ಅಮೆರಿಕ, ದ. ಕೊರಿಯ ನಡುವಿನ ಸಮರಾಭ್ಯಾಸ ರದ್ದು
ಸಿಯೋಲ್, ಜೂ. 19: ತಮ್ಮ ನಡುವಿನ ನಿಗದಿತ ಜಂಟಿ ಸಮರಾಭ್ಯಾಸವನ್ನು ಕೈಬಿಡಲಾಗಿದೆ ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕದ ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವೆ ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಶೃಂಗ ಸಮ್ಮೇಳನದಲ್ಲಿ ನಿರ್ಣಯಗಳಿಗೆ ಅನುಸಾರವಾಗಿ ಯೋಜಿತ ಸಮರಾಭ್ಯಾಸವನ್ನು ಕೈಬಿಡಲಾಗಿದೆ.
Next Story