ದಿಲ್ಲಿಯಲ್ಲಿ ಇಬ್ಬರು ಶಂಕಿತ ಐಸಿಸ್ ಭಯೋತ್ಪಾದಕರ ಸೆರೆ
ಹೊಸದಿಲ್ಲಿ,ಸೆ.7: ದಿಲ್ಲಿ ಪೊಲೀಸ್ನ ವಿಶೇಷ ಘಟಕವು ಐಸಿಸ್ನೊಂದಿಗೆ ನಂಟು ಹೊಂದಿರುವ ಜಮ್ಮು-ಕಾಶ್ಮೀರದ ಸಂಘಟನೆಯೊಂದಕ್ಕೆ ಸೇರಿದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಗುರುವಾರ ರಾತ್ರಿ ದಿಲ್ಲಿಯ ಕೆಂಪುಕೋಟೆ ಸಮೀಪದ ಬಸ್ ನಿಲ್ದಾಣದ ಬಳಿ ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರನ್ನು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಒಂದೇ ಗ್ರಾಮದ ನಿವಾಸಿಗಳಾದ ಫರ್ವೇಝ್ ಮತ್ತು ಜಂಷೆಡ್ ಎಂದು ಗುರುತಿಸಲಾಗಿದ್ದು,ವಿದೇಶಿ ಪಿಸ್ತೂಲುಗಳು ಸೇರಿದಂತೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು,ದಿಲ್ಲಿಯ ಪ್ರದೇಶಗಳನ್ನು ಚೆನ್ನಾಗಿ ತಿಳಿದವರಾಗಿದ್ದಾರೆ ಎಂದರು.
ಬಂಧಿತರು ದಿಲ್ಲಿಯಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಯೋಜನೆಯನ್ನು ಹೊಂದಿರಲಿಲ್ಲ. ತಮ್ಮ ಪ್ರಯಾಣ ಮಧ್ಯದಲ್ಲಿ ತಂಗಲು ದಿಲ್ಲಿಯನ್ನು ಅವರು ಬಳಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.
Next Story