ಈ ಲೂಟಿಯ ಮೂಲಗಳೇನು?

ಪ್ರಾಣ ಕಾಪಾಡುವ ಔಷಧಗಳ ಬೆಲೆಗಳು ಪ್ರಜೆಗಳಿಗೆ ಕೈಗಟಕುವಂತೆ ರಾಷ್ಟ್ರೀಯ ಔಷಧ ಬೆಲೆಗಳ ಅಥಾರಿಟಿ ಗರಿಷ್ಠ ಬೆಲೆಗಳನ್ನು ನಿರ್ಣಯಿಸಬೇಕು. ನಿರ್ಣಯಿತ ಬೆಲೆಗಳಿಗೆ ಮೀರಿ ಮಾರಾಟ ಮಾಡಿದರೆ ಸರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ ಅಥಾರಿಟಿ ಬೆಲೆಗಳನ್ನು ನಿರ್ಣಯಿಸುವುದಿಲ್ಲ. ಪಟ್ಟಿಯಲ್ಲಿ ನಿಜಕ್ಕೂ ತುರ್ತು ಇರುವುದನ್ನು ಸೇರಿಸುವುದಿಲ್ಲ. ನಿರ್ಲಪ್ತತೆ, ನಿಷ್ಕ್ರಿಯತೆಗಳಿಂದ ಖಾಸಗಿ ವೈದ್ಯ ವ್ಯಾಪಾರಿಗಳ ಲೂಟಿಗೆ ಅವಕಾಶ ಒದಗಿದೆ.

ಒಬ್ಬ ನತದೃಷ್ಟನಿಗೆ ಎದೆನೋವು ಬಂದಾಗ ಫರೀದಾಬಾದ್ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಸ್ಟೆಂಟ್ ಅಳವಡಿಸಬೇಕೆಂದರು. ಆಸ್ಪತ್ರೆಯವರೇ ಸ್ಟೆಂಟ್‌ನ 1,26,000 ರೂ.ಗಳಿಗೆ ಮಾರಿದರು. ಸ್ಟೆಂಟ್ ಪ್ಯಾಕೆಟ್ ಬಾಕ್ಸ್ ಮೇಲೆ ಗರಿಷ್ಠ ಬೆಲೆ ಇರಲಿಲ್ಲ. ಏಕೆಂದು ಕೇಳಿದರೆ ಸರಕಾರ ಸ್ಟೆಂಟ್‌ನ್ನು ಔಷಧವಾಗಿ ಪರಿಗಣಿಸಿಲ್ಲವಾದ್ದರಿಂದ ನಿಯಂತ್ರಣ ಇಲ್ಲವಂತೆ. ರಾಷ್ಟ್ರೀಯ ಔಷಧ ದರಗಳ ಅಥಾರಿಟಿ ಸಂಗ್ರಹಿಸಿದ ವಿವರಗಳ ಮೇರೆಗೆ ಪಟ್ಟಿಯಲ್ಲಿಲ್ಲದ ವಸ್ತುಗಳು, ಔಷಧಗಳಿಗೆ ಬೆಲೆ ಶೇ. 1,000ದಿಂದ ಶೇ. 2,000ವರೆಗೂ ಹೆಚ್ಚಿಸುತ್ತಿದ್ದಾರೆ.

ಮತ್ತೊಂದು ಕಡೆ ಕಾರ್ಡಿಯೋ ವಾಸ್ಕುಲರ್ ರೋಗಗಳು ಬೆಳೆಯುತ್ತಾ 5 ವರ್ಷಗಳಲ್ಲಿ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗಳು ಇಮ್ಮಡಿಯಾಗಿವೆ. ಸ್ಟೆಂಟ್ ಹೆಸರಲ್ಲಿ ರೋಗಿಗಳನ್ನು ನಖಶಿಖಾಂತ ದೋಚಿಕೊಳ್ಳುತ್ತಿದ್ದಾರೆ. ಇದೊಂದು ದೊಡ್ಡ ಅಕ್ರಮ ಪ್ರಕರಣ. ಯಾವ ಸ್ಟೆಂಟ್ ಖರೀದಿಸಬೇಕೋ ವೈದ್ಯಶಾಲೆಗಳ ಯಜಮಾನರು ಡಾಕ್ಟರ್‌ಗಳನ್ನು ಆದೇಶಿಸಿ ನಿಯಂತ್ರಿಸುತ್ತಿದ್ದಾರೆ. ಡಾಕ್ಟರ್ ಹೇಳಿದರು ಎಂದು ಎಷ್ಟು ಬೆಲೆಯನ್ನಾದರೂ ಇಟ್ಟುಕೊಳ್ಳುತ್ತಾರೆ. ಮಾರ್ಕೆಟ್‌ನಲ್ಲಿ ಒಳ್ಳೆ ಸ್ಟೆಂಟ್ ಆರಿಸಿಕೊಳ್ಳುವ ಸ್ವಾತಂತ್ರ ರೋಗಿಗಳಿಗೆ ಇಲ್ಲವೇ? ಖಾಸಗಿ ವ್ಯಾಪಾರಿಗಳ ಸ್ಟೆಂಟ್ ಲೂಟಿಯನ್ನು ನಿಯಂತ್ರಿಸುವುದಕ್ಕೆ ರಾಷ್ಟ್ರೀಯ ತುರ್ತು ಔಷಧಗಳ ಪಟ್ಟಿಯಲ್ಲಿ ಈ ಸ್ಟೆಂಟ್‌ಗಳನ್ನು ಸೇರಿಸಬೇಕೆಂದು ಆದೇಶಿಸುವಂತೆ ಕೋರುತ್ತಾ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯವನ್ನು ಬೀರೇಂದ್ರ ಸಾಂಗ್ವಾನ್ ದಿಲ್ಲಿ ಹೈಕೋರ್ಟ್‌ನಲ್ಲಿ 2014ರಲ್ಲಿ ದಾಖಲು ಮಾಡಿದರು. ಆರ್‌ಟಿಐ ಮೂಲಕ ಸಾಧಿಸಿದ ಮಾಹಿತಿ ಪತ್ರಗಳ ಆಧಾರದಿಂದ ಈ ವಿಲ್‌ನ ರೂಪುಗೊಳಿಸಿದ್ದರು ಆತ.

ಇಎಸ್‌ಐ ಕಾಪೊರೇಶನ್ ತಮ್ಮ ಆಸ್ಪತ್ರೆಯಲ್ಲಿ ಸ್ಟೆಂಟ್ ಇಂಪ್ಲಾಂಟ್ ಮಾಡುವ ಸೌಕರ್ಯಗಳು ಇಲ್ಲ ಎಂಬ ನೆಪದಿಂದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತದೆ. ಕೇಂದ್ರ ಸರಕಾರ ಆರೋಗ್ಯ ಯೋಜನೆ ಸಿಜೆಎಚ್‌ಎಸ್ ಬೆಲೆಗಳನ್ನು ಅಥವಾ ಎಯಮ್ಸ್ ಬೆಲೆಗಳನ್ನು ಮಾತ್ರವೇ ವಸೂಲು ಮಾಡಬೇಕೆಂಬ ನಿಯಮಗಳು ಇರುವುದಾಗಿ ಅಧಿಕಾರಿಗಳು ಅನ್ನುತ್ತಿದ್ದಾರೆ. ಎಷ್ಟು ಜನ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದ್ದಾರೆ? ಅವರು ಎಷ್ಟು ಬೆಲೆ ವಸೂಲು ಮಾಡಿದ್ದಾರೆ? ನಿರ್ಣಯಿತ ದರಗಳು ಯಾವುವು? ಎಂದು ಮಾಹಿತಿ ಹಕ್ಕು ಕಾನೂನಿನಡಿ ಕೇಳಿದರೂ, ಕೋಟ್ಯಂತರ ರೂ. ಖಾಸಗಿ ಆಸ್ಪತ್ರೆಗಳಿಗೆ ಸಲ್ಲಿಸುವ ಬದಲು ಸ್ವಂತ ಆಸ್ಪತ್ರೆಯಲ್ಲಿ ಬೇಕಾದ ಚಿಕಿತ್ಸೆಗಳನ್ನು ನೀಡುವ ಏರ್ಪಾಟುಗಳನ್ನು ಮಾಡುವುದಿಲ್ಲ. ಕಾರ್ಪೊರೇಟ್ ಆಸ್ಪತ್ರೆಗಳಿಗೆ ಲೂಟಿ ಮಾಡುವ ಅವಕಾಶ ಕೊಡುತ್ತಿದ್ದಾರೆ.

ಇದರಿಂದ ವಾರ್ಷಿಕ 1,500 ಕೋಟಿ ರೂ. ಮೊತ್ತದಂತೆ 2013ರಿಂದ 2016ರ ತನಕ ಸಲ್ಲಿಸಬೇಕಾಗಿ ಬಂದಿತು ಎಂದು ಇಎಸ್‌ಐಸಿಯಲ್ಲಿ ಕೆಲಸ ಮಾಡಿದ ಒಬ್ಬ ಡಾಕ್ಟರ್ ವಿವರಿಸಿದ್ದಾರೆ. ಔಷಧ ಸ್ರವಿಸುವ ಸ್ಟೆಂಟ್‌ಗಳನ್ನು ಭಾರತದಲ್ಲಿ 600ರಿಂದ 2971 ಡಾಲರ್‌ವರೆಗೂ ಮಾರುತ್ತಿದ್ದಾರೆಂದು, ಅಮೆರಿಕದಲ್ಲಿ ಈ ಸ್ಟೆಂಟ್‌ಗಳನ್ನು ಅದರ ಅರ್ಧಕ್ಕಿಂತ ಕಡಿಮೆ ಬೆಲೆಗೆ ಅಂದರೆ ಸಗಟಾಗಿ 1,200 ಡಾಲರ್‌ಗೆ ಮಾರುತ್ತಿದ್ದಾರೆಂದು ಅಮೆರಿಕನ್ ಹೆಲ್ತ್ ಅಸೋಸಿಯೇಶನ್ ಸಂಶೋಧನಾ ಪತ್ರದಲ್ಲಿ ವಿವರಿಸಿದ್ದಾರೆ. ಇಎಸ್‌ಐಸಿಯವರು ಸಾಮಾನ್ಯವಾಗಿ ಸಿಜೆಎಚ್‌ಎಸ್ ರೇಟನ್ನು ಸಲ್ಲಿಸುತ್ತಾರೆಂದು ಹೇಳಿದ್ದಾರೆ. ನಿಜಕ್ಕೂ ಖಾಸಗಿ ಆಸ್ಪತ್ರೆಯವರು ಏಯಮ್ಸ್ ಇಲ್ಲವೆ ಸಿಜೆಎಚ್‌ಎಸ್ ರೇಟ್‌ಗಳಿಗಿಂತ ಎರಡೂವರೆ ಪಟ್ಟು ಹೆಚ್ಚು ದರಕ್ಕೆ ಮಾರುತ್ತಿದ್ದಾರೆ ಎಂದು, ಆದರೂ ಯಾರೂ ಕೇಳುವವರಿಲ್ಲ ಎಂದು ಆರ್‌ಟಿಐ ಹಾಕಿದ ಒಬ್ಬ ಡಾಕ್ಟರ್ ವಿಮರ್ಶಿಸಿದ್ದಾರೆ. ಏಯಮ್ಸ್ ರೇಟು ಇಲ್ಲವೇ ಸಿಜೆಎಚ್‌ಎಸ್ ರೇಟಿನೊಂದಿಗೆ ಹೋಲಿಸಿದರೆ ಮಾರ್ಕೆಟ್‌ನಲ್ಲಿ ಖಾಸಗಿ ಆಸ್ಪತ್ರೆಗಳ ಬೆಲೆಗಳು ತುಂಬಾ ಹೆಚ್ಚು.

ಮಾಕೆರ್ಟ್‌ನಲ್ಲಿ ಗರಿಷ್ಠ ಬೆಲೆಗಿಂತ ಶೇ.15ರಷ್ಟು ಕಡಿಮೆ ಚಾರ್ಜು ಮಾಡಬೇಕೆಂಬ ನಿಯಮಗಳು ಇವೆ ಎಂದು ಅಧಿಕಾರಿಗಳು ವಿವರಿಸುತ್ತಾರೆ. ಇಎಸ್‌ಐಸಿಯವರು ಸಾಮಾನ್ಯವಾಗಿ ಸಿಜೆಎಚ್‌ಎಸ್ ರೇಟನ್ನು ಸಲ್ಲಿಸುತ್ತಾರೆಂದು ಹೇಳುತ್ತಾರೆ. ಆಡಳಿತ ವಿಧಾನಗಳನ್ನು ಸರಿಪಡಿಸುವುದರಲ್ಲಿ ಆರ್‌ಟಿಐ ಪ್ರಜೆಗಳಿಗೆ ಒಂದು ಪಾತ್ರವನ್ನು ವ್ಯವಸ್ಥೆ ಮಾಡಿದೆ.

ಮೊತ್ತ ಮೊದಲ ಸ್ಟೆಂಟ್ ರೇಟನ್ನು ನಿಯಂತ್ರಿಸಬೇಕು. ಗರಿಷ್ಠ ಬೆಲೆ ಎಷ್ಟೋ ವಿಸ್ತೃತವಾಗಿ ಪ್ರಜೆಗಳಿಗೆ ಸುಲಭವಾಗಿ ತಿಳಿಯಪಡಿಸಬೇಕು. ಖಾಸಗಿ ಆಸ್ಪತ್ರೆಗಳ ಗೋಡೆಗಳ ಮೇಲೆ ಸ್ಟೆಂಟ್ ಗರಿಷ್ಠ ಬೆಲೆ ದೊಡ್ಡದಾಗಿ ಬರೆಯಲ್ಪಟ್ಟಿರಬೇಕು. ಅದಕ್ಕೆ ಹೆಚ್ಚಿನ ದರ ಕೊಡಬಾರದೆಂದು, ವಸೂಲು ಮಾಡದರೆ ನಿರ್ದಿಷ್ಟ ಇಂಥವರಿಗೆ ಫಿರ್ಯಾದು ಮಾಡಬೇಕೆಂದು ಮೊಬೈಲ್ ನಂಬರ್, ಇ-ಮೇಲ್ ಅಡ್ರಸ್ ಕೂಡ ದೊಡ್ಡದಾಗಿ ಬರೆಯಬೇಕು. ಈ ವಿಧವಾಗಿ ಬರೆಯದ ಆಸ್ಪತ್ರೆಗಳ ಲೈಸನ್ಸ್ ರದ್ದು ಮಾಡಬೇಕು. ಕೇವಲ ರಾಷ್ಟ್ರೀಯ ತುರ್ತು ಔಷಧಗಳಲ್ಲಿ ಒಂದನ್ನಾಗಿ ಸ್ಟೆಂಟ್‌ನ ಸೇರಿಸದೆ ಹೋಗುವುದು, ತುರ್ತು ವಸ್ತುಗಳ ಬೆಲೆಗಳ ಅಥಾರಿಟಿ ಬೆಲೆಗಳನ್ನು ನಿರ್ಣಯಿಸದೆ ಹೋಗುವುದರಿಂದ ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ಸರಕಾರಿ ರಂಗದಲ್ಲೂ, ಅದೇ ಮಟ್ಟದಲ್ಲಿ ಖಾಸಗಿ ಆಸ್ಪತ್ರೆ ರಂಗದಲ್ಲೂ ನಡೆಯುತ್ತಿದೆ. ಲೂಟಿಗೆ ಗುರಿಯಾಗುವುದು ಮಾತ್ರ ಸಾಮಾನ್ಯ ರೋಗಿಗಳು. ಮಧ್ಯಮ ವರ್ಗದ ಕುಟುಂಬದವರು. ಈ ವಿಧಾನ ನಿರ್ಣಯಗಳ ತೆಗೆದುಕೊಳ್ಳುವುದರಲ್ಲಿ ಎಷ್ಟು ತಡವಾದರೆ ಅಷ್ಟರ ಮಟ್ಟಿಗೆ ರೋಗಿಗಳ ಲೂಟಿ ನಡೆಯುತ್ತಲೇ ಇರುತ್ತದೆ.

ಕೃಪೆ: ಸಾಕ್ಷಿ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top