ಹಜ್ಜ್ ಯಾತ್ರಾರ್ಥಿಗಳ ಸೇವೆ: ದಮ್ಮಾಮ್ ಪ್ರಾಂತ್ಯದಿಂದ ತರಬೇತಿ ಶಿಬಿರ
ದಮ್ಮಾಮ್, ಆ. 12 : ಇಂಡಿಯಾ ಫ್ರೆಟರ್ನಿಟಿ ಫೋರಂ ಈ ವರ್ಷವೂ 1,200 ಸ್ವಯಂ ಸೇವಕರನ್ನು ಹಜ್ಜಾಜ್ ಗಳ ಸೇವೆಗೈಯಲು ಅಣಿಯಾಗಿಸಿದ್ದು , ಇದರ ಭಾಗವಾಗಿ ದಮ್ಮಾಮ್ ಪ್ರಾಂತ್ಯದಿಂದ ನುರಿತ ಹಾಗೂ ಎಲ್ಲ ಭಾಷಾ ಪರಿಣತರಾಗಿರುವ ಸುಮಾರು 200 ಸ್ವಯಂ ಸೇವಕರು ಹಜ್ಜ್ ಯಾತ್ರಾರ್ಥಿಗಳ ಸೇವೆಗೈಯಲು ಸಜ್ಜಾಗಿದ್ದಾರೆ ಎಂದು ಐ ಎಫ್ ಎಫ್ ದಮ್ಮಾಮ್ ಪ್ರಾಂತ್ಯ ಅಧ್ಯಕ್ಷ ಇಮ್ತಿಯಾಝ್ ಸ್ವಯಂ ಸೇವಕರ ಹಜ್ಜ್ ಸೇವೆಯ ತರಬೇತಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಶುಕ್ರವಾರ ಬದ್ರ್ ಅಲ್ ರಾಬಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಸ್ವಯಂ ಸೇವಕರಿಗೆ ಪರಿಪೂರ್ಣವಾದ ಮಾಹಿತಿಯನ್ನು ಮುದಸ್ಸರ್ ಜಿದ್ದಾ ನೀಡಿದರು. ಅರಫಾ ಕರ್ಮಗಳನ್ನು ಪೂರ್ತೀಕರಿಸಿ ಮೀನಾ ಕಡೆ ಬರುವ ಹಾಜ್ ಗಳಿಗೆ ಸಹಕಾರಿಯಾಗುವ ಬಗ್ಗೆ ತರಬೇತಿ ನೀಡಿ, ಸ್ವಯಂ ಸೇವಕರು ಪಾಲಿಸಬೇಕಾದ ಶಿಸ್ತಿನ ಬಗ್ಗೆಯೂ ವಿವರಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ಲಾ ಕುಟ್ಟಿಯಾಡಿ ಕೇರಳ, ಸ್ವಯಂಸೇವಕರನ್ನು ಪ್ರೇರೇಪಿಸುವ ಮಾತುಗಳನ್ನು ಆಡಿದರು ಮತ್ತು ಸಿರಾಜ್ ಕೇರಳ ನಿರೂಪಿಸಿ ಮೂಸಾ ಕುಟ್ಟಿ ಕೇರಳ ವಂದಿಸಿದರು. ಕಾರ್ಯಕ್ರಮದಲ್ಲಿ ಫೈಸಲ್ ತಮಿಳುನಾಡು, ಅಥಾವುಲ್ಲಾ ಕರ್ನಾಟಕ ಹಾಗೂ ಉತ್ತರ ಭಾರತದ ನಝ್ರುಲ್ ಇಸ್ಲಾಂ ಚೌಧರಿ ಅಸ್ಸಾಂ ಉಪಸ್ಥಿದರಿದ್ದರು.