ಸೌದಿ: ಕಾನೂನು ಉಲ್ಲಂಘನೆಗಾಗಿ 10,000 ಮಂದಿ ಗಡಿಪಾರು
ಜಿದ್ದಾ, ಜು. 31: ವಾಸ್ತವ್ಯ ಮತ್ತು ಕಾರ್ಮಿಕ ಕಾನೂನು ಉಲ್ಲಂಘಕರ ವಿರುದ್ಧ ಸೌದಿ ಅರೇಬಿಯದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಕಳೆದ ವಾರ 10,000ಕ್ಕೂ ಅಧಿಕ ಮಂದಿಯನ್ನು ಗಡಿಪಾರುಗೊಳಿಸಲಾಗಿದೆ.
2017 ನವೆಂಬರ್ 15ರ ಬಳಿಕ ಸೌದಿ ಅರೇಬಿಯದಲ್ಲಿ ಬಂಧಿಸಲ್ಪಟ್ಟವರ ಸಂಖ್ಯೆ 14,83,009ಕ್ಕೆ ಏರಿದೆ.
‘ಅಕ್ರಮ ವಲಸಿಗ ಮುಕ್ತ ದೇಶ’ ಅಭಿಯಾನದ ಅಂಗವಾಗಿ ತಮ್ಮ ಸ್ವದೇಶಗಳಿಗೆ ಗಡಿಪಾರುಗೊಂಡ ಅಕ್ರಮ ನಿವಾಸಿಗಳ ಸಂಖ್ಯೆ 3,77,572ಕ್ಕೆ ಏರಿದೆ.
ಅಭಿಯಾನದಲ್ಲಿ 19 ಸಚಿವಾಲಯಗಳು ಮತ್ತು ಸರಕಾರಿ ಇಲಾಖೆಗಳು ಪಾಲ್ಗೊಳ್ಳುತ್ತಿವೆ ಎಂದು ಸೌದಿ ಗಝೆಟ್ ವರದಿ ಮಾಡಿದೆ.
Next Story