
ಹನೋಯಿ (ವಿಯೆಟ್ನಾಮ್), ಸೆ. 21: ವಿಯೆಟ್ನಾಮ್ ಅಧ್ಯಕ್ಷ ಟ್ರಾನ್ ಡೈ ಕುವಾಂಗ್ ಅಲ್ಪಕಾಲದ ಅಸೌಖ್ಯದಿಂದ ಬಳಿಕ ಶುಕ್ರವಾರ ನಿಧನರಾಗಿದ್ದಾರೆ ಎಂದು ಸರಕಾರಿ ಟೆಲಿವಿಶನ್ ಮತ್ತು ರೇಡಿಯೊ ಘೋಷಿಸಿವೆ. ‘‘ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ಕುವಾಂಗ್ ದೇಶಿ ಮತ್ತು ವಿದೇಶಿ ವೈದ್ಯರು ಮತ್ತು...
21st Sep, 2018
 ವಾಶಿಂಗ್ಟನ್, ಸೆ.21: ಅಮೆರಿಕದ ಫ್ಲೊರಿಡದಲ್ಲಿರುವ ಕೇಪ್ ಕನವೆರಲ್ ವಾಯುಪಡೆ ನಿಲ್ದಾಣದಿಂದ ಉಡಾಯಿಸಲ್ಪಟ್ಟ ನಾಸಾದ ದೂರಸಂಪರ್ಕ ಐದು ತಿಂಗಳ ನಂತರ ಸೌರ ಮಂಡಲದ ಹೊರಗಿರುವ ಎರಡು ಗ್ರಹಗಳನ್ನು ಪತ್ತೆಹಚ್ಚಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭೂಮಿಯಿಂದ 49 ಬೆಳಕಿನ ವರ್ಷ ದೂರವಿರುವ ಸೂಪರ್ ಅರ್ತ್...
20th Sep, 2018
ವಾಶಿಂಗ್ಟನ್, ಸೆ. 20: ಅಮೆರಿಕದ ಸಂಸತ್ತು ಕಾಂಗ್ರೆಸ್‌ಗೆ ನವೆಂಬರ್ 6ರಂದು ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ದಾಖಲೆಯ 12 ಭಾರತೀಯ-ಅಮೆರಿಕನ್ನರು ಸ್ಪರ್ಧಿಸುತ್ತಿದ್ದಾರೆ. ಅವರ ಪೈಕಿ ಮೂವರು ಮಹಿಳೆಯರು. ಅವರೆಂದರೆ- ಆ್ಯರಿರೆನದ ಹಿರಾಲ್ ತಿಪಿರ್ನೇನಿ ಮತ್ತು ಅನಿತಾ ಮಲಿಕ್ ಹಾಗೂ ವಾಶಿಂಗ್ಟನ್ ರಾಜ್ಯದ ಪ್ರಮೀಳಾ ಜಯಪಾಲ್. ಇಲಿನಾಯಿಸ್‌ನಿಂದ...
20th Sep, 2018
ವಾಶಿಂಗ್ಟನ್, ಸೆ. 20: ಉತ್ತರ ಕೊರಿಯದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ನಾವು ಸಿದ್ಧ ಎಂದು ಅಮೆರಿಕ ಹೇಳಿದೆ. ಅಮೆರಿಕ ಪೂರಕ ಕ್ರಮಗಳನ್ನು ತೆಗೆದುಕೊಂಡರೆ, ನಮ್ಮ ಪ್ರಮುಖ ಕ್ಷಿಪಣಿ ಸ್ಥಾವರಗಳನ್ನು ನಾಶಗೊಳಿಸುತ್ತೇವೆ ಹಾಗೂ ಪ್ರಧಾನ ಯೊಂಗ್‌ಬ್ಯಾನ್ ಪರಮಾಣು ಆವರಣವನ್ನು ಮುಚ್ಚುತ್ತೇವೆ ಎಂಬುದಾಗಿ ಉತ್ತರ ಕೊರಿಯದ ಬುಧವಾರ...
20th Sep, 2018
ಮಾಸ್ಕೊ, ಸೆ. 20: ರಶ್ಯ ರಾಜಧಾನಿ ಮಾಸ್ಕೊದಲ್ಲಿ ಅಫ್ಘಾನಿಸ್ತಾನದ ಬಗ್ಗೆ ನಡೆಯಲಿರುವ ಬಹುಪಕ್ಷೀಯ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ತಾಲಿಬಾನ್ ಉತ್ಸುಕವಾಗಿದೆ ಎಂದು ರಶ್ಯದ ವಿದೇಶ ವ್ಯವಹಾರಗಳ ಸಚಿವಾಲಯ ಬುಧವಾರ ಹೇಳಿದೆ ಎಂದು ಆರ್‌ಐಎ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಮಾತುಕತೆಗಳ ದಿನಾಂಕದ ಬಗ್ಗೆ...
Back to Top