ಕಲ್ಲಬೆಟ್ಟು ಶಾಲೆಗೆ ಡೆಸ್ಕ್, ಬೆಂಚು ಕೊಡುಗೆ
ಮೂಡುಬಿದಿರೆ, ಜು.12: ಇಲ್ಲಿಗೆ ಸಮೀಪದ ಕಲ್ಲಬೆಟ್ಟು ಸ.ಹಿ.ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ, ಇಂಜಿನಿಯರ್ ವಸಂತ ಶೆಟ್ಟಿ ಯಾನೆ ಪುರುಷೋತ್ತಮ ಶೆಟ್ಟಿ ಅವರು 80,000 ರೂ. ಮೌಲ್ಯದ 15 ಡೆಸ್ಕ್ ಮತ್ತು ಬೆಂಚುಗಳನ್ನು ಕೊಡುಗೆಯಾಗಿ ಹಸ್ತಾಂತರಿಸಿದರು.
ದಾನಿ ವಸಂತ ಶೆಟ್ಟಿ ಅವರು ತಾನು ಕಲಿತ ಶಾಲೆಗೆ ಈ ಹಿಂದೆಯೂ 25,000 ಮೌಲ್ಯದ ನೀರು ಶುದ್ಧೀಕರಣ ಘಟಕವನ್ನೂ ನೀಡಿದ್ದರು. ಅದರಂತೆ ಇದೀಗ ಶಾಲೆಗೆ ಡೆಸ್ಕ್ ಮತ್ತು ಬೆಂಚುಗಳನ್ನು ನೀಡಿದ್ದಾರೆ.
ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆಲಿದ್, ಸದಸ್ಯರಾದ ಉಷಾ, ದಿನೇಶ್ ಆಚಾರ್ಯ, ಲೀಲಾವತಿ, ಪುಷ್ಪಾಲತಾ ಪೈ, ಶಾಲಾ ಮುಖ್ಯ ಶಿಕ್ಷಕ ವಿನಯಕುಮಾರ್ ಮತ್ತು ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story