ಆಸ್ಟ್ರೇಲಿಯ ವಿರುದ್ಧ ಭಾರತ ‘ಎ’ ತಿರುಗೇಟು
ಸಮರ್ಥ್-ಈಶ್ವರನ್ ಶತಕದ ಜೊತೆಯಾಟ, ಕುಲ್ದೀಪ್ಗೆ 5 ವಿಕೆಟ್
ಬೆಂಗಳೂರು, ಸೆ.9: ಆರಂಭಿಕ ಆಟಗಾರರಾದ ಆರ್.ಸಮರ್ಥ್ ಹಾಗೂ ಅಭಿಮನ್ಯು ಈಶ್ವರನ್ ಶತಕದ ಜೊತೆಯಾಟ ಹಾಗೂ ಸ್ಪಿನ್ನರ್ ಕುಲ್ದೀಪ್ ಯಾದವ್ 5 ವಿಕೆಟ್ ಗೊಂಚಲು ನೆರವಿನಿಂದ ಭಾರತ ‘ಎ’ ತಂಡ ಆಸ್ಟ್ರೇಲಿಯ ‘ಎ’ ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ನಲ್ಲಿ ತಿರುಗೇಟು ನೀಡಿದೆ.
ರವಿವಾರ ಸಮರ್ಥ್(83) ಹಾಗೂ ಈಶ್ವರನ್(86)ಮೊದಲ ವಿಕೆಟ್ಗೆ 174 ರನ್ ಜೊತೆಯಾಟ ನಡೆಸಿ ಭಾರತ 2ನೇ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ಗೆ 223 ರನ್ ಗಳಿಸಲು ನೆರವಾದರು. ಇದಕ್ಕೆ ಮೊದಲು 91 ರನ್ಗೆ 5 ವಿಕೆಟ್ ಕಬಳಿಸಿದ ಕುಲ್ದೀಪ್ ಆಸ್ಟ್ರೇಲಿಯ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 346 ರನ್ಗೆ ನಿಯಂತ್ರಿಸಿದರು. ಕುಲ್ದೀಪ್ಗೆ ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್(3-90) ಉತ್ತಮ ಸಾಥ್ ನೀಡಿದರು. ಆಸೀಸ್ ನಾಯಕ ಮಿಚೆಲ್ ಮಾರ್ಷ್ ಔಟಾಗದೆ 113 ರನ್ ಗಳಿಸಿದರು.
Next Story