ಪರಿಸರ ಸ್ನೇಹಿ ಹಜ್ಗಾಗಿ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಕೆ
ಮಿನಾ (ಸೌದಿ ಅರೇಬಿಯ), ಆ. 23: 20 ಲಕ್ಷಕ್ಕೂ ಅಧಿಕ ಮುಸ್ಲಿಮರು ಮಕ್ಕಾ ಯಾತ್ರೆಯನ್ನು ಮುಗಿಸುತ್ತಿರುವಂತೆಯೇ, ಸಾವಿರಾರು ಸ್ವಯಂಸೇವಕರು ಕಸದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಪವಿತ್ರ ನಗರ ಮಕ್ಕಾ ಸಮೀಪದ ಮಿನಾದಲ್ಲಿರುವ ‘ಮಮೂನಿಯ’ ಶಿಬಿರದಲ್ಲಿ ಎರಡು ಬಣ್ಣಗಳ ಬ್ಯಾರಲ್ಗಳನ್ನು ಅಲ್ಲಲ್ಲಿ ಇಡಲಾಗಿದೆ. ಸಾವಯವ ತ್ಯಾಜ್ಯಕ್ಕಾಗಿ ಕಪ್ಪು ಬಣ್ಣದ ಬ್ಯಾರಲ್ಗಳನ್ನು ಇರಿಸಲಾದರೆ, ಕ್ಯಾನ್ಗಳು ಮತ್ತು ಪ್ಲಾಸ್ಟಿಕ್ಗಳ ಸಂಗ್ರಹಕ್ಕಾಗಿ ನೀಲಿ ಬಣ್ಣದ ಬ್ಯಾರಲ್ಗಳನ್ನು ಇಡಲಾಗಿದೆ.
ಪರಿಸರದ ಮೇಲೆ ಹಜ್ನಿಂದಾದ ಪರಿಣಾಮವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಹಜ್ ಯಾತ್ರೆಯ ಅವಧಿಯಲ್ಲಿ 42,000 ಟನ್ಗೂ ಅಧಿಕ ತ್ಯಾಜ್ಯ ಉತ್ಪಾದನೆಯಾಗಿದೆ ಎಂದು ಮಕ್ಕಾ ಮುನಿಸಿಪಾಲಿಟಿಯ ಸ್ವಚ್ಛತಾ ವಿಭಾಗದ ಮುಖ್ಯಸ್ಥ ಮುಹಮ್ಮದ್ ಅಲ್-ಸಅತಿ ಹೇಳಿದ್ದಾರೆ.
ಹಜ್ ಅವಧಿಯಲ್ಲಿ 13,000ಕ್ಕೂ ಅಧಿಕ ಸ್ವಚ್ಛತಾ ಕೆಲಸಗಾರರು ಮತ್ತು ಮೇಲ್ಚಿಚಾರಕರನ್ನು ನೇಮಿಸಲಾಗಿತ್ತು.
Next Story