ವಾಜಪೇಯಿ ಯುಗಾಂತ್ಯ

ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಾಜಪೇಯಿಯ ಖಳನಾಯಕ ಪಾತ್ರ?

ಭಾರತೀಯ ಜನತಾ ಪಕ್ಷ(ಬಿಜೆಪಿ) ಹಾಗೂ ಬಿಜೆಪಿಯ ಮೊದಲಿನ ಅವತಾರವಾದ ಭಾರತೀಯ ಜನಸಂಘದ ನಾಯಕ ವಾಜಪೇಯಿಯವರನ್ನು ಕನಿಷ್ಠ ವಿವಾದಾತ್ಮಕ ರಾಜ ಕೀಯ ನಾಯಕರ ಸಾಲಿನಲ್ಲಿ ಹಲವರು ಗುರುತಿಸುತ್ತಾರೆ. ಆದರೆ ವಾಜಪೇಯಿಯವರ ಬದುಕಿನಲ್ಲಿ ವಿವಾದಗಳಿಗೆ ಆಸ್ಪದವೇ ಇರಲಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ.
1930ರ ದಶಕದ ಅಂತ್ಯದಲ್ಲಿ ಆರೆ್ಸೆಸ್‌ನ ಹಿರಿಯ ಮುಖಂಡ ಬಾಳಾಸಾಹೇಬ್ ದೇವರಸ್ ಅವರ ಶಿಷ್ಯನಾಗಿದ್ದ ವಾಜಪೇಯಿ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಕ್ಷೇತ್ರಕ್ಕೆ ಪರಿಚಯಿಸಲ್ಪಟ್ಟಿದ್ದರು. ಒಂದು ವಿವಾದವು ಮಾಜಿ ಪ್ರಧಾನಿ ವಾಜಪೇಯಿಯ ವರನ್ನು ಸುಮಾರು 2 ದಶಕಗ ಕಾಲ ಬೆಂಬಿಡದೆ ಕಾಡಿತ್ತು ಎಂಬುದು ಬಹಳಷ್ಟು ಮಂದಿಗೆ ಬಹುಶಃ ತಿಳಿದಿಲ್ಲ. 1942ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಮೋಹನದಾಸ ಕರಮಚಂದ್ ಗಾಂಧಿಯ ವರು ಆರಂಭಿಸಿದ್ದ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ)ಚಳವಳಿಯಲ್ಲಿ ವಾಜಪೇಯಿ ನಿರ್ವಹಿಸಿದ ಖಳನಾಯ ಪಾತ್ರಕ್ಕೆ ಸಂಬಂಧಿಸಿದ ವಿವಾದವಿದು.
‘ದಿ ಸಂಘ್ ಈಸ್ ಮೈ ಸೋಲ್‌‘(ಸಂಘವು ನನ್ನ ಆತ್ಮವಾಗಿದೆ) ಎಂಬ ತನ್ನ ಆತ್ಮಕತೆಯಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಬಗ್ಗೆ ವಾಜಪೇಯಿ ವಿವರಿಸಿದ್ದಾರೆ. ಈ ಕೃತಿಯ ಮೂರನೇ ಪ್ಯಾರಾದಲ್ಲಿ ಅವರು- ನಾನು ಕೂಡಾ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಯಲ್ಲಿ ಭಾಗವಹಿಸಿದ್ದೆ ಮತ್ತು ಜೈಲು ಸೇರಿದ್ದೆ. ಆಗ 16ರ ಹರೆಯದಲ್ಲಿದ್ದ ನಾನು ಇಂಟರ್‌ಮೀಡಿಯೇಟ್ ಪರೀಕ್ಷೆ ಯ ತಯಾರಿಯಲ್ಲಿದ್ದೆ. ನನ್ನ ಹುಟ್ಟೂರು ಆಗ್ರಾ ಜಿಲ್ಲೆಯ ಬಾತೇಶ್ವರ್‌ನಲ್ಲಿದ್ದ ನನ್ನನ್ನು ಬಂಧಿಸಲಾಯಿತು ಎಂದು ಉಲ್ಲೇಖಿಸಿದ್ದರು.
ವಾಜಪೇಯಿಯವರ ಬಂಧನದ ಅವಧಿಯನ್ನು ಉಲ್ಲೇಖಿಸು ವಾಗಲೆಲ್ಲಾ ಅವರು ಭಾರತದ ಸಾ್ವತಂತ್ರ ಚಳವಳಿಯ ಮೈಲುಗಲ್ಲುಗಳಲ್ಲಿ ಒಂದಾಗಿರುವ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧೀರ ಪಾತ್ರ ವಹಿಸಿದ್ದರು ಎಂದೇ ಹೇಳಲಾಗುತ್ತಿದೆ. ಅಚ್ಚರಿಯ ವಿಷಯವೆಂದರೆ, ವಾಜಪೇಯಿಯವರೊಂದಿಗೆ ಸುದೀರ್ಘಾವಧಿಯ ವರೆಗೆ ನಿಕಟವರ್ತಿಗಳಾಗಿದ್ದ ಇಬ್ಬರು ( ಕೇಂದ್ರ ಸಚಿವರಾಗಿದ್ದವರೂ ಸೇರಿದಂತೆ) ವಾಜಪೇಯಿ ಬಗ್ಗೆ ಬರೆದಿರುವ ಸಚರಿತ್ರ ಲೇಖನ ದಲ್ಲಿ ಬಾತೇಶ್ವರ್‌ನ ಘಟೆ ಅಥವಾ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮಾಜಿ ಪ್ರಧಾನಿಯ ಪಾತ್ರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಇನ್ ಇಂಡಿಯಾ ಅಂಡರ್ ಅಟಲ್ ಬಿಹಾರಿ ವಾಜಪೇಯಿ :ದಿ ಬಿಜೆಪಿ ಎರ (ಸಿ.ಪಿ.ಥಾಕೂರ್ ಮತ್ತು ದೇವೇಂದ್ರ ಪಿ ಶರ್ಮ-ಯುಬಿಎಸ್ ಪಬ್ಲಿಶರ್ಸ್ 1999) ಎಂಬ ಕೃತಿಯಲ್ಲಿ ಒಂದು ಅಧ್ಯಾಯವನ್ನು ವಾಜಪೇಯಿಯವರ ರಾಜಕೀಯ ಬದುಕಿಗೆ ಮೀಸಲಿರಿಸಲಾಗಿದೆ. ‘ಗ್ವಾಲಿಯರ್ ಟು ನ್ಯೂಡೆಲ್ಲಿ : ಎ ಶಾರ್ಟ್ ಡಿಸ್ಟೆನ್ಸ್ ಬಟ್ ಎ ಾಂಗ್ ಜರ್ನಿ’ ಎಂಬ ಈ ಅಧ್ಯಾಯದಲ್ಲಿ ವಾಜಪೇಯಿಯವರ ಬಾಲ್ಯ, ಕೌಟುಂಬಿಕ ಹಿನ್ನೆಲೆ, ಆರಂಭಿಕ ವಿದ್ಯಾ ಭ್ಯಾಸ, ಸಂಘ ಪರಿವಾರದಲ್ಲಿ ಮತ್ತು ಬಿಜೆಪಿಯಲ್ಲಿ ಅವರು ಉನ್ನತ ಸ್ಥಾನಕ್ಕೇರಿದ್ದ ಕುರಿತು ವಿವರಗಳಿವೆ. ಆದರೆ ಸ್ವಾತಂತ್ರ ಸಂಗ್ರಾಮ ದಲ್ಲಿ ವಾಜಪೇಯಿಯವರು ಪಾಲ್ಗೊಂಡಿದ್ದಾರೆ ಎನ್ನಲಾಗಿರುವ ಕ್ವಿಟ್ ಇಂಡಿಯಾ ಚಳವಳಿಯ ಕುರಿತು ಈ ಅಧ್ಯಾಯದಲ್ಲಿ ಉಲ್ಲೇಖವೇ ಇರದಿರುವುದು ಗಮನಾರ್ಹವಾಗಿದೆ.

1947ರಿಂದಲೂ ರಾಜಕೀಯ ವಿರೋಧಿಗಳು ವಾಜಪೇಯಿ ಯವರ ಬಗ್ಗೆ ಆಗಿಂದಾಗ್ಗೆ ಮಾಡುತ್ತಿದ್ದ ಒಂದು ಆರೋಪವೆಂದರೆ, ಲೀಲಾಧರ್ ಬಾಜಪಾಯ್ ಎಂಬಾತ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಐದು ವರ್ಷದ ಕಠಿಣ ಜೈಲುಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯಾಗಿದ್ದ, ಅಟಲ್ ಬಿಹಾರಿ ವಾಜಪೇಯಿ ಯವರಲ್ಲ ಎಂಬುದು.
1989ರಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ರಂಗರಾಜನ್ ಕುಮಾರ ಮಂಗಲಂ ಎಂಬವರು 52 ಸಂಸದರ ಹಸ್ತಾಕ್ಷರವುಳ್ಳ ಪತ್ರವೊಂದ ನ್ನು ಬಿಡುಗಡೆಗೊಳಿಸಿದ್ದರು. ಅದರಲ್ಲಿ ವಾಜಪೇಯಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ‘ಖಳನಾಯಕ ಪಾತ್ರ’ ವಹಿಸಿದ್ದಾರೆ ಮತ್ತು ತನ್ನನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಹಲವಾರು ಸ್ವಾತಂತ್ರ ಹೋರಾಟಗಾರರನ್ನು ಸಿಕ್ಕಿಸಿ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಲಾಗಿತ್ತು. ಅಲ್ಲದೆ ವಾಜಪೇಯಿ ಆ ಸಂದರ್ಭ ಕ್ಷಮಾಪಣೆ ಪತ್ರವೊಂದನ್ನೂ ನೀಡಿದ್ದು, ಈ ಪತ್ರದ ಆಧಾರದಲ್ಲಿ ಸ್ವಾತಂತ್ರ ಹೋರಾಟಗಾರರ ಒಂದಿಡೀ ತಂಡಕ್ಕೆ ದೀರ್ಘಾವಧಿಯ ಜೈಲುಶಿಕ್ಷೆ ವಿಧಿಸಲಾಗಿತ್ತು ಎಂದೂ ಆರೋಪಿಸಲಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಬಳಿಕ ಇದೇ ಕುಮಾರಮಂಗಲಂ ಅವರು ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರಲ್ಲದೆ ವಾಜಪೇಯಿಯವರ ಎರಡನೇ ಮತ್ತು ಮೂರನೇ ಸರಕಾರದಲ್ಲಿ ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು.
1974ರಲ್ಲಿ ‘ಬ್ಲಿಟ್ಝ್’ ಪತ್ರಿಕೆಯಲ್ಲಿ ಈ ಕುರಿತು ಲೇಖನ ಪ್ರಕಟವಾದ ಬಳಿಕ , ಈ ಆರೋಪದ ಬಗ್ಗೆ ಪ್ರಸ್ತಾ ವಿಸಿದಾಗಲೆಲ್ಲಾ ವಾಜಪೇಯಿ, ಅವರ ಪಕ್ಷ ಹಾಗೂ ಆರೆಸ್ಸೆಸ್ ಆರೋಪವನ್ನು ನಿರಾಕರಿಸುವುದರ ಜೊತೆಗೆ ವಿಷಯ ಎತ್ತಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆಯನ್ನೂ ನೀಡುತ್ತಿದ್ದರು. 1988ರಲ್ಲಿ ‘ಫ್ರಂಟ್‌ಲೈನ್’ ಮ್ಯಾಗಝಿ ನ್‌ಗಾಗಿ ಪತ್ರಕರ್ತರ ತಂಡವೊಂದು ಈ ವಿಷಯದ ಸತ್ಯಾಂಶವನ್ನು ಬೆಳಕಿಗೆ ತಂದಿತು ಮತ್ತು ಈ ವಿಷಯಗಳನ್ನು ವಾಜಪೇಯಿ ಯವರೇ ದೃಢಪಡಿಸಿದ್ದರು.
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ ಬಾತೇಶ್ವರದಲ್ಲಿ ನಡೆದ ಘಟನೆಯಲ್ಲಿ ತಂಡವೊಂದು ಸರಕಾರಿ ಕಟ್ಟಡವೊಂದಕ್ಕೆ ಹಾನಿ ಎಸಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ವಾಜಪೇಯಿಯವರು ಸರಕಾರಕ್ಕೆ ಒಂದು ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದರು. ಅದರಲ್ಲಿ ಈ ಘಟನೆಯಲ್ಲಿ ತನ್ನ ಪಾತ್ರವಿಲ್ಲ ಎಂದು ತಿಳಿಸಿದ್ದರಲ್ಲದೆ, ಲೀಲಾಧರ್ ಬಾಜ್‌ಪಾಯ್ ಅಲಿಯಾಸ್ ಕಕುವ ಎಂಬಾತನ ನೇತೃತ್ವದಲ್ಲಿ ತಂಡವೊಂದು ಸರಕಾರಿ ಕಟ್ಟಡಕ್ಕೆ ಹಾನಿ ಎಸಗಿದೆ ಎಂದು ತಿಳಿಸಿದ್ದರು . ಆದರೆ ವಾಜಪೇಯಿ ಬರೆದುಕೊಟ್ಟಿದ್ದ ಕ್ಷಮಾಪಣಾ ಪತ್ರವನ್ನು ಕೋರ್ಟ್‌ನಲ್ಲಿ ಸಾಕ್ಷಿ ಎಂದು ಪರಿಗಣಿಸಿರಲಿಲ್ಲ ಎಂದೂ ಪತ್ರಕರ್ತರ ತಂಡದ ವರದಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಲೀಲಾಧರ್ ಬಾಜಪಾಯ್‌ಗೆ ಐದು ವರ್ಷ ಕಠಿಣ ಶಿಕ್ಷೆಯಾಗಲು ವಾಜಪೇಯಿ ನೇರವಾಗಿ ಕಾರಣರಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ಆದರೆ ವಾಜಪೇಯಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ ಎಂಬುದನ್ನೂ ಸ್ವತಃ ವಾಜಪೇಯಿಯವರೇ ಒಪ್ಪಿಕೊಂಡಿದ್ದಾರೆ. ಕಟ್ಟಡಕ್ಕೆ ಹಾನಿ ಎಸಗಿದ ಸಂದರ್ಭ ಅಲ್ಲಿ ನೆರೆದಿದ್ದ ಗುಂಪಿ ನಲ್ಲಿ ತನ್ನ ಸಹೋದರನ ಜೊತೆ ವಾಜ ಪೇಯಿ ಕೂಡಾ ಇದ್ದರು. ಆ ಕಾರಣದಿಂದ ಅವರನ್ನು ಬಂಧಿಸಲಾಗಿತ್ತು.

ಲೀಲಾಧರ್ ಬಾಜ ಪಾಯ್‌ರ ಹೆಸರನ್ನು ತಾನು ಉಲ್ಲೇಖಿಸಿಲ್ಲ. ಕ್ಷಮಾಪಣಾ ಪತ್ರ ಉರ್ದುವಿನಲ್ಲಿ ಇದ್ದ ಕಾರಣ ತಾನು ಅದನ್ನು ಓದಿರ ಲಿಲ್ಲ. ಆದ್ದರಿಂದ ಲೀಲಾಧರ್ ಹೆಸ ರನ್ನು ಯಾವ ಕಾರಣಕ್ಕೆ ಸೇರಿಸಿದ್ದರು ಎಂಬುದು ತನಗೆ ತಿಳಿದಿಲಿಲ್ಲ ಎಂದು ವಾಜಪೇಯಿ ಹೇಳಿದ್ದರು.
 ‘ಫ್ರಂಟ್‌ಲೈನ್’ ಸಂಪಾದಕ ಎನ್.ರಾಮ್ ಜೊತೆಗಿನ ಸಂದರ್ಶನದಲ್ಲಿ ವಾಜಪೇಯಿಯವರು ತಾನು ಕ್ಷಮಾ ಪಣಾ ಪತ್ರಕ್ಕೆ ಸಹಿ ಹಾಕಿರುವುದನ್ನು ದೃಢಪಡಿಸಿರಲಿಲ್ಲ. ವಾಜಪೇಯಿ ಸಹಿ ಹಾಕಿರುವ ಕ್ಷಮಾಪಣಾ ಪತ್ರವನ್ನು ನ್ಯಾಯಾಲ ಯದಲ್ಲಿ ಸಾಕ್ಷಿ ಎಂದು ಪರಿಗಣಿಸಿರಲಿಲ್ಲ. ಆದರೆ ತನಗೆ ಐದು ವರ್ಷ ಕಠಿಣ ಶಿಕ್ಷೆಯಾಗಲು ಈ ಪತ್ರ ಪ್ರಮುಖ ಕಾರಣವಾಗಿದೆ. ಯಾಕೆಂದರೆ ವಾಜಪೇಯಿ ಮತ್ತು ಅವರ ಸಹೋದರರು ಆ ಗ್ರಾಮದಲ್ಲೇ ಅತ್ಯಂತ ಸುಶಿಕ್ಷಿತ ವ್ಯಕ್ತಿಗಳಾಗಿದ್ದ ಕಾರಣ ಅವರ ಹೇಳಿಕೆ ವಿಶ್ವಾಸಾರ್ಹ ಎಂದು ಪೊಲೀಸರು ಮತ್ತು ನ್ಯಾಯಾಲಯ ಪರಿಗಣಿಸಿತ್ತು ಎಂದು ಸ್ವತಃ ಲೀಲಾಧರ್ ಬಾಜಪಾಯ್ ಒಂದೆಡೆ ಹೇಳಿಕೆ ನೀಡಿದ್ದರು.
ವಾಜಪೇಯಿಯವರ ರಾಜಕೀಯ ಬದುಕಿನ ಕುರಿತ ಇತರ ವಿಷಯಗಳಿಗೆ ಹೆಚ್ಚು ಪ್ರಚಾರ ದೊರಕಿದ್ದರೆ ಈ ವಿಷಯ ಬಹುತೇಕ ಮಂದಿಗೆ ತಿಳಿದೇ ಇಲ್ಲ.
ಕೃಪೆ: ಸ್ಕ್ರಾಲ್.ಇನ್

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top