‘ಲವ್ ರಾತ್ರಿ’; ಸಲ್ಮಾನ್ಖಾನ್ ವಿರುದ್ಧ ಪ್ರಕರಣ ದಾಖಲು
ಮುಝಪ್ಫರ್ಪುರ, ಸೆ. 7: ‘ಲವ್ ರಾತ್ರಿ’ ಚಲನಚಿತ್ರದ ಶೀರ್ಷಿಕೆ ನವರಾತ್ರಿ ಉತ್ಸವವನ್ನು ಅವಮಾನ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಆರೋಪಿಸಿ ವಕೀಲರೊಬ್ಬರು ಬಿಹಾರದಲ್ಲಿ ನಿರ್ಮಾಪಕ ಸಲ್ಮಾನ್ ಖಾನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸುಧೀರ್ ಕುಮಾರ್ ಓಝಾ ದಾಖಲಿಸಿದ ದೂರಿನ ವಿಚಾರಣೆಯನ್ನು ಉಪ ವಿಭಾಗೀಯ ದಂಡಾಧಿಕಾರಿ ಶೈಲೇಂದ್ರ ಕುಮಾರ್ ಸೆಪ್ಟಂಬರ್ 12ರಂದು ನಡೆಸಲಿದ್ದಾರೆ. ಸಲ್ಮಾನ್ ಖಾನ್ ನಿರ್ಮಾಣದ ಈ ಚಿತ್ರ ದುರ್ಗಾ ಮಾತೆಯನ್ನು ಅವಹೇಳನ ಮಾಡುತ್ತದೆ ಎಂದು ಓಝಾ ಆರೋಪಿಸಿದ್ದಾರೆ. ಈ ವರ್ಷದ ನವರಾತ್ರಿ ನಡೆಯುವ ಹತ್ತಿರದ ದಿನಾಂಕದಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಆದುದರಿಂದ ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಿದೆ ಎಂದು ಅವರು ಆರೋಪಿಸಿದ್ದಾರೆ.
Next Story