ವಿದ್ಯಾರ ಮೇಲಿನ ಅಸಹನೆಗೆ ಕಾರಣ

 ಬಜರಂಗಿಗಳು ಮಂಗಳೂರಿನ ಮೂರು ಥಿಯೇಟರುಗಳಲ್ಲಿ ಶಾರುಕ್ ಖಾನ್‌ರ ‘ದಿಲ್ವಾಲೆ’ ಹಿಂದಿ ಚಲನಚಿತ್ರವನ್ನು ಗೂಂಡಾಗಿರಿಯಿಂದ ನಿಲ್ಲಿಸಿದಾಗ ಪೊಲೀಸರು ನಿಷ್ಕ್ರಿಯರಾಗಿದ್ದರು ಎಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತೆ ಹಾಗೂ ಸಿಟಿಜನ್ ಫೋರಂನ ಸಂಚಾಲಕಿ ವಿದ್ಯಾ ದಿನಕರ್ ಇವರು ಪೊಲೀಸ್ ಅಧಿಕಾರಿಯವರಿಗೆ ದೂರು ಕೊಟ್ಟು, ಬಜರಂಗ ದಳದ ಮುಖಂಡರು ಮತ್ತು ಕಾಲಾಳುಗಳ ಮೇಲೆ ಕೇಸ್ ದಾಖಲಿಸಲು ಕಾರಣವಾದರು ಎಂದು ಕೆಲವು ಹಿಂದುತ್ವ ಸಂಘಟನೆಯ ಸದಸ್ಯರು ಶ್ರೀಮತಿ ವಿದ್ಯಾ ದಿನಕರ್ ಮೇಲೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ, ನಿಂದನಾತ್ಮಕ ಬರಹಗಳನ್ನು ಪೋಸ್ಟ್ ಮಾಡಿದ್ದರು. ಇದರ ಬಗ್ಗೆಯೂ ವಿದ್ಯಾ ದಿನಕರ್‌ರವರು ಪೊಲೀಸರಲ್ಲಿ ದೂರು ದಾಖಲಿಸಿದ್ದು, ಪುನೀತ್ ರಾಜ್ ಕೊಟ್ಟಾರಿ ಎಂಬ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬಜರಂಗ ದಳದ ಮುಖಂಡ ಪಂಪ್‌ವೆಲ್‌ರ ಸಹೋದರ ಸಂಬಂಧಿಯಂತೆ.

ಬಜರಂಗ ದಳದ ಈ ಮುಖಂಡ ಕೊಟ್ಟಾರಿ ಜಾತಿಯವರಾಗಿದ್ದರೂ ಅದರ ಹೆಚ್ಚಿನ ಕಾಲಾಳುಗಳು ಬಿಲ್ಲವರಾಗಿದ್ದಾರೆ. ಹಾಗಾಗಿ ಬಿಲ್ಲವ ಸಮುದಾಯದ ಯಾವುದೇ ವ್ಯಕ್ತಿ ತಮ್ಮನ್ನು ವಿರೋಧಿಸುವುದನ್ನು ಬಜರಂಗಿ ಮುಖಂಡರು ಸಹಿಸುವುದಿಲ್ಲ. ಎಲ್ಲಾ ಬಿಲ್ಲವ ಯುವಕರು ತಮ್ಮ ಕೈಗೊಂಬೆ ಮಾತ್ರ ಆಗಿರಬೇಕು ಎಂಬುದು ಈ ಬಜರಂಗಿ ಮುಖಂಡರ ಉದ್ದೇಶ. ಆದರೆ ತಮ್ಮನ್ನು ಬಹಿರಂಗವಾಗಿ ವಿರೋಧಿಸುವ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಬಿಲ್ಲವ ಸಮುದಾಯದವರೇ ಆಗಿರುವುದು ಬಜರಂಗಿಗಳಿಗೆ ಖಾರ ತಿಕ್ಕಿದಂತೆ ಆಗಿದೆ. ಮಂಗಳೂರಿನ ಎಲ್ಲಾ ದೊಡ್ಡ ಸೂಪರ್ ಮಾರ್ಕೆಟ್‌ಗಳಲ್ಲಿ ಮತ್ತು ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಹಿಂದುತ್ವ ಸಂಘಟನೆಯ ಮುಖಂಡರು ತಮ್ಮ ಕಾಲಾಳುಗಳನ್ನು ಬಲಾತ್ಕಾರದಿಂದ ನೌಕರಿಗೆ ಸೇರಿಸಿ ಕಮಿಷನ್ ಗಳಿಸುವುದನ್ನು ಮೊಟ್ಟ ಮೊದಲು ಬಯಲು ಮಾಡಿದವರೂ ಇದೇ ವಿದ್ಯಾ ದಿನಕರ್‌ರವರು. ಹಾಗಾಗಿ ಹಿಂದುತ್ವ ಬ್ರಿಗೇಡ್‌ನ ಮುಖಂಡರಿಗೆ ವಿದ್ಯಾರನ್ನು ಕಂಡರೇನೇ ಭಾರೀ ಅಸಹನೆ. ಅದು ಈಗ ಸಾಮಾಜಿಕ ಜಾಲತಾಣಗಳ ಮುಖಾಂತರ ವೈಯಕ್ತಿಕ ನಿಂದನೆಯ ರೂಪದಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಸರಿಯಾದ ಮದ್ದೆಂದರೆ ಪೊಲೀಸರು ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಅಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು. ನಮ್ಮ ಬಿಲ್ಲವ ಯುವಕರೆಲ್ಲಾ ಹಾದಿ ತಪ್ಪಿದ ಪೋಲಿಗಳಲ್ಲ ಮತ್ತು ಎಲ್ಲ ಬಿಲ್ಲವರು ಸಂಘ ಪರಿವಾರದ ಮುಖಂಡರ ಕೈಗೊಂಬೆಗಳಲ್ಲ ಎಂದು ಸಮಸ್ತ ತುಳುನಾಡಿಗೆ ಒಮ್ಮೆ ಗೊತ್ತಾಗಲಿ. ವಿದ್ಯಾ ದಿನಕರ್ ಇವರಿಗೆ ತುಳುನಾಡಿನ ಎಲ್ಲಾ ಜಾತಿಯ ಪ್ರಗತಿಪರರ ಪೂರ್ಣ ಬೆಂಬಲವಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top