ಕೊಲರಾಡೊ ವಾಲ್ಮಾರ್ಟ್ನಲ್ಲಿ ಗುಂಡು ಹಾರಾಟ: 3 ಸಾವು
ತಾರ್ನ್ಟನ್ (ಕೊಲರಾಡೊ, ಅಮೆರಿಕ), ನ. 2: ಅಮೆರಿಕದ ಕೊಲರಾಡೊ ರಾಜ್ಯದ ತಾರ್ನ್ಟನ್ ನಗರದ ಡೆನ್ವರ್ ಉಪನಗರದಲ್ಲಿರುವ ವಾಲ್ಮಾರ್ಟ್ ಅಂಗಡಿಯೊಳಗೆ ಬುಧವಾರ ನಡೆದ ಗುಂಡು ಹಾರಾಟದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮೃತರ ಪೈಕಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯಾಗಿದ್ದಾರೆ.
‘‘ಯಾವುದೇ ಕಾರಣವಿಲ್ಲದೆ ಗುಂಡು ಹಾರಾಟ ನಡೆದಿದೆ ಎಂದು ನಾವು ಭಾವಿಸಿದ್ದೇವೆ’’ ಎಂದು ತಾರ್ನ್ಟನ್ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ದುಷ್ಕರ್ಮಿಯನ್ನು 47 ವರ್ಷದ ಸ್ಕಾಟ್ ಓಸ್ಟ್ರಮ್ ಎಂದು ಗುರುತಿಸಲಾಗಿದೆ.
ಗುಂಡು ಹಾರಾಟದ ಬಳಿಕ ಆತ ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.
Next Story