ವರ್ಣಮಯ ಗೃಹ ಉದ್ಯಾನ ಹೊಂದಲು ಸುಸಮಯ

ತೋಟಗಾರಿಕೆ ಎಲ್ಲ ಕಾಲದ ಚಟುವಟಿಕೆ. ನೀವು ವರ್ಣಮಯ ಉದ್ಯಾನವನದ ಸಂತಸವನ್ನು ವರ್ಷವಿಡೀ ಸವಿಯಬಹುದು. ಉತ್ಸಾಹಿಗಳ ನಡುವೆ ಇತ್ತೀಚೆಗೆ ಗೃಹ ತೋಟಗಾರಿಕೆ ಪ್ರಸಿದ್ಧಿಯಾಗಿದೆ. ಅತಿ ಸಣ್ಣ ಪ್ರದೇಶದಲ್ಲೇ ತರಕಾರಿಯಿಂದ ಹೂಗಳನ್ನು ಬೆಳೆಯುವವರೆಗೆ ತೋಟಗಾರಿಕೆಯ ಆನಂದವನ್ನು ಪಡೆಯ ಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾದ್ದೇನೆಂದರೆ, ಆಯಾ ಕಾಲಕ್ಕೆ ಹೊಂದುವಂತಹ ಗಿಡಗಳನ್ನು ತಂದು ಬೆಳೆಸುವುದು. ಇಷ್ಟಾದರೆ, ನಿಮ್ಮ ನೆರೆಯವರು ಅಸೂಯೆಪಡುವಂತಹ ಸುಂದರ ಉದ್ಯಾನಗಳು ಸಿದ್ಧವಾದಂತೆ!

ವಸಂತ ಕಾಲ

ವಸಂತ ಕಾಲವೆಂದರೆ ಹೊಸ ಜೀವನದ ಕಾಲ. ಇದು ಹೊಸ ಹೂವುಗಳನ್ನು ಸ್ವಾಗತಿಸುವ ಹಾಗೂ ಸಂಭ್ರಮಿಸುವ ಕಾಲ. ಈ ಸಮಯದಲ್ಲಿ ಗಿಡಗಳು ಸವರುವಿಕೆಗೆ ಒಳಗಾಗುತ್ತವೆ. ಉದಾಹರಣೆಗೆ, ಮಲ್ಲಿಗೆ ಬಳ್ಳಿಗಳು ಈ ಸಮಯದಲ್ಲಿ ಸವರುವಿಕೆಗೆ ಒಳಗಾಗಿ, ಹಳೆಯ ಕೊಂಬೆಗಳು ಕತ್ತರಿಸಲ್ಪಟ್ಟು ಎಪ್ರಿಲ್ ತಿಂಗಳ ಹೊಸ ಹೂಗಳಿಗೆ ತಯಾರಾಗುತ್ತದೆ. ದಾಸವಾಳ ಹೂಗಳ ಗಿಡಗಳನ್ನು ಕೂಡ ಕತ್ತರಿಸಿ, ಹೊಸ ಹೂಗಳನ್ನು ಬಿಡಲು ತಯಾರು ಮಾಡಲಾಗುತ್ತದೆ. ಕತ್ತರಿಸಿದ ಕೊಂಬೆಗಳನ್ನು ನೆಟ್ಟು ಹೊಸ ಗಿಡ ಬೆಳೆಸಬಹುದಾಗಿದೆ.

ಹೂ ಬಿಡುವ ಗಿಡಗಳಾದ ಬೌಗನ್ವಿಲ್ಲ (ಕಾಗದದ ಹೂವು), ಕ್ರಿಸಾಂತಮ್(ಸೇವಂತಿಕೆ), ಲಂಟಾನಾ, ಸೈಕ್ಲಾಮೆನ್, ಹಯಾಸಿಂತ್ ಗಿಡಗಳನ್ನು ವಸಂತ ಕಾಲದಲ್ಲಿ ನೆಡಬಹುದು.

ಬೇಸಿಗೆ ಕಾಲ

ಬೇಸಿಗೆ ಕಾಲದ ಬಿರು ಬಿಸಿಲು ಅನೇಕ ಹೂ ಬಿಡುವ ಗಿಡಗಳಿಗೆ ವರದಾನದಂತೆ. ಈ ಉಷ್ಣಾಂಶ ಹೂಗಳು ಸುಂದರವಾಗಿ ಅರಳಲು ನೆರವಾಗುತ್ತದೆ. ಆದರೆ, ಈ ಗಿಡಗಳಿಗೆ ನೀವು ಅಗತ್ಯ ನೀರು ಒದಗಿಸಬೇಕಷ್ಟೇ. ಆಸಕ್ತಿಕರ ವಿಷಯವೆಂದರೆ, ಬೌಗನ್ವಿಲ್ಲ ಹೂಗಳಿಗೆ ನೀರು ಒದಗಿಸದೆ ಇದ್ದಲ್ಲಿ, ಒತ್ತಡಕ್ಕೆ ಸಿಲುಕಿ ಹೂಗಳು ಅತಿರೇಕವಾಗಿ ಬಿಡುತ್ತವೆ. ಅನೇಕ ಹೂಗಳು ಈ ಕಾಲದಲ್ಲಿ ಸಮೃದ್ಧವಾಗಿ ಬೆಳೆಯುತ್ತವೆ. ಮಾರಿಗೋಲ್ಡ್ (ಗೊಂಡೆ ಹೂವು), ಸೂರ್ಯಕಾಂತಿ, ಗುಲಾಬಿ, ಲಿಲ್ಲಿ, ಜೀನಿಯಾ ಹಾಗೂ ಯೂರೋಫಿಯಾ ಇದರಲ್ಲಿ ಕೆಲವು ಗಿಡಗಳು.

ಚಳಿಗಾಲ

ಅತಿಯಾದ ಬಿಸಿಲಿನಿಂದ ಸೊರಗಿದ್ದ ಗಿಡಗಳು ಚಳಿಗಾಲದಲ್ಲಿ ಅರಳಿಕೊಳ್ಳುತ್ತವೆ. ಆಫ್ರಿಕನ್ ವಾಯ್ಲೆಟ್ಸ್, ಕನ್ನಾ, ಪ್ಯಾನ್ಸೀಸ್, ವೊಯ್ಲಾ ಹಾಗೂ ಗಾರ್ಡೇನಿಯಾ ಮತ್ತಿತರರ ಗಿಡಗಳು ಈ ಕಾಲದಲ್ಲಿ ಅರಳಿ ನಿಲ್ಲುತ್ತವೆ. ಈ ಗಿಡಗಳಿಗೆ ಹೆಚ್ಚಿನ ಬಿಸಿಲು ದೊರೆಯುವ ಜಾಗಕ್ಕೆ ಸ್ಥಳಾಂತರಿಸಿ, ಹುಲುಸಾಗಿ ಬೆಳೆಯುವುದನ್ನು ನೋಡಿ.

ಮಳೆಗಾಲ

ಈ ಕಾಲದಲ್ಲಿ ನೀವು ಗಿಡಗಳು ನೀರು ಕುಡಿದು ನಿಷ್ಪ್ರಯೋಜಕವಾಗದಂತೆ ನೋಡಿಕೊಳ್ಳಬೇಕು. ಹೂಕುಂಡದಲ್ಲಿನ ಮರಳು ನೀರು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ಹೊಂದಿದ್ದು, ನೀರು ಒಣಗಲು ಅವಕಾಶವಿಲ್ಲದ ಕಾರಣ, ಅದು ಸಣ್ಣ ಕೆರೆಯಂತಾಗದಂತೆ ಎಚ್ಚರ ವಹಿಸುವುದು ಅತಿ ಅಗತ್ಯ. ಈ ಸಮಸ್ಯೆಯ ಪರಿಹಾರಕ್ಕಾಗಿ ಸಾವಯವ ಕೀಟ ನಾಶಕವನ್ನು ಸುಲಭವಾಗಿ ಎಟಕುವಂತೆ ಇರಿಸಿಕೊಂಡು, ಎಲ್ಲ ಗಿಡಗಳಿಗೂ ಸಿಂಪಡಿಸಬೇಕು. ಮಳೆಯ ಲಾಭ ಪಡೆದು, ಒಳಾಂಗಣ ಗಿಡಗಳು ಸೇರಿದಂತೆ ಎಲ್ಲ ಗಿಡಗಳಿಗೆ ಉತ್ತಮ ನೀರು ಒದಗಿಸುವ ವ್ಯವಸ್ಥೆ ಮಾಡಿ.

ತೋಟಗಾರಿಕೆ ಒಂದು ಉಲ್ಲಾಸದ ಚಟುವಟಿಕೆ. ನೀವು ಪ್ರತಿ ಒಂದು ಗಿಡದ ಆವಶ್ಯಕತೆಗಳನ್ನು ಅರಿತುಕೊಂಡರೆ, ಸುಮ್ಮನೆ ಕುಳಿತು, ಆಯಾ ಕಾಲದ ವಾತಾವರಣ ಅವುಗಳ ರಕ್ಷಣೆ ಮಾಡುವುದನ್ನು ನೋಡಬಹುದು. ಆದರೆ, ಸೂಕ್ತ ಕಾಲಕ್ಕೆ ಸೂಕ್ತ ಗಿಡ ಆರಿಸಿದರೆ, ಅರ್ಧ ಕೆಲಸ ಆದಂತೆ ಮಾತ್ರ. ನೀವು ಅದಕ್ಕೆ ಸೂಕ್ತ ಹೂಕುಂಡಗಳನ್ನು ಆರಿಸಿದರೆ ಮಾತ್ರ ನಿಮ್ಮ ಮನೆಯ ಉದ್ಯಾನ ಸುಂದರವಾಗಿ ಕಾಣುತ್ತದೆ. ಸುಂದರ ಕರಕುಶಲತೆಯ ಹೂಕುಂಡಗಳು ಬೇರೆ ಬೇರೆ ಗಾತ್ರ ಹಾಗೂ ರೂಪದಲ್ಲಿ ದೊರೆಯುತ್ತಿದ್ದು, ಅವುಗಳು ನಿಮ್ಮ ಮನೆಯ ಉದ್ಯಾನಕ್ಕೆ ಒಂದು ಸೌಂದರ್ಯ ನೀಡುತ್ತದೆ. ಉತ್ತಮ ವಿನ್ಯಾಸದ, ಉತ್ತಮ ಗುಣಮಟ್ಟದ ಹೂಕುಂಡಗಳು ನಿಮ್ಮ ವೈಯಕ್ತಿಕ ಅಭಿರುಚಿಯನ್ನು ಸಾರುತ್ತವೆ. ನಿಮ್ಮ ಉದ್ಯಾನ ಇತರ ಉದ್ಯಾನಗಳಿಗಿಂತ ಭಿನ್ನವಾಗಿರಬೇಕು ಎಂದರೆ, ನೀವು ಡಿಸೈನರ್, ಟೆರ್ರಕೋಟ ಇಲ್ಲವೇ ಸೆರಾಮಿಕ್ ಹೂಕುಂಡಗಳಿಗೆ ಖರ್ಚು ಮಾಡಬೇಕಾಗುತ್ತದೆ. ಇವುಗಳ ನಿರ್ವಹಣೆ ಕೂಡ ಸುಲಭವಾಗಿದ್ದು, ಉತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಿರುತ್ತಾರೆ. ಇದು ಹಲವು ವರ್ಷಗಳ ಕಾಲ ಬಾಳಿಕೆ ಬರಲಿದ್ದು, ನಿಮ್ಮ ಉದ್ಯಾನಕ್ಕೆ ಹೊಸ ರಂಗು ನೀಡುತ್ತದೆ. ನಿಮಗೆ ಉತ್ತಮ ತೋಟಗಾರಿಕೆ ಅನುಭವ ಸಿಗಲಿ!

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top