ಮಹೀಂದ್ರಾ ಮರಾರೆಝ್ಝಿ ಲೋಕಾರ್ಪಣೆ: ದಿ ವರ್ಲ್ಡ್ ಆಫ್ ಸುವ್ಸ್ ಆ್ಯಂಡ್ ಶೋರೂಂ ಶುಭಾರಂಭ
ಮಂಗಳೂರು, ಸೆ.5: ನೂತನ ಮಹಿಂದ್ರಾ ಮರಾರೆಝ್ಝಿ ಕಾರನ್ನು ಸಂಸದ ನಳಿನ್ಕುಮಾರ್ ಕಟೀಲ್ ನಗರದ ಕೊಟ್ಟಾರಚೌಕಿಯಲ್ಲಿನ ಕರ್ನಾಟಕ ಏಜನ್ಸಿಯಲ್ಲಿ ಬುಧವಾರ ಲೋಕಾರ್ಪಣೆಗೊಳಿಸಿದರು.
‘ದಿ ವರ್ಲ್ಡ್ ಆಫ್ ಸುವ್ಸ್ ಆ್ಯಂಡ್ ಶೋರೂಂ’ನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.
ಬಳಿಕ ಸಂಸದ ನಳಿನ್ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಹಾಗೂ ಸಂಸ್ಥೆಯ ಸಿಇಒ ಆರ್.ಎಸ್. ರಾಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ದಿ ವರ್ಲ್ಡ್ ಆಫ್ ಸುವ್ಸ್ ಆ್ಯಂಡ್ ಶೋರೂಂನಲ್ಲಿ 17 ಲಕ್ಷದಿಂದ 20 ಲಕ್ಷ ರೂ. ವೌಲ್ಯದ ಕಾರುಗಳು ಮಾರಾಟಕ್ಕಿವೆ. ಭಾರತದಲ್ಲಿ ‘ಕರ್ನಾಟಕ ಏಜೆನ್ಸಿ’ಯಿಂದಲೇ ಅತಿಹೆಚ್ಚು ಮಹಿಂದ್ರಾ ಮರಾರೆಝ್ಝಿ ಕಾರುಗಳು ಮಾರಾಟವಾಗುತ್ತಿವೆ’ ಎಂದು ಕರ್ನಾಟಕ ಏಜೆನ್ಸಿಯ ಮ್ಯಾನೇಜರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ರತನ್ ರಾಡ್ರಿಗಸ್, ಸಂತೋಷ್ ರಾಡ್ರಿಗಸ್ ಉಪಸ್ಥಿತರಿದ್ದರು. ಪೀಟರ್ ಬೆನ್ಸ್ಪಾನ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
Next Story