ಟರ್ಕಿ ವಿವಿಯಲ್ಲಿ ಗುಂಡಿನ ದಾಳಿ: 4 ಸಾವು
ಇಸ್ತಾಂಬುಲ್, ಎ. 5: ಪಶ್ಚಿಮ ಟರ್ಕಿಯ ನಗರ ಎಸ್ಕಿಸೆಹಿರ್ನ ವಿಶ್ವವಿದ್ಯಾನಿಲಯವೊಂದರಲ್ಲಿ ಗುರುವಾರ ಗುಂಡಿನ ದಾಳಿ ನಡೆಸಿದ ಉದ್ಯೋಗಿಯೊಬ್ಬ ತನ್ನ ನಾಲ್ವರು ಸಹೋದ್ಯೋಗಿಗಳನ್ನು ಹತ್ಯೆಗೈದಿದ್ದಾನೆ.
ದಾಳಿಕೋರನನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ಡೋಗನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಾಳಿಯಲ್ಲಿ ಉಸ್ಮಾನ್ಗಝಿ ವಿಶ್ವವಿದ್ಯಾಲಯದ ಉಪ ಡೀನ್, ಕಾರ್ಯದರ್ಶಿ ಮತ್ತು ಇಬ್ಬರು ಉಪನ್ಯಾಸಕರು ಪ್ರಾಣ ಕಳೆದುಕೊಂಡಿದ್ದಾರೆ.
Next Story