ಇಮ್ರಾನ್ ಮಂಡಳಿಯಲ್ಲಿ ವಿದೇಶಿ ಆರ್ಥಿಕ ತಜ್ಞರು
ಇಸ್ಲಾಮಾಬಾದ್, ಸೆ. 2: ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ತನ್ನ ಸರಕಾರಕ್ಕೆ ಯೋಗ್ಯ ಆರ್ಥಿಕ ನೀತಿಗಳ ಬಗ್ಗೆ ಅತ್ಯುತ್ತಮ ಸಂಭಾವ್ಯ ಸಲಹೆಗಳನ್ನು ನೀಡಲು ರಚಿಸಲಾಗಿರುವ ಆರ್ಥಿಕ ಸಲಹಾ ಮಂಡಳಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಖ್ಯಾತ ವಿದೇಶಿ ಆರ್ಥಿಕ ತಜ್ಞರನ್ನು ನೇಮಿಸಿದ್ದಾರೆ.
ಸುಮಾರು 1000 ಕೋಟಿ ಡಾಲರ್ ಆರ್ಥಿಕ ಕೊರತೆಯನ್ನು ತುಂಬಿಸಲು ಹಣಕಾಸು ಹೊಂದಿಸುವುದು ಖಾನ್ ಸರಕಾರದ ತುರ್ತು ಸವಾಲಾಗಿದೆ. ಒಳಗೆ ಬರುವ ಹಣಕ್ಕಿಂತ ಹೊರಹೋಗುವ ಹಣವೇ ಹೆಚ್ಚಾದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಿದೆ.
Next Story