ವೀಡಿಯೊ ಕಾಲ್ನಲ್ಲಿ ಗೆಳೆಯನೊಂದಿಗೆ ಮಾತನಾಡುತ್ತಲೇ ನೇಣಿಗೆ ಶರಣಾದ ವಿದ್ಯಾರ್ಥಿನಿ
ಹೊಸದಿಲ್ಲಿ, ಆ.21: ವೀಡಿಯೊ ಕಾಲ್ ನಲ್ಲಿ ಗೆಳೆಯನ ಜೊತೆ ಜಗಳವಾಡಿದ ವಿದ್ಯಾರ್ಥಿನಿಯೊಬ್ಬಳು ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾಳೆ. ಮೃತಪಟ್ಟ ವಿದ್ಯಾರ್ಥಿನಿಯನ್ನು 21 ವರ್ಷದ ಶಿವಾನಿ ಎಂದು ಗುರುತಿಸಲಾಗಿದೆ.
ಆಕೆ ಆತ್ಮಹತ್ಯೆಗೆ ಶರಣಾದ ವಿಷಯವನ್ನು ಶಿವಾನಿಯ ಗೆಳೆಯನೇ ಆಕೆಯ ತಂದೆಗೆ ಫೋನ್ ಮಾಡಿ ತಿಳಿಸಿದ್ದಾನೆ. ಅವರು ಕೂಡಲೇ ಶಿವಾನಿಯ ಕೋಣೆಗೆ ತೆರಳಿ ನೋಡಿದಾಗ ಆಕೆ ಮೃತಪಟ್ಟಿದ್ದಳು.
ಶಿವಾನಿ ಸಿಎಸ್ ವ್ಯಾಸಂಗ ಮಾಡುತ್ತಿದ್ದಳೆಂದು ಪೊಲೀಸರು ತಿಳಿಸಿದ್ದು, ಕುಟುಂಬದ ಜೊತೆ ಘೋಂಡಗಾಂವ್ನಲ್ಲಿ ವಾಸಿಸುತ್ತಿದ್ದಳು. ಅವಳ ತಂದೆ ಮನೆಯಲ್ಲಿಯೇ ದಿನಸಿ ಇಟ್ಟುಕೊಂಡಿದ್ದಾರೆ. ಶಿವಾನಿ ತನ್ನ ಕೋಣೆಯಲ್ಲಿ ವೀಡಿಯೊ ಕಾಲ್ ಮೂಲಕ ಗೆಳೆಯನೊಂದಿಗೆ ಮಾತನಾಡುತ್ತಿದ್ದಳು. ಈ ವೇಳೆ ಆಕೆಗೆ ಗೆಳೆಯನೊಂದಿಗೆ ಜಗಳವಾಗಿತ್ತು. ಆದ್ದರಿಂದ ವೀಡಿಯೊ ಕಾಲ್ ಮಾಡುತ್ತಲೇ ಶಿವಾನಿ ತನ್ನ ಶಾಲಿನಿಂದ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾಳೆ ಎನ್ನಲಾಗಿದೆ.
ಶಿವಾನಿಯನ್ನು ಸೇಂಟ್ ಸ್ಟೀಫನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆಕೆ ಅದಾಗಲೇ ಮೃತಪಟ್ಟಿದ್ದಳು.