ಓ ಮೆಣಸೇ | Vartha Bharati- ವಾರ್ತಾ ಭಾರತಿ

ಓ ಮೆಣಸೇ

14th October, 2019
♦ ನನ್ನನ್ನು ಮೂಲೆಗುಂಪು ಮಾಡಿದಂತೆ ಚಕ್ರವರ್ತಿ ಸೂಲಿಬೆಲೆಯನ್ನು ಕಡೆಗಣಿಸಬೇಡಿ - ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸಂಸ್ಥಾಪಕ ► ಮೂಲೆಗಳೆಲ್ಲ ಭರ್ತಿಯಾಗಿದೆಯಂತೆ. ಇನ್ನೇನಿದ್ದರೂ ಕಸದಬುಟ್ಟಿಯೇ ಗತಿ...
6th October, 2019
 ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ದಾರಿ ಅವರಿಗೆ, ನಮ್ಮ ದಾರಿ ನಮಗೆ - ಉಮೇಶ್ ಕತ್ತಿ, ಬಿಜೆಪಿ ಶಾಸಕ ತಮ್ಮ ಕತ್ತಿ ಹೆಸರಿಗೆ ತಕ್ಕಂತೆ ಕತ್ತಿ ಇಟ್ಟಿದ್ದೀರಿ. ---------------------
29th September, 2019
ಸಿದ್ದರಾಮಯ್ಯನವರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ಇರಲಿಲ್ಲ. - ಕೆ.ಆರ್.ರಮೇಶ್ ಕುಮಾರ್, ಮಾಜಿ ವಿಧಾನಸಭಾ ಸ್ಪೀಕರ್ ಈಗ ನಾಯಕರೂ ಉಳಿದಿಲ್ಲವಲ್ಲ? ---------------------
22nd September, 2019
 ಕಾಶ್ಮೀರಿಗಳನ್ನು ಆಲಂಗಿಸಿಕೊಳ್ಳಬೇಕು - ಪ್ರಧಾನಿ ಮೋದಿ ಸಾರ್, ಸ್ವಲ್ಪ ವಿವರಿಸಿ ಹೇಳಿ, ಇದು ಅತ್ಯಾಚಾರಕ್ಕೆ ಪ್ರೇರಣೆ ಎಂದು ಅಲ್ಲಿಯ ಕೆಲವರು ದುರ್ವ್ಯಾಖ್ಯಾನಿಸಬಹುದು.
16th September, 2019
ಜನ ಸಾಮಾನ್ಯರಿಗೆ ಉತ್ತಮ ಸೇವೆ ನೀಡಲು ತಾಲೂಕು ಕಚೇರಿಯನ್ನೇ ಹಳ್ಳಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ - ಆರ್. ಅಶೋಕ್, ಸಚಿವತಾಲೂಕು ಕಚೇರಿ ಸಿಬ್ಬಂದಿಯೇ ಹಳ್ಳಿಗಳಿಗೆ ಬಂದು ಲಂಚ ವಸೂಲಿ ಮಾಡಿ ಹೋಗುತ್ತಾರೆ...
9th September, 2019
ಸರ್ವ ಜನಾಧರಿತ ರಾಜಕೀಯ ಕಾಂಗ್ರೆಸ್‌ನ ಧ್ಯೇಯವಾಗಿದೆ - ವೀರಪ್ಪ ಮೊಯ್ಲಿ, ಕಾಂಗ್ರೆಸ್ ನಾಯಕ   ಆರೆಸ್ಸೆಸ್‌ನವರನ್ನೂ ತಬ್ಬಿಕೊಂಡರೆ ಸರ್ವಜನರನ್ನು ಆಧರಿಸಿದಂತಾಗುತ್ತದೆ.
1st September, 2019
ನನಗೆ ಅಧಿಕಾರ ದಾಹ ಇಲ್ಲ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ   ನೀರು ಕುಡಿಸಲು ಬಂದ ಈಡಿ ಅಧಿಕಾರಿಗಳ ಮುಂದೆ ಸ್ಪಷ್ಟೀಕರಣವೇ? ---------------------
26th August, 2019
ಫೋನ್ ಕದ್ದಾಲಿಸುವವರೂ ಒಂದು ರೀತಿಯ ಭಯೋತ್ಪಾದಕರು - ಎಚ್.ವಿಶ್ವನಾಥ್, ಅನರ್ಹ ಶಾಸಕ ► ಭಯ ಪಡುವಂತಹದೇನನ್ನು ಫೋನಲ್ಲಿ ಮಾತನಾಡಿದ್ದೀರಿ? ---------------------
18th August, 2019
ಪ್ರಧಾನಿ ಮೋದಿ ಮತ್ತು ಅಮಿತ್‌ಶಾ ಅವರು ಕೃಷ್ಣ - ಅರ್ಜುನರಿದ್ದಂತೆ - ರಜನಿಕಾಂತ್, ನಟ ಎನ್‌ಟಿಆರ್ ಕಾಲದಲ್ಲಿ ಹುಟ್ಟಿದಿದ್ದರೆ ಇವರನ್ನು ಬಳಸಿಕೊಂಡು ಮಹಾಭಾರತ ಸಿನೆಮಾವನ್ನು ಅದ್ಭುತವಾಗಿ ತೆಗೆಯಬಹುದಿತ್ತು...
12th August, 2019
  *ಜಮ್ಮು-ಕಾಶ್ಮೀರದಲ್ಲಿ ಒಂದು ಕಾಲದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಇನ್ನು ಮುಂದೆ ಶೂಟಿಂಗ್‌ಗಾಗಿ ವಿಶ್ವವೇ ಅಲ್ಲಿಗೆ ಬರಲಿದೆ - ನರೇಂದ್ರ ಮೋದಿ, ಪ್ರಧಾನಿ  ಶೂಟ್ ಮಾಡಲು ಬಳಸುವ ಸಾಧನಗಳ ಕುರಿತಂತೆ ಅಲ್ಲಿನ...
5th August, 2019
   *ಎಚ್.ಡಿ. ದೇವೇಗೌಡರಿಗೆ ಅಧಿಕಾರದ ದುರಾಸೆ ಜಾಸ್ತಿ - ಕೆ.ಆರ್. ಪೇಟೆ ಕೃಷ್ಣ, ಮಾಜಿ ಸ್ಪೀಕರ್ ಅದನ್ನು ದುರಾಸೆ ಎನ್ನುವುದಕ್ಕಿಂತ ಮಕ್ಕಳ ಕುರಿತ ಧೃತರಾಷ್ಟ್ರ ಪ್ರೀತಿ ಅನ್ನುವುದೇ ಚೆನ್ನ.
5th August, 2019
   *ಎಚ್.ಡಿ. ದೇವೇಗೌಡರಿಗೆ ಅಧಿಕಾರದ ದುರಾಸೆ ಜಾಸ್ತಿ - ಕೆ.ಆರ್. ಪೇಟೆ ಕೃಷ್ಣ, ಮಾಜಿ ಸ್ಪೀಕರ್ ಅದನ್ನು ದುರಾಸೆ ಎನ್ನುವುದಕ್ಕಿಂತ ಮಕ್ಕಳ ಕುರಿತ ಧೃತರಾಷ್ಟ್ರ ಪ್ರೀತಿ ಅನ್ನುವುದೇ ಚೆನ್ನ.
29th July, 2019
ಸಂಸಾರವೆಂಬುದು ಬೀಸುವ ಕಲ್ಲಿನಂತೆ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ - ಸನ್ಯಾಸಿಗಳು ಸಂಸಾರದೊಳಗೆ ಕೈ ಹಾಕಿದರೆ ಜನರು ಕಲ್ಲು ಬೀಸುವುದುಂಟು.  ---------------------
22nd July, 2019
ಆಯಾ ಭಾಗದ ಸಂಪನ್ಮೂಲಗಳು ಆಯಾ ಭಾಗದಲ್ಲೇ ಸದ್ಬಳಕೆಯಾಗಬೇಕು - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ ಗ್ರಹಸ್ಥಾಶ್ರಮದಲ್ಲಿ ಬಳಕೆಯಾಗಬೇಕಾದ ಸಂಪನ್ಮೂಲಗಳು, ಸನ್ಯಾಸಾಶ್ರಮದಲ್ಲಿ ಬಳಕೆಯಾದರೆ ನ್ಯಾಯಾಲಯದ...
15th July, 2019
*ಸಂಘಟನೆಗಳ ಮೂಲಕ ಸಮಾಜ ಕಟ್ಟುವ ಕೆಲಸ ಆಗಬೇಕಿದೆ - ನಳಿನ್ ಕುಮಾರ್ ಕಟೀಲು, ಸಂಸದ   ಸಮಾಜವನ್ನು ಕೆಡವುವ ಕೆಲಸ ಮುಗಿಯಿತೇ? ---------------------
8th July, 2019
ರಾಜಕಾರಣಿಗಳಿಗೂ ವೈಯಕ್ತಿಕ ಬದುಕು ಇರುತ್ತದೆ - ಆರ್.ವಿ ದೇಶಪಾಂಡೆ, ಸಚಿವ ಸಾರ್ವಜನಿಕವಾಗಿ ಕಾಂಗ್ರೆಸ್, ವೈಯಕ್ತಿಕವಾಗಿ ಆರೆಸ್ಸೆಸ್ ಬದುಕು. ---------------------
1st July, 2019
ಬಿಜೆಪಿ ನನ್ನ ಹೆತ್ತ ತಾಯಿಗೆ ಸಮಾನ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ‘ಗೌಡತ್ವ’ದ ಮುಂದೆ ಹೆತ್ತ ತಾಯಿಯೂ ತೃಣ ಸಮಾನ ಅಲ್ಲವೇ? ---------------------
24th June, 2019
ಉಷ್ಟ್ರಾಸನ ಅಭ್ಯಾಸ ಮಾಡುವುದರಿಂದ ಬೆನ್ನು, ಭುಜ ಸದೃಢವಾಗುತ್ತದೆ - ನರೇಂದ್ರ ಮೋದಿ, ಪ್ರಧಾನಿ.  ಬೆಲೆ ಏರಿಕೆಯ ಭಾರ ಹೊರಲು ಜನರಿಗೆ ಉಷ್ಟ್ರಾಸನವೇ ಗತಿ.
10th June, 2019
ಮೋದಿ ಸಂಪುಟದಲ್ಲಿ ಕೆಲಸ ಮಾಡುವುದೇ ಒಂದು ದೊಡ್ಡ ಸಾಧನೆ -ಸುರೇಶ್ ಅಂಗಡಿ, ಕೇಂದ್ರ ಸಚಿವ    ಅಲ್ಲಿ ಕೆಲಸ ಮಾಡುವವರನ್ನು ಉಳಿಸಿಕೊಳ್ಳುವ ಪದ್ಧತಿಯಿಲ್ಲ. ಭೋಪರಾಕ್ ಹೇಳುತ್ತಾ ಒಟ್ಟಿಗಿದ್ದರೆ ಸಾಕು...
3rd June, 2019
ನಾನು ಪ್ರಕಾಶ್ ರೈ ಅಭಿಮಾನಿ - ಪ್ರತಾಪ್‌ಸಿಂಹ, ಸಂಸದ ಪ್ರಕಾಶ್ ರೈ ಅವಮಾನದಿಂದ ಮುಖ ಮುಚ್ಚಿಕೊಂಡರಂತೆ.
26th May, 2019
ಸಾರ್ವಜನಿಕ ಜೀವನದಲ್ಲಿ ಸಮಸ್ಯೆಗಳು, ಸವಾಲುಗಳಿಗೆ ಸಿಲುಕಿ ನರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ ಖಾಸಗಿ ಜೀವನವನ್ನು ಚೆನ್ನಾಗಿಟ್ಟುಕೊಂಡರೆ ಈ ಎಲ್ಲ ಸಮಸ್ಯೆಗಳು...
20th May, 2019
ಆನೆ (ಸಿದ್ದರಾಮಯ್ಯ) ದಾರಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳು ಬೊಗಳುತ್ತಿರುತ್ತವೆ - ಎಸ್.ಟಿ.ಸೋಮಶೇಖರ್, ಶಾಸಕ   ಆನೆಯ ದಂತವನ್ನು ಮುರಿದು ಮಾರಿದವರ ಕುರಿತಂತೆ ತನಿಖೆ ನಡೆಯುತ್ತಿದೆ. ---------------------
12th May, 2019
ವಿಧಾನ ಸಭೆ ವಿಪಕ್ಷ ನಾಯಕ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಎರಡನ್ನೂ ನಿಭಾಯಿಸುವುದು ಕಷ್ಟವಾಗುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ   ನಿಮ್ಮ ಎಲ್ಲ ಕಷ್ಟಗಳನ್ನು ಪರಿಹಾರ ಮಾಡಿ ಮನೆಯಲ್ಲಿ ಕೂರಿಸಲು ಪಕ್ಷದೊಳಗೆ...
6th May, 2019
ನನ್ನನ್ನು ಬಿಟ್ಟು ಎಲ್ಲರಿಗೂ ಸಿಎಂ ಆಗುವ ಅರ್ಹತೆ ಇದೆ - ಯು.ಟಿ. ಖಾದರ್, ಸಚಿವ ಅನರ್ಹತೆಯೇ ಸಿಎಂ ಆಗಲು ಇರುವ ಅರ್ಹತೆ ಎನ್ನುವ ಗುಟ್ಟು ಗೊತ್ತಾಗಿರಬೇಕು. ---------------------
29th April, 2019
ಸಿಎಂ ಆಗುವ ವಿಷಯದಲ್ಲಿ ನನಗೆ ಆಸೆ ಇದೆಯೇ ಹೊರತು ದುರಾಸೆ ಇಲ್ಲ - ಎಂ.ಬಿ.ಪಾಟೀಲ್, ಸಚಿವ   ಕಾಂಗ್ರೆಸ್‌ನ ಉಳಿದವರ ಪಾಲಿಗೆ ಇದು ದುರಾಸೆಯಂತೆ ಕಾಣುತ್ತಿದೆ. ---------------------
22nd April, 2019
ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ.ಶಿವಕುಮಾರ್, ಸಚಿವ    ರಾಜಕಾರಣದಲ್ಲಿ ಜಾತಿ ಮತ್ತು ಹಣ ಮಾತ್ರ ಇರಲೇಬೇಕು.
15th April, 2019
 ಜನಪರ ಹೋರಾಟ ಮಾಡಿರುವುದಕ್ಕೆ ನನ್ನ ಮೇಲೆ ಕೇಸು ದಾಖಲು - ನಳಿನ್‌ಕುಮಾರ್ ಕಟೀಲು, ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ   ಮಂಗಳೂರಿಗೆ ಬೆಂಕಿ ಹಚ್ಚುವುದು ಜನಪರ ಹೋರಾಟದ ಭಾಗವೇ ಇರಬೇಕು. 
8th April, 2019
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗೆದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗಲಿದ್ದಾರೆ - ವೀರಪ್ಪ ಮೊಯ್ಲಿ, ಸಂಸದ   ಅವರನ್ನು ಮನೆಗೆ ಕಳುಹಿಸುವ ನಿಟ್ಟಿನಲ್ಲಿ ನೀವು ಭಾರೀ ಕೆಲಸ ಮಾಡುತ್ತಿರುವಂತಿದೆ...
1st April, 2019
  ನಾನು ಬ್ರಾಹ್ಮಣನಾಗಿರುವ ಕಾರಣ ಚೌಕಿದಾರನಾಗಲು ಸಾಧ್ಯವಿಲ್ಲ - ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ    ಬ್ರಾಹ್ಮಣೇತರರಿಗೆ ಆರೆಸ್ಸೆಸ್‌ನ ಬಾಗಿಲು ಕಾಯುವ ಚೌಕಿದಾರರಾಗಲು ಶೇ. 100 ಮೀಸಲಾತಿ...
25th March, 2019
ಈ ಬಡ ರೈತನ ಮಗ ದೇವೇಗೌಡ 13 ಪಕ್ಷಗಳ ಜೊತೆ ಸೇರಿ ಸರಕಾರ ನಡೆಸಿದವನು - ದೇವೇಗೌಡ, ಮಾಜಿ ಪ್ರಧಾನಿ   ಆ ಬಡ ರೈತನ ಮಗ, ಶ್ರೀಮಂತ ಆದ ಬಗೆಯನ್ನೂ ಒಂದಿಷ್ಟು ವಿವರಿಸಿ. ---------------------
Back to Top