ಕರಾಚಿ: ಮಳೆ, ಚಳಿಗೆ 5 ಬಲಿ
ಕರಾಚಿ, ಜ. 14: ಪಾಕಿಸ್ತಾನದ ಕರಾಚಿಯಲ್ಲಿ ತೀವ್ರ ಚಳಿಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ.
ಕರಾಚಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಉಷ್ಣತೆ ಸಾಮಾನ್ಯಕ್ಕಿಂತ 3 ಡಿಗ್ರಿಯಷ್ಟು ಇಳಿದಿದೆ.
ದೇಶದ ಆರ್ಥಿಕ ರಾಜಧಾನಿಯಲ್ಲಿ ಮೂಲಭೂತ ನಾಗರಿಕ ಸೌಲಭ್ಯಗಳ ಕೊರತೆಯಿಂದಾಗಿ, ಭಾರೀ ಮಳೆ ಸಾಮಾನ್ಯ ಜನಜೀವನಕ್ಕೆ ಅಡಚಣೆಯುಂಟು ಮಾಡಿದೆ.ಲಕ್ಷಾಂತರ ನಾಗರಿಕರು ತೊಂದರೆಗೊಳಗಾಗಿದ್ದಾರೆ.ಹಲವಾರು ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯುತ್ತಿದೆ.
Next Story