ಚೀನಾ: ಬಾಲ್ಕನಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ರಕ್ಷಿಸಿದ ಕೊರಿಯರ್ ಬಾಯ್
ಚಾಂಗ್ಶು, ಸೆ.10: ಕಟ್ಟಡವೊಂದರ ನಾಲ್ಕನೇ ಮಹಡಿಯ ಬಾಲ್ಕನಿಯಲ್ಲಿ ನೇತಾಡುತ್ತಿದ್ದ 3ರ ಹರೆಯದ ಬಾಲಕಿಯನ್ನು ಚೀನಾದ ಕೊರಿಯರ್ ಹುಡುಗ ರಕ್ಷಿಸಿ ಸಾಹಸ ಮೆರೆದ ಘಟನೆ ಚೀನಾದ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಶು ಎಂಬಲ್ಲಿ ನಡೆದಿದೆ.
ಕೊರಿಯರ್ ಬಾಯ್ ರಸ್ತೆಯಲ್ಲಿ ತನ್ನ ವಾಹನದಲ್ಲಿ ಹೋಗುತ್ತಿದ್ದಾಗ ಕಟ್ಟಡವೊಂದರ ಬಾಲ್ಕನಿಯಲ್ಲಿ ಬಾಲಕಿಯೊಬ್ಬಳು ನೇತಾಡುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಹಲವು ಮಹಡಿಯ ಕಟ್ಟಡವನ್ನು ಏರಿದ ಕೊರಿಯರ್ ಬಾಯ್ ಬಾಲಕಿಯನ್ನು ರಕ್ಷಿಸಿದ್ದಾನೆ. ಕೊರಿಯರ್ ಬಾಯ್ಗೆ ಇನ್ನೊಬ್ಬ ವ್ಯಕ್ತಿ ಸಾಥ್ ನೀಡಿದ್ದು ಆತ ಕೂಡ ಕಟ್ಟಡವನ್ನು ಏರಿ ಬಾಲಕಿಯ ರಕ್ಷಣೆಗೆ ನೆರವಾಗಿದ್ದಾನೆ.
‘‘ಬೆಳಗ್ಗೆ 10 ಸುಮಾರಿಗೆ ನಾನು ಕಟ್ಟಡವೊಂದರ ಕಿಟಕಿಯ ಹೊರಗೆ ಬಾಲಕಿಯೊಬ್ಬಳು ನೇತಾಡುತ್ತಿರುವುದನ್ನು ನೋಡಿದೆ. ಬಾಲಕಿಯ ಮೈಮೇಲೆ ಬಟ್ಟೆ ಇರಲಿಲ್ಲ. ಆಗ ವಾಹನದಿಂದ ಇಳಿದ ವ್ಯಕ್ತಿಯೊಬ್ಬ ತಕ್ಷಣವೇ ಕಟ್ಟಡವನ್ನು ಏರಿ ಬಾಲಕಿಯನ್ನು ಬಚಾವ್ ಮಾಡಿದ’’ ಎಂದು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.
Next Story