ಮುಂಬೈ ಮಾತು

08th Jan, 2018
ಪುಣೆಯ ಭೀಮಾ ಕೋರೆಗಾಂವ್‌ನಲ್ಲಿ ಕಾಣಿಸಿದ್ದ ಜಾತೀಯ ಹಿಂಸೆಯ ದೃಶ್ಯ ಮಹಾರಾಷ್ಟ್ರಾದ್ಯಂತ ವಿಸ್ತರಿಸಿ ಜನವರಿ 3ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಲಾಗಿದ್ದರೂ ಅಂದು ಮಧ್ಯಾಹ್ನದ ನಂತರ ಬಂದ್ ಹಿಂದೆಗೆಯಲಾಗಿತ್ತು. ಬಂದ್‌ನ ಘೋಷಣೆ ಮಾಡಿದವರು ಭಾರತೀಯ ರಿಪಬ್ಲಿಕ್‌ನ ಪಕ್ಷದ ಬಹುಜನ ಮಹಾಸಂಘದ ನೇತಾ ಪ್ರಕಾಶ್...
01st Jan, 2018
ಗಿಡಗಳನ್ನು ನೆಡುವ ಭರವಸೆ! ಮುಂಬೈ ಮಹಾನಗರದ ಪ್ರಖ್ಯಾತ ಸಂಜಯ ಗಾಂಧಿ ನೇಷನಲ್ ಪಾರ್ಕ್‌ನಲ್ಲಿ ಅಕ್ರಮವಾಗಿ ಜೋಪಡಿ ಕಟ್ಟಿ ಸರಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಬಳಸಿಕೊಳ್ಳುತ್ತಿದ್ದ ಸುಮಾರು 50 ಹೆಕ್ಟೇರ್‌ನಷ್ಟು ಜಮೀನನ್ನು ಅರಣ್ಯ ಇಲಾಖೆಯು ಇತ್ತೀಚೆಗೆ ತನ್ನ ವಶಕ್ಕೆ ಪಡೆದಿದೆ. ಇದೀಗ ಈ ಜಮೀನಿನಲ್ಲಿ...
25th Dec, 2017
ಮರಾಠಿ ಸಿನೆಮಾಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ!  ಮರಾಠಿ ಸಿನೆಮಾ ‘ದೇವಾ’ ಮತ್ತು ಗಚ್ಚೀ ಇವುಗಳಿಗೆ ಸಿನೆಮಾ ಥಿಯೇಟರ್‌ಗಳಲ್ಲಿ ಜಾಗ ಸಿಗದಿರುವ ಕಾರಣ ಮಹಾರಾಷ್ಟ್ರದ ರಾಜಕೀಯ ಪಕ್ಷಗಳಲ್ಲಿ ಬಿಸಿ ಕಾಣಿಸಿದೆ. ಈ ವಿಷಯವನ್ನು ಮುಂದಿಟ್ಟು ಮಹಾರಾಷ್ಟ್ರ ನವನಿರ್ಮಾಣ ಸೇನೆ, ಕಾಂಗ್ರೆಸ್ ಮತ್ತು ಬಾಲಿವುಡ್ ಜಗತ್ತಿನ ಖ್ಯಾತ...
18th Dec, 2017
ಗಿಡ ನೆಡುವ ದಾಖಲೆ! ಮಹಾರಾಷ್ಟ್ರದ ಅರಣ್ಯ ಇಲಾಖೆಯು 5.43 ಕೋಟಿ ಗಿಡಗಳನ್ನು ಈ ಬಾರಿ ರಾಜ್ಯಾದ್ಯಂತ ನೆಡುವ ಕಾರ್ಯಕ್ರಮವು ಯಶಸ್ವಿಯಾಗಿದ್ದು ಇದು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ. ಅರಣ್ಯ ಮಂತ್ರಿ ಸುಧೀರ್ ಮುನ್‌ಗಂಟೀವಾರ್ ಅವರು ಈ ವಿಷಯವಾಗಿ ಸಂತೋಷ ವ್ಯಕ್ತಪಡಿಸುತ್ತಾ...
11th Dec, 2017
93 ಪೊಲೀಸ್ ಠಾಣೆಗಳಲ್ಲೂ ಸೈಬರ್ ಸೆಲ್ ಮುಂಬೈಯಲ್ಲಿ ಸೈಬರ್ ಅಪರಾಧಗಳ ಘಟನೆಗಳು ಏರುತ್ತಿವೆ. ಇದನ್ನು ನಿಯಂತ್ರಿಸಲು ಕೊನೆಗೂ ಮುಂಬೈಯ ಎಲ್ಲಾ 93 ಪೊಲೀಸ್ ಠಾಣೆಗಳಲ್ಲೂ ಸೈಬರ್ ಸೆಲ್ ರಚಿಸಲು ಸರಕಾರ ನಿರ್ಧರಿಸಿದೆ. ಮುಂಬೈ ಪೊಲೀಸ್ ಕಮಿಶನರ್ ದತ್ತಾತ್ರೇಯ ಪಡ್‌ಸಲ್ಗೀಕರ್ ಈ ಮಾಹಿತಿ ನೀಡಿದರು....
04th Dec, 2017
ಎಲಿಫೆಂಟಾ : ಗುಹೆಯ ಹೊರಗೂ ಈಗ ಕತ್ತಲು! ಮುಂಬೈಗೆ ಬರುವ ಪ್ರವಾಸಿಗರಲ್ಲಿ ಅನೇಕರ ಒಂದು ಆಸೆ ಎಂದರೆ ಗೇಟ್‌ವೇ ಆಫ್ ಇಂಡಿಯಾದಿಂದ ಹತ್ತು ಕಿ.ಮೀ. ದೂರವಿರುವ ಎಲಿಫೆಂಟಾ ಕೇವ್ಸ್‌ಗೆ ಬೋಟ್‌ನಲ್ಲಿ ಪಯಣಿಸಿ ವೀಕ್ಷಿಸಿ ಬರುವುದು. ವಿಶ್ವ ಸ್ಮಾರಕ ದರ್ಜೆ ಪಡೆದಿರುವ ಎಲಿಫೆಂಟಾ ಕೇವ್ಸ್‌ನ...
27th Nov, 2017
ಮುಂಬೈ ಶಹರದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಚಿಂತಕ, ಸಾಹಿತಿ ರವಿ ರಾ. ಅಂಚನ್ ಅವರ ನಿಧನದ ಕೆಲವೇ ದಿನಗಳ ಅಂತರದಲ್ಲಿ ನವೆಂಬರ್ 12ರಂದು ಮತ್ತೊಬ್ಬ ಹಿರಿಯ ಕವಿ, ಸಾಹಿತಿಯನ್ನು ನಗರ ಕಳಕೊಂಡಿತು. ಅವರೇ ಹಾಡುವ ಕವಿ, ಶಿಕ್ಷಕ...
20th Nov, 2017
ಎನ್‌ಎಸ್‌ಡಿ ಮಾದರಿಯಲ್ಲಿ ಮಹಾರಾಷ್ಟ್ರ ಸ್ಕೂಲ್ ಆಫ್ ಡ್ರಾಮಾ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ರೀತಿಯಲ್ಲಿ ಮುಂಬೈಯಲ್ಲಿಯೂ ಮಹಾರಾಷ್ಟ್ರ ಸ್ಕೂಲ್ ಆಫ್ ಡ್ರಾಮಾ ಆರಂಭಿಸಲು ಮಹಾರಾಷ್ಟ್ರ ರಾಜ್ಯ ಸರಕಾರ ವಿಚಾರ ವಿಮರ್ಶೆ ಕೈಗೊಂಡಿದೆ. ಈ ಉದ್ದೇಶದಿಂದ ಸರಕಾರವು ಕಾರ್ಯ ಸಮಿತಿಯ ಸ್ಥಾಪನೆ ಮಾಡಿದೆ....
13th Nov, 2017
ನವೆಂಬರ್ 8, 2016 ರಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ 500 ಮತ್ತು 1,000 ಮುಖಬೆಲೆಯ ನೋಟುಗಳ ನಿಷೇಧದ ಸಂದೇಶ ನೀಡಿದಾಗ 125 ಕೋಟಿ ಜನಸಂಖ್ಯೆಯ ಭಾರತ ಒಂದು ಕ್ಷಣ ನಡುಗಿ ಬಿಟ್ಟಿತು. ಕಪ್ಪುಹಣವನ್ನು ಸಮಾಪ್ತಿಗೊಳಿಸುವುದಕ್ಕಾಗಿ ‘ದೊಡ್ಡ...
06th Nov, 2017
ಮುಂಬೈ ಬದುಕಿನ ವೈವಿಧ್ಯಮಯ ಕ್ಷೇತ್ರವನ್ನೆಲ್ಲಾ ಕನ್ನಡಿಗರು ಆವರಿಸಿಕೊಂಡಿದ್ದಾರೆ. ಕನ್ನಡಿಗರ ಸ್ವಾಭಿಮಾನಕ್ಕೆ, ಸಾಧನೆಗಳಿಗೆ ಸಾಕಷ್ಟು ಸಾಕ್ಷಿಗಳಿರುವಂತೆ ಕನ್ನಡಿಗರು ಹೆಂಡ, ಹೆಣ್ಣಿನ ಮಾರಾಟಗಾರರಾಗಿ ‘ಭಯೋತ್ಪಾದಕ’ ಗುರುಗಳಾಗುತ್ತಿರುವುದಕ್ಕೂ ಬೇಕಾದಷ್ಟು ಪುರಾವೆಗಳಿವೆ. ಹಿಂದಿನಿಂದಲೂ ಶ್ರಮ ಸಂಸ್ಕೃತಿ ಮತ್ತು ಸುಖ ಸಂಸ್ಕೃತಿಯ ವಲಯಗಳಲ್ಲಿ ಕನ್ನಡಿಗರಿದ್ದಾರೆ. ಸುಖಸಂಸ್ಕೃತಿಯ ಗುತ್ತಿಗೆದಾರ ಸಾಹಿತಿ...
30th Oct, 2017
ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ ‘ಡಿಜಿಟಲ್ ಇಂಡಿಯಾ’ ಮಹತ್ವಾಕಾಂಕ್ಷೆಯು ಮುಂಬೈ ವಿಶ್ವವಿದ್ಯಾನಿಲಯದ ಉಪಕುಲಪತಿ ಸಂಜಯ ದೇಶ್‌ಮುಖ್ ಅವರನ್ನು ಬಲಿ ಪಡೆಯಿತು. ಮುಂಬೈ ಯುನಿವರ್ಸಿಟಿಯ ನೂರೈವತ್ತು ವರ್ಷದ ಇತಿಹಾಸದಲ್ಲಿ ಮೊದಲ ಬಾರಿ ಉಪಕುಲಪತಿಯವರನ್ನು ವಜಾ ಮಾಡುವ ದೃಶ್ಯ ಕಾಣಿಸಿತು. ಮುಂಬೈ ವಿಶ್ವವಿದ್ಯಾನಿಲಯದ...
23rd Oct, 2017
ಮುಂಬೈಯ ವಿಶ್ವವಿಖ್ಯಾತಿಯ ಡಬ್ಬಾವಾಲಾ ಮತ್ತು ರೈಲ್ವೆ ಸ್ಟೇಷನ್‌ನಕೂಲಿಗಳಿಗಾಗಿ ಪುಸ್ತಕಗಳನ್ನು ಓದಲು ಅವಕಾಶ ಮಾಡುವ ದೃಶ್ಯವೊಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಜಯಂತಿ ದಿನದಿಂದ ಬೋರಿವಲಿ ರೈಲ್ವೆ ಸ್ಟೇಷನ್‌ನಲ್ಲಿ ಆರಂಭವಾಗಿದೆ. ಅರ್ಥಾತ್ ಪ್ರಯಾಣಿಕರಿಂದ ಸದಾ ತುಂಬಿ ತುಳುಕುವ ಈ ರೈಲ್ವೆ ಸ್ಟೇಷನ್‌ನ...
16th Oct, 2017
ಶಿವಸೇನೆಯ ಮಾತೋಶ್ರೀ ನಿವಾಸದಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಏಳರಲ್ಲಿ ಆರು ಕಾರ್ಪೊರೇಟರ್‌ಗಳು ಶಿವಸೇನೆ ಪಕ್ಷಕ್ಕೆ ಮರಳಿ ಬಂದರು. ಈ ಪಕ್ಷಾಂತರ ದೃಶ್ಯ ಇದೀಗ ಮುಂಬೈ ರಾಜಕೀಯ ರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ‘ಮನಸೇ’ಗೆ ಈ ಬಾರಿಯ ದೀಪಾವಳಿ ‘ಕಹಿ’ ಆಗಲಿದೆ. ಶಿವಸೇನೆ...
09th Oct, 2017
ಮುಂಬೈ ಮಹಾನಗರದ ಚೆಂಬೂರ್‌ನಲ್ಲಿರುವ ಆರ್.ಕೆ. ಸ್ಟುಡಿಯೋ ಕೇವಲ ಒಂದು ಫಿಲ್ಮ್ ಸ್ಟುಡಿಯೋ ಮಾತ್ರವಲ್ಲ. ಬಾಲಿವುಡ್‌ನ ಗ್ರೇಟೆಸ್ಟ್ ಶೋಮ್ಯಾನ್ ರಾಜ್ ಕಪೂರ್‌ರ ಒಂದು ಕನಸು ಕೂಡಾ ಆಗಿತ್ತು. ಈ ಕನಸಿನ ಮೂಲಕ ರಾಜ್‌ಕಪೂರ್ ಪರದೆಯಲ್ಲಿ ಸುಂದರ ಕತೆಗಳನ್ನು ನೀಡಿ ದರು. ಅದಕ್ಕೆ ಸಾಕ್ಷಿಗಳು...
02nd Oct, 2017
ಸೀಟಲ್ಲಿ ಕೂರುವುದಕ್ಕಾಗಿ ಟಿಕೆಟ್ ಹಣ ನೀಡಿ ನಿಲ್ಲುವುದಕ್ಕೂ ಜಾಗ ಸಿಗದಿದ್ದರೆ ಏನೆನ್ನಬೇಕು? ಜಾನುವಾರುಗಳಿಗಿಂತಲೂ ಹೀನಾಯ ಸ್ಥಿತಿಯಲ್ಲಿ ಪ್ರಯಾಣ ಮಾಡುತ್ತಿರುವ ಮುಂಬೈ ಲೋಕಲ್ ರೈಲು ಪ್ರಯಾಣಿಕರ ಬೆಳಗ್ಗಿನ ಮತ್ತು ಸಂಜೆಯ ದಿನನಿತ್ಯದ ದೃಶ್ಯ ಇದು. ಅನೇಕ ರೈಲ್ವೆಸ್ಟೇಶನ್‌ಗಳಲ್ಲಿ ರೈಲಿನಿಂದ ಇಳಿದು ಪ್ಲ್ಯಾಟ್‌ಫಾರ್ಮ್‌ನಿಂದ ಫುಟ್‌ಓವರ್‌ಬ್ರಿಡ್ಜ್...
25th Sep, 2017
ಮರಾಠಿ ಶಾಲೆಗಳ ಚರ್ಚೆಯಲ್ಲಿ ಕನ್ನಡದ ಶ್ಲಾಘನೆ! ಮರಾಠಿ ಮಾಧ್ಯಮದಲ್ಲಿ ಓದುತ್ತಿರುವ ಮಕ್ಕಳ ಪಾಲಕರ - ಹೆತ್ತವರ ಮಹಾಸಮ್ಮೇಳನ ಮುಂಬೈಯಲ್ಲಿ ನವಂಬರ್ 25 ಮತ್ತು 26ರಂದು ನಡೆಯಲಿದೆ. ಈ ಕುರಿತು ಪೂರ್ವಭಾವಿ ಸಭೆಯೊಂದು ಮಲಾಡ್‌ನಲ್ಲಿ ಜರುಗಿತು. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮರಾಠಿ ಮಾಧ್ಯಮದ ಮಕ್ಕಳ...
18th Sep, 2017
‘ಬುಲೆಟ್ ಟ್ರೈನ್ ಹಟಾವೋ, ಲೋಕಲ್ ಟ್ರೈನ್ ಸುಧಾರೋ’ ಇದು ಮುಂಬೈಯ ಇತ್ತೀಚಿನ ಸ್ಲೋಗನ್. ಶಿವಸೇನೆ ಸಹಿತ ಅನೇಕ ಆದಿವಾಸಿ ಸಂಘಟನೆಗಳು ಇದೀಗ ಆಂದೋಲನದತ್ತ ಮುಖಮಾಡಿವೆ. ಅತಿವೇಗದ ಅಹ್ಮದಾಬಾದ್-ಮುಂಬೈ ಟ್ರೈನ್ ಯೋಜನೆಯು ವಾಸ್ತವದಲ್ಲಿ ದೇಶವಾಸಿಗಳಿಗೆ ಆವಶ್ಯಕತೆ ಇಲ್ಲದ್ದು. ಈ ಯೋಜನೆಯಿಂದ ಯಾವ ಸಮಸ್ಯೆ...
11th Sep, 2017
ಕೇಂದ್ರದ ಮಂತ್ರಿಮಂಡಲ ಪುನರ್ ರಚನೆಯಾಗಿದೆ. 9 ಮಂದಿ ಮೋದಿ ಸಂಪುಟಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ. ಆದರೆ ಎನ್‌ಡಿಎಯ ಮಿತ್ರ ಪಕ್ಷ ಶಿವಸೇನೆಯನ್ನು ಮೋದಿ-ಶಾ ಜೋಡಿ ಉಪೇಕ್ಷೆ ಮಾಡಿದ್ದಾರೆ. ಇದು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎನ್ನುವ ಮಾತನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದೆ. ಶಿವಸೇನಾ...
04th Sep, 2017
ಮುಂಬೈ ಮಹಾನಗರ ಪ್ರಕೃತಿಯ ಹೊಡೆತದ ಎದುರು ಅಸಹಾಯಕ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ. 29 ಆಗಸ್ಟ್, 2017ರಂದು ಮತ್ತೊಮ್ಮೆ ಮುಂಬೈಯಲ್ಲಿ ನಾವೆಲ್ಲ ರಾತ್ರಿ ಕಚೇರಿಯಲ್ಲೇ ಮಲಗುವ ದೃಶ್ಯ ಪುನರಾವರ್ತನೆ ಆಯಿತು. ಇದೇ ದೃಶ್ಯ 26 ಜುಲೈ, 2005ರಂದೂ ಕಾಣಿಸಿತ್ತು. ಅಂದು ಬೆಳಗ್ಗೆ...
28th Aug, 2017
ಫಿಲ್ಮ್‌ಸಿಟಿಯಲ್ಲಿ ಕಾರ್ಮಿಕರ ಮುಷ್ಕರ! ಮೀರಾ ಭಾಯಂದರ್ ಮನಪಾ ಚುನಾವಣೆಯಲ್ಲಿ ಸೋತು ಶಿವಸೇನೆ ಮತ್ತೊಮ್ಮೆ ಕೈ ಕೈ ಹಿಸುಕಿಕೊಂಡಿದೆ. 2014ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಶಿವಸೇನೆ-ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಆರಂಭ ವಾಗಿದ್ದು ಈ ಮೂರು ವರ್ಷಗಳಲ್ಲಿ ಅದು ಅನೇಕ ಸಲ ಬಹಿರಂಗಗೊಂಡಿದೆ. ಶಿವಸೇನೆ...
21st Aug, 2017
ದಹಿಹಂಡಿ-ಗಣೇಶ ಚತುರ್ಥಿಗೆ ಜಿಎಸ್‌ಟಿ ಕಿರಿಕಿರಿ ಈ ಬಾರಿ ಕೃಷ್ಣ ಜನ್ಮಾಷ್ಠಮಿ, ಗೋವಿಂದಾ (ವಿಟ್ಲಪಿಂಡಿ) ಮತ್ತು ಸ್ವಾತಂತ್ರ್ಯ ದಿನ ಜೊತೆಯಾಗಿ ಬಂದಿದ್ದರಿಂದ ಮುಂಬೈಕರ್ ಇದನ್ನು ತಿರಂಗೋತ್ಸವ ಎಂದು ಕರೆದು ಸಂಭ್ರಮಿಸಿದ್ದಾರೆ. ಆದರೆ ದಹಿಹಂಡಿ (ವಿಟ್ಲಪಿಂಡಿ)ಯ ಆಯೋಜಕರಿಗೆ ಜಿಎಸ್‌ಟಿ ಕಿರಿಕಿರಿ ಹುಟ್ಟಿಸಿತು. ದಹಿಹಂಡಿ ಸಮನ್ವಯ ಸಮಿತಿಯ...
07th Aug, 2017
ಏಶ್ಯಾದ ಅತಿದೊಡ್ಡ ಮಹಾನಗರ ಪಾಲಿಕೆ ಮುಂಬೈ ಮನಪಾದ ಮುಖ್ಯಾಲಯವಿರುವ ಕಟ್ಟಡ ಆಗಸ್ಟ್ 1ರಂದು 124 ವರ್ಷ ಕಳೆದು 125ನೆ ವರ್ಷಕ್ಕೆ ಕಾಲಿಟ್ಟಿದೆ. ವಿಶ್ವ ಹೆರಿಟೇಜ್ ಕಟ್ಟಡಗಳಲ್ಲಿ ಇದಕ್ಕೂ ಸ್ಥಾನ ದೊರಕಿರುವ ಹೆಮ್ಮೆ. ಮೊನ್ನೆ ಈ ಪ್ರಯುಕ್ತ ವಿಶೇಷ ಸಮಾರಂಭವೂ ನಡೆಯಿತು. ಈ...
31st Jul, 2017
ಮತ್ತೊಂದು ಪತ್ರಿಕೆ ನೇಪಥ್ಯಕ್ಕೆ ಮುಂಬೈಯ ಕನ್ನಡ ಮಾಸಿಕಗಳಲ್ಲಿ ತನ್ನದೇ ಆದ ಮಹತ್ವವನ್ನು ಪಡೆದಿದ್ದ ಬಿಲ್ಲವ ಜಾಗೃತಿ ಬಳಗ ಪ್ರಕಟಿಸುತ್ತಿದ್ದ ‘ಗುರುತು’ ಪತ್ರಿಕೆ ನೇಪಥ್ಯಕ್ಕೆ ಸೇರಿದೆ. ಹದಿನಾರು ವರ್ಷಗಳ ಕಾಲ ತನ್ನ ಪ್ರಧಾನ ಲೇಖನಗಳ ಮೂಲಕ ಗಮನ ಸೆಳೆದಿರುವ ಕನ್ನಡದ ‘ಗುರುತು’ ಮಾಸಿಕ 2001ರ...
24th Jul, 2017
ಮುಂಬೈಯಲ್ಲಿ ಪ್ರಥಮ ಬಾರಿಗೆ ‘ರಕ್ತ’ ಸಂಬಂಧಿತ ಪ್ರಕರಣವೊಂದನ್ನು ‘ಆ್ಯಂಟಿ ಕರಪ್ಶನ್ ಬ್ಯೂರೋ’ ತನಿಖೆ ಮಾಡುತ್ತಿದೆ. ಶುಶ್ರೂಷೆಯ ಸಮಯ ರಕ್ತವು ರೋಗಿಗೆ ಅತೀ ಮಹತ್ವವಾಗಿದೆ. ರಕ್ತದ ಕೊಡುಕೊಳ್ಳುವಿಕೆಗಾಗಿ ‘ಬಿಪಿಒ’ (ಬ್ಲಡ್ ಟ್ರಾನ್ಸ್‌ಫ್ಯೂಷನ್ ಆಫೀಸರ್) ಪಾತ್ರ ಮಹತ್ವದ್ದು. ಬ್ಲಡ್‌ಬ್ಯಾಂಕ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ...
17th Jul, 2017
ಮುಂಬೈಯ ಭೈಖಲಾ ಮಹಿಳಾ ಜೈಲ್‌ನಲ್ಲಿ ಜೈಲ್ ಸಿಬ್ಬಂದಿಯಿಂದ ಥಳಿಸಲ್ಪಟ್ಟು ಮಂಜುಳಾ ಶೇಟ್ಯೆ ಎನ್ನುವ ಕೈದಿ ಸಾವನ್ನಪ್ಪಿದ ಘಟನೆ ಈಗ ಜೈಲುಗಳಲ್ಲಿ ಮಹಿಳಾ ಕೈದಿಗಳ ಶೋಚನೀಯ ಸ್ಥಿತಿಯನ್ನು ಬಹಿರಂಗ ಪಡಿಸಿದೆ. ಸಮಾಜ ಸೇವಕರು, ವಕೀಲರು ಮಾತ್ರವಲ್ಲ ಮಾಜಿ ಜೈಲು ಅಧಿಕಾರಿಗಳೂ ಈ ಘಟನೆಯನ್ನು...
10th Jul, 2017
ಸಂತ ಮಹಂತರು ಬಿಜೆಪಿ ಕಡೆಗೆ ಎನ್ನುವ ಮಾತು ಆಗಾಗ ಕೇಳಿ ಬರುತ್ತಿದೆ. ಇದೀಗ ಮುಂಬೈಯಲ್ಲಿ ಈ ವಿಷಯವಾಗಿ ಹೊಸ ದೃಶ್ಯವೊಂದು ಕಂಡು ಬಂದಿದೆ. ಕಾಂಗ್ರೆಸ್ ಪಕ್ಷ ಕೂಡಾ ತಾನೂ ಕಡಿಮೆ ಇಲ್ಲ ಎಂಬಂತೆ ಮುಂಬೈಯಲ್ಲಿ ಕಳೆದ ವಾರ ಸಂತ-ಮಹಂತ ಕಾಂಗ್ರೆಸ್‌ನ ಸ್ಥಾಪನೆಯನ್ನು...
03rd Jul, 2017
ಮುಂಬೈಯಲ್ಲಿ ಟೆಕ್ಸ್‌ಟೈಲ್ ಮ್ಯೂಸಿಯಂ ಮುಂಬೈಯಲ್ಲಿ ಟೆಕ್ಸ್‌ಟೈಲ್ ಮ್ಯೂಸಿಯಂ ನಿರ್ಮಿಸಲು ಮುಂಬೈ ಮನಪಾ ಉತ್ಸುಕವಾಗಿದೆ. ಕಾಲಾಚೌಕಿಯ ಯುನೈಟೆಡ್ ಮಿಲ್ ಕ್ರಮಾಂಕ ಎರಡು ಮತ್ತು ಮೂರರ ಜಮೀನನ್ನು ಎಂ.ಟಿ.ಸಿ. ಮೂಲಕ ಮನಪಾಗೆ ಹಸ್ತಾಂತರಿಸಲಾಗುತ್ತದೆ. ಈ ಜಮೀನನ್ನು ಟೆಕ್ಸ್‌ಟೈಲ್ ಮ್ಯೂಸಿಯಂ ನಿರ್ಮಾಣಕ್ಕಾಗಿ ಮನಪಾ ಪಡೆದುಕೊಂಡಿದೆ. ಈ ಮ್ಯೂಸಿಯಂ...
26th Jun, 2017
ಬೀಚ್ ಪ್ರವಾಸೋದ್ಯಮಕ್ಕೆ ಹೊಸ ನೀತಿ ಗೋವಾ ಅಂದಕೂಡಲೇ ಸಮುದ್ರ ಪರ್ಯಟನೆಗೆ ಎಲ್ಲೆಲ್ಲಿಂದಲೋ ಪ್ರವಾಸಿಗರು ಬರುತ್ತಾರೆ ಅನ್ನೋದು ನೆನಪಾಗುವುದು.. ಅದೇ ರೂಪದಲ್ಲಿ ಈಗ ಮಹಾರಾಷ್ಟ್ರದಲ್ಲೂ ಸಮುದ್ರ ಪರ್ಯಟನೆಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸರಕಾರವು ಹೊಸ ಬೀಚ್ ನೀತಿಯನ್ನು ಜಾರಿಗೆ ತರಲು ನಿರ್ಣಯಿಸಿದೆ. ರಾಜ್ಯದಲ್ಲಿ...
19th Jun, 2017
ಜೂನ್ 15ರಿಂದ ಮುಂಬೈಯಲ್ಲಿ ಶಾಲಾ ಮಕ್ಕಳು ಮತ್ತೆ ತರಗತಿಗಳಿಗೆ ಹಾಜರಾಗಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಆ ದಿನದಿಂದಲೇ ಸಮವಸ್ತ್ರ ಸಹಿತ ವಿವಿಧ ಶಾಲಾ ಪರಿಕರಗಳ ವಿತರಣೆ ಆರಂಭವಾಗಿದೆ. ಪ್ರತೀ ವರ್ಷ ಮಹಾನಗರ ಪಾಲಿಕೆ ತನ್ನ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ 27...
12th Jun, 2017
ಮುಂಬೈಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜೊತೆ ಜೊತೆಗೆ ಅವರ ಆರೋಗ್ಯದ ಕಡೆಗೂ ಗಮನ ನೀಡುತ್ತಿರುವ ಮುಂಬೈ ಮಹಾನಗರ ಪಾಲಿಕೆಯು ಈಗ ಪಕ್ಷಿಗಳಿಗೂ ಆಹಾರ ಸೌಲಭ್ಯದ ಜವಾಬ್ದಾರಿಯನ್ನೂ ವಹಿಸಿಕೊಂಡಿದೆ. ಪಕ್ಷಿಗಳಿಗೆ ತಿನ್ನಲು ಉಪಯೋಗವಾಗುವಂತಹ ಹಣ್ಣುಗಳ ಉದ್ಯಾನ ನಿರ್ಮಿಸುತ್ತಿದೆ ಹಾಗೂ ವಸತಿ ಕ್ಷೇತ್ರಗಳ...
Back to Top