ಆರ್ಸಿಬಿ ತಂಡಕ್ಕೆ ಆ್ಯಂಡರ್ಸನ್ ಸೇರ್ಪಡೆ
ಹೊಸದಿಲ್ಲಿ, ಮಾ.24: ಮುಂಬರುವ ಐದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ(ಐಪಿಎಲ್) ನ್ಯೂಝಿಲೆಂಡ್ ಆಲ್ರೌಂಡರ್ ಕೋರಿ ಆ್ಯಂಡರ್ಸನ್ ಗಾಯಗೊಂಡಿರುವ ಆಸ್ಟ್ರೇಲಿಯದ ವೇಗದ ಬೌಲರ್ ನಥಾನ್ ಕೌಲ್ಟನ್-ನೀಲ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಐಪಿಎಲ್ ತಾಂತ್ರಿಕ ಸಮಿತಿ ಈ ವಿಷಯವನ್ನು ಶನಿವಾರ ದೃಢಪಡಿಸಿದೆ.
ಕಳೆದ ಋತುವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ 8 ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಕಬಳಿಸಿರುವ ಕೌಲ್ಟರ್-ನೀಲ್ ಇದೀಗ ಗಾಯದಿಂದ ಐಪಿಎಲ್ನಿಂದ ಹೊರಗುಳಿದಿದ್ದಾರೆ. ಆಟಗಾರರ ನಿಯಮಾವಳಿ ಪ್ರಕಾರ ನೋಂದಾಯಿಸಲ್ಪಟ್ಟಿರುವ ಹಾಗೂ ಲಭ್ಯವಿರುವ ಆಟಗಾರರ ಗುಂಪಿನಿಂದ ಬದಲಿ ಆಟಗಾರರನ್ನು ಆರ್ಸಿಬಿ ಆಯ್ಕೆ ಮಾಡಿಕೊಳ್ಳಬಹುದು.ಆರ್ಸಿಬಿ ಮೂಲ ಬೆಲೆ 2 ಕೋ.ರೂ.ಗೆ ಆ್ಯಂಡರ್ಸನ್ರನ್ನು ಖರೀದಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆರ್ಸಿಬಿ ತಂಡ ಎ.8 ರಂದು ಕೆಕೆಆರ್ ತಂಡವನ್ನು ಎದುರಿಸುವ ಮೂಲಕ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ.
Next Story