ಲಂಡನ್ ನ್ಯಾಯಾಲಯಕ್ಕೆ ಮಲ್ಯ ಹಾಜರು
ಲಂಡನ್, ಸೆ.12: ಬ್ಯಾಂಕುಗಳಿಗೆ ಕೋಟಿಗಟ್ಟಲೆ ರೂ. ಸಾಲ ಮರುಪಾವತಿ ಮಾಡದೆ ಲಂಡನ್ ಗೆ ಪರಾರಿಯಾಗಿರುವ ಮಾಜಿ ಮದ್ಯದ ದೊರೆ ವಿಜಯ್ ಮಲ್ಯನನ್ನು ಭಾರತಕ್ಕೆ ಗಡಿಪಾರು ಮಾಡುವ ಅರ್ಜಿಯ ವಿಚಾರಣೆ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿಇಂದು ಆರಂಭಗೊಂಡಿದ್ದು, ವಿಜಯ್ ಮಲ್ಯ ನ್ಯಾಯಾಲಯಕ್ಕೆ ಹಾಜರಾದರು.
ಮಲ್ಯನನ್ನು ಗಡಿಪಾರು ಮಾಡಿದರೆ ಮುಂಬೈನ ಅರ್ಥರ್ ರೋಡ್ ನಲ್ಲಿರುವ ಜೈಲು ಮಲ್ಯನಿಗೆ ಮನೆಯಾಗಲಿದೆ. ಇದರಲ್ಲಿನ ಬ್ಯಾರಕ್ ನಂಬರ್ 12 ನಲ್ಲಿರುವ ಸೌಲಭ್ಯಗಳ ವಿವರವನ್ನೊಳಗೊಂಡ ವೀಡಿಯೋ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.
Next Story