---

ಜಮೀಯ್ಯತುಲ್ ಫಲಾಹ್‌ನ ಸ್ಥಾಪಕ ಮುಹಮ್ಮದ್ ಇಕ್ಬಾಲ್ ಯೂಸುಫ್

"ಸೇವಾ ಚಟುವಟಿಕೆಗಳಲ್ಲಿ ಮಸೀದಿ, ಉಲಮಾಗಳ ಭಾಗೀದಾರಿಕೆ ಬಹಳ ಮುಖ್ಯ"

ಸುಮಾರು 30 ವರ್ಷಗಳ ಹಿಂದೆ ಅವಿಭಜಿತ ದ.ಕ. ಜಿಲ್ಲೆಯ ಮುಸ್ಲಿಮ್ ಸಮಾಜದ ಆರ್ಥಿಕ, ಸಾಮಾಜಿಕ, ಬೌದ್ಧಿಕ, ಶೈಕ್ಷಣಿಕ ಸ್ಥಿತಿಗತಿ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಒಂದೆಡೆ ಶಿಕ್ಷಣವಿಲ್ಲ, ಇನ್ನೊಂದೆಡೆ ಕಿತ್ತು ತಿನ್ನುವ ಬಡತನ. ಇವುಗಳ ಮಧ್ಯೆ ಬಳಲುತ್ತಿದ್ದ ಮುಸ್ಲಿಮ್ ಸಮಾಜ ಅಭಿವೃದ್ಧಿಯಾಗಲು ಹೆಣಗಾಡುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸಮುದಾಯಕ್ಕೆ ಈ ವಿಷಯಗಳಲ್ಲಿ ಸೂಕ್ತ ಮಾರ್ಗದರ್ಶನದ ಕೊರತೆ ಇತ್ತು. ಈ ಸಂದರ್ಭದಲ್ಲಿ ಸಮುದಾಯದ ಪಾಲಿಗೆ ಆಶಾಕಿರಣವಾಗಿ ಮೂಡಿ ಬಂದವರು ಮುಹಮ್ಮದ್ ಇಕ್ಬಾಲ್ ಯೂಸುಫ್. ಇವರು ಬಜ್ಪೆಸಮೀಪದ ಪೆರ್ಮುದೆಯ ಜಲಾಲುದ್ದೀನ್ ಯೂಸುಫ್ ಮತ್ತು ಝುಲೇಖಾ ಬೇಗಂ ದಂಪತಿಯ ಪುತ್ರ. ಬಜ್ಪೆಯ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಎಸೆಸೆಲ್ಸಿ ಮುಗಿಸಿದ ಮುಹಮ್ಮದ್ ಇಕ್ಬಾಲ್ ಮುಂಬೈ, ಆ ಬಳಿಕ ಸ್ಕಾಟ್‌ಲ್ಯಾಂಡ್‌ನಲ್ಲಿ ವ್ಯಾಸಂಗ ಮಾಡಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಿದವರು. ಸೌದಿ ಅರೇಬಿಯಾದಲ್ಲಿದ್ದಾಗ ಉದ್ಯೋಗ ಅರಸಿಕೊಂಡು ಬಂದ ತವರೂರಿನ ಯುವಕರು ಎದುರಿಸುವ ಕಷ್ಟವನ್ನು ಕಂಡು ಅವರ ಕಣ್ಣೀರೊರೆಸುವ ಕೆಲಸಕ್ಕೆ ಮುಂದಾದರು. ಹಾಗೇ ಸಮಾಜದ ಅಭಿವೃದ್ಧಿಯ ಕನಸು ಕಂಡರು. ಆ ಕನಸು ಸಂಕಲ್ಪದ ರೂಪ ತಾಳಿ 1988ರಲ್ಲಿ ಅಂದಿನ ಅವಿಭಜಿತ ದ.ಕ.ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ‘ಜಮೀಯ್ಯತುಲ್ ಲಾಹ್’ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿದರು. ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಇಲಾಖೆಯಲ್ಲಿ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಮುಹಮ್ಮದ್ ಇಕ್ಬಾಲ್ ಯೂಸುಫ್ ಈಗ ಪತ್ನಿ, ಮಕ್ಕಳ ಸಮೇತ ಕೆನಡಾದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ತವರೂರಿಗೆ ಆಗಮಿಸಿರುವ ಅವರನ್ನು ‘ವಾರ್ತಾಭಾರತಿ’ ಮಾತನಾಡಿಸಿದಾಗ ಅವರು ಸಂಸ್ಥೆಯ ಸ್ಥಾಪನೆಯ ಉದ್ದೇಶ, ಗುರಿ, ಸಾಧನೆ ಇತ್ಯಾದಿಗಳ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಅದರ ಆಯ್ದ ಭಾಗ ಇಲ್ಲಿದೆ.

ನಿಮ್ಮ ಬಾಲ್ಯ, ಬದುಕು, ವೃತ್ತಿ ಜೀವನಗಳ ಕುರಿತ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತೀರಾ?.

ನನ್ನ ಅಜ್ಜ ಅಬ್ದುಲ್ ಅಝೀಝ್. ಅವರು ಸ್ಥಳೀಯ ಭಾಷೆಗಳ ಲ್ಲದೆ ಅರೆಬಿಕ್, ಇಂಗ್ಲಿಷ್, ಪರ್ಶಿಯನ್ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ನನ್ನ ತಂದೆ ಜಲಾಲುದ್ದೀನ್ ಯೂಸುಫ್. ಶಿಕ್ಷಕ ರಾಗಿದ್ದರು. ಜನರೊಂದಿಗಿನ ಅಜ್ಜನ ಒಡನಾಟವನ್ನು ನಾನು ಕಂಡಿದ್ದೆ. ತಂದೆ ಕೂಡಾ ಆರ್ಥಿಕವಾಗಿ ಅಶಕ್ತ ಕುಟುಂಬಗಳಿಗೆ ಸೇವೆ ಸಲ್ಲಿಸುವ ತುಡಿತ ಹೊಂದಿದ್ದರು. ಹಿಂದೂ-ಮುಸ್ಲಿಮ್-ಕ್ರೈಸ್ತರು ಎಂಬ ಭೇದಭಾವವಿಲ್ಲದೆ ಎಲ್ಲರೂ ತಂದೆಯ ಬಳಿ ಆಗಾಗ ಬಂದು ಸಲಹೆ-ಸೂಚನೆ ಕೇಳಿ ಹೋಗುತ್ತಿದ್ದರು. ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಿದ್ದರು. ಅವರ ಕಷ್ಟಗಳಿಗೆ ತಂದೆ ಸ್ಪಂದಿಸುತ್ತಿದ್ದರು. ಸೌಹಾರ್ದ ಸಂಬಂಧವನ್ನು ಬಾಲ್ಯದಲ್ಲೇ ಬಯಸಿದ್ದ ನಾನು ಹಬ್ಬದ ಸಂದರ್ಭ ನನ್ನ ಸಹಪಾಠಿಗಳಿಗೆ ಚಾಕ್ಲೇಟ್ ಹಂಚಿ ಖುಷಿ ಪಡುತ್ತಿದ್ದೆ. ಸಮಾಜ ಸೇವೆಯಲ್ಲಿ ನಾನು ತೊಡಗಿಸಿಕೊಳ್ಳಲು ನನಗೆ ಪ್ರವಾದಿ ಮುಹಮ್ಮದ್ (ಸ.)ರ ಬೋಧನೆಗಳು ಹಾಗೂ ನನ್ನ ಅಜ್ಜ ಮತ್ತು ತಂದೆಯ ಜೀವನವೇ ಸೂರ್ತಿ. ನಿಮಗೆ ಜಮೀಯ್ಯತುಲ್ ಲಾಹ್‌ನಂತಹ ಸಂಸ್ಥೆ ಯೊಂದನ್ನು ಸ್ಥಾಪಿಸಬೇಕು ಎಂದು ಅನಿಸಿದ್ದು ಹೇಗೆ? ಆ ಸಂದರ್ಭದ ಬಗ್ಗೆ ಹೇಳಿ. ನಾನಾಗ ಸೌದಿ ಅರೇಬಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದೆ. ತವರೂರಿನಿಂದ ಉದ್ಯೋಗ ಅರಸಿಕೊಂಡು ಬರುವ ಯುವಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇವರಿಗೆ ಕೈಲಾದಷ್ಟು ಸೇವೆ ಸಲ್ಲಿಸಬೇಕು ಎಂಬ ತುಡಿತ ನನಗಿತ್ತು. ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ವರ್ಗಗಳಲ್ಲಿ ವಿಶೇಷವಾಗಿ ಮುಸ್ಲಿಮ್ ಸಮಾಜದಲ್ಲಿ ಶೈಕ್ಷಣಿಕ, ಆರೋಗ್ಯ ಜಾಗೃತಿ ಮೂಡಿಸಬೇಕು, ಸಾಮಾಜಿಕ ಪ್ರಜ್ಞೆ ಬೆಳೆಸಬೇಕು, ಸ್ವ ಉದ್ಯೋಗಿಗಳನ್ನಾಗಿಸಬೇಕು, ಬಡತನ ಹೋಗಲಾಡಿಸಬೇಕು ಎಂಬ ಕನಸು ಕಂಡೆ. ಅಂತೆಯೇ ಮಂಗಳೂರಿಗೆ ಬಂದಾಗ ನಾನು ಇಲ್ಲಿನ ಪ್ರಮುಖರ ಜೊತೆ ಈ ಬಗ್ಗೆ ಸಮಾಲೋಚಿಸಿದೆ. ಹೀಗೆ ಶಿಕ್ಷಣ - ಆರೋಗ್ಯ ಸೇವೆ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವುದು - ಇವೇ ಜಮೀಯ್ಯತುಲ್ ಲಾಹ್‌ನ ಮೂಲ ಆಶಯಗಳಾದವು.

ನಿಮ್ಮ ಈ ಕಲ್ಪನೆಗೆ ಸಮುದಾಯದ ಪ್ರಮುಖರ, ಜನಸಾಮಾನ್ಯರ ಪ್ರತಿಕ್ರಿಯೆ ಹೇಗಿತ್ತು? ಸಂಸ್ಥೆಯ ಪ್ರಾರಂಭಿಕ ಹಂತದಲ್ಲಿ ಎದುರಿಸಿದ ಸವಾಲುಗಳೇನು? ಅದನ್ನು ಹೇಗೆ ನಿಭಾಯಿಸಿದಿರಿ?.

ನಾನು ಮೊದಲು ಸಮಾಜದ ಪ್ರಮುಖರನ್ನು ಕಂಡು ಮಾತನಾಡಿ ಸಿದಾಗ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿತು. ಇಂಥದ್ದೊಂದು ಸಂಘಟನೆಯ ಅಗತ್ಯ ಇದೆ ಎಂದು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು. ಮೊದಲು ಸಮಾನಮನಸ್ಕರು ಒಂದಾಗಿ ಸೌದಿಯ ಜಿದ್ದಾದಲ್ಲಿ ಇದನ್ನು ಹಂಗಾಮಿ ಸಮಿತಿಯ ಮೂಲಕ ಪ್ರಾರಂಭಿಸಿದೆವು. ಬಳಿಕ ಈ ಬಗ್ಗೆ ಮಾಹಿತಿ ನೀಡಿ ಚರ್ಚಿಸಲು ಸಭೆಯನ್ನು ಮಂಗಳೂರಿನಲ್ಲಿ ಕರೆದಾಗ ಸಮಾಜದ ಹಿತ ಬಯಸಿದ್ದ ಸುಮಾರು 150 ಸಮಾನ ಮನಸ್ಕರು ಭಾಗವಹಿಸಿದ್ದರು. ನನ್ನ ಕೇರಳ ಮೂಲದ ಸ್ನೇಹಿತ ಕೆನಡಾ ನಿವಾಸಿ ಅಹ್ಮದ್ ಕುಟ್ಟಿಯ ಜೊತೆಯೂ ನಾನು ಹೊಸ ಸಂಸ್ಥೆಯ ಕನಸು ಬಿತ್ತಿದ್ದೆ. ಅವರು ‘ಜಮೀಯ್ಯತುಲ್ ಲಾಹ್’ ಎಂಬ ಹೆಸರನ್ನಿಡಲು ಸಲಹೆ ನೀಡಿದ್ದರು. ಅದನ್ನು ನಾನು ಸಭೆಯ ಮುಂದಿಟ್ಟಾಗ ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರು. ಈ ಮಧ್ಯೆ ಸಂಸ್ಥೆಯನ್ನು ಟ್ರಸ್ಟ್ ಆಗಿ ರೂಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಸಮಾಜದ, ಸಮುದಾಯದ ಹಿತದೃಷ್ಟಿಯಿಂದ ಸ್ಥಾಪಿಸಲಾದ ಈ ಸಂಸ್ಥೆಯನ್ನು ‘ಟ್ರಸ್ಟ್’ ಆಗಿ ರೂಪಿಸಿ ಏಕಸ್ವಾಮ್ಯ ಮಾಡುವುದು ನನಗೆ ಇಷ್ಟವಿರಲಿಲ್ಲ. ಅದು ಸಂಸ್ಥೆಯಾಗಿ ರೂಪುಗೊಂಡರೆ ಸಮಾಜಕ್ಕೆ ಹಿತಕಾರಿಯಾದೀತು ಎಂದು ನಾನು ಭಾವಿಸಿದೆ. ಹಾಗೇ ಟ್ರಸ್ಟ್ ಬದಲು ಸಂಸ್ಥೆಯಾಗಿರಲಿ ಎಂದೆ. ಅಷ್ಟೇ ಅಲ್ಲ, ಹಂಗಾಮಿ ಸಹಿತ ಪೂರ್ಣ ಸಮಿತಿಯಲ್ಲಿ ನಾನು ಯಾವುದೇ ಸ್ಥಾನಮಾನ ಪಡೆಯದೆ ಸಂಸ್ಥೆಯ ಒಂದು ಭಾಗವಾಗಿ ಸೇವಾ ಮನೋಭಾವದಿಂದ ಕೆಲಸ ಮಾಡತೊಡಗಿದೆ.

ಈ ಸಂದರ್ಭ ಕೆಲವರು ನಮ್ಮ ಮೇಲೆ ಟೀಕೆ ಮಾಡಿದ್ದೂ ಇದೆ. ಅದನ್ನೆಲ್ಲಾ ಗಂಭೀರವಾಗಿ ಪರಿಗಣಿಸದೆ ಸಮಾಜದ, ಸಮುದಾಯದ ಹಿತ ಕಾಪಾಡಲು ಸ್ಪಷ್ಟ ಗುರಿಯೊಂದಿಗೆ ಮುನ್ನುಗ್ಗಿದೆವು. ಮೂವತ್ತು ವರ್ಷಗಳ ಹಿಂದೆ ನಾವು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಇದು ತುಂಬಾ ಸಂತೋಷದ ವಿಚಾರ.

ಕರಾವಳಿ ಕರ್ನಾಟಕದ ಮುಸ್ಲಿಮ್ ಸಮುದಾಯದ ಅಂದಿನ ಮತ್ತು ಇಂದಿನ ಪರಿಸ್ಥಿತಿಯ ಬಗ್ಗೆ ಏನು ಹೇಳುತ್ತೀರಿ? ನೀವು ಗುರುತಿಸಿದ ಪ್ರಮುಖ ಬದಲಾವಣೆಗಳೇನು?

ನನಗೀಗ ರಾತ್ರಿ-ಹಗಲಿನಂತಹ ಬದಲಾವಣೆಗಳು ಕಾಣುತ್ತಿವೆ. ಅಂದರೆ, ಮೂವತ್ತು ವರ್ಷಗಳ ಹಿಂದೆ ಹಳ್ಳಿಗಾಡಿನಲ್ಲಿ ತುತ್ತು ಅನ್ನಕ್ಕೂ ಬಹುತೇಕ ಜನರು ಪರದಾಡುವಂತಹ ಸ್ಥಿತಿ ಇತ್ತು. ಶಿಕ್ಷಣ ಕನಸಿನ ಮಾತಾಗಿತ್ತು. ಅದು ಮುಸ್ಲಿಮ್ ಸಮಾಜ ಅಂತಲ್ಲ... ಎಲ್ಲಾ ಸಮಾಜದ ಜನರೂ ಬಹುತೇಕ ಶಿಕ್ಷಣದಿಂದ ವಂಚಿತರಾಗಿದ್ದರು. ಆರ್ಥಿಕವಾಗಿ ತೀರಾ ಹಿಂದುಳಿದಿದ್ದರು. ಜಮೀಯ್ಯತುಲ್ ಲಾಹ್ ಸಂಸ್ಥೆಯ ಮೂಲಕ ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳ್ಳದೆ ಸಮಾಜದ ಹಿತದೃಷ್ಟಿಯಿಂದ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ನೆರವು ನೀಡಲು ಮುಂದಾದೆವು. ಅಂದು ಎಲ್ಲರಿಗೂ ಶಿಕ್ಷಣ ಲಭಿಸಬೇಕು ಎಂಬ ಗುರಿಯನ್ನು ನಾವಿಟ್ಟುಕೊಂಡಿದ್ದೆವು. ನಮ್ಮ ನಿರೀಕ್ಷೆಗೂ ಮೀರಿ ನಾವು ಅದರಲ್ಲಿ ಸಲತೆ ಕಂಡೆವು. ಇಂದು ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಇಲ್ಲ. ಆರ್ಥಿಕವಾಗಿ ಪ್ರಬಲ ಅಲ್ಲದಿದ್ದರೂ ಸಬಲರಾಗಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರು ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ.

ಈಗ ಮುಸ್ಲಿಮ್ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಪ್ರಮಾಣ ಹೆಚ್ಚಾಗಿದೆ. ಇದು ಅವರ ಸಬಲೀಕರಣಕ್ಕೆ ನೆರವಾಗಿದೆಯೇ ?

ಕರಾವಳಿಯಲ್ಲಿ ಸ್ಕಾಲರ್‌ಶಿಪ್ (ವಿದ್ಯಾರ್ಥಿ ವೇತನ) ಯೋಜನೆಯನ್ನು ಪರಿಚಯಿಸಿದ್ದೇ ಜಮೀಯ್ಯತುಲ್ ಲಾಹ್ ಸಂಸ್ಥೆ ಎಂದರೆ ತಪ್ಪಲ್ಲ. ಹಿಂದೆ ಮುಸ್ಲಿಮ್ ಹೆಣ್ಣು ಮಕ್ಕಳು ಮಾತ್ರವಲ್ಲ, ಗಂಡು ಮಕ್ಕಳು ಕೂಡಾ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿರಲಿಲ್ಲ. ನಾವು ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಿದೆವು. ಸ್ಕಾಲರ್‌ಶಿಪ್ ಯೋಜನೆಯು ನಮ್ಮ ಕನಸು-ಗುರಿಗೆ ಹೆಚ್ಚು ಸಹಕಾರಿಯಾಯಿತು. ಇಂದು ಸಮುದಾಯದ ಹೆಣ್ಣು ಮಕ್ಕಳು ಒಳ್ಳೆಯ ಶಿಕ್ಷಣ ಪಡೆದಿದ್ದಾರೆ, ನಿಜ. ಆದರೆ, ಆ ಶಿಕ್ಷಣದ ಪ್ರಯೋಜನ ಮತ್ತೆ ಸಮಾಜಕ್ಕೆ ಲಭ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕಾಗಿ ಮುಸ್ಲಿಮ್ ಹೆಣ್ಣು ಮಕ್ಕಳು ಉದ್ಯೋಗ ಮಾಡಲು ಮುಂದಾಗಬೇಕು.

ಹಲವು ಸಾಮಾಜಿಕ ಸಂಘಟನೆಗಳು ಸಾಕಷ್ಟು ಕೆಲಸ-ಕಾರ್ಯಗಳನ್ನು ಮಾಡಿಯೂ ಮುಸ್ಲಿಮ್ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹಿಂದೆ ಬಿದ್ದಿದೆ ಎಂದು ನಿಮಗೆ ಅನಿಸುವುದಿಲ್ಲವೇ ?

ಹೌದು.... ಇಂದು ಅನೇಕ ಸಾಮಾಜಿಕ ಸಂಘಟನೆಗಳು ಕ್ರಿಯಾಶೀಲವಾಗಿವೆ. ಸರಕಾರದ ವಿವಿಧ ಸವಲತ್ತುಗಳನ್ನು ಜನರಿಗೆ ತಲುಪಿಸಲು ಸಾಕಷ್ಟು ಪ್ರಯತ್ನಪಡುತ್ತಿವೆ. ಜನರೂ ಸ್ವಾವಲಂಬಿಗಳಾಗುತ್ತಿದ್ದಾರೆ. ಆದಾಗ್ಯೂ ನಮ್ಮ ಗುರಿ ಈಡೇರಿದೆ ಎಂದು ನನಗೆ ಅನಿಸುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ನಾವು ಇನ್ನೂ ಪ್ರಗತಿಯಾಗಬೇಕು. ನಾವೀಗ ಆರೋಗ್ಯಕ್ಕೆ ನೀಡುವ ಒತ್ತು ಸಾಕಾಗದು. ಹೆಚ್ಚಿನ ಜನರಿಗೆ ಇನ್ನೂ ಆರೋಗ್ಯ ಕಾಪಾಡುವ ಬಗ್ಗೆ ಪ್ರಜ್ಞೆ ಬೆಳೆದಿಲ್ಲ. ಅದಕ್ಕಾಗಿ ಜಾಗೃತಿ ಮೂಡಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.

ಇಂದಿಗೂ ಮುಸ್ಲಿಮ್ ಯುವಕರು ಉದ್ಯೋಗಕ್ಕೆ ಗಲ್ಫ್ ರಾಷ್ಟ್ರಗಳನ್ನೇ ನೆಚ್ಚಿಕೊಳ್ಳುವ ಮನಸ್ಥಿತಿಯಿದೆ. ಅದನ್ನು ಬದಲಾಯಿಸುವುದು ಸಾಧ್ಯವಿಲ್ಲವೇ?

ಖಂಡಿತಾ ಸಾಧ್ಯವಿದೆ. ಗಲ್ಫ್ ಉದ್ಯೋಗ ಶಾಶ್ವತವಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ. ಜಮೀಯ್ಯತುಲ್ ಲಾಹ್ ಸಂಸ್ಥೆಯು ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿ ಸುಮಾರು 6 ಎಕರೆ ಜಮೀನು ಖರೀದಿಸಿ ಅಲ್ಲಿ ಸ್ವ ಉದ್ಯೋಗಕ್ಕೆ ತರಬೇತಿ ನೀಡುವ ಕೇಂದ್ರವೊಂದನ್ನು ತೆರೆಯುವ ಗುರಿ ಹಾಕಿಕೊಂಡಿದೆ. ಅಂತಹ ಕೇಂದ್ರಗಳ ಮೂಲಕ ಸ್ವ ಉದ್ಯೋಗಕ್ಕೆ ಪ್ರೇರಣೆ, ಪ್ರೋತ್ಸಾಹ ನೀಡಿದರೆ ಖಂಡಿತಾ ಸ್ವದೇಶದಲ್ಲೇ ನೆಲೆ ಕಂಡುಕೊಳ್ಳಲು ಸಾಧ್ಯವಿದೆ.

ಸಮುದಾಯದ ಮೇಲೆ ಭಾರೀ ಪ್ರಭಾವ ಹೊಂದಿರುವ ಉಲಮಾಗಳನ್ನು ಹಾಗೂ ಮಸೀದಿ, ಮದ್ರಸಗಳನ್ನು ಸಮುದಾಯದ ಅಭಿವೃದ್ಧಿಗೆ ಸೂಕ್ತವಾಗಿ ಬಳಸಿಕೊಳ್ಳಲಾಗಿಲ್ಲ ಎಂಬ ದೂರಿದೆ. ಇದನ್ನು ಹೇಗೆ ಸುಧಾರಿಸಬಹುದು ?

ಇದೊಳ್ಳೆಯ ಪ್ರಶ್ನೆಯಾಗಿದೆ. ಹಿಂದೆ ಪ್ರವಾದಿ ಮುಹಮ್ಮದ್ (ಸ.)ರ ಕಾಲದಲ್ಲೇ ಮಸೀದಿಯು ತರಬೇತಿಯ ಕೇಂದ್ರವಾಗಿತ್ತು. ಬರಬರುತ್ತಾ ಅದನ್ನು ಕೇವಲ ನಮಾಝ್, ಧಾರ್ಮಿಕ ಕ್ರಿಯೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಹಾಗಾಗದಂತೆ ನೋಡಿಕೊಳ್ಳಲು ಸಮುದಾಯದ ಎಲ್ಲರೂ ಈ ಬಗ್ಗೆ ಯೋಚಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ. ಮದ್ರಸ ಕಟ್ಟಡಗಳನ್ನು ತರಗತಿಯ ಹೊರತಾದ ವೇಳೆ ಸ್ವ ಉದ್ಯೋಗ ತರಬೇತಿಗೆ ಬಳಸಿಕೊಳ್ಳಬಹುದು. ಉಲಮಾಗಳು ಕ್ರಿಯಾಶೀಲರಾದರೆ ಇದರಿಂದ ಸಮುದಾಯಕ್ಕೆ ಬಹಳ ಪ್ರಯೋಜನವಿದೆ.

ಸರಕಾರಿ ಉದ್ಯೋಗಕ್ಕೆ ಸೇರುವ ಬಗ್ಗೆ ಇನ್ನೂ ಮುಸ್ಲಿಮರಲ್ಲಿ ಸಾಕಷ್ಟು ಜಾಗೃತಿ ಮೂಡಿಲ್ಲ ಏಕೆ?

ಸಾಕಷ್ಟು ಮಾರ್ಗದರ್ಶನದ ಹೊರತಾಗಿಯೂ ಸರಕಾರಿ ಉದ್ಯೋಗದ ಬಗ್ಗೆ ಇನ್ನೂ ಸಮುದಾಯದ ಯುವ ಪೀಳಿಗೆಯಲ್ಲಿ ಜಾಗೃತಿ ಕಡಿಮೆಯಿರುವುದು ವಿಷಾದನೀಯ. ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಸುತ್ತಿದ್ದಂತೆಯೇ ಸರಕಾರಿ ಆಡಳಿತದ ಭಾಗವಾಗಿಯೂ ಬೆಳೆಯಬೇಕು. ಅಂದರೆ ಕೇವಲ ಸರಕಾರಿ ಉದ್ಯೋಗ ಮಾತ್ರವಲ್ಲ. ಐಎಎಸ್, ಐಪಿಎಸ್ ಅಕಾರಿಯಂತಹ ಹುದ್ದೆಗಳ ಕನಸುಗಳನ್ನು ಬಿತ್ತಿ ಅವರು ಅತ್ತ ಹೋಗಲು ಸೂಕ್ತ ತರಬೇತಿ ನೀಡುವ ಅಗತ್ಯವಿದೆ.

ಬಡವರಿಗೆ ಸೇವೆ ಸಲ್ಲಿಸುವಂತಹ ಆರೋಗ್ಯ, ಶೈಕ್ಷಣಿಕ ಸಂಸ್ಥೆಗಳು ಮುಸ್ಲಿಮರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಇದನ್ನು ಹೇಗೆ ರೂಪಿಸಬಹುದು?

30 ವರ್ಷಗಳ ಹಿಂದೆ ಜಮೀಯ್ಯತುಲ್ ಲಾಹ್ ಸಂಸ್ಥೆಯನ್ನು ಸ್ಥಾಪಿಸುವಾಗ ಸಮುದಾಯದ ಹಿತದ ಜೊತೆ ಸಮಸ್ತ ಸಮಾಜದ ಹಿತವೂ ಇತ್ತು. ಬಡತನವು ಜಾತಿ ಮತ್ತು ಧರ್ಮವನ್ನು ಮೀರಿದ ವಾಸ್ತವ. ಸೇವಾ ಮನೋಭಾವವು ಒಂದು ಧರ್ಮಕ್ಕೆ ಸೀಮಿತವಾಗಬಾರದು. ಇಸ್ಲಾಮ್ ಕೂಡಾ ಅದನ್ನೇ ಕಲಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಸರ್ವಧರ್ಮೀಯ ಸಮಾನ ಮನಸ್ಕರು ಕುಳಿತು ಪರಸ್ಪರ ಚರ್ಚೆ ಮಾಡಿ ಸೂಕ್ತ ನಿರ್ಧಾರ ತಾಳಬೇಕಿದೆ.

ಈಗ ಹಲವು ಮುಸ್ಲಿಮ್ ಸಾಮಾಜಿಕ ಸೇವಾ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಇವುಗಳ ಕಾರ್ಯವೈಖರಿ ಬಗ್ಗೆ ನಿಮ್ಮ ಅನಿಸಿಕೆ ಏನು?

ಹಿದಾಯ ಫೌಂಡೇಶನ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಿತ ಇಂದು ಅನೇಕ ಮುಸ್ಲಿಮ್ ಸಂಘ-ಸಂಸ್ಥೆಗಳು ಇವೆ. ಇಲ್ಲಿನ ಬಹುತೇಕ ಸಂಘಟನೆಗಳು ಹೆಚ್ಚು ಕ್ರಿಯಾಶೀಲವಾಗಿವೆ. ಒಳ್ಳೆಯ ಉದ್ದೇಶದೊಂದಿಗೆ ಉತ್ತಮವಾಗಿ ಸಾಗುತ್ತಿವೆ. ಎಲ್ಲಾ ಸಂಘಟನೆಗಳ ಗುರಿಯೂ ಸೇವೆ ಎಂಬುದನ್ನು ನೆನಪಿಸಿಕೊಂಡು ‘ನಾನು ಮತ್ತು ನನ್ನದು’ ಎಂಬ ಮನೋಭಾವ ತೊಡೆದು ಹಾಕಿ ‘ಎಲ್ಲರೂ, ಎಲ್ಲರಿಗಾಗಿ’ ಎಂಬ ಧೋರಣೆಯೊಂದಿಗೆ ಕೆಲಸ ಮಾಡಬೇಕಿದೆ. ಈ ಎಲ್ಲಾ ಸಂಘಟನೆಗಳಿಗೆ ಜಮೀಯ್ಯತುಲ್ ಲಾಹ್ ಪ್ರೇರಣಾ ಸಂಸ್ಥೆ ಎಂದರೆ ತಪ್ಪಾಗಲಾರದು. ಅಂದು ಸಂಘಟನೆ ಸ್ಥಾಪಿಸುವಾಗ ತಂತ್ರಜ್ಞಾನ ಇಷ್ಟು ಬೆಳೆದಿರಲಿಲ್ಲ. ಅನಕ್ಷರತೆಯಿಂದಾಗಿ ಅಡ್ಡಿ-ಆತಂಕಗಳು ಇತ್ತು. ಸಂಘಟನಾ ಪ್ರಜ್ಞೆಯೂ ಇರಲಿಲ್ಲ. ಆದರೂ ಜಮೀಯ್ಯತುಲ್ ಲಾಹ್ ಶಿಕ್ಷಣ, ಆರೋಗ್ಯ, ಉದ್ಯೋಗ ಇನ್ನಿತರ ಕ್ಷೇತ್ರಗಳಲ್ಲಿ ಹಲವಾರು ವಿನೂತನ ಯೋಜನೆಗಳನ್ನು ಹಾಕಿಕೊಂಡು ಅವುಗಳ ಮೂಲಕ ಸಾವಿರಾರು ಜನರಿಗೆ ಸೇವೆ ಸಲ್ಲಿಸಿತು. ಒಮ್ಮೆ ಸಾವಿರಕ್ಕೂ ಹೆಚ್ಚು ಜನರನ್ನು ಕ್ಯಾಟರಾಕ್ಟ್ ರೋಗದ ಪರೀಕ್ಷೆ ಮಾಡಿಸಿ ಅದರಲ್ಲಿ 300 ಜನರಿಗೆ ಶಸಚಿಕಿತ್ಸೆ ಮಾಡಿಸಿದ್ದು ನನಗೆ ನೆನಪಾಗುತ್ತಿದೆ. ಮೂಡುಬಿದಿರೆಯಲ್ಲಿ ಒಂದು ಶಾಲೆಯನ್ನು ಆದಕ್ಕಾಗಿ ಆಸ್ಪತ್ರೆಯಂತೆ ಸಜ್ಜುಗೊಳಿಸಲಾಗಿತ್ತು. ಸುಸಜ್ಜಿತ ಸೌಲಭ್ಯಗಳೊಂದಿಗೆ ನುರಿತ ಕಣ್ಣಿನ ತಜ್ಞರು ಬಂದು ಶಸಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಎಲ್ಲರಿಗೂ ಕನ್ನಡಕ ಒದಗಿಸಿದರು. ಎಲ್ಲ ವ್ಯವಸ್ಥೆಯನ್ನು ಜಮೀಯ್ಯತುಲ್ ಲಾಹ್ ಮಾಡಿತ್ತು. ಮತ್ತೆ ದೃಷ್ಟಿ ಸಿಕ್ಕಿದ ಖುಷಿಯಲ್ಲಿ ಅಂದು ಆ ಜನರು ಸಲ್ಲಿಸಿದ ಕೃತಜ್ಞತೆ ಇಂದಿಗೂ ಸ್ಮರಣೀಯ. ಇಂತಹ ಹಲವಾರು ಯೋಜನೆಗಳನ್ನು ಜಮೀಯ್ಯತುಲ್ ಲಾಹ್ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.

 ಗಲ್ಫ್ ನಿಂದ ಭಾರೀ ಸಂಖ್ಯೆಯಲ್ಲಿ ಅನಿವಾಸಿ ಮುಸ್ಲಿಮರು ಕರಾವಳಿಗೆ ಹಿಂದಿರುಗುವ ಲಕ್ಷಣಗಳಿವೆ. ಅವರಿಗೆ ಸೂಕ್ತ ಪುನರ್ವಸತಿ, ಉದ್ಯೋಗ ಅವಕಾಶ ಕಲ್ಪಿಸಲು ಏನು ಮಾಡಬಹುದು?

ಹಿಂದೆ ಹೆತ್ತವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಡುವಾಗ ಗಲ್ಫ್ ವರನನ್ನು ಹುಡುಕುತ್ತಿದ್ದರು. ಆದರೆ ಇಂದು ಗಲ್ಫ್ ದುಡಿಮೆ ಆಶಾದಾಯಕವಾಗಿಲ್ಲ. ಅಲ್ಲಿನ ನೀತಿಗಳು ಯುವಕರ ಉದ್ಯೋಗವನ್ನು ಕಿತ್ತುಕೊಳ್ಳುತ್ತಿವೆ. ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸುವ ಹೊಣೆ ಸರಕಾರದ್ದಾಗಿದೆ. ಅಂದರೆ, ಮಂಗಳೂರಿನಲ್ಲಿ ಹೆಚ್ಚೆಚ್ಚು ಕೈಗಾರಿಕೆಗಳು ತಲೆಯೆತ್ತುವಂತೆ ನೋಡಿಕೊಳ್ಳಬೇಕು. ಉದ್ಯಮಿಗಳು ಇಲ್ಲಿ ಬಂಡವಾಳ ಹೂಡಲು ಮುಂದೆ ಬರುವಂತಹ ವಾತಾವರಣ ರೂಪಿಸಬೇಕು. ಅದಕ್ಕಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ಅಭಿವೃದ್ಧಿಗೊಳಿಸಬೇಕು. ವಿಮಾನ ನಿಲ್ದಾಣ ಮತ್ತು ಅದಕ್ಕೆ ಸಂಬಂಸಿದ ಮೂಲಭೂತ ಸೌಲಭ್ಯಗಳಿಂದ ಬಹುದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಬಹುದು. ಯೂರೋಪಿನ ವಿಮಾನ ನಿಲ್ದಾಣಗಳಿಂದ ಮಿಲಿಯಗಟ್ಟಲೆ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಈಗಾಗಲೇ ಅದರ ಸಾಮರ್ಥ್ಯದ ಪ್ರಯಾಣಿಕರ ಸಂಖ್ಯೆ ಮೀರಿದೆ. ಈಗ ಅದನ್ನು ಇನ್ನಷ್ಟು ದೊಡ್ಡ ಸಂಖ್ಯೆಯ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಸ್ತರಿಸುವ ಕೆಲಸ ಆಗಬೇಕಿದೆ. ಇದನ್ನು ನಾವು ಈಗಾಗಲೇ ಸ್ಥಳೀಯ ಜನಪ್ರತಿನಿಗಳ ಗಮನಕ್ಕೆ ತಂದಿದ್ದೇವೆ. ಅವರು ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದು ಕಾರ್ಯಪ್ರವೃತ್ತರಾಗುವ ಭರವಸೆ ನೀಡಿದ್ದಾರೆ. ಜಮೀಯ್ಯತುಲ್ ಲಾಹ್ ಕೂಡ ಈ ನಿಟ್ಟಿನಲ್ಲಿ ವಾಪಸ್ ಬರುತ್ತಿರುವ ಅನಿವಾಸಿ ಭಾರತೀಯರಿಗೆ ನೆರವಾಗಲು ಪ್ರಯತ್ನಿಸುತ್ತಿದೆ. ನಮ್ಮ ಸಂಸ್ಥೆಯನ್ನು ಬೆಳೆಸುವಲ್ಲಿ ಈ ಜನರೇ ನಿರ್ಣಾಯಕ ಕೊಡುಗೆ ನೀಡಿದ್ದಾರೆ. ಈಗ ಅವರ ಸಂಕಟಕ್ಕೆ ಸ್ಪಂದಿಸಲು ನಾವು ಪ್ರಯತ್ನಿಸಲಿದ್ದೇವೆ. ಅವರಿಗೆ ಸೂಕ್ತ ಉದ್ಯೋಗ ದೊರಕಿಸಲು ಅಥವಾ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ನೆರವಾಗಲಿದ್ದೇವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top