ಪಿ.ಎಂ.ಅಬೂಬಕರ್
ಪಡುಬಿದ್ರೆ, ಆ. 9: ಆರು ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಡುಬಿದ್ರೆಯ ಕಂಚಿನಡ್ಕ ಮಸೀದಿ ಬಳಿಯ ನಿವಾಸಿ ಪಿ.ಎಂ. ಅಬೂಬಕರ್ (75) ಇಂದು ಬೆಳಗ್ಗೆ ನಿಧನರಾದರು.
ಆರು ತಿಂಗಳ ಎರ್ಮಾಳು ಬಡಾ ಪೆಟ್ರೋಲ್ ಬಂಕ್ ಎದುರು ಲಾರಿ ಹಾಗೂ ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ಪಿ.ಎಂ.ಅಬೂಬಕರ್ ತೀವ್ರ ಗಾಯಗೊಂದ್ದು, ಗುರುವಾರ ಬೆಳಗ್ಗೆ ನಿಧನರಾದರು.
ಮೃತರು ಪಡುಬಿದ್ರೆಯ ಜಮಾಅತ್ ಆಸುಪಾಸಿನಲ್ಲಿ ಚಿರಪರಿಚಿತರಾಗಿದ್ದು, ಇಲ್ಲಿನ ಸಮಾಜ ಸೇವಾ ಸಂಘಟನೆಯಾದ ಇಆನತುಲ್ ಮಸಾಕೀನ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾಗಿ, ಜಮಾಅತ್ ಕಮಿಟಿಯಲ್ಲಿ ಸದಸ್ಯರಾಗಿ ಹಲವು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ಅವರು ಪತ್ನಿ, ಆರು ಮಂದಿ ಪುತ್ರರು, ಆರು ಮಂದಿ ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story