ಭಾರತಕ್ಕೆ ಬಂದಿದ್ದ ಒಬಾಮಾಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಯ ಮೌಲ್ಯವೆಷ್ಟು ಗೊತ್ತೇ ?
ವಾಶಿಂಗ್ಟನ್, ಜ. 11: 2015ರಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಲು ಭಾರತಕ್ಕೆ ಬಂದಿದ್ದ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 3,000 ಡಾಲರ್ (ಸುಮಾರು 1.91 ಲಕ್ಷ ರೂಪಾಯಿ) ಮೌಲ್ಯದ ಉಡುಗೊರೆಗಳನ್ನು ಪಡೆದುಕೊಂಡಿದ್ದರು ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.
1946ರಲ್ಲಿ ಭಾರತದ ಸಂವಿಧಾನ ಸಭೆಗೆ ಅಮೆರಿಕ ಕಳುಹಿಸಿದ್ದ ಟೆಲಿಗ್ರಾಂನ ಯಥಾಪ್ರತಿ ಹಾಗೂ ಭಾರತದ ಸಂವಿಧಾನ ಚರ್ಚೆಗಳ ಕುರಿತ ವರದಿಯ ಮುಖಪುಟದ ಪ್ರತಿಕೃತಿಯನ್ನು ಪ್ರಧಾನಿ ನರೇಂದ್ರ ಮೋದಿ ಒಬಾಮಗೆ ನೀಡಿದ್ದರು ಎಂದು ಇಲಾಖೆಯ ಶಿಷ್ಟಾಚಾರ ಕಚೇರಿ ತಿಳಿಸಿದೆ.
Next Story