ಚಾರ್ಜ್ ಗೆ ಇಟ್ಟಿದ್ದ ಸ್ಮಾರ್ಟ್ ಫೋನ್ ಸ್ಫೋಟ: ಕ್ರೇಡಲ್ ಫಂಡ್ ಸಿಇಒ ಮೃತ್ಯು
ಮಲೇಶ್ಯಾ, ಜೂ.21: ಚಾರ್ಜ್ ಮಾಡುತ್ತಿದ್ದ ವೇಳೆ ಸ್ಮಾರ್ಟ್ ಫೋನ್ ಸ್ಪೋಟಗೊಂಡು ಕ್ರೇಡಲ್ ಫಂಡ್ ಸಂಸ್ಥೆಯ ಸಿಇಒ ನಝ್ರೀನ್ ಹಸ್ಸನ್ ಎಂಬವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕ್ರೇಡಲ್ ಫಂಡ್ ಮಲೇಶ್ಯಾದ ಹಣಕಾಸು ಸಚಿವಾಲಯದ ಮಾಲಕತ್ವದಲ್ಲದೆ. ಬ್ಲ್ಯಾಕ್ ಬೆರ್ರಿ ಹಾಗು ಹವಾಯ್ ಸ್ಮಾರ್ಟ್ ಫೋನ್ ಗಳನ್ನು ನಝ್ರೀನ್ ಹಸ್ಸನ್ ಬಳಸುತ್ತಿದ್ದರೆಂದು ತಿಳಿದುಬಂದಿದೆ. ಹಸ್ಸನ್ ಅವರ ಬೆಡ್ ರೂಮ್ ನಲ್ಲಿ ಎರಡು ಮೊಬೈಲ್ ಗಳನ್ನು ಚಾರ್ಜ್ ಗೆ ಇಡಲಾಗಿತ್ತು ಎನ್ನಲಾಗಿದೆ.
ಮೊಬೈಲ್ ಸ್ಫೋಟಗೊಂಡ ಪರಿಣಾಮ ಕೋಣೆಯಲ್ಲಿದ್ದ ಹಾಸಿಗೆಗೂ ಬೆಂಕಿ ಹೊತ್ತಿಕೊಂಡಿದೆ. ಎರಡು ಮೊಬೈಲ್ ಗಳಲ್ಲಿ ಯಾವ ಮೊಬೈಲ್ ಸ್ಫೋಟಗೊಂಡಿದೆ ಎನ್ನುವುದು ಇನ್ನೂ ಸ್ಪಷ್ಟಗೊಂಡಿಲ್ಲ.
Next Story