ಡಾಲರ್ ಎದುರು ತೀವ್ರ ಕುಸಿತ ಕಂಡ ರೂಪಾಯಿ ಮೌಲ್ಯ
ಹೊಸದಿಲ್ಲಿ, ಜೂ.28: ಡಾಲರ್ ಎದುರು ರೂಪಾಯಿ ಮೌಲ್ಯ ಹಿಂದೆಂದಿಗಿಂತಲೂ ಅತ್ಯಧಿಕ ಕುಸಿತವನ್ನು ಗುರುವಾರ ಕಂಡಿದೆ. ಬೆಳಿಗ್ಗೆ 11:12 ಸುಮಾರಿಗೆ ರೂಪಾಯಿ ಮೌಲ್ಯ ಡಾಲರ್ ಎದುರು 68.92/93 ಆಗಿತ್ತು. ಈ ಹಿಂದೆ ನವೆಂಬರ್ 24, 2016ರಲ್ಲಿ ರೂಪಾಯಿ ದರ ಡಾಲರ್ ಎದುರು 68.8650ರಷ್ಟು ಕುಸಿದಿತ್ತು.
ಹೆಚ್ಚುತ್ತಿರುವ ಕಚ್ಛಾ ತೈಲ ಬೆಲೆಗಳು ಈ ಬೆಳವಣಿಗೆಗೆ ಕಾರಣವೆನ್ನಲಾಗಿದ್ದು. ತೈಲಕ್ಕೆ ಹೆಚ್ಚುತ್ತಿರುವ ಬೇಡಿಕೆ ಹಾಗೂ ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಯಿಂದ ಸ್ವಯಂಪ್ರೇರಿತ ಪೂರೈಕೆ ಕಡಿತ ಕೂಡ ಕಾರಣವೆನ್ನಲಾಗಿದೆ.
ಬುಧವಾರ ಮಾರುಕಟ್ಟೆ ಅಂತ್ಯಗೊಂಡಾಗ ಡಾಲರ್ ಎದುರು ರೂಪಾಯಿ ಮೌಲ್ಯ 68.65/66ರಷ್ಟಾಗಿತ್ತು.
Next Story