ಬಿಜೆಪಿ- ಕಾಂಗ್ರೆಸ್ ದೋಸ್ತಿ ಸಂಬಂಧ ಬಗ್ಗೆ ಗೊತ್ತೆ ?
ಬೆಂಗಳೂರು, ಸೆ. 12: ನಗರಾಡಳಿತ ಖಾತೆ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ ಬಿ. ಶ್ರೀರಾಮುಲು ಜತೆ ರಾಜಕೀಯ ಚರ್ಚೆಯಲ್ಲಿ ತೊಡಗಿದ್ದಾರೆ ಎಂಬ ಗಾಳಿಸುದ್ದಿಯ ನಡುವೆಯೇ, ಉಭಯ ಮುಖಂಡರ ಕುಟುಂಬಗಳ ನಡುವೆ ವೈವಾಹಿಕ ಸಂಬಂಧ ಏರ್ಪಡುತ್ತಿದೆ ಎಂಬ ವದಂತಿಯೂ ಬಲವಾಗಿ ಹಬ್ಬಿದೆ.
ಶ್ರೀರಾಮುಲು ಅವರ ಪುತ್ರಿ ಹಾಗೂ ಜಾರಕಿಹೊಳಿಯವರ ಎರಡನೇ ಪುತ್ರನ ಮದುವೆ ಮಾತುಕತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಇಬ್ಬರೂ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಶ್ರೀರಾಮುಲು ಪುತ್ರಿ ಸದ್ಯಕ್ಕೆ ಲಂಡನ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. "ಉಭಯ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ಕೈಗೊಳ್ಳಲಾಗುತ್ತದೆ" ಎಂದು ಕುಟುಂಬಗಳಿಗೆ ನಿಕಟವಾಗಿರುವ ಮೂಲಗಳು ಹೇಳಿವೆ.
ಜಾರಕಿಹೊಳಿಯವರ ಪ್ರಥಮ ಪುತ್ರನ ವಿವಾಹ 2016ರ ನವೆಂಬರ್ 21ರಂದು ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ ನಡೆದಿತ್ತು.
Next Story