ಫಂಡ್ರಿ, ಕೇಸರಿ ಮತ್ತು ಕನ್ನಡ ಶಾಲೆ

‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮರಾಠಿ ಸಿನೆಮಾ ಫಂಡ್ರಿ ಯ ಐಡಿಯಾವನ್ನು ಗಡಿನಾಡಿನ ಕನ್ನಡ ಶಾಲೆಯ ಇಕ್ಕಟ್ಟುಗಳ ಮಸಾಲೆ ಹಾಕಿ ಕಲಸಿ ತಯಾರಿಸಿರುವ ಚಿತ್ರ. (‘ಒಂದಲ್ಲಾ ಎರಡಲ್ಲಾ’ ಚಿತ್ರದಲ್ಲಿ ಎಚ್. ಎಚ್ ಮುನ್ರೋನ ‘ಓಪನ್ ವಿಂಡೋಸ್’ ಕತೆಯ ‘ತೆರೆದ ಕಿಟಕಿಯ’ ಐಡಿಯಾವನ್ನುಸೀಮಿತವಾಗಿ ಮಾತ್ರ ಬಳಸಿಕೊಳ್ಳ ಲಾಗಿದೆ). ಫೇಲಾಗಿ ಅದೇ ತರಗತಿಯಲ್ಲಿ ಉಳಿದು ಇತರ ವಿದ್ಯಾರ್ಥಿ ಗಳಿಗಿಂತ ವಯಸ್ಸಿನಲ್ಲಿ ತುಸು ಹಿರಿಯನಾಗಿ ತಾನು ಇಷ್ಟಪಡುವ ಹುಡುಗಿಯ ಸಾಮಿಪ್ಯಕ್ಕಾಗಿ ಹಾತೊರೆಯುವ ಹದಿಹರೆಯದ ‘ದಡ್ಡ’ ಹುಡುಗ, ಮರಾಠಿ ‘ಫಂಡ್ರಿ’ ಚಿತ್ರದ ಸಂವೇದನಾಶೀಲ ದಲಿತ ಹುಡುಗ ನನ್ನು ರೂಪದಲ್ಲಿ ಬಹುವಾಗಿ ಹೋಲುತ್ತಾನೆ. ಅವನ ಆಸಕ್ತಿಯ ಕೇಂದ್ರ ಬಿಂದುವಾದ ಹುಡುಗಿಯೂ ಸಹ ಫಂಡ್ರಿ ಚಿತ್ರದ ಹುಡುಗಿಯ ಮುಖಚರ್ಯೆ ಉಳ್ಳವಳೇ. ಒಂದೇ ವ್ಯತ್ಯಾಸವೆಂದರೆ, ಫಂಡ್ರಿಯ ಹುಡುಗನ ಪ್ರೀತಿ ಏಕಮುಖವಾದದ್ದು. ಕನ್ನಡ ಶಾಲೆಯ ಹುಡುಗನ ಹಾತೊರೆಯುವಿಕೆಗೆ ಕನ್ನಡದ ಹುಡುಗಿಯು ವಿಮುಖಳೇನಲ್ಲ. ಚಿತ್ರದ ಪೂರ್ವಾರ್ಧ ಪೂರಾ ಇದೇ ಮಸಾಲೆಯ ಮಿಶ್ರಣ. ಉತ್ತರಾರ್ಧ ದಲ್ಲಿ ಶಾಲೆ ಮುಚ್ಚಿದಾಗ ಆ ಹುಡುಗಿ ಶಾಲೆಗೆ ಸೇರಲು ಊರುಬಿಡುವುದ ರಿಂದ ಅವಳನ್ನು ‘ಸ್ವದೇಶ’ಕ್ಕೆ ಕರೆತರಲೆಂದೇ ಕನ್ನಡಶಾಲೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಹುಡುಗನಿಗೆ ಉಂಟಾಗುತ್ತದೆ. ಅವನ ಕನ್ನಡ ಶಾಲೆಯ ಪ್ರೀತಿ, ವಾಸ್ತವವಾಗಿ ಅವನಿಷ್ಟಪಡುವ ಹುಡುಗಿ ಯ ಪ್ರತೀಕ ಅಷ್ಟೆ. ಅವನು ಸಿಟ್ಟಿನಿಂದ ಎಸೆಯುವ ಕಲ್ಲು, ಠಳಾರೆಂದು ಗಾಜು ಒಡೆದು ತೆರೆಯಮೇಲೆ ಒಂದು ಕ್ಷಣ ಕತ್ತಲೆ ಆವರಿಸುವ ದೃಶ್ಯ ಸಂಯೋಜನೆಯೂ ಫಂಡ್ರಿಯಲ್ಲಿನ ದೃಶ್ಯವೊಂದರ ನಿಸ್ಸಂಕೋಚವಾದ ಅನುಕರಣೆಯೇ. ಕನ್ನಡ ಸಿನೆಮಾದ ಹೆಚ್ಚಿನ ಪ್ರೇಕ್ಷಕರು ‘ಫಂಡ್ರಿ’ಯಂಥ ಮರಾಠಿ ಚಿತ್ರವನ್ನು ನೋಡಿರುವ ಸಂಭವ ತೀರಾ ಕಡಿಮೆಯಾದ್ದರಿಂದ ಇದು ಅನೇಕರ ಗಮನಕ್ಕೆ ಬಂದಿಲ್ಲ ಅಷ್ಟೆ.

ಈ ಚಿತ್ರದಲ್ಲಿ ನಿರ್ದೇಶಕರು ತಮ್ಮ ಸೈದ್ಧಾಂತಿಕ ನಿಲುವನ್ನು ಧ್ವನಿಸುವ ರೀತಿ ಕಥಾವಸ್ತುವಿನ ಬೆನ್ನು ಹತ್ತಿ ಮೈಮರೆಯುವವರ ಗಮನಕ್ಕೆ ಬಾರದೆ ಹೋಗಬಹುದು. ಮಾತೆತ್ತಿದರೆ ಕತ್ತಿ ಹಿರಿದು ಹೊಡೆ ದಾಡುವ ವನು ‘ರಾಕ್ಷಸ’ವೇಷದ ದಕ್ಷಿಣ ಕನ್ನಡದ ತಂದೆ ಪಾತ್ರಧಾರಿ. ಕನ್ನಡಶಾಲೆ ಯನ್ನು ಉಳಿಸಿಕೊಡುವ ಮೈಸೂರಿನ ‘ಢೋಂಗಿ ಸಮಾಜ ಸುಧಾರಕ’ಉಪಾಯ, ಮತ್ತು ಜಾಣಪೆದ್ದುತನಗಳನ್ನು ಬಳಸಿ ಗುರಿ ಸಾಧಿಸು ವವನು. ಪ್ರಸ್ತುತ ಕಮ್ಯುನಿಸ್ಟ್ ಸರಕಾರವಿರುವ ಕೇರಳದ ಮಲೆಯಾಳೀ ಶಿಕ್ಷಣಾಧಿಕಾರಿ ಭ್ರಷ್ಟ. ಕನ್ನಡದ ‘ಸಮಾಜಸುಧಾರಕ’ ಕನ್ನಿಂಗ್, ಆದರೆ ಹೇಗಾದರೂ ಸರಿ ‘ನಮ್ಮ ಸಂಸ್ಕೃತಿಯ’ನ್ನು ಉಳಿಸಿಕೊಳ್ಳಬೇಕೆನ್ನುವ ‘ಸಜ್ಜನ’. ಕನ್ನಡ ಶಾಲೆಯ ಕೈಲಾಗದ ಹೆಡ್ ಮಾಸ್ಟರ್ ‘ನಂಬೂದಿರಿ’. ಕನ್ನಡ ಕಲಿಯಲೊಲ್ಲದ ಮಲೆಯಾಳಿ ಗಣಿತ ಶಿಕ್ಷಕನ ಬೆನ್ನಿಗೆ ಎಡ ಪಂಥೀಯ ವ್ಯಕ್ತಿಯ ಹೆಸರಿನ ಕುಹಕ. ಶಾಲೆಯ ಉಳಿವಿಗಾಗಿ, ಕೆಂಪೂ ಸೇರಿ ವಿವಿಧ ಬಣ್ಣಗಳ ಬಾವುಟ ಹಿಡಿದ ಶಾಲಾಮಕ್ಕಳನ್ನು ‘ಬೆಲೆಯೇರಿಕೆಯ ವಿರುದ್ಧದ ಹೋರಾಟ’ವನ್ನಾಗಿ ಬಿಂಬಿಸಲು ಯತ್ನಿಸುವ ಬೆಂಬಲಿಗ, ಮಲೆಯಾಳಿ ಕಾಮ್ರೇಡ್. ಮಗನಿಗೆ ಸರಕಾರದ ವತಿಯಿಂದ ಉಚಿತ ವಾಗಿ ಸಿಕ್ಕ ಸೈಕಲ್‌ನ್ನು ತನ್ನ ವ್ಯಾಪಾರಕ್ಕಾಗಿ ಬಳಸುವ ಕಡುಬಡವ, ಮಹಮ್ಮದೀಯ. ಶಾಲೆಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವಾ ದಾಗ ‘ಜನಗಣಮನ..’ದ ಜಾಗದಲ್ಲಿ ಹಿನ್ನೆಲೆಯಲ್ಲಿ ಕೇಳಿಸುವುದು ವಾದ್ಯಸಂಗೀತದ ‘ವಂದೇಮಾತರಂ’. ಗೆದ್ದು ಸಂತಸ ತುಂಬಿದ ಶಾಲೆಯಸಭೆಗಾಗಿ ಕಟ್ಟಿದ ತಳಿರು-ತೋರಣದ ಬಣ್ಣ ಕೇಸರಿ. ಕನ್ನಡ ಶಾಲೆಯನ್ನು ತನ್ನ ಜಾಣ ಪ್ರತಿಭೆಯಿಂದ ಉಳಿಸಿದ ಸಮಾಜಸುಧಾರಕನ ವೇಸ್ಟ್ ಕೋಟು ಸಂಘಪರಿವಾರದ ಧುರೀಣರು ವಿಶೇಷ ಸಂದರ್ಭಗಳಲ್ಲಿ ತೊಡುವ ಕೇಸರಿ ಬಣ್ಣದ್ದು.
ಕೇರಳದ ಭಾಗವಾಗಿರುವ ಕರ್ನಾಟಕದ ಗಡಿನಾಡು ಪ್ರದೇಶದಲ್ಲಿ ಕನ್ನಡಶಾಲೆಯನ್ನು ಮುಚ್ಚಬಾರದೆನ್ನುವ ‘ಮಾತೃಭೂಮಿ’ಯ ಅಭಿಮಾನವನ್ನು ಪ್ರೇಕ್ಷಕರ ಮೇಲೆ ಚುಮುಕಿಸುವ ಚಾಟ್ ಮಸಾಲೆ- ಚಿತ್ರಕ್ಕೆ ಕೊಟ್ಟಿರುವ ಶೀರ್ಷಿೆ- ಕನ್ನಡಪ್ರೇಮವನ್ನೂ ಮಸಾಲೆಯಾಗಿಸಿ ಚಿತ್ರಕಟ್ಟುವ ನಿರ್ದೇಶಕರ ಜಾಣ್ಮೆ, ಮತ್ತು ನೋಡುಗರಿಗೆ ಅರಿವಾಗುವುದರೊಳಗೇ ಅವರ ಮನಸ್ಸಿನೊಳಕ್ಕೆ ತಮ್ಮ ಸರಕನ್ನು ಹೊಗಿಸಿ ಅವರ ಸಮ್ಮತಿಯನ್ನು ಗೆಲ್ಲುವ ವಾಣಿಜ್ಯದ ತಂತ್ರಗಾರಿಕೆ- ಇವೆಲ್ಲದರೊಳಕ್ಕೆ ನಯವಾಗಿ ಸೇರಿಸಿರುವ ಕೇಸರಿ ಸಿದ್ಧಾಂತದ ಹೂರಣ, ಮತ್ತು ಎಲ್ಲಕ್ಕಿಂತ ುುಖ್ಯವಾಗಿ ಅನುಕರಣೆಯ ಚಲಾಕಿತನ ಈ ಚಿತ್ರದ ‘ಯಶಸ್ಸಿ’ನ ಹಿಂದೆ-ಮುಂದೆ ಕೆಲಸಮಾಡಿವೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top