ಎನ್ಎಂಪಿಟಿಯಲ್ಲಿ ಮೆಡಿಕಲ್ ಕ್ಲೀನಿಕ್ ಮತ್ತು ಡಿಸ್ಪೆನ್ಸರಿ ಆರಂಭ
ಮಂಗಳೂರು,ಸೆ.7:ನವಮಂಗಳೂರು ಬಂದರು ಮಂಡಳಿಯ ನೌಕರರು ಮತ್ತು ಅವರ ಕುಟುಂಬದವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಮೆಡಿಕಲ್ ಕ್ಲೀನಿಕ್ ಮತ್ತು ಡಿಸ್ಪೆನ್ಸರಿಯನ್ನು ಶುಕ್ರವಾರ ಬಂದರು ಮಂಡಳಿಯ ಅಧ್ಯಕ್ಷ ಎಂ.ಟಿ.ಕೃಷ್ಣ ಬಾಬು ಇಂದು ಔಪಚಾರಿಕವಾಗಿ ಉದ್ಘಾಟಿಸಿದರು.
ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಮತ್ತು ಎನ್ಎಂಪಿಟಿಯಲ್ಲಿ ಉಚಿತವಾಗಿ ನೌಕರರಿಗಾಗಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರಾಥಮಿಕ ಚಿಕಿತ್ಸೆಯನ್ನು ಪೋರ್ಟ್ ಟ್ರಸ್ಟ್ನ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.ಕ್ಲಿನಿಕ್ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿವಾರ ದಿನದಲ್ಲಿ ಎರಡು ಗಂಟೆ ಸಂಜೆ 4ರಿಂದ 6 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಕ್ಲಿನಿಕ್ ಸಮಯ ಹೆಚ್ಚಿಸ ಬೇಕಾಗಿದ್ದರೆ ಮುಂದಿನ ಹಂತದಲ್ಲಿ ತೀರ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story