ಪ್ರಜಾಪ್ರಭುತ್ವ ವ್ಯವಸ್ಥೆಯ ಬುಡಮೇಲು?

ಮಾನ್ಯರೇ,

ಭಾರತದಲ್ಲಿ ಅನೇಕ ಜಾತಿ, ಧರ್ಮದ ಜನರಿದ್ದು ಅವರ ಹಿತಾಸಕ್ತಿಗೆ ಧಕ್ಕೆಯಾದಾಗ ವ್ಯವಸ್ಥೆಯನ್ನು, ಆಳುವ ವರ್ಗವನ್ನು ಪ್ರಶ್ನಿಸುವುದು ಸರ್ವೇಸಾಮಾನ್ಯ. ಆದರೆ ಇಂದು ಆಡಳಿತ ಪಕ್ಷವು ಕೆವು ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಲು ದಲಿತಪರ ಧ್ವನಿ ಎತ್ತುವವರನ್ನು ಜಾತಿವಾದಿಗಳೆಂದು, ಮುಸಲ್ಮಾನರಪರ ಧ್ವನಿ ಎತ್ತಿದವರನ್ನು ಹಿಂದೂ ವಿರೋಧಿಗಳು, ದೇಶದ್ರೋಹಿಗಳು, ಭಯೋತ್ಪಾದಕರೆಂದು, ಆಡಳಿತ ಪಕ್ಷದ ಲೋಪದೋಷಗಳನ್ನು ಪ್ರಶ್ನಿಸಿದವರನ್ನು ನಕ್ಸಲರೆಂದು ಪಟ್ಟಕಟ್ಟಿ ಗೃಹಬಂಧನದಲ್ಲಿಡುವುದು ಪ್ರಜಾಪ್ವಭುತ್ವವನ್ನು ಬುಡಮೇಲು ಮಾಡುವ ಹುನ್ನಾರವಾಗಿದೆ. ಐದು ದಶಕಗಳ ಹಿಂದೆ 1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್‌ಬಾರಿಯಲ್ಲಿ ಹುಟ್ಟಿಕೊಂಡ ನಕ್ಸಲ್ ಕ್ರಾಂತಿ ಇಂದಿಗೂ ರಾಷ್ಟ್ರವನ್ನು ಕಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಇಂತಹ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಈ ದೇಶದ ವಿಚಾರವಾದಿಗಳ ಪಾತ್ರ ಬಹುಮುಖ್ಯವಾಗಿದೆ. ಆದರೆ ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್‌ರಂತಹ ವಿಚಾರವಾದಿಗಳನ್ನು ಬಲಿತೆಗೆದುಕೊಂಡದ್ದು ಪ್ರಜಾಪ್ರಭುತ್ವದ ಅವನತಿನ್ನು ತೋರಿಸುತ್ತಿದೆ. ದಲಿತಕ್ರಾಂತಿಯನ್ನು ಸಾರುವ ಭೀಮಾಕೋರೆಗಾಂವ್‌ನಲ್ಲಿ ಜರುಗಿದ ಗಲಭೆಯಲ್ಲಿ ದಲಿತಪರ ಧ್ವನಿ ಎತ್ತಿದರು ಎಂಬ ಕಾರಣದಿಂದ ಪಿ. ವರವರ ರಾವ್, ಸುಧಾ ಭಾರದ್ವಾಜ್, ಗೌತಮ್ ನವ್ಲಾಖಾ, ಅರುಣ್ ಫೆರೇರಾ ಮತ್ತು ವೆರ್ನನ್ ಗೊನ್ಸಾಲ್ವಿಸ್‌ರನ್ನು ಬಂಧಿಸುವ ಮೂಲಕ, ಮಾನವ ಹಕ್ಕುಗಳನ್ನು ದಮನಮಾಡಿ ಪ್ರಜಾಪ್ರಭುತ್ವ ಮತ್ತು ಜನವಿರೋಧಿ ನಿಲುವನ್ನು ಆಡಳಿತಾರೂಢ ಸರಕಾರ ತಳೆದಿರುವುದು ವಿಷಾದನೀಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top