ಝಲಕ್

24th Oct, 2018
‘‘ಅತಿದೊಡ್ಡ ದುರದೃಷ್ಟವಂತ ಯಾರು?’’ ಶಿಷ್ಯ ಕೇಳಿದ. ‘‘ಹಸಿವು, ನಿದ್ದೆಯಿಲ್ಲದ ಶ್ರೀಮಂತ’’ ಸಂತ ಹೇಳಿದ. ‘‘ಮನುಷ್ಯನನ್ನು ಸುಖವಾಗಿರಿಸುವ ಸಾಧನ ಯಾವುದು?’’ ‘‘ಸಂತೃಪ್ತಿ’’. ಸಂತನ ಮಾತಿಗೆ ಶಿಷ್ಯ ಸಂತೃಪ್ತನಾದ.  
10th Oct, 2018
‘‘ಮಗ ಎಲ್ಲಿದ್ದಾನೆ?’’ ‘‘ಅವನು ಫುಟ್ಬಾಲ್ ಆಡುತ್ತಿದ್ದಾನೆ....’’ ‘‘ಮತ್ತೆ ಕೋಣೆಯಲ್ಲಿ ಯಾರದು?’’ ‘‘ಮಗ...’’ ‘‘ಫುಟ್ಬಾಲ್ ಆಡುತ್ತಿದ್ದಾನೆ ಎಂದೆ?’’ ‘‘ಮೊಬೈಲ್‌ನಲ್ಲಿ ಫುಟ್ಬಾಲ್ ಗೇಮ್ ಆಡುತ್ತಿದ್ದಾನೆ’’  
09th Oct, 2018
‘‘ಗುರುಗಳೇ ಭೂಮಿ ಹುಟ್ಟಿದ್ದು ಯಾವಾಗ?’’ ಶಿಷ್ಯ ಕೇಳಿದ. ‘‘ನಾವು ಹುಟ್ಟಿದಾಗ’’ ಸಂತ ಉತ್ತರಿಸಿದ. ‘‘ಭೂಮಿ ಇಲ್ಲವಾಗುವುದು ಯಾವಾಗ?’’ ‘‘ನಾವು ಇಲ್ಲವಾದಾಗ.... ’’  
27th Sep, 2018
ಸೌದಿಯಿಂದ ಕೆಲಸ ಕಳೆದುಕೊಂಡು ಎರಡು ವರ್ಷಗಳ ಬಳಿಕ ಆತ ಮನೆಗೆ ಮರಳಿದ. ಎರಡು ವಾರ ಕಳೆದಿರಬಹುದು. ಮಧ್ಯ ರಾತ್ರಿ ಮಂಚದಲ್ಲಿ ಪಕ್ಕದಲ್ಲಿ ಮಲಗಿದ್ದ ಪತ್ನಿ ಮೆಲ್ಲಗೆ ಪಿಸುಗುಟ್ಟಿ ಕೇಳಿದಳು ‘‘ವಾಪಸ್ ಹೋಗುವುದು ಯಾವಾಗ’’ ಆ ಪ್ರಶ್ನೆಗೆ ಉತ್ತರಿಸಲಾಗದ ಪತಿ ಗಾಢ ನಿದ್ದೆಯಲ್ಲಿ ಮುಳುಗಿದಂತೆ ನಟಿಸಿದ. ಆ...
02nd Sep, 2018
ದೊಡ್ಡದೊಂದು ನೆರೆ ಬಂತು. ಊರೆಲ್ಲ ಕೊಚ್ಚಿ ಹೋಯಿತು. ಧರ್ಮ, ಜಾತಿ, ಮೇಲು, ಕೀಳು ಎಲ್ಲ ಒಂದಕ್ಕೊಂದು ಸೇರಿ, ಯಾರು ಏನು ಎನ್ನುವುದೇ ಗೊತ್ತಾಗದಾಯಿತು. ಎಲ್ಲರ ಜಾತಿಯೂ ‘ನೆರೆ ಸಂತ್ರಸ್ತರು’ ಎಂದಾಯಿತು. ಇದೀಗ ಆ ಊರು ನಿಧಾನಕ್ಕೆ ನೆರೆಯ ಹಾನಿಯಿಂದ ಚೇತರಿಸಿಕೊಳ್ಳುತ್ತಿದೆ. ಅವರವರ ಜಾತಿ, ಧರ್ಮ ಅವರಿಗೆ ನಿಧಾನಕ್ಕೆ ನೆನಪಾಗುತ್ತಿದೆ. ...
30th Aug, 2018
ಪ್ರಕೃತಿ ವಿಕೋಪ ಸಂಭವಿಸಿತು. ನಾಡೆಲ್ಲ ಸ್ಪಂದಿಸಿತು. ಎಲ್ಲೆಡೆಗಳಿಂದ ಆಹಾರಗಳ ಕೊಡುಗೆ ರಾಶಿ ರಾಶಿಯಾಗಿ ಬಂತು. ಆ ಊರಿನ ಬಡವರು, ಕಾರ್ಮಿಕರು ಮೊದಲ ಬಾರಿಗೆ ವಿಕೋಪದ ಕಾರಣದಿಂದಲೇ, ಹೊಟ್ಟೆ ತುಂಬಾ ಉಂಡರು.  
13th Aug, 2018
ಆ ಹಿರಿಯರ ಎರಡೂ ಕಣ್ಣುಗಳು ವಯಸ್ಸಿನ ಕಾರಣದಿಂದ ಕುರುಡಾದವು. ಯಾರೋ ಕೇಳಿದರು ‘‘ನಿಮಗೆ ನೋಡುವುದಕ್ಕೆ ಸಾಧ್ಯವಾಗದೇ ಇರುವುದರಿಂದ ಬೇಜಾರಾಗುವುದಿಲ್ಲವೇ?’’ ಹಿರಿಯರು ಹೇಳಿದರು ‘‘ಕಣ್ಣು ತೆರೆದು ನೋಡುವುದಕ್ಕೆ ಸಾಧ್ಯವಾಗುವಂತೆ, ಕಣ್ಣು ಮುಚ್ಚಿ ನೋಡುವುದಕ್ಕೂ ಸಾಧ್ಯವಿದೆ ಎನ್ನುವುದು ಗೊತ್ತಾಗಿದೆ. ಈಗಲೂ ನನಗೆ ಬದುಕಿನ ಹಲವು ಸತ್ಯಗಳು ಕಾಣುತ್ತಿವೆ....
05th Aug, 2018
ಸಂತ ಆ ದಾರಿಯಲ್ಲಿ ನಡೆದು ಹೋಗುತ್ತಿದ್ದ. ದಾರಿಯಲ್ಲಿ ಯಾರೋ ಗುರುತು ಹಿಡಿದು ಕೇಳಿದರು ‘‘ನೀವು, ಪವಾಡಪುರುಷರು ಎಂದು ಕೇಳಿದ್ದೇನೆ....ದಯವಿಟ್ಟು ನಮಗಾಗಿ ಒಂದು ಪವಾಡ ಮಾಡಿ....’’ ಸಂತ ಜೋಳಿಗೆಯಿಂದ ಒಂದು ಹಿಡಿ ಬೀಜ ಕೊಟ್ಟು ಹೇಳಿದ ‘‘ಇದನ್ನು ಮನೆಯ ಹಿತ್ತಲಲ್ಲಿ ಬಿತ್ತಿರಿ. ಕೆಲವೇ ದಿನಗಳಲ್ಲಿ ಮೊಳಕೆ...
29th Jul, 2018
ವಿಜ್ಞಾನ ತಂತ್ರಜ್ಞಾನವನ್ನು ಕೊಟ್ಟಿತು. ಜ್ಯೋತಿಷಿಗಳು ಆ ತಂತ್ರಜ್ಞಾನವನ್ನೇ ಬಳಸಿಕೊಂಡು ಮೌಢ್ಯ ಬಿತ್ತತೊಡಗಿದರು. ಅದನ್ನು ವಿರೋಧಿಸಿದ ವಿಜ್ಞಾನಿಗಳು ಸಂಸ್ಕೃತಿ ವಿರೋಧಿಗಳಾದರು.  
22nd Jul, 2018
ಊರಿಗೊಬ್ಬ ಹೊಸ ಸ್ವಾಮೀಜಿ ಬಂದರು. ಅವರು ಪ್ರಾರ್ಥಿಸಿದರೆ ಅದು ಈಡೇರುತ್ತದೆ ಎನ್ನುವುದು ಊರಿಡೀ ಹರಡಿತು. ಊರಿನ ಜನರು ಸರದಿಯಲ್ಲಿ ನಿಲ್ಲ ತೊಡಗಿದರು. ಒಬ್ಬ ಬಂದು ಸ್ವಾಮೀಜಿಯಲ್ಲಿ ಕೇಳಿಕೊಂಡ ‘‘ಸ್ವಾಮೀಜಿ ನನ್ನ ವ್ಯಾಪಾರ ದುಪ್ಪಟ್ಟಾಗಲು ಪ್ರಾರ್ಥಿಸಿ’’ ಸ್ವಾಮೀಜಿ ಕಣ್ಮುಚ್ಚಿ ಪ್ರಾರ್ಥಿಸಿ ಹೇಳಿದರು ‘‘ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಹೋಗು’’ ಅವನು...
15th Jul, 2018
‘‘ಮೊದಲೆಲ್ಲ ಬೆಳಗ್ಗೆ ಎದ್ದಾಗ ಹಕ್ಕಿಗಳ ಇಂಚರ ಕೇಳುತ್ತಿತ್ತು. ಆ ಇಂಚರಗಳೆಲ್ಲ ಎಲ್ಲಿ ಕಾಣೆಯಾಗಿವೆ?’’ ಆತ ಕೇಳಿದ. ‘‘ಅವೆಲ್ಲ ಮೊಬೈಲ್‌ಗಳ ರಿಂಗ್ ಟೋನ್‌ಗಳಾಗಿ ಬದಲಾಗಿವೆ’’ ಆತನ ಅಪ್ಪ ಉತ್ತರಿಸಿದ. ಮಗು
12th Jul, 2018
‘‘ಅಯ್ಯೋ ಎಂಥಾ ಮಳೆ....ಎಂಥಾ ಮಳೆ....’’ ನಗರದ ಜನರು ಶಪಿಸುತ್ತಿದ್ದರು. ಮುಳುಗಿದ ರಸ್ತೆಯಲ್ಲಿ ಅವರು ಚಡಡಿಸುತ್ತಿದ್ದರು. ‘‘ಆಹಾ ಎಂಥಾ ಮಳೆ....ಆಹಾ... ಎಂಥಾ ಮಳೆ... ’’ ಗದ್ದೆಯಲ್ಲಿ ರೈತ ಬಿತ್ತುತ್ತಾ, ಕೈಕಾಲು ಕೆಸರು ಮಾಡುತ್ತಾ ಸಂಭ್ರಮಿಸುತ್ತಿದ್ದ ‘‘ಥತ್ ಮಳೆ ಎಲ್ಲ ಹಾಳು ಮಾಡಿತು...’’ ರೈತನ ಮಗ ಟಿವಿಯಲ್ಲಿ ಕ್ರಿಕೆಟ್ ನೋಡಲಾಗದೆ...
08th Jul, 2018
ಮಧ್ಯಾಹ್ನದ ಹೊತ್ತು. ಆಶ್ರಮದಲ್ಲಿ ಗುರುವಿನೊಂದಿಗೆ ಮಾತನಾಡುತ್ತಿದ್ದ ಶಿಷ್ಯ ಹೇಳಿದ ‘‘ಗುರುಗಳೇ, ಹೊರಗೆ ಸುಡು ಬಿಸಿಲು’’ ‘‘ಅದು ಬಿಸಿಲಲ್ಲ, ಬೆಳಕು’’ ಸಂತ ತಿದ್ದಿದ. ‘‘ಆದರೆ ಸುಡುತ್ತಿದೆಯಲ್ಲ?’’ ಶಿಷ್ಯ ಕೇಳಿದ. ‘‘ಬೆಳಕು ಮತ್ತು ಜ್ಞಾನ ಸದಾ ನಮ್ಮನ್ನು ಸುಡುತ್ತಿರುತ್ತದೆ’’ ಸಂತ ವಿವರಿಸಿದ.  
21st Jun, 2018
‘‘ಗುರುಗಳೇ ನಗರಕ್ಕೆ ಹೋಗಲು ನೀವು ಹೆದರುವುದು ಯಾಕೆ?’’ ಶಿಷ್ಯ ಕೇಳಿದ. ‘‘ಅಲ್ಲಿ ಒಮ್ಮೆ ಹೋದರೆ, ಮರಳಿ ಬರುವ ದಾರಿ ತಪ್ಪಬಹುದು ಎಂಬ ಭಯ’’ ಸಂತ ಹೇಳಿದ. ‘‘ಇನ್ನೊಬ್ಬರಲ್ಲಿ ದಾರಿ ಕೇಳಿಕೊಂಡು ಬಂದರಾಯಿತು....’’ ಶಿಷ್ಯ ಪರಿಹಾರ ಸೂಚಿಸಿದ. ‘‘ಇನ್ನೊಬ್ಬರಿಗೆ ಹಳ್ಳಿಯ ದಾರಿ ಗೊತ್ತಿದೆ ಎಂದಾಗಿದ್ದರೆ ಅವರೇಕೆ ನಗರದಲ್ಲೇ...
11th Jun, 2018
‘‘ನಾನು ನನ್ನ ಕನಸಿನಂತೆಯೇ ನನ್ನ ಮಗನನ್ನು ಬೆಳೆಸಿದೆ’’ ತಂದೆ ಸಾರ್ಥಕತೆಯಿಂದ ಹೇಳಿದ. ಅದನ್ನು ಕೇಳಿದ ಸಂತ ನಿಟ್ಟುಸಿರಿಟ್ಟು ಹೇಳಿದ ‘‘ಹಾಗಾದರೆ ನಿಮ್ಮ ಮಗನ ಕನಸುಗಳನ್ನು ಕೊಂದು ಹಾಕಿದಿರೆಂದು ಅರ್ಥ’’ ತಂದೆ ವಿಷಾದದಿಂದ ಪ್ರತಿ ಉತ್ತರಿಸಿದ ‘‘ಅವನ ಕನಸನ್ನು ಬಹುಶಃ ಅವನು ಅವನ ಮಗನ ಕನಸುಗಳನ್ನು...
06th May, 2018
ಮಾಡದ ತಪ್ಪಿಗಾಗಿ ಒಬ್ಬ ಜೈಲಿಗೆ ಹೋದ. ಸುಮಾರು ಒಂದು ವರ್ಷ ಜೈಲಿನಲ್ಲಿ ಕಳೆದು ಬಂದ. ಇದೀಗ ಆತನನ್ನು ಕಂಡರೆ ಊರೇ ನಡುಗುತ್ತದೆ. ಇರಿಯುತ್ತಾನೆ, ದೋಚುತ್ತಾನೆ. ಪೊಲೀಸರು ಮಾತ್ರ ಈವರೆಗೆ ಬಂಧಿಸಿಲ್ಲ.
05th May, 2018
ಆತ ಗುಜರಿ ಆಯುವವನು. ಮನೆಯೊಂದರ ಯಜಮಾನ ಆತನನ್ನು ಕೂಗಿ ಮನೆಯಲ್ಲಿರುವ ಒಂದಿಷ್ಟು ಹಳೆ ಸಾಮಾನುಗಳನ್ನು ತೂಗಿ ಕೊಟ್ಟ. ಕಾಗದ ಪತ್ರಗಳನ್ನೆಲ್ಲ ತೂಗಿ ಅದರ ಬೆಲೆಯನ್ನು ಗುಜರಿ ಆಯುವವನು ಕೊಟ್ಟು ಬಿಟ್ಟ. ಗುಜರಿ ಹೊತ್ತುಕೊಂಡು ಅರ್ಧ ದಾರಿ ಸಾಗಬೇಕು, ಅಷ್ಟರಲ್ಲಿ ಯಜವ ಾನ ಓಡೋಡಿ ಬಂದ. ‘‘ಹೇ....ನಾನು...
30th Apr, 2018
ಮರವೊಂದು ಕೊಡಲಿಯ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿತ್ತು. ಸಂತ ಕೇಳಿದ ‘‘ಮರವೇ ಕೊಡಲಿ ಇರುವುದೇ ಮರವನ್ನು ಕತ್ತರಿಸಲು. ಮತ್ತೇಕೆ ನೀನು ಅದಕ್ಕೆ ಮತ ಹಾಕುತ್ತಿದ್ದೀಯ?’’ ಮರ ವಾದಿಸಿತು ‘‘ನೀನು ಸುಳ್ಳು ಹೇಳುತ್ತಿದ್ದೀಯ. ಕೊಡಲಿಯ ಹಿಡಿ ಮರದಿಂದ ಮಾಡಿರುವುದು ಮತ್ತು ಅದರ ಅತಿ ದೊಡ್ಡ ಭಾಗ...
25th Mar, 2018
ಒಂದು ಅಕ್ಕಿ ಕಾಳು ಎಷ್ಟು ಭಾರವಿರಬಹುದು? ಈ ಪ್ರಶ್ನೆಗೆ ಒಬ್ಬ ಮನುಷ್ಯ ‘‘ಅಯ್ಯೋ....ಅದರಲ್ಲಿ ಭಾರವೇನು ಬಂತು?’’ ಎಂದ. ಇರುವೆ ಹೇಳಿತು ‘‘ಅಬ್ಬಬ್ಬಾ...ಒಂದು ಅಕ್ಕಿ ಕಾಳನ್ನು ಹೊರುವುದೆಂದರೆ ಆತ ಸಾಧಾರಣ ಶಕ್ತಿಹೊಂದಿದವನಲ್ಲ’’ ಅವರವರ ಭಾರ ಅವರವರಿಗೆ ದೊಡ್ಡದು
20th Mar, 2018
ಅದೊಂದು ಊರು. ಆ ಊರಲ್ಲಿ ಗಂಡ-ಹೆಂಡತಿ. ಅವರಿಬ್ಬರು ತುಂಬಾ ಪ್ರೀತಿಸುತ್ತಿದ್ದರು. ಒಮ್ಮೆ ಅದೇನು ಕಾರಣವೋ ಇಬ್ಬರ ನಡುವೆ ಭೀಕರ ಜಗಳವಾಯಿತು. ಗಂಡ ಹೆಂಡತಿ ಬೇರೆ ಬೇರೆಯಾದರು. ಆ ಊರಿಗೆ ಚುನಾವಣೆ ಬಂತು. ಗಂಡ ಚುನಾವಣೆಗೆ ನಿಂತ. ಇದು ಕೇಳಿದ ಹೆಂಡತಿ ಅವನ...
16th Mar, 2018
ಸಂತನ ತಿಳುವಳಿಕೆಯನ್ನು ಪರೀಕ್ಷಿಸಲು ಶಿಷ್ಯನೊಬ್ಬ ಮುಷ್ಟಿಯೊಳಗೆ ಗುಬ್ಬಚ್ಚಿಯೊಂದನ್ನು ಬಚ್ಚಿಟ್ಟುಕೊಂಡು ಬಂದ. ಆತ ಸಂತನಲ್ಲಿ ಕೇಳಿದ ‘‘ಗುಬ್ಬಚ್ಚಿ ಬದುಕಿದೆಯೇ, ಸತ್ತಿದೆಯೇ?’’ ಸಂತ ಸತ್ತಿದೆ ಎಂದರೆ ಹಾರಿ ಬಿಡುವುದು. ಬದುಕಿದೆ ಎಂದರೆ ಕೈಯಲ್ಲೇ ಸಾಯಿಸಿ ಅದನ್ನು ಗುರುವಿಗೆ ತೋರಿಸುವುದು. ಸಂತ ಗಂಭೀರವಾಗಿ ಹೇಳಿದ ‘‘ಕೈಯಲ್ಲಿರುವ ಗುಬ್ಬಚ್ಚಿ ಸತ್ತಿದೆ’’ ಶಿಷ್ಯ ಗೆದ್ದ...
11th Mar, 2018
ಸರ್ವಾಧಿಕಾರಿ ಹಂತಹಂತವಾಗಿ ಆ ಚಿಂತಕನ ಚಿಂತನೆಗಳನ್ನೆಲ್ಲ ಸಾಯಿಸಿದ. ಬಳಿಕ ಅದರ ಮೇಲೇ ಆ ಚಿಂತಕನ ಪ್ರತಿಮೆಯನ್ನು ನಿಲ್ಲಿಸಿದ. ಪ್ರತಿಮೆ ಉದ್ಘಾಟನೆಯ ದಿನ ಅದಕ್ಕೆ ಹಾರ ಹಾಕಿ ಸರ್ವಾಧಿಕಾರಿ ಚಿಂತಕನನ್ನು ಹಾಡಿ ಹೊಗಳಿದ. ಅನುಯಾಯಿಗಳೆಲ್ಲ ತನ್ನ ಚಿಂತಕನಿಗೆ ಸಿಕ್ಕಿದ ಗೌರವವನ್ನು ನೋಡಿ ಸಂಭ್ರಮಿಸಿದರು.
08th Mar, 2018
ಬಸ್ ನಿಲ್ದಾಣದಲ್ಲಿ ತಾಯಿಯ ಕೈಯಲ್ಲಿ ಮಗುವೊಂದು ರಚ್ಚೆ ಹಿಡಿದು ಅಳುತ್ತಿತ್ತು. ಆಕೆಯ ಒಂದು ಕೈಯಲ್ಲಿ ಮಗುವಿದ್ದರೆ, ಇನ್ನೊಂದು ಕೈಯಲ್ಲಿ ಆಗಷ್ಟೇ ಕೊಂಡುಕೊಂಡ ಹಾಲಿನ ಡಬ್ಬವಿತ್ತು.  
05th Mar, 2018
ಆತ ನಗರದಲ್ಲಿ ಬಸ್‌ಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ ಯಾರೋ ಕೂಗಿ ಹೇಳಿದರು ‘‘ಸಾರ್, ಯಾರೋ ನಿಮ್ಮನ್ನು ಕರೆಯುತ್ತಿದ್ದಾರೆ’’ ‘‘ಯಾರು?’’ ಆತ ಮರು ಪ್ರಶ್ನಿಸಿದ. ಅಷ್ಟೇ, ವೇಗವಾಗಿ ಬಂದ ವಾಹನವೊಂದು ಆತನಿಗೆ ಢಿಕ್ಕಿ ಹೊಡೆಯಿತು. ಅವನು ಅಷ್ಟು ದೂರದಲ್ಲಿ ಹೆಣವಾಗಿ ಬಿದ್ದಿದ್ದ. ಹಾಗಾದರೆ ಅವನನ್ನು ಕರೆದವರು ಯಾರು?  
02nd Mar, 2018
ತುಂಬಾ ಅಪರೂಪಕ್ಕೆ ಸಿಕ್ಕಿದ ಆತನನ್ನು ಗುರುತು ಹಿಡಿದು ಕರೆದರು ‘‘ಯಾಕೆ? ಈಗ ನೀನು ಮೊದಲಿನಂತೆ ಸಿಗುವುದೇ ಇಲ್ಲ’’ ‘‘ಸಾರ್...ನನ್ನ ಮೊಬೈಲ್ ಕಳೆದು ಹೋಯಿತು. ನಿಮ್ಮ ನಂಬರ್ ಕೂಡ ಅದರ ಜೊತೆಗೇ ಕಳೆದು ಹೋಯಿತು...’’  ‘‘ಮೊಬೈಲ್ ಕಂಡು ಹುಡುಕುವ ಮೊದಲೇ ಮನುಷ್ಯ ಸಂಬಂಧಗಳು ಅಸ್ತಿತ್ವದಲ್ಲಿದ್ದವು. ಮರೆಯಬೇಡ’’...
23rd Feb, 2018
ಮಗುವನ್ನು ತಾಯಿ ಮನೆಯಲ್ಲಿ ಕನ್ನಡ ಮಾತನಾಡುವುದಕ್ಕೆ ಬಿಡುತ್ತಿರಲಿಲ್ಲ. ಮಾತನಾಡಿದಾಗಲೆಲ್ಲ ತಾಯಿ ''ಇಂಗ್ಲಿಷ್‌ನಲ್ಲಿ ಮಾತನಾಡು'' ಎಂದು ಬೆದರಿಸುತ್ತಿದ್ದಳು. ಅದೊಂದು ದಿನ ಅವರು ಪಕ್ಷಿಧಾಮಕ್ಕೆ ಭೇಟಿ ನೀಡಿದರು. ತಾಯಿ ಇಂಗ್ಲಿಷ್‌ನಲ್ಲಿ ಹೇಳುತ್ತಿದ್ದಳು ''ಯುರೋಪ್ ಸೇರಿದಂತೆ ವಿದೇಶಗಳಿಂದ ಬಂದ ಪಕ್ಷಿಗಳು ಇಲ್ಲಿವೆ'' ''ಹೌದಾ? ಹಾಗಾದರೆ ಕರ್ನಾಟಕದ ಪಕ್ಷಿಗಳ ಜೊತೆಗೆ ಅವುಗಳು ಇಂಗ್ಲಿಷ್‌ನಲ್ಲಿ...
18th Feb, 2018
ಉಪದೇಶಗಳ ಗೊಬ್ಬರ ಹಿತ್ತಲಲ್ಲಿ ಕೊಳೆಯುತ್ತಿದೆ. ಆದರೇನು ಮಾಡುವುದು? ಬಿತ್ತುವುದಕ್ಕೆ ಬೀಜವಿಲ್ಲ. ಉಳುವುದಕ್ಕೆ ಗದ್ದೆಯಿಲ್ಲ!
05th Feb, 2018
  ಕಾಲೇಜಿನಲ್ಲಿ ತನ್ನ ಹಿಂದೆಯೇ ಸುಳಿದಾಡುತ್ತಿದ್ದ ಹುಡುಗನ್ನು ಕಂಡೂ ಕಾಣದಂತೆ ಖುಷಿ ಪಡುತ್ತಿದ್ದ ಹುಡುಗಿ ಬಳಿಕ ಆತನನ್ನು ಮರೆತು ಯಾರನ್ನೋ ಮದುವೆಯಾದಳು. ಮಕ್ಕಳು, ಗಂಡ ಈ ಬದುಕಿನ ನಡುವೆ ಸಮಯ ಓಡಿದ್ದೇ ತಿಳಿಯಲಿಲ್ಲ. ಒಂದು ದಿನ ಕನ್ನಡಿ ನೋಡಿದರೆ ಮುಖದಲ್ಲಿ ಸುಕ್ಕು....
04th Feb, 2018
ಕಂಬಳಿ ಮಾರುವವನ ಬಳಿ ಚಳಿಗೆ ಹೊದೆಯಲು ಒಂದು ಕಂಬಳಿಯೂ ಇರಲಿಲ್ಲ. ಆಗಷ್ಟೇ ಮನೆಯೊಂದನ್ನು ಕಟ್ಟಿ ಮುಗಿಸಿದ ಕಾರ್ಮಿಕ, ರಾತ್ರಿ ಬೀದಿ ಬದಿಯಲ್ಲಿ ನಿದ್ರಿಸುತ್ತಿದ್ದಾನೆ. ಅಡುಗೆ ಕೆಲಸ ಮುಗಿಸಿದ ಕೆಲಸದಾಕೆ, ಒಂದು ತಟ್ಟೆ ಊಟಕ್ಕಾಗಿ ಮಾಲಕಿಯ ಅನುಮತಿಗೆ ಕಾಯಬೇಕಾಗಿದೆ.
28th Jan, 2018
ಬದುಕಿನ ಕೊನೆಯ ದಿನಗಳಲ್ಲಿ ಅಜ್ಜಿ ತನ್ನ ಮೊಮ್ಮಗನ ಬಳಿ ಸತ್ಯ ಬಿಚ್ಚಿಟ್ಟಳು ‘‘ಮಗಾ, ನಿನ್ನಜ್ಜನದು ಸಹಜ ಸಾವಾಗಿರಲಿಲ್ಲ. ಪಾಯಸದಲ್ಲಿ ನಾನೇ ವಿಷ ಹಾಕಿ ಅವರಿಗೆ ಕೊಟ್ಟೆ’’ ಮೊಮ್ಮಗ ಆಘಾತದಿಂದ ಕೇಳಿದ ‘‘ಸ್ವತಃ ಗಂಡನಿಗೆ ವಿಷ ಹಾಕುವಾಗ ನಿನ್ನ ಮನಸ್ಸು ಮರುಗಲಿಲ್ಲವೇ?’’ ಅಜ್ಜಿ ನಿಟ್ಟುಸಿರುಟ್ಟು ಹೇಳಿದಳು ‘‘ಪಾಯಸ...
Back to Top