ಮುಪ್ಪು: ನಿರ್ವಹಣೆ ಹೇಗೆ?

ವೃದ್ಧಾಪ್ಯದಲ್ಲಿ ಅಂಗಾಂಗಗಳ ಸವೆತ, ರಕ್ತ ಪೂರೈಕೆಯ ಕೊರತೆಯಿಂದ, ತಿಂದ ಆಹಾರ ಜೀರ್ಣವಾಗುವುದು ನಿಧಾನವಾಗುತ್ತದೆ. ಹೀಗಾಗಿ ಇಡೀ ದೇಹದ ಕಾರ್ಯಕ್ಷಮತೆ ಕ್ಷೀಣವಾಗಿ ವ್ಯಕ್ತಿ ದುರ್ಬಲನಾಗುತ್ತಾನೆ. ಪ್ರಕೃತಿ ಬದಲಾವಣೆಯ ಅನಿರೀಕ್ಷಿತ ವೈಪರೀತ್ಯಗಳಿಗೆ ಹೊಂದಿಕೊಳ್ಳುವ, ಯಾವುದೇ ಅಂಗಾಂಗಕ್ಕೆ ಹಾನಿಯಾದಾಗ ಅದನ್ನು ಸರಿಪಡಿಸಿಕೊಳ್ಳುವ, ಶರೀರದ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ವೃದ್ಧರು ಯುವಕರಂತೆ ಕೆಲಸ ಮಾಡಲಾರರು, ಸ್ಪರ್ಧಿಸಲಾರರು. ಅವರ ಚಲನವಲನ ನಿಧಾನವಾಗಿ ಅಸ್ತವ್ಯಸ್ತವಾಗಿರುತ್ತದೆ. ಆಯಾಸ, ಏದುಸಿರು ಬರುತ್ತದೆ. ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುವುದಲ್ಲದೆ, ಚೇತರಿಸಿಕೊಳ್ಳಲು ಹೆಣಗಾಡುತ್ತಾರೆ. ತುಂಬ ಸಮಯ ತೆಗೆದುಕೊಳ್ಳುತ್ತಾರೆ. ಚಿಕಿತ್ಸೆ ಸಿಕ್ಕರೂ ನ್ಯೂನತೆಗಳು ಉಳಿದುಬಿಡುತ್ತವೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಾವು ತನ್ನ ಹಸ್ತವನ್ನು ಅವರತ್ತ ಚಾಚುತ್ತದೆ.

ಮಾನಸಿಕ ಲಕ್ಷಣಗಳು

ಮುಪ್ಪಿನ ಮಾನಸಿಕ ಲಕ್ಷಣಗಳು ಸಾಮಾನ್ಯವಾಗಿ ಶಾರೀರಿಕ ಲಕ್ಷಣಗಳೊಂದಿಗೇ ಪ್ರಾರಂಭವಾದರೂ, ಅವುಗಳ ತೀವ್ರತೆ, ಬದಲಾವಣೆಯ ವೇಗ ಬೇರೆಯಾಗಿಯೇ ಉಳಿಯುತ್ತದೆ. ಕೆಲವೊಮ್ಮೆ ಮಾನಸಿಕ ಲಕ್ಷಣಗಳು ಮೊದಲೇ ಪ್ರಾರಂಭವಾಗಬಹುದು. ಕೆಲವರು 45 ಅಥವಾ 50 ವರ್ಷಗಳಲ್ಲೇ ಮುಂದೆ ಬರುವ ಮುಪ್ಪಿನ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತಾರೆ. ಅದು ತರಲಿರುವ ಸಮಸ್ಯೆಗಳನ್ನು ಕಲ್ಪಿಸಿಕೊಂಡು ಅಧೀರರಾಗುತ್ತಾರೆ. ಈ ಬಗೆಯ ಅತಿಯಾದ ಕ್ಲೇಶ ಮುಪ್ಪಿನ ತೀವ್ರತೆಯನ್ನು ಹೆಚ್ಚಿಸಬಹುದು. ಮುಪ್ಪು ತರುವ ಮಾನಸಿಕ ಬದಲಾವಣೆಗಳಲ್ಲಿ ಮುಖ್ಯವಾದವು:

1. ಬೌದ್ಧಿಕ ಕ್ರಿಯೆಗಳ ಅವನತಿ : ಮಿದುಳು ನಶಿಸಿ ಹೋಗುವುದರಿಂದ ವ್ಯಕ್ತಿಯ ಬುದ್ಧಿ, ಆಲೋಚನಾ ಶಕ್ತಿ, ಸೂಕ್ಷ್ಮ ನಿರ್ಧಾರಗಳನ್ನು ಕೈಗೊಳ್ಳುವ ಹಾಗೂ ಲೆಕ್ಕಾಚಾರ ಮಾಡುವ ಸಾಮರ್ಥ್ಯ, ನೆನಪು ಕುಂದುತ್ತದೆ. ಸಂವೇದನೆ ಮತ್ತು ಚಲನೆಯ ಹತೋಟಿ ಸಡಿಲವಾಗುತ್ತದೆ. ಆದ್ದರಿಂದ ವ್ಯಕ್ತಿಗೆ ವಾತಾವರಣದ ಪ್ರಚೋದನೆಗಳನ್ನು, ನಡೆಯುವ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಅದಕ್ಕೆ ಪ್ರತಿಕ್ರಿಯೆ ತೋರಿಸಲು ನಿಧಾನವಾಗುತ್ತದೆ. ಹೊಸ ಕೌಶಲಗಳನ್ನು ಕಲಿಯಲು ಕಷ್ಟವಾಗುತ್ತದೆ. ತರ್ಕಬದ್ಧವಾಗಿ ಯೋಚಿಸಲು ಆಗುವುದಿಲ್ಲ. ಹೀಗಾಗಿ ವೃದ್ಧರು ಯಾವುದೇ ಬದಲಾವಣೆಯನ್ನು ವಿರೋಧಿಸುತ್ತಾರೆ. ಹೊಸ ವಿಚಾರ, ನಂಬಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಹಳೇ ನಂಬಿಕೆ, ವಿಚಾರಗಳಿಗೆ ಅಂಟಿಕೊಳ್ಳುತ್ತಾರೆ. ತಮ್ಮ ನ್ಯೂನತೆ ಎಲ್ಲಿ ಬೇರೆಯವರಿಗೆ ಗೊತ್ತಾಗಿ ಬಿಡುತ್ತೋ ಎಂದು ಅಳುಕಿ, ಅದನ್ನು ಮುಚ್ಚಿಡಲು ಸಿಡುಕುತ್ತಾರೆ. ತಮ್ಮ ವಿಚಾರವೇ ಸರಿ ಎಂದು ಹಠ ಮಾಡುತ್ತಾರೆ. ಸಂಪ್ರದಾಯವಾದಿ ಎನಿಸಿಕೊಳ್ಳುತ್ತಾರೆ.

2. ಭಾವನೆಯ ಪ್ರಕಟಣೆಯಲ್ಲಿ ಬದಲಾವಣೆ: ವೃದ್ಧರು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗುತ್ತಾರೆ.ಕೆಲವರು ಅಲ್ಪ ಕಾರಣಕ್ಕೇ ವಿಪರೀತ ಗಾಬರಿ, ದುಃಖ ಅಥವಾ ಕೋಪವನ್ನು ತೋರಿಸುತ್ತಾರೆ. ಇವರು ಯಾವುದೇ ಸನ್ನಿವೇಶಕ್ಕೆ ಪ್ರಚೋದನೆ, ವಿಪರೀತ ಭಾವನೆಗಳನ್ನು ತೋರಿಸುವುದಕ್ಕೆ ಕಾರಣ, ಅವರ ಅಂತರಂಗದ ಒಳಸ್ತರಗಳಲ್ಲಿ, ಬರಲಿರುವ ಸಾವಿನ ಬಗ್ಗೆ ಭಯ ಎನ್ನಲಾಗುತ್ತದೆ. ಮೊದಲೇ ಶಕ್ತಿ ಕುಂದಿದ ಶರೀರ, ಜೊತೆಗೆ ನರಳಿಸುವ ರೋಗಗಳು-ನಿಷ್ಕ್ರಿಯತೆ, ಪರಾವಲಂಬಿತನದಿಂದ ಜರ್ಜರಿತವಾಗಿ ಸಾವಿನ ನೆರಳಲ್ಲಿ ಬದುಕುವಾಗ ಭಾವೋದ್ವೇಗ ಸಹಜವೇ. ಹೀಗೆ ಶಾರೀರಿಕ, ಮಾನಸಿಕ ಬದಲಾವಣೆಗಳು ವ್ಯಕ್ತಿಯನ್ನು ಕಂಗಾಲು ಮಾಡುತ್ತದೆ. ಯೌವನದಲ್ಲಿ ಮೆರೆದ ಅವನ ಸೊಕ್ಕನ್ನು ಮುರಿದು, ನಡು ಬಗ್ಗಿಸಿ ನಿಲ್ಲುವಂತೆ ಮಾಡುತ್ತದೆ.

3. ವಾತಾವರಣದ ಪಾತ್ರ, ಕಷ್ಟ-ನಷ್ಟಗಳ ಪಾತ್ರ: ಮನುಷ್ಯ ಹುಟ್ಟಿ, ಬೆಳೆದು ಬದುಕುವ ಪರಿಸರ, ಅವನು ಸೇವಿಸುವ ಆಹಾರ ಪದಾರ್ಥಗಳು, ಅವನ ಜೀವನ ಶೈಲಿ, ಪ್ರಾಕೃತಿಕ ವೈಪರೀತ್ಯಗಳು, ಆಕಸ್ಮಿಕವಾಗಿ ಅಥವಾ ಗೊತ್ತಿಲ್ಲದಂತೆಯೇ ಅಥವಾ ಗೊತ್ತಿರುವಂತೆಯೇ ಆತನ ದೇಹದೊಳಕ್ಕೆ ಸೇರುವ ಅನೇಕ ವಿಷವಸ್ತುಗಳು (ಮದ್ಯ, ಮಾದಕ ವಸ್ತುಗಳೂ ಸೇರಿದಂತೆ), ಆತನಿಗೆ ಬರುವ ರೋಗ ರುಜಿನಗಳು ಮತ್ತು ಅದಕ್ಕೆ ಸಿಗುವ ಚಿಕಿತ್ಸೆ, ಆತನು ಎದುರಿಸಬೇಕಾಗಿ ಬರುವ ಕಷ್ಟ-ನಷ್ಟಗಳು, ನೋವು ನಿರಾಶೆಗಳು, ಅನುಭವಿಸಿದ ಸುಖ, ದುಃಖ ಗಳು, ತೃಪ್ತಿ ಅತೃಪ್ತಿಗಳು-ಎಲ್ಲವೂ ಒಂದಲ್ಲ ಒಂದು ಬಗೆಯಲ್ಲಿ ವ್ಯಕ್ತಿಯ ಆಯಸ್ಸನ್ನು ನಿರ್ಧರಿಸುತ್ತವೆ ಎಂದು ಹೇಳಲಾಗಿದೆ. ವಂಶವಾಹಿನಿಗಳಲ್ಲಿ ನಿಗದಿಯಾದ ಆಯಸ್ಸು, ಈ ಎಲ್ಲ ಅಂಶಗಳ ಪ್ರಭಾವದಿಂದ ಬದಲಾಗ ಬಲ್ಲದು. ಹೀಗೆ ವಂಶವಾಹಿನಿ ಮತ್ತು ವಾತಾವರಣ ಹಾಗೂ ಬದುಕುವ ಪರಿ ಒಂದಕ್ಕೊಂದು ಪೂರಕವಾಗಿ, ನಮಗೆ ಮುಪ್ಪುಬರುವುದನ್ನು ನಿರ್ಧರಿಸುತ್ತವೆ.

ಮುಪ್ಪಿನೊಂದಿಗೆ ಹೊಂದಾಣಿಕೆ

ಹೀಗೆ ಮೊದಲೇ ನಿರ್ಧಾರವಾಗಿ ಬರುವ ಮುಪ್ಪನ್ನು ವ್ಯಕ್ತಿ ಹೇಗೆ ಅಂಗೀಕರಿಸುತ್ತಾನೆ ಅದರೊಂದಿಗೆ ಎಷ್ಟು ಹೊಂದಾಣಿಕೆ ಸಾಧಿಸುತ್ತಾನೆ, ಅದರಲ್ಲಿ ಎಷ್ಟು ವಿಫಲನಾಗಿ ನರಳುತ್ತಾನೆ ಎನ್ನುವುದು ಕುತೂಹಲಕಾರಿ. ಈ ವಿಚಾರದಲ್ಲಿ ಹಲವು ಅಂಶಗಳು ಪ್ರಭಾವ ಬೀರುತ್ತವೆ.

1. ವ್ಯಕ್ತಿಯ ದೃಷ್ಟಿಕೋನ: ವೃದ್ಧಾಪ್ಯದ ಬಗ್ಗೆ ವ್ಯಕ್ತಿಯ ಭಾವನೆಗಳು, ಇರುವ ಆತಂಕ ಭಯಗಳು, ಅದಕ್ಕೆ ನಡೆಸುವ ಸಿದ್ಧತೆಗಳು ಬಹುಮುಖ್ಯ. ಮುಪ್ಪು ಜೀವನದಲ್ಲಿ ಒಂದು ಅನಿವಾರ್ಯ ಹಂತ. ಅದಕ್ಕೆ ಹೆದರಿ ಪ್ರಯೋಜನವಿಲ್ಲ. ಅದುವರೆಗೆ ನೋಡಿ, ಗಳಿಸಿದ ಅನುಭವದ ಹಿನ್ನೆಲೆಯಲ್ಲಿ, ಮುಂದೆ ಬರಬಹುದಾದ ಸವಾಲು, ಸಮಸ್ಯೆಗಳನ್ನು ನಿರೀಕ್ಷಿಸಿ, ಅವುಗಳನ್ನು ನಿವಾರಿಸಲು ಅಥವಾ ಎದುರಿಸಲು ಏನು ಮಾಡಬೇಕು ಎಂದು ಆಲೋಚಿಸಿ ಕ್ರಮ ಕೈಗೊಂಡಾಗ, ವೃದ್ಧಾಪ್ಯ ಹೆಚ್ಚು ಕಷ್ಟವಿಲ್ಲದೆ ಕಳೆದುಹೋಗುತ್ತದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top