ನಾವೊಂದು ಜಡ ಸಮಾಜವಾಗುತ್ತಿದ್ದೇವೆ

ನಮ್ಮನ್ನು ನಾವೇ ಕಳೆದ ಕೆಲವು ತಿಂಗಳುಗಳಿಂದ ನೋಡಿಕೊಂಡಾಗ ನಾವೊಂದು ಜಡ ಸಮಾಜವಾಗಿಬಿಡುತ್ತಿದ್ದೇವೆ ಅನ್ನಿಸುತ್ತಿದೆ. ಇಂದಿನ ತೀವ್ರವಾದ ರಾಜಕೀಯ ವಾತಾವರಣದಲ್ಲಿ ಸಂವೇದನೆ, ಅನುಕಂಪ ಹಾಗೂ ಹಂಚಿಕೊಳ್ಳುವ ಸಾಮರ್ಥ್ಯ ಎಲ್ಲವನ್ನೂ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ನಮ್ಮಿಳಗೇ ಒಂದು ಅಜೆಂಡಾ ಇಲ್ಲದೆ ಹೋದರೆ ನಮಗೆ ಕೆಲಸಮಾಡುವುದಕ್ಕೇ ಆಗುತ್ತಿಲ್ಲ. ಇದು ಮೋದಿ ಭಕ್ತರ ವಿಷಯದಲ್ಲಿ ಮಾತ್ರವಲ್ಲ, ಎಡಪಂಥೀಯ ಒಲವಿರುವ ಉದಾರವಾದಿಗಳ ವಿಷಯದಲ್ಲೂ ನಿಜವಿರಬಹುದು.

ಹೆಚ್ಚು ಕಡಿಮೆ ಪ್ರತೀವಾರ ದಲಿತರು, ಮುಸ್ಲಿಮರು ಹಾಗೂ ಆದಿವಾಸಿಗಳ ಮೇಲಿನ ದಾಳಿಗಳ ಭಯಾನಕ ಕಥೆಗಳೊಂದಿಗೆ ನಾವು ಮುಖಾಮುಖಿಯಾಗುತ್ತಿದ್ದೇವೆ. ಆಧಾರ್‌ನ ಅತಿಯನ್ನು ಎತ್ತಿಹಿಡಿಯುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಿನಬೆಳಗಾದರೆ ಭಯಂಕರ ಕಥೆಗಳನ್ನು ಕೇಳುತ್ತಿರುತ್ತೇವೆ. ಮನಸ್ಸುಗಳನ್ನು ಒಡೆಯುವಂತಹ ಮಾತುಗಳು ರಾಜಕೀಯ ನಾಯಕರ ಬಾಯಿಗಳಿಂದ ನಿರಂತರವಾಗಿ ಹರಿದುಬರುತ್ತಿರುತ್ತವೆೆ. ಇವುಗಳ ಮಧ್ಯದಲ್ಲೇ ಎಂದಿನಂತೆ, ಭ್ರಷ್ಟ ವ್ಯಾಪಾರಸ್ಥರು ತಮ್ಮ ಖಾಸಗಿ ಜೆಟ್‌ನಲ್ಲೋ, ಪ್ರಥಮದರ್ಜೆಯಲ್ಲೋ ದೇಶದ ಆಚೆಗೆ ಹಾರಿಹೋಗುತ್ತಾರೆ. ಈ ಎಲ್ಲದರ ಬಗ್ಗೆ ಎಷ್ಟೋ ಓದುತ್ತೇವೆ, ಕೇಳುತ್ತಿದ್ದೇವೆ ಹಾಗೂ ನೋಡುತ್ತಿದ್ದೇವೆ ಅಂದರೆ ಇವೆಲ್ಲಾ ನಮಗೆ ದಿನನಿತ್ಯದ ಬದುಕಿನ ಹೊಸ ಮಾಮೂಲಿ ವಿಷಯಗಳಾಗಿ ಬಿಟ್ಟಿದೆ. ಒಂದು ದಿನ ಇಂಥದ್ದೇನಾದರೂ ಆಗದೇ ಹೋದರೆ ನಾವು ಆಶ್ಚರ್ಯಚಕಿತರಾಗುತ್ತೇವೆ. ಹಲವರಿಗೆ ಇವೆಲ್ಲಾ ಅತಿಹುರುಪಿನ, ಬ್ರೇಕಿಂಗ್ ನ್ಯೂಸ್-ಗೀಳಿನ ಮಾಧ್ಯಮದವರ ಉತ್ಪ್ರೇಕ್ಷಿತ ಮೇಲುಮೇಲಿನ ಬುದ್ಧಿಭ್ರಮಣೆಯಾಗಿ ತೋರುತ್ತದೆ. ಇವನ್ನು ಕುರಿತ ನಮ್ಮ ಪ್ರತಿಕ್ರಿಯೆಗಳು ಸ್ಪಷ್ಟವಾದ ಎರಡು ಜಾಡಿನಲ್ಲಿ ಸಾಗುತ್ತವೆ. ಒಂದು ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ದೇಹಗಳನ್ನು ಎಣಿಸಿ ಹೋಲಿಸುವ, ಇಂದಿನ ಎಲ್ಲ ಅನ್ಯಾಯಕ್ಕೂ ಮೊಘಲರನ್ನು, ಬ್ರಿಟಿಷರನ್ನು ಹಾಗೂ ಕಾಂಗ್ರೆಸಿಗರನ್ನು ದೂಷಿಸುವ, ಬಲಪಂಥೀಯ ಕ್ರೋನಿಗಳಿಂದ ತಯಾರಾದ ಸುಳ್ಳು ಸುದ್ದಿಗಳನ್ನು, ವಾಟ್ಸ್ ಆ್ಯಪ್ ಸುದ್ದಿಗಳನ್ನು, ಬ್ಲಾಗ್ ಪೋಸ್ಟ್‌ಗಳನ್ನು ನಂಬುವವರ ವಿರುದ್ಧ ದಾಳಿಯನ್ನು ಮಾಡುವುದು. ಎರಡನೆಯದು ಈ ಎಲ್ಲಾ ದುರಂತಗಳನ್ನು ನಿರ್ಲಕ್ಷಿಸಿ ನರೇಂದ್ರ ಮೋದಿಯವರ 56 ಇಂಚಿನ ಎದೆಯೊಳಗೆ ಜೀವಿಸುತ್ತಾ, ಅವರ ಎಲ್ಲಾ ನಾಟಕೀಯವಾದ ಮಾತುಗಳಿಗೆ ಜೋತುಬೀಳುವುದು.

ಇನ್ನೊಂದು ಬದಿಯಲ್ಲಿ ನನ್ನಂತಹವರು ಇದ್ದೇವೆ. ಈ ದುರಂತಗಳನ್ನು ಮುನ್ನೆಲೆಗೆ ತರುತ್ತೇವೆ. ಅವಕ್ಕೆ ಇನ್ನೊಂದಿಷ್ಟು ಪುರಾವೆಗಳನ್ನು ಸೇರಿಸಿ ನಮ್ಮ ವಾದವನ್ನು ಸಮರ್ಥಿಸುತ್ತಿರುತ್ತೇವೆೆ. ಮತ್ತು ನಮ್ಮ ಕಾಲದ ತೊಂದರೆಗಳ ಬಗ್ಗೆ ಹೆಚ್ಚಿನ ಜನರಲ್ಲಿ ತಿಳುವಳಿಕೆ ಮೂಡಿಸಲು ನಮ್ಮ ಕೈಯಲ್ಲಾದಷ್ಟು ಮಾಡುತ್ತಿರುತ್ತೇವೆ. ನಮಗೆ ಗೊತ್ತಿಲ್ಲದೆಯೇ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಘೋರವಾದ, ವಿಷಾದದ ಸುದ್ದಿಗಾಗಿ ಹೊಂಚುಹಾಕುತ್ತಿರುತ್ತೇವೆ. ‘‘ನಾನು ಹೇಳಲಿಲ್ಲವಾ?’’ ಅಂತ ಹೇಳುವ ಇನ್ನೊಂದು ಅವಕಾಶಕ್ಕಾಗಿ ಕಾಯುತ್ತಿ ರುತ್ತೇವೆ. ಬಲ ಪಂಥದ ಕಡೆಗೆ ಅದು ವಾಲಿದೆ ಅಂತ ಸ್ವಲ್ಪಅನ್ನಿಸಿದರೂ ಸಾಕು ಒಂದು ಕ್ಷಣವೂ ಯೋಚಿಸದೆ ಅದನ್ನು ಆಕ್ರಮಣಕಾರಿ, ವಿಚ್ಛಿದ್ರಕಾರಿ ಎಂದು ತೀರ್ಮಾನಿಸಿ ಅದರ ಮೇಲೆ ಎರಗುತ್ತೇವೆ. ನಾವು ಯಾವುದೇ ಕಡೆಯಲ್ಲಿರಲಿ, ಈಗ ಒಂದು ನಿಮಿಷ ನಿಂತು ಆತ್ಮಾವಲೋಕನ ಮಾಡಿಕೊಳ್ಳುವ ಆವಶ್ಯಕತೆ ಇದೆ. ನಿಜವಾದ ಕಳಕಳಿಯನ್ನೇ ಕಳೆದುಕೊಂಡ ಹಂತಕ್ಕೆ ಬಂದು ನಿಂತಿದ್ದೇವಾ?

ಇವೆಲ್ಲವೂ ನಮ್ಮ ನಮ್ಮ ರಾಜಕೀಯವಾಗಿರಬಹುದು. ಪ್ರತಿಯೊಂದು ಪಕ್ಷವೂ ಮೋದಿಯನ್ನು ದೇವತೆಯನ್ನಾಗಿ ಇಲ್ಲವೇ ರಾಕ್ಷಸನನ್ನಾಗಿ ಮಾಡಲು ಪ್ರಯತ್ನಿಸುತ್ತಿರುತ್ತದೆ. ನಾವು ನಿರಂತರವಾಗಿ ಈ ಅಘೋಷಿತ ಸಾಮ್ರಾಟನನ್ನು ರಕ್ಷಿಸಲು ಇಲ್ಲ, ಉರುಳಿಸಲು ಪ್ರಯತ್ನಿಸುತ್ತಿರುತ್ತೇವೆ. ಹಾಗಾಗಿ ಪ್ರತಿಯೊಂದೂ ಆ ನಿಟ್ಟಿನಲ್ಲಿ ನಮಗೆ ಒಂದು ಅಸ್ತ್ರವಾಗಿದೆ. ನಾನು ರಾಜಕಾರಣಿಗಳ ಮತ್ತು ಅವರ ರಾಜಕೀಯ ತಂತ್ರಗಾರಿಕೆಯ ಬಗ್ಗೆ ಮಾತನಾಡುತ್ತಿಲ್ಲ. ಈ ಅಂತರ್‌ಯುದ್ಧದಲ್ಲಿ ಭಾಗವಹಿಸುತ್ತಿರುವ ನನ್ನ ಹಾಗೂ ನಿಮ್ಮ ಬಗ್ಗೆ ಮಾತನಾಡುತ್ತಿದ್ದೇನೆ.

ಈ ಗದ್ದಲದಲ್ಲಿ ಕಳೆದುಹೋಗಿರುವುದು ನಿಜವಾದ ಜನ, ಸತ್ತವರು, ಗಾಯಗೊಂಡವರು, ಆರ್ಥಿಕವಾಗಿ ನಾಶವಾದ ರೈತರು ಹಾಗೂ ಅಂಚಿಗೆ ತಳ್ಳಲ್ಪಟ್ಟವರು. ಅವರೆಲ್ಲಾ ಚರ್ಚೆಯ ವಿಷಯಗಳಾಗಿದ್ದಾರೆ. ಇದು ಒರಟಾಗಿ ಕಾಣಿಸಬಹುದು, ಅಯ್ಯೋ ಸಂವೇದನೆಯೇ ಇಲ್ಲವಲ್ಲ ಅನ್ನಿಸಬಹುದು. ಆದರೆ ನಾನು ಯಾರಾಗುತ್ತಿದ್ದೇನೆೆ ಅನ್ನುವುದರ ಬಗ್ಗೆ ನನಗೆ ಆಶ್ಚರ್ಯವಾಗಬೇಕು. ಬೆಳಗ್ಗೆ ಎದ್ದು ನ್ಯೂಸ್‌ಪೇಪರ್ ಓದಿದಾಗ ಅದರಲ್ಲಿ ಒಂದು ಕೊಲೆಯೋ, ದಾಳಿಯೋ ಕಣ್ಣಿಗೆ ಬಿದ್ದಾಗ ಅದರ ಅಮಾನವೀಯತೆಯನ್ನು ನೋಡಿ ನನಗೆ ನಿಜವಾಗಿ ಆತಂಕ ಆಗುತ್ತಿದೆಯಾ? ನನಗೆ ಅದರ ನೋವು ಕಾಡುವ ಮೊದಲೇ, ನನ್ನ ಮನಸ್ಸು ಭಾರತೀಯ ಜನತಾಪಕ್ಷದ ಕಡೆಗೆ, ಮೋದಿಯ ಕಡೆಗೆ ತಿರುಗುತ್ತದೆ. ಅದೇ ರೀತಿಯಲ್ಲಿ ಮೋದಿ ಬೆಂಬಲಿಗರು ಈ ಸಾವನ್ನು ನೋಡಿಯೂ ನೋಡದಂತೆ, ಏನೂ ಆಗಿಲ್ಲದಂತೆ, ಅದೇನೂ ಮಹತ್ವದ್ದೇ ಅಲ್ಲ ಎನ್ನುವಂತೆ ಬಲಪಂಥೀಯ ಕೋಟೆಯನ್ನು ಸಮರ್ಥಿಸುತ್ತಾ ಹೋಗುತ್ತಾರೆ. ನಾವಿಬ್ಬರೂ ಮಾಡುತ್ತಿರುವುದು ಒಂದೇ ಅಲ್ಲವೇ? ಸಮಾಜದ ಕೆಳವರ್ಗದ ಜನರನ್ನು ಚದುರಂಗದ ಕಾಯಿಗಳಂತೆ ನಡೆಸುತ್ತಿಲ್ಲವೇ? ಬಲಪಂಥೀಯರು ಇವರು ಶೋಷಿತರು ಅನ್ನುವುದನ್ನೇ ಅಲ್ಲಗಳೆಯಲು ಪ್ರಯತ್ನಿಸುತ್ತಾರೆ. ಕಥೆ ತಿರುಚುತ್ತಾರೆ. ಅವರ ಕಥೆಯನ್ನು ನೆಚ್ಚಿಹೊರಟರೆ, ಅಲ್ಲಿ ಕುದುರೆ ಹಾಗೂ ಒಂಟೆಗಳಿಗೆ ಕೆಲಸವೇ ಇರುವುದಿಲ್ಲ. ಆದರೆ, ನಮ್ಮ ಮಟ್ಟಿಗೆ ಪ್ರತಿ ಕಾಯಿಯ ನಾಶ ಅವರ ಹೇಯತೆಗೆ ಒಂದು ಪುರಾವೆ ಆಗಿಬಿಡುತ್ತದೆ. ಇಬ್ಬರೂ ಅಂತಿಮವಾಗಿ ಜೀವಗಳನ್ನು ಕೇವಲ ಚದುರಂಗದಾಟದ ಕಾಯಿಗಳ ಮಟ್ಟಕ್ಕೆ ಇಳಿಸಿಬಿಟ್ಟಿರುತ್ತೇವೆ.

ಹೊಸ ಹಾದಿಯನ್ನು ಕಂಡುಕೊಳ್ಳಬೇಕಾಗಿದೆ

ಉಗ್ರವಾದ ಎನ್ನುವುದು ನಮ್ಮಲ್ಲಿ, ನಮ್ಮ ಒಳಗೇ ಇದೆ ಎನ್ನುವುದನ್ನು ಬಲದ ಒಲವಿರುವವರು ಗಮನಿಸುವುದಿಲ್ಲ. ಹಾಗಾಗಿ ಪ್ರತೀಕಾರ ಸರಿ ಅನ್ನಿಸಿಬಿಡುತ್ತದೆ. ಮತ್ತು ಉದಾರವಾದಿಯಾದ ನಾನು ನಿಜವಾದ ಜನರೊಂದಿಗೆ ಒಡನಾಡಬೇಕು, ನನ್ನ ರಾಜಕೀಯ ಅವರ ನಡುವಿನಿಂದಲೇ ಹೊಮ್ಮಬೇಕು. ಉದಾರವಾದಿಯಾಗುವುದರ ಅರ್ಥವೇ ಗಮನಿಸುವುದು ಹಾಗೂ ಪ್ರಶ್ನಿಸುವುದು. ಆದರೆ ಇಂದು ನಾವು ಕೇವಲ ಪ್ರತಿಕ್ರಿಯಿಸುತ್ತಿದ್ದೇವೆ. ಭಾರತ ಮೋದಿಯನ್ನು ಹಾಗೂ ಬಿಜೆಪಿಯನ್ನು ಭಾರತ ಚುನಾಯಿಸಿದೆ ಎಂಬ ಸಂಗತಿಯ ಬಗ್ಗೆ ಇಂದಿಗೂ ಗಾಬರಿಗೊಳ್ಳುತ್ತವೆ. ಕಾರಣಕ್ಕಾಗಿ ನಿರಂತರವಾಗಿ ಹೊರಗೆ ನೋಡುತ್ತಿದ್ದೇವೆ. ಆ ಪ್ರಕ್ರಿಯೆಯಲ್ಲಿ, ಮುಕ್ತವಾಗಿರುವುದು ಅಂದರೆ ನಮ್ಮ ಒಳಗನ್ನು ನೋಡಿಕೊಳ್ಳುವುದು ಅನ್ನುವುದನ್ನು ಮರೆತಿದ್ದೇವೆ.

ನಾವು ನಮ್ಮ ಕಾರ್ಯಚಟುವಟಿಕೆಯನ್ನು ಬದಲಿಸಿಕೊಳ್ಳದೇ ಹೋದರೆ, ಮೋದಿ ಅಧಿಕಾರದಿಂದ ಕೆಳಗಿಳಿದ ಮೇಲೂ ಏನೂ ಬದಲಾಗು ವುದಿಲ್ಲ. ಮೋದಿಯ ನಂತರದ ಭಾರತ ಬರುತ್ತಿದ್ದಂತೆ ನಾವು ಸೂಕ್ತವಾದ ಚಟುವಟಿಕೆಯನ್ನು ರೂಪಿಸಿಕೊಳ್ಳಬೇಕು. ಮೋದಿ ಮತ್ತವರ ಪಕ್ಷದವರು ಸಮಾಜವನ್ನು ಒಡೆಯುತ್ತಿದ್ದಾರೆ. ಈ ಕೆಲಸವನ್ನು ಅವರು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಅಂತ ನಮಗೆ ಅನ್ನಿಸುತ್ತಿದೆ. ಇದನ್ನು ನಾವು ಸರಿಪಡಿಸಬೇಕು. ಅಷ್ಟೇ ಅಲ್ಲ, ನಮ್ಮ ದೇಶ ಗುಣಮುಖವಾಗುವಂತೆ ನೋಡಿಕೊಳ್ಳಬೇಕು. ಈ ಸರಕಾರ ನಮಗಾಗಿ ತೋಡಿರುವ ಹಳ್ಳದಲ್ಲಿ ನಾವು ಸಿಕ್ಕಿಕೊಂಡಿದ್ದರೆೆ ಇದು ಸಾಧ್ಯವಾಗುವುದಿಲ್ಲ. ಅವರು ಅರಚುತ್ತಾರೆ, ಪ್ರತಿಯಾಗಿ ನಾವೂ ಅರಚುತ್ತೇವೆ. ಇಬ್ಬರೂ ಏನೋ ಸಾಧಿಸಿಬಿಟ್ಟವರಂತೆ ನಮ್ಮ ನಮ್ಮ ಲೋಕದಲ್ಲಿ ಭ್ರಮೆಯಲ್ಲಿರುತ್ತೇವೆ. ಬಿಜೆಪಿಯ ಉದ್ದೇಶವೂ ಇದೇ. ನಮ್ಮನ್ನು ಜನರಿಂದ ಪ್ರತ್ಯೇಕಿಸುವುದು. ಅವರು ಸಮಾಜದ ಹೆಚ್ಚಿನ ಜನರ ಬ್ರೈನ್‌ವಾಷ್ ಮಾಡುತ್ತಾ ಹೋದಾಗ ಅವರನ್ನು ದೂಷಿಸುತ್ತಾ, ಆರೋಪಿಸುತ್ತಾ ಹೋಗುತ್ತಿರುತ್ತೇವೆ. ದುರಂತ ನಮಗೆ ಗೊತ್ತಾಗದ ಹಾಗೆ ನಮ್ಮನ್ನು ತಟ್ಟುವವರೆಗೆ ನಾವು ಕಾಯುತ್ತಾ ಕೂರಲಾಗುವುದಿಲ್ಲ. ಘಟನೆಯಾದ ನಂತರ ಅದು ನಡೆದ ಸ್ಥಳಕ್ಕೆ ಧಾವಿಸುತ್ತೇವೆ. ಘಟನೆಯನ್ನು ಕುರಿತು ಪ್ರಲಾಪಿಸುತ್ತೇವೆ. ನಮ್ಮ ಬೌದ್ಧಿಕತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅದನ್ನು ಬಳಸಿಕೊಳ್ಳುತ್ತೇವೆ. ಹಾಗೆ ಮಾಡುವುದರ ಮೂಲಕ ನಾವೂ ಕೂಡ ಬಿಜೆಪಿಯವರಂತೆಯೇ ಅವಕಾಶವಾದಿಗಳಾಗುತ್ತೇವೆ. ಸಾಮಾನ್ಯ ಜನರ ಬಗೆಗಿನ ನಮ್ಮ ಕಾಳಜಿ ನಿಜವಾದ ಕಾಳಜಿಯಾಗಬೇಕು. ಲಿಂಗ, ಜಾತಿ, ಧರ್ಮ ಮತ್ತು ಕುಲವನ್ನು ಮೀರಿ ಅವರ ಕೈಹಿಡಿಯಬೇಕು. ಅವರ ನೋವನ್ನು ಹಂಚಿಕೊಳ್ಳುವಂತೆ ಅವರ ನಗುವನ್ನೂ ಹಂಚಿಕೊಳ್ಳಬೇಕು. ನಾವು ಸಮಾಜದ ಯಾವುದೇ ಗುಂಪನ್ನು ನಿರ್ಲಕ್ಷಿಸುವುದಕ್ಕೆ ಅಥವಾ ಬಿಡುವುದಕ್ಕೆ ಆಗುವುದಿಲ್ಲ. ಬಲಪಂಥೀಯರು ಇದನ್ನು ನಮಗೆ ಕಲಿಸಿದ್ದಾರೆ. ಪ್ರತಿ ಹಳ್ಳಿಯಲ್ಲಿ, ಊರಿನಲ್ಲಿ, ಶಾಲೆಯಲ್ಲಿ, ಕಾಲೇಜಿನಲ್ಲಿ ಉದಾರವಾದಿ ಧ್ವನಿ ಕೇಳಿಸಬೇಕು. ಅದನ್ನು ನಿರ್ಲಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ. ಸಮಾಜದ ಮೂಲೆ ಮೂಲೆಯಲ್ಲೂ ಹರಡಿರುವ ನಕಾರಾತ್ಮಕತೆಯ ಪಿಡುಗು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಇದು ನಾವು ಏನಾಗಿದ್ದೇವೆ ಅನ್ನುವುದರ ಪ್ರತಿಫಲನ. ಮೋದಿ ಹಾಗೂ ಬಿಜೆಪಿ ನಮ್ಮ ಸಮಾಜದ ದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಂಡಿದೆ. ನಮ್ಮ ಮನಸ್ಸುಗಳಿಗೆ ಮಂಕುಬಡಿಸಲು ಅವರಿಗೆ ಬಿಡಬಾರದು. ನಮ್ಮ ಸಮಾಜದ ಮಿತಿಗಳಿಂದ ತೀವ್ರವಾಗಿ ಹಾನಿಗೊಳಗಾದವರೊಂದಿಗೆ ನಾವು ನಿಲ್ಲಬೇಕು. ಯಾವುದೇ ರಾಜಕೀಯ ಕನ್ನಡಕವೂ ಇಲ್ಲದೆ ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಸಂವೇದನಾಶೀಲತೆಯನ್ನು ನಮ್ಮ ಉದಾರವಾದಿ ಸಮುದಾಯ ನಿಜವಾದ ಅರ್ಥದಲ್ಲಿ ಅನಂತವಾಗಿ, ಜೀವಂತವಾಗಿ ಉಳಿಸಿಕೊಂಡಾಗ ಮಾತ್ರ ಮರುಚೇತರಿಕೆ ಸಾಧ್ಯ.

ಸಮಾಜದ ಮೂಲೆ ಮೂಲೆಯಲ್ಲೂ ಹರಡಿರುವ ನಕಾರಾತ್ಮಕತೆಯ ಪಿಡುಗು ಕೇವಲ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಇದು ನಾವು ಏನಾಗಿದ್ದೇವೆ ಅನ್ನುವುದರ ಪ್ರತಿಫಲನ. ಮೋದಿ ಹಾಗೂ ಬಿಜೆಪಿ ನಮ್ಮ ಸಮಾಜದ ದೌರ್ಬಲ್ಯಗಳನ್ನೇ ಬಂಡವಾಳ ಮಾಡಿಕೊಂಡಿದೆ. ನಮ್ಮ ಮನಸ್ಸುಗಳಿಗೆ ಮಂಕುಬಡಿಸಲು ಅವರಿಗೆ ಬಿಡಬಾರದು. ನಮ್ಮ ಸಮಾಜದ ಮಿತಿಗಳಿಂದ ತೀವ್ರವಾಗಿ ಹಾನಿಗೊಳಗಾದವರೊಂದಿಗೆ ನಾವು ನಿಲ್ಲಬೇಕು. ಯಾವುದೇ ರಾಜಕೀಯ ಕನ್ನಡಕವೂ ಇಲ್ಲದೆ ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಸಂವೇದನಾಶೀಲತೆಯನ್ನು ನಮ್ಮ ಉದಾರವಾದಿ ಸಮುದಾಯ ನಿಜವಾದ ಅರ್ಥದಲ್ಲಿ ಅನಂತವಾಗಿ, ಜೀವಂತವಾಗಿ ಉಳಿಸಿಕೊಂಡಾಗ ಮಾತ್ರ ಮರುಚೇತರಿಕೆ ಸಾಧ್ಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top