ನಿಧನ

19th Nov, 2018
ಮಂಗಳೂರು, ನ.19: ಕಾವೂರು ಪದ್ಮಪ್ಪ ದೇವಾಡಿಗ ಅವರ ಪತ್ನಿ, ನಗರದ ನಿವಾಸಿ ಸುನಂದಾ ಉಳ್ಳಾಲ್ (79) ಎಂಬವರು ಹೃದಯಾಘಾತ ದಿಂದ ಸೋಮವಾರ ಸಂಜೆ ನಿಧನರಾಗಿದ್ದಾರೆ. ಇವರು ಇಎಸ್‌ಐ, ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸೂಪರಿಡೆಂಟ್ ಆಗಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದರು. ಅವರಿಗೆ ಪುತ್ರಿ, ಟೈಮ್ಸ್...
15th Nov, 2018
ಮುಂಬಯಿ, ನ.15: ಕೊಂಕಣಿ ನಾಟಕಕಾರ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರ ಪತ್ನಿ, ಕಲಾ ಪೋಷಕಿ ಲೂಯಿಸಾ ಫೆರ್ನಾಂಡಿಸ್ ಕಾಸ್ಸಿಯಾ (76) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮುಂಜಾನೆ ಬೊರಿವಿಲಿ ಪಶ್ಚಿಮದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂಲತಃ ಮಂಗಳೂರಿನವರಾದ ಲೂಯಿಸಾ ಕಳೆದ ಅನೇಕ ವರ್ಷಗಳಿಂದ ದುಬೈಯಲ್ಲಿದ್ದವರು...
14th Nov, 2018
ಸುಂಟಿಕೊಪ್ಪ, ನ.14: ಮಾದಾಪುರ ರಸ್ತೆಯಲ್ಲಿರುವ ಸ್ವಾಮಿ ಇಂಜಿನಿಯರಿಂಗ್ ವರ್ಕ್ಸ್ ನ ಮಾಲಕ ಸುಂಟಿಕೊಪ್ಪವರ್ಕ್‌ಶಾಪ್ ಮಾಲಕರ ಸಂಘದ ಗೌರವಾಧ್ಯಕ್ಷ ಎಚ್. ಗಂಗಾಧರ್(71) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಂಟಿಕೊಪ್ಪದ ಸುತ್ತಮುತ್ತಲಿನ ಯುವಕರಿಗೆ ವಾಹನಗಳ ದುರಸ್ತಿ (ಮೆಕ್ಯಾನಿಕ್) ಹುದ್ದೆಯನ್ನು...
08th Nov, 2018
ಮಂಗಳೂರು, ನ.8: ಬಡವರ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಜೋಕಟ್ಟೆ ನಿವಾಸಿ ಎಂ.ಪಿ.ಇಸ್ಮಾಯೀಲ್(68) ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಸಮಾಜ ಸೇವಕ, ಬಡ ವಿದ್ಯಾರ್ಥಿಗಳನ್ನು ಹೆಚ್ಚು ಅಂಕ ಗಳಿಸಲು ಪ್ರೋತ್ಸಾಹಿಸಿ ವೈದ್ಯಕೀಯ, ತಾಂತ್ರಿಕ ಶಿಕ್ಷಣವನ್ನು...
08th Nov, 2018
ಕುಂದಾಪುರ, ನ.8: ಕೋಣಿ ಕಾರಂತ ಮನೆತನದ ವಡೇರಹೋಬಳಿ ನರಸಿಂಹ ಕಾರಂತರ ಕಿರಿಯ ಪುತ್ರ ವಿ.ಗೋಪಾಲಕೃಷ್ಣ ಕಾರಂತ(80) ಇತ್ತೀಚೆಗೆ ನಿಧನರಾದರು. ಇವರು ತೆಂಗಿನ ಕರಟದಿಂದ ವಿವಿಧ ಕಲಾಕೃತಿಗಳನ್ನು ಮಾಡುವುದರಲ್ಲಿ ನಿಪುಣರಾಗಿದ್ದರು. ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದಿದ್ದರೂ ಕೊಳಲು ಮತ್ತು ಹಾರ್ಮೋನಿಯಂ ನುಡಿಸುವುದರಲ್ಲಿ ಪರಿಣತರಾಗಿದ್ದರು. ಮೃತರು ಪುತ್ರ...
08th Nov, 2018
ಮಂಗಳೂರು, ನ.8: ಜೋಕಟ್ಟೆ ನಿವಾಸಿ ಹಾಜಿ ಬಿ.ಶೇಕುಂಞಿ (85) ಗುರುವಾರ ಮಂಗಳೂರಿನಲ್ಲಿರುವ ತನ್ನ ಪುತ್ರನ ಮನೆಯಲ್ಲಿ ನಿಧನರಾದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಹಾಜಿ ಬಿ.ಶೇಕುಂಞಿ ಜೋಕಟ್ಟೆ ಪರಿಸರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದರು. ಜೋಕಟ್ಟೆಯ ಮಸೀದಿಯ ಅಧ್ಯಕ್ಷರಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಮೃತರು...
07th Nov, 2018
ಬ್ರಹ್ಮಾವರ, ನ.7: ಉಪ್ಪಿನಕೋಟೆ ಕುಮ್ರಗೋಡು ಬಡಾಹಿತ್ಲು ನಿವಾಸಿ ನ್ಯೂಟನ್ ಡಿಸಿಲ್ವ (42) ಅಸೌಖ್ಯದಿಂದ ಮಂಗಳವಾರ ನಿಧನರಾದರು. ಮೃತರು ತಾಯಿ, ಸಹೋದರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರ ಬ್ರಹ್ಮಾವರದ ಸೈಂಟ್ ಮೇರಿಸ್ ಆರ್ಥೊಡೊಕ್ಸ್ ಸಿರಿಯನ್ ಚರ್ಚ್‌ನ ಸ್ಮಶಾನದಲ್ಲಿ ನೆರವೇರಿತು.
02nd Nov, 2018
ಪುತ್ತೂರು, ನ. 2: ಇರ್ದೆ ಗ್ರಾಮದ ಪೇರಲ್ತಡ್ಕ ನಿವಾಸಿ ಇಬ್ರಾಹಿಂ ಹಾಜಿ (78) ರವರು ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಗುರುವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಪುತ್ರರು, ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಪೇರಲ್ತಡ್ಕ ಮಸೀದಿಯಲ್ಲಿ ಮೃತರ ದಫನ ಕಾರ್ಯ...
01st Nov, 2018
ಬಂಟ್ವಾಳ, ನ.1: ಬೋಳಂತೂರು ಕಲ್ಪನೆ ನಿವಾಸಿ ಅಬ್ದುಲ್ಲಾ ಮುಸ್ಲಿಯಾರ್ (52) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
31st Oct, 2018
ಉಡುಪಿ, ಅ. 31: ನೀಲಾವ ಮಹಿಷಮರ್ದಿನೀ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಭಟ್ ಅವರ ಪತ್ನಿ ನಾಗರತ್ನ ಎಸ್. ಭಟ್ (69) ಅಸೌಖ್ಯದಿಂದ ಮಂಗಳವಾರ ನಿಧನ ಹೊಂದಿದರು. ಮೃತರು ಪತಿ, ಮಣಿಪಾಲದ ಸ್ಟೆಂಪ್ಯೂಟಿಕ್ಸ್ ರಿಸರ್ಚ್ ಸಂಸ್ಥೆ ಮುಖ್ಯಸ್ಥ ಡಾ....
30th Oct, 2018
ಹೆಬ್ರಿ, ಅ.30: ಮುನಿಯಾಲು ಎಳ್ಳಾರೆ ಮುಳ್ಕಾಡು ದೇವಿಕೃಪಾ ಮನೆಯ ದಿ.ಚಂದ್ರಯ್ಯಾ ಆಚಾರ್ಯರ ಪತ್ನಿ ದೇವಕಿ ಆಚಾರ್ಯ(77) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ದೈವಭಕ್ತರಾಗಿದ್ದ ದೇವಕಿ ಆಚಾರ್ಯ ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
29th Oct, 2018
ಮಂಗಳೂರು, ಅ.29: ಮಲಾರ್ ಪದವು ನಿವಾಸಿ ಹಾಜಿ ಅಬ್ದುಲ್ ಖಾದರ್ ಮಲಾರ್ (90) ರವಿವಾರ ರಾತ್ರಿ ನಿಧನರಾದರು. ವ್ಯಾಪಾರಸ್ಥರಾಗಿದ್ದ ಅಬ್ದುಲ್ ಖಾದರ್ ಕೆಲವು ಸಮಯದಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ...
29th Oct, 2018
ಬಂಟ್ವಾಳ, ಅ. 29: ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕಲ್ಲಾಜೆ ನಿವಾಸಿ ಕಡೆಂಜ ಮಾರಪ್ಪ ರೈ (82) ಅವರು ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಪ್ರವೀಣ್ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕರಾಗಿರುವ ಇವರು, ಮಂಗಳೂರು ಬಂಟರಯಾನೆ ನಾಡವರ...
24th Oct, 2018
ಪಡುಬಿದ್ರೆ, ಅ. 24:  ಕುಂಜೂರು ದುರ್ಗಾ ನಗರದ ದಿ. ಟೆಂಪೊ ಅಬ್ಬಾಸ್‍ರ ಪುತ್ರ ಕುಂಜೂರು ಸ್ಪೋಟ್ರ್ಸ್ ಕ್ಲಬ್‍ನ ಉಪಾಧ್ಯಕ್ಷ ಅಬ್ದುಲ್ ರಝಾಕ್ ಅಬ್ಬಾಸ್ (40) ಬುಧವಾರ ಹೃದಯಾಘಾತದಿಂದ ನಿಧನ ಹೊಂದಿದರು. ಕಳೆದ ಹಲವು ವರ್ಷಗಳಿಂದ ಶಾಲಾ ಮಕ್ಕಳ ಟೆಂಟೊ ನಿರ್ವಹಣೆ ಮಾಡುತ್ತಿದ್ದ ಅವರು...
23rd Oct, 2018
ಕೊಣಾಜೆ,ಅ.23: ಇರಾ ಗ್ರಾಮದ ನಾಯರ್ ಮಜಲ್ ನಿವಾಸಿ ಆಲ್ಬರ್ಟ್ ಡಿಸೋಜ(83) ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಕೃಷಿಕರಾಗಿದ್ದ ಇವರು ಪತ್ನಿ, 4 ಗಂಡು ಹಾಗೂ 4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 
23rd Oct, 2018
ಬಂಟ್ವಾಳ, ಅ. 23: ಬಿ.ಕಸ್ಬಾ ಗ್ರಾಮದ ಜಕ್ರಿಬೆಟ್ಟು ನಿವಾಸಿ ಎಡ್ಮಂಡ್ ಮತ್ತು ಮೇರಿ ಸಲ್ಡಾನ್ಹಾ ಅವರ ಪುತ್ರ ಕಿರಣ್ ಲೆಸ್ಟರ್ ಸಲ್ಡಾನ್ಹಾ (32) ಮಂಗಳವಾರ ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದಾಗಿ ಮೃತಪಟ್ಟಿದ್ದಾರೆ.  ಜಕ್ರಿಬೆಟ್ಟು ಸ್ವಗೃಹದಲ್ಲಿ ಅ.24ರಂದು ಸಂಜೆ 3.30 ತನಕ...
12th Oct, 2018
ಮೂಡುಬಿದಿರೆ, ಅ. 12: ಹೊಸಂಗಡಿ ಅರಮನೆ ಬಸದಿ ಪುರೋಹಿತ ಆದಿರಾಜ ಇಂದ್ರ (81) ಗುರುವಾರ ನಿಧನ ಹೊಂದಿದರು. ಅವರು ಕೃಷಿಕರಾಗಿಯೂ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರನ್ನು ಅವರು ಅಗಲಿದ್ದಾರೆ.
11th Oct, 2018
ಉಡುಪಿ, ಅ.11: ಕಾರ್ಕಳ ತಾಲೂಕು ಸಾಣೂರು ಸಮೀಪದ ಶಾಂತಿಂಜೆ ನಿವಾಸಿ ಕೃಷಿಕ ನರಸಿಂಹ ಭಟ್ ಅವರ ತಾಯಿ ಜಲಜಾಕ್ಷಿ(93) ಸ್ವಗೃದಲ್ಲಿ ಸೋಮವಾರ ನಿಧನರಾದರು.
10th Oct, 2018
ಮೂಡುಬಿದಿರೆ, ಅ.10: ವಾಲ್ಪಾಡಿ ನಿವಾಸಿ, ಪೋಟೋಗ್ರಾಫರ್, ಧೀರಜ್ ಜೈನ್(35) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. ಅವರು ಮೂಡುಬಿದಿರೆ ವಲಯದ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್‍ನ ಸಕ್ರೀಯ ಸದಸ್ಯರಾಗಿದ್ದರು.
10th Oct, 2018
ಮಂಗಳೂರು, ಅ.10: ಸೋಮೇಶ್ವರ ಗ್ರಾಮದ ಪಿಲಾರು ದಾರಂದಬಾಗಿಲಿನ ನಿವಾಸಿ ದಿ.ಕಿಟ್ಟಣ್ಣ ಕಿಲ್ಲೆಯವರ ಪತ್ನಿ ಪುತ್ತಮ್ಮ ಶೆಟ್ಟಿ(94) ಸೋಮವಾರ ಸಂಜೆ ತಮ್ಮ ಪುತ್ರನ ನಿವಾಸದಲ್ಲಿ ನಿಧನರಾಗಿದ್ದು, ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
09th Oct, 2018
ಕೊಣಾಜೆ, ಅ. 9: ಇರಾ ಬಾವಬೀಡು ಪಟೇಲ್ ಶಂಕರ್ ಆಳ್ವ (84) ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಇರಾ ಬಾವಬೀಡು ಪಟೇಲ್ ಮನೆತನದವರಾದ ಇವರು ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
30th Sep, 2018
ಮೂಡಬಿದಿರೆ, ಸೆ. 30: ಪುರಸಭಾ ಮೀನುಮಾರುಕಟ್ಟೆಯಲ್ಲಿ  ಕಳೆದ 5 ದಶಕಗಳಿಂದ ಮೀನು ವ್ಯಾಪಾರಿಯಾಗಿದ್ದು ಎ.ಕೆ. ಎಂದೇ ಪರಿಚಿತರಾಗಿದ್ದ  ಪುತ್ತಿಗೆಪದವು ನಿವಾಸಿ ಎ.ಕೆ. ಅಬ್ದುಲ್ ಕಾದ್ರಿ  (65) ರವಿವಾರ ನಿಧನ ಹೊಂದಿದರು. ಮೃತರು ಪತ್ನಿ , ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. 
29th Sep, 2018
ಮೂಡುಬಿದಿರೆ, ಸೆ. 29: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಶೇಣಿ ನಿವಾಸಿ, ಕೃಷಿಕರಾಗಿದ್ದ  ಸುಬ್ರಾಯ ನಾಯಕ್ (78) ಅಲ್ಪಕಾಲದ ಅನಾರೋಗ್ಯದಿಂದ ಸೆ. 29ರಂದು ನಿಧನ ಹೊಂದಿದರು. ಅವರು ಪತ್ನಿ, ಮೂಡಬಿದಿರೆಯ ಜವುಳಿ ಉದ್ಯಮಿ ಎಸ್. ಎನ್. ಬೋರ್ಕರ್ ಸಹಿತ ಮೂವರು ಪುತ್ರರು...
28th Sep, 2018
ಮಂಗಳೂರು, ಸೆ.28: ಎಸ್.ಐ. ಖಾನ್ ಇಬ್ರಾಹೀಂ ಮುಸ್ಲಿಯಾರ್ ಬೋಳಿಯಾರ್ (62) ಗುರುವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.  ಮೃತರು ಪತ್ನಿ, ಮೂವರು ಪುತ್ರರು ಮತ್ತು ಐವರು ಪುತ್ರಿಯರನ್ನು ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ. ಸಂತಾಪ: ಎಸ್.ಐ.ಖಾನ್‌ರ ನಿಧನಕ್ಕೆ ಸುನ್ನಿ ಸಂದೇಶದ ಪತ್ರಿಕಾ ಬಳಗದ ಕೆ.ಎಸ್. ಹೈದರ್...
22nd Sep, 2018
ಮೂಡುಬಿದಿರೆ, ಸೆ. 22: ಹೆಸರಾಂತ ನಾಟಿ ವೈದ್ಯೆ ದಿ.ಚಿಲ್ಲಿ ಮೂಲ್ಯ ಅವರ ಹಿರಿಯ ಪುತ್ರಿ, ದಿ. ನಾರಾಯಣ ಅವರ ಪತ್ನಿ ರಾಧು ಮೂಲ್ಯ (66) ಅನಾರೋಗ್ಯದಿಂದ ಶನಿವಾರ ಪುತ್ತಿಗೆ ಗ್ರಾಮದ ಹಂಡೇಲು-ಕಾಪಿಕಾಡಿನಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದರು. ಅವರು ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.
21st Sep, 2018
ಮಂಗಳೂರು, ಸೆ.21: ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ, ಪಂಪ್‌ವೆಲ್ ನಿವಾಸಿ ಝಾಹಿದ್ ಎಂಬವರ ಪತ್ನಿ ರಶೀದಾ ಬಾನು(42) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ತಾಯಿ, ಪತಿ, ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ...
21st Sep, 2018
ಉಡುಪಿ, ಸೆ.21: ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮೆನೇಜರ್ ಕಾಪು ದಯಾನಂದ ಶೆಟ್ಟಿ (80) ಬುಧವಾರ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಸಹೋದರ ಡಾ.ಕಾಪು ಚಂದ್ರಶೇಖರ ಶೆಟ್ಟಿ ಸ್ಥಾಪಿಸಿದ ಕಾಪು ವಿನೋದಾ...
19th Sep, 2018
ಮೂಡಿಗೆರೆ, ಸೆ.19: ಕಳೆದ 30 ವರ್ಷದಿಂದ ಪಟ್ಟಣದ ಮನೆಗಳಲ್ಲಿ ಕಟ್ಟಿಗೆ ಒಡೆದು ಜೀವನ ಸಾಗಿಸುತ್ತಿದ್ದ ಸ್ನೇಹಜೀವಿ ಅವಿವಾಹಿತ ಕಾಳಯ್ಯ (75) ಎಂಬವರು ಬುಧವಾರ ಬೆಳಗ್ಗೆ ಸರಕಾರಿ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾದರು.  ಕಾಳಯ್ಯ ಅವರ ಪಟ್ಟಣದ ಎಲ್ಲರಿಗೂ ಚಿರಪರಿಚತರಾಗಿದ್ದ ವ್ಯಕ್ತಿ. ತಮ್ಮ ಇಳಿ ವಯಸ್ಸಿನಲ್ಲೂ...
17th Sep, 2018
ಕೊಣಾಜೆ, ಸೆ. 17: ಕಿನ್ಯಾ ಗ್ರಾಮದ ಮುಹಮ್ಮದ್ ಹಾಜಿ ಕಿನ್ಯಾ(90) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಮೃತರು 7 ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಹಮ್ಮದ್ ಹಾಜಿ ಅವರು ಕಿನ್ಯಾ ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದರು.
17th Sep, 2018
ಕುಂದಾಪುರ, ಸೆ.17: ಹಂಗಳೂರಿನ ಹಳೆಅಳ್ವೆ ನಿವಾಸಿ ಮೇರಿ ಫೆರ್ನಾಂಡೀಸ್ ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ಪ್ರಾಯವಾಗಿತ್ತು .ದಿ.ಜೋಸೆಫ್ ಫೆರ್ನಾಂಡೀಸ್ ಅವರ ಪತ್ನಿಯಾಗಿದ್ದ ಅವರು, ನಾಲ್ವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
Back to Top