ಟ್ರಂಪ್ ಪ್ರಮಾಣವಚನ ಚಿತ್ರವನ್ನು ತಿರುಚಲಾಗಿತ್ತು: ಛಾಯಾಗ್ರಾಹಕ
ವಾಶಿಂಗ್ಟನ್, ಸೆ. 8: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಸಮಾರಂಭದ ಚಿತ್ರದಲ್ಲಿ ತಾನು ಉದ್ದೇಶಪೂರ್ವಕ ಹಸ್ತಕ್ಷೇಪ ಮಾಡಿರುವುದನ್ನು ಅಮೆರಿಕ ಸರಕಾರದ ಛಾಯಾಚಿತ್ರಗ್ರಾಹಕರೊಬ್ಬರು ಒಪ್ಪಿಕೊಂಡಿದ್ದಾರೆ.
ಸಭಿಕರ ಗಾತ್ರವನ್ನು ದೊಡ್ಡದು ಮಾಡುವುದಕ್ಕಾಗಿ ಚಿತ್ರದಲ್ಲಿದ್ದ ಖಾಲಿ ಸ್ಥಳವನ್ನು ತಾನು ತೆಗೆದುಹಾಕಿದೆ ಎಂದು ಅವರು ಶುಕ್ರವಾರ ತನಿಖಾಧಿಕಾರಿಗಳ ಸಮ್ಮುಖದಲ್ಲಿ ಹೇಳಿದ್ದಾರೆ.
ಟ್ರಂಪ್ ಪ್ರಮಾಣವಚನ ಕಾರ್ಯಕ್ರಮ 2017 ಜನವರಿ 20ರಂದು ನಡೆದಿತ್ತು. ಮರುದಿನ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಮತ್ತು ಮಾಜಿ ಅಧ್ಯಕ ಬರಾಕ್ ಒಬಾಮರ ಅಧಿಕಾರ ಸ್ವೀಕಾರ ಸಮಾರಂಭಗಳ ಚಿತ್ರಗಳನ್ನು ತುಲನೆ ಮಾಡಲಾಗಿತ್ತು.
Next Story