ನರೇಂದ್ರ ಮೋದಿಗೆ ವೈರಲ್ ವೀಡಿಯೊದ ಕೊಡಗಿನ ಬಾಲಕ ಮನವಿ

ಪ್ರಧಾನಿ ಜಿಲ್ಲೆಗೆ ಬಂದು ಇಲ್ಲಿನ ಪರಿಸ್ಥಿತಿಯನ್ನೊಮ್ಮೆ ಅರಿಯಲಿ: ಅಬ್ದುಲ್ ಫತಹ್

ಮಡಿಕೇರಿ, ಆ.29: ಮಹಾ ಮಳೆ, ಜಲಪ್ರಳಯದಿಂದ ಇಡೀ ಕೊಡಗು ಜಿಲ್ಲೆ ತತ್ತರಿಸಿ ಹೋಗಿದೆ. ಆದರೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಮ್ಮ ಜಿಲ್ಲೆಯ ಜನತೆಗೆ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ದೆಹಲಿಯಲ್ಲಿ ಕೂತು ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕಿಂತ ಒಂದು ದಿನ ಜಿಲ್ಲೆಗೆ ಬಂದು ಇಲ್ಲಿನ ಜನರ ಕಷ್ಟಗಳನ್ನು ಕಣ್ಣಾರೆ ಕಂಡು ಅರಿತುಕೊಳ್ಳಲಿ ಎಂದು ಕೊಡಗಿನ ಬಾಲಕ ಅಬ್ದುಲ್ ಫತಹ್ ಮನವಿ ಮಾಡಿದ್ದಾರೆ. 

ಭಾರೀ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಉಂಟಾದ ಬೆಟ್ಟಗುಡ್ಡಗಳ ಕುಸಿತದಿಂದ ಹಲವು ಗ್ರಾಮಗಳೇ ಕಣ್ಮರೆಯಾಗಿವೆ. ಸಾವಿರಾರು ಮನೆಗಳು ಹಾನಿಯಾಗಿದ್ದು ಹತ್ತಾರು ಜೀವಗಳು ಬಲಿಯಾಗಿವೆ. ಅಲ್ಲದೆ ಸಾವಿರಾರು ಮಂದಿ ನಿರಾಶ್ರಿತರಾಗಿ ಜಿಲ್ಲೆಯ ವಿವಿಧೆಡೆ ತೆರೆದಿರುವ ನಿರಾಶ್ರಿತ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಡಗಿನ ಜನರಿಗೆ ಪರಿಹಾರ ನೀಡಬೇಕಾದ ಕೇಂದ್ರ ಸರಕಾರ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿರುವುದು ಜಿಲ್ಲೆಯ ಮಾತ್ರವಲ್ಲ ಇಡೀ ದೇಶದ ದುರಂತವಾಗಿದೆ ಎಂದು ಫತಹ್ ಬೇಸರ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ಸಮ್ಮಿಶ್ರ ಸರಕಾರದ ಮೊದಲ ಬಜೆಟ್‍ನಲ್ಲಿ ಕೊಡಗು ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜ್ಯದ ಜೀವ ನದಿ ಕಾವೇರಿಯ ದಡದಲ್ಲಿ ನಿಂತು ರಾಜ್ಯಕ್ಕೆ ಕೊಡಗಿನ ಕೊಡುಗೆ ಮತ್ತು ರಾಜ್ಯ ಸರಕಾರಗಳು ಕೊಡಗನ್ನು ನಿರ್ಲಕ್ಷಿಸುವ ಬಗ್ಗೆ ಭಾಷಣ ಮಾಡಿದ ವೀಡಿಯೊಂದನ್ನು ಕಳುಹಿಸಿ ರಾಜ್ಯದ ಗಮನ ಸೆಳೆದ ಮಡಿಕೇರಿ ತಾಲೂಕಿನ ಎಮ್ಮೆಮಾಡು ನಿವಾಸಿ ಉಮರ್ ಫತಹ್ ಎಂಬವರ ಪುತ್ರ, ಎಮ್ಮೆಮಾಡು ಸರಕಾರಿ ಪ್ರೌಢ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ಫತಹ್ ಕೆ.ಯು., ಪ್ರಕೃತಿ ವಿಕೋಪಕ್ಕೆ ತುತ್ತಾದ ಕೊಡಗಿನ ಜನರನ್ನು ಪ್ರಧಾನಿ ನರೇಂದ್ರ ಮೋದಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನನ್ನು ಭೇಟಿ ಮಾಡಿದ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಅಬ್ದುಲ್ ಫತಹ್, ಪ್ರಕೃತಿ ವಿಕೋಪಕ್ಕೆ ತತ್ತರಿಸಿದ ಕೊಡಗಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಹಾಗೂ ಹಲವು ಸಚಿವರು, ಶಾಸಕರು ಭೇಟಿ ನೀಡಿ ನೆರವು ನೀಡಿದ್ದಾರೆ. ಅವರೊಂದಿಗೆ ಹಲವು ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ನೆರವಾಗಿದೆ. ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಕೊಡಗನ್ನು ನಿರ್ಲಕ್ಷಿಸಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಮನೆ, ಜಮೀನು ಕಳೆದುಕೊಂಡು ಹತ್ತಾರು ದಿನಗಳಿಂದ ಸಾವಿರಾರು ಮಂದಿ ನಿರಾಶ್ರಿತ ಶಿಬಿರಗಳಲ್ಲಿ ಇದ್ದಾರೆ. ಅವರಲ್ಲಿ ಸಣ್ಣ ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದ್ದಾರೆ. ಅವರೆಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಮೋದಿ ಅವರು ತನ್ನ ಊರಿಗೆ ತೆರಳಿದಾಗ ಅಲ್ಲಿನ ಮಕ್ಕಳ ಜೊತೆ ತೋರಿಸಿದ ಪ್ರೀತಿಯನ್ನು ನಿರಾಶ್ರಿತ ಶಿಬಿರದಲ್ಲಿ ಕಣ್ಣೀರು ಹಾಕುತ್ತಿರುವ ಮಕ್ಕಳೊಂದಿಗೆ ತೋರಿಸಬೇಕು. ನಿರಾಶ್ರಿತ ಶಿಬಿರಗಳಲ್ಲಿ ಇರುವ ಹೆಚ್ಚಿನ ಮಕ್ಕಳಿಗೆ ಶಾಲೆ, ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಂತಹ ಮಕ್ಕಳಿಗೆ ವಿಶೇಷ ಕಾಲೇಜುಗಳನ್ನು ತೆರೆದು ಅಲ್ಲಿಯೇ ಉಳಿದು ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಪ್ರಜೆಗಳ ಬಳಿಗೆ ಬರುವ ಹಾಗೆ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ಕೊಡಗಿನ ಪ್ರಜೆಗಳ ಕಷ್ಟ ಸುಖವನ್ನು ಅರಿಯಲು ಪ್ರಧಾನಿ ಕೊಡಗಿಗೆ ಬರಬೇಕು. ಪ್ರವಾಹ ಪೀಡಿತ ಕೇರಳಕ್ಕೆ ಮೋದಿ ಭೇಟಿ ನೀಡಿರುವುದು ಉತ್ತಮ ಲಕ್ಷಣವಾಗಿದೆ. ಕೇರಳಕ್ಕೆ ಭೇಟಿ ನೀಡಿದ ಹಾಗೆ ಮೋದಿ ಅವರು ಕೊಡಗಿಗೂ ಭೇಟಿ ನೀಡಬೇಕಿತ್ತು. ಆದರೆ ಅದನ್ನು ಅವರು ಮಾಡಿಲ್ಲ ಎಂದು ಹೇಳಿರುವ ಅಬ್ದುಲ್ ಫತಹ್, ಇನ್ನಾದರೂ ಮೋದಿ ಅವರು ಕೊಡಗಿಗೆ ಭೇಟಿ ನೀಡಬೇಕು. ಇಲ್ಲಿನ ಸಾವಿರಾರು ನಿರಾಶ್ರಿತರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಬೇಕು. ಅವರೆಲ್ಲರಿಗೂ ಪರಿಹಾರ ನೀಡಿ ಶಾಶ್ವತ ನೆಲೆ ಒದಗಿಸಬೇಕು. ಮನೆ, ಜಮೀನು, ತೋಟಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ, ಭಾರೀ ಮಳೆಯಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಕರಿಮೆಣಸು, ಭತ್ತ ಮೊದಲಾದ ಕೃಷಿಗಳು ನಾಶವಾಗಿದ್ದು ನಷ್ಟಕ್ಕೊಳಗಾದ ಇಲ್ಲಿನ ಬೆಳೆಗಾರರು, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಫತಹ್ ಮನವಿ ಮಾಡಿದ್ದಾರೆ. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top