ಕಾಡಂಕಲ್ಲ್ ಮನೆ

30th Nov, 2016
ಧಾರಾವಾಹಿ-46 ಅಜ್ಜಿಯ ಸಂಭ್ರಮ ನೋಡಿ ಐಸುಳ ಬಾಯಿ ಕಟ್ಟಿತ್ತು. ಅವಳು ತಲೆಯಾಡಿಸಿದಳು. ನೋಡು. ಇದು ನವರತ್ನಗಳ ಉಂಗುರ. ಇಂತಹ ಉಂಗುರ ಈಗ ಎಲ್ಲಿ ಹುಡುಕಿದರೂ, ಎಷ್ಟು ದುಡ್ಡು ಕೊಟ್ಟರೂ ಸಿಗಲಿಕ್ಕಿಲ್ಲ. ಇದು ನನ್ನ ಮದುವೆ ಸಂದರ್ಭದಲ್ಲಿ ತ್ಯಾಂಪಣ್ಣ ಉಡುಗೊರೆಯಾಗಿ ಕೊಟ್ಟದ್ದು. ಇದನ್ನು ನಾನು ನಿನ್ನ...
26th Nov, 2016
ಧಾರಾವಾಹಿ-45 ‘‘ಮದುವೆ ಏನಾಯಿತು?’’ ಅಜ್ಜಿಯ ಅನಿರೀಕ್ಷಿತ ಪ್ರಶ್ನೆಯಿಂದ ಅವನಿಗೆ ನಾಲಗೆ ಹೊರಳಲಿಲ್ಲ. ಅವನು ಅಮ್ಮನ ಮುಖ ನೋಡಿದ. ಅವಳು ಹೇಳು ಎಂಬಂತೆ ಸನ್ನೆ ಮಾಡಿದಳು. ‘‘ನಾನು ಹೇಳಿದ್ದು ಕೇಳಿಸಿತಾ. ಮದುವೆ ಏನಾಯಿತು?’’ ‘‘ಅಜ್ಜಿ... ಅದು... ನಾನು ಅಲ್ಲಿಗೆ ಹೋಗಿದ್ದೆ.’’ ‘‘ಎಲ್ಲಿಗೆ?’’ ‘‘ತಾಹಿರಾಳ ಮನೆಗೆ.’’ ‘‘ಯಾಕೆ?’’ ‘‘ಮದುವೆ ವಿಷಯ ಮಾತಾಡಲಿಕ್ಕೆ.’’ ‘‘ಯಾರ ಹತ್ತಿರ ಮಾತಾಡ್ಲಿಕ್ಕೆ’’ ‘‘ತಾಹಿರಾಳ ತಾಯಿಯ...
23rd Nov, 2016
ಧಾರಾವಾಹಿ-44 ಈ ಸಲ ಎರಡರಲ್ಲಿ ಒಂದು ಮುಗಿಸಿಯೇ ಬರುವುದೆಂದು ಆತ ತೀರ್ಮಾನಿಸಿಯೇ ಹೋಗಿದ್ದ. ಬಾಗಿಲು ತೆರೆದುಕೊಂಡಿತು. ತಾಹಿರಾಳ ತಾಯಿ ಬಾಗಿಲಿಗಡ್ಡವಾಗಿ ನಿಂತಿದ್ದರು. ಅವರು ಶೃಂಗಾರ ಮಾಡಿಕೊಂಡಿದ್ದರು. ಎಲ್ಲಿಗೋ ಹೊರಟು ನಿಂತಂತೆ ಕಂಡಿತು. ನಾಸರ್‌ನನ್ನು ಕಂಡದ್ದೇ ಅವರ ಮುಖದಲ್ಲಿ ಹೌದೋ ಅಲ್ಲವೋ ಎಂಬಂತೆ ಸಣ್ಣ ನಗುವಿನ...
19th Nov, 2016
ಧಾರಾವಾಹಿ-43 ಅಜ್ಜಿ ಒಪ್ಪಿದ್ದು ತಾಯಿ ಮಗ ಇಬ್ಬರಿಗೂ ಖುಷಿಯಾಗಿತ್ತು. ನಾಸರ್ ಮತ್ತೆ ನಾಲ್ಕು ದಿನ ತಾಹಿರಾಳಿಗಾಗಿ ಕಾದ. ಅವಳು ಬರಲಿಲ್ಲ. ಅವನಿಗೆ ಹೋಗಲೇಬೇಕಾಗಿತ್ತು. ಹೊರಟು ಬಿಟ್ಟಿದ್ದ. ಮತ್ತೆ 15 ದಿನ ಕಳೆದ ನಂತರ ಒಂದು ದಿನ ತಾಹಿರಾ ಪ್ರತ್ಯಕ್ಷಳಾಗಿದ್ದಳು. ಅಜ್ಜಿಗೆ ಐಸುಗೆ ಖುಷಿಯೇ ಖುಷಿ. ಆ...
12th Nov, 2016
ಧಾರಾವಾಹಿ-41 ತಿಂಗಳು ಕಳೆದರೂ ಅಜ್ಜನಿಗೆ ಮನೆಯ ಹೊರಗೆ ಕಾಲಿಡುವ ಧೈರ್ಯ ಬರಲಿಲ್ಲ. ಪ್ರತಿದಿನ ತಪ್ಪದೆ ಮಸೀದಿಗೆ ಹೋಗುತ್ತಿದ್ದವರು ಈಗ ಅತ್ತ ಸುಳಿಯುತ್ತಿರಲಿಲ್ಲ. ಇಡೀ ಊರು ಈಗ ಅಜ್ಜನ ಹಿಂದೆ ಆಡಿಕೊಳ್ಳತೊಡಗಿತ್ತು. ‘‘ಕಾಲೇಜಿಗೆ ಕಳಿಸಬೇಡ ಎಂದು ಇಡೀ ಊರೇ ಬುದ್ಧಿ ಹೇಳುವಾಗ ಅವನಿಗೆ ಅರ್ಥವಾಗಲಿಲ್ಲ. ಈಗ...
09th Nov, 2016
ಧಾರಾವಾಹಿ-40 ತ್ಯಾಂಪಣ್ಣ, ನಿನ್ನ ಅಮ್ಮನ, ನಿನ್ನ ಅಜ್ಜನ ರಕ್ಷಣೆಗೆ ನಿಂತಿದ್ದಾರೆ ಎಂದು ತಿಳಿದ ಮೇಲೆ ಊರಿನ ಎಲ್ಲರ ಎಲ್ಲ ರೀತಿಯ ಉಪಟಳವೂ ಬಂದಾಗಿತ್ತು. ವರ್ಷ ಕಳೆಯುವುದರೊಳಗೆ ನಿನ್ನ ಅಮ್ಮ ಕಾಲೇಜಿಗೆ ಹೋಗುವ ವಿಷಯವನ್ನೇ ಇಡೀ ಊರು ಮರೆತು ಬಿಟ್ಟಿತ್ತು. ನಿನ್ನಮ್ಮನ ಓದು ಎರಡು ವರ್ಷ...
05th Nov, 2016
ಧಾರಾವಾಹಿ-39 ಅವಳಿಗೆ ಬುದ್ಧಿ ಇಲ್ಲ. ಅವಳಿಗೇಂತ ಅಲ್ಲ, ಆ ಪ್ರಾಯದಲ್ಲಿ ಯಾರಿಗಾದರೂ ಹಾಗೆಲ್ಲ ಆಗುತ್ತದೆ. ಆಕಾಶಕ್ಕೆ ಏಣಿ ಇಡಲು ನೋಡುತ್ತಾರೆ. ನಿಮ್ಮ ಮಗಳು ನೀವು ಹೇಳಿದ ಹಾಗೆ ಕೇಳುವುದಿಲ್ಲ ಎಂದರೆ ಏನಿದರ ಅರ್ಥ. ಹೋಗಿ, ಇಂದೇ ಒಂದು ಒಳ್ಳೆಯ ತೀರ್ಮಾನ ತೆಗೆದುಕೊಳ್ಳಿ. ಆ...
02nd Nov, 2016
ಧಾರಾವಾಹಿ-39 ಮರುದಿನ ಬೆಳಗ್ಗೆ ಎಲ್ಲರೂ ಹೊರಟು ಬಿಟ್ಟಿದ್ದರು. ಇಡೀ ಮನೆ ಬಣಗುಟ್ಟತೊಡಗಿತ್ತು. ಐಸುಳ ಮುಖದಲ್ಲಿ ಕಳೆಯೇ ಇರಲಿಲ್ಲ. ಅಜ್ಜಿ ಸುಮ್ಮನೆ ಬಿದ್ದುಕೊಂಡಿದ್ದರು. ಆದರೆ ನಾಸರ್ ಮಾತ್ರ ನೆರಳಿನಂತೆ ಅವಳ ಹಿಂದೆಯೇ ಸುತ್ತತೊಡಗಿದ್ದ. ಏನೋ ಮಾತನಾಡುವ ತವಕ ಅವನ ಮುಖದಲ್ಲಿ್ದುದನ್ನು ಅವಳು ಗಮನಿಸಿದ್ದಳು. ಅಂದು ಮಧ್ಯಾಹ್ನ...
27th Oct, 2016
ಧಾರಾವಾಹಿ-37 ‘‘ಒಡೆಯಾ, ನಾನು ನಿಮಗೆ ಖುಷಿಯಾಗುವಂತ ಒಂದು ಸುದ್ದಿ ತಂದಿರುವೆ’’ ಎಂದ. ‘‘ಎಂತದು ಅಂಹ ಖುಷಿಯ ಸುದ್ದಿ’’ ಶೇಖ್ ಕೇಳಿದ. ‘‘ಯಜಮಾನರೇ, ನನಗೆ ಯಕ್ಷಿಣಿ ವಿದ್ಯೆ ಕಲಿತ ಒಬ್ಬಳು ಮಗಳಿದ್ದಾಳೆ. ನೀವು ನಿನ್ನೆ ಕೊಟ್ಟ ಕರುವನ್ನು ನಾನು ಮನೆಗೆ ಹೊಡೆದುಕೊಂಡು ಹೋದೆ. ಅವಳು ಈ ಕರುವನ್ನು...
22nd Oct, 2016
ಧಾರಾವಾಹಿ-36 ‘‘ಮಾಮಿ ಯಾರೋ ಬಂದರು!’’ ‘‘ನಿನ್ನ ದೊಡ್ಡಮ್ಮ, ಅವರ ಮಕ್ಕಳಿರಬೇಕು.’’ ತಾಹಿರಾ ಮುಜುಗರಕ್ಕೊಳಗಾದವಳಂತೆ ಮಾಮಿಯ ಹಿಂದೆ ಸರಿದಳು. ಅವರೆಲ್ಲ ತನ್ನನ್ನು ಯಾವ ರೀತಿ ಸ್ವೀಕರಿಸಬಹುದು. ಅವರನ್ನು ಹೇಗೆ ಎದುರಿಸುವುದು ಎಂದು ತಾಹಿರಾ ಗೊಂದಲಕ್ಕೊಳಗಾಗಿದ್ದಳು. ಅವಳ ಮುಖ ಬಿಳುಚಿಕೊಂಡಿತ್ತು. ‘‘ನೀನೇನು ಇಲ್ಲಿ ಅವಿತುಕೊಂಡಿದ್ದು, ತಗೋ ಈ ಚೀಲಗಳನ್ನೆಲ್ಲ ಒಳಗಿಡು’’...
19th Oct, 2016
--ಬಲಿದಾನದ ಕತೆಯ ಮೆಲುಕು-- ಒಂದು ದಿನ ಅವರಿಗೊಂದು ಕನಸು ಬೀಳುತ್ತದೆ. ಆ ಕನಸಿನಲ್ಲಿ ದೇವ ದೂತನೊಬ್ಬ ಬಂದು ‘‘ಇಬ್ರಾಹೀಮರೇ, ನೀವು ನಿಮ್ಮ ಪ್ರೀತಿಯ ಕಂದನನ್ನೂ ನಿಮ್ಮ ಪ್ರೀತಿಯ ಪತ್ನಿಯನ್ನೂ ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಬರಬೇಕೆಂದು ಅಲ್ಲಾಹನ ಆಜ್ಞೆಯಾಗಿದೆ’’ ಎಂದು ಹೇಳಿದರು. ಇಬ್ರಾಹೀಮರಿಗೆ ತಟ್ಟನೆ...
12th Oct, 2016
--ಹೊಸ ಉಡುಗೆಗೆ ನಾಚಿಕೆಯ ಮೆರುಗು!-- ‘‘ಅಜ್ಜೀ, ಹೇಗಿದ್ದಾಳೆ ನಿಮ್ಮ ಮೊಮ್ಮಗಳು?’’ ‘‘ಹೇಗಿದ್ದಾಳೆ ಎಂದರೆ?’’ ಅಜ್ಜಿ ಕಣ್ಣು ಮಿಟುಕಿಸುತ್ತಾ ಕೇಳಿದರು. ‘‘ಮೊಮ್ಮಗಳು ಇಷ್ಟವಾದಳಾಂತ.’’ ‘‘ಹೂಂ, ಅವಳು ನನ್ನ ಮೊಮ್ಮಗಳಲ್ಲವಾ’’ ಅಜ್ಜಿಯ ಮಾತಿನಲ್ಲಿ ಹೆಮ್ಮೆಯಿತ್ತು. ‘‘ಅಜ್ಜಿಗೆ ಈಗ ಊಟ ಮಾಡಲಿಕ್ಕೆ ಮೊಮ್ಮಗಳು ಬೇಕು. ತಿಂಡಿ ತಿನ್ನಲಿಕ್ಕೆ ಮೊಮ್ಮಗಳು ಬೇಕು....
08th Oct, 2016
-- ಮತ್ತೆ ಮದುಮಗಳ ಅಲಂಕಾರದಲ್ಲಿ...-- ‘‘ನಾನು ಬರ್ತೇನೆ. ಬೆಳಗ್ಗೆ ಹೊರಡುತ್ತೇನೆ. ನೀವು ಒಳ್ಳೆಯವರು. ನಿಮಗೆ ಒಳ್ಳೆಯ ಮನಸ್ಸಿದೆ. ದೇವರು ನಿಮಗೆ ಒಳ್ಳೆಯದನ್ನೇ ಮಾಡುತ್ತಾನೆ. ಇದು ನನ್ನ ಹಾರೈಕೆ. ಎಲ್ಲಿದ್ದರೂ, ಯಾವ ಸ್ಥಿತಿಯಲ್ಲಿದ್ದರೂ ನಾನು ನಿಮಗಾಗಿ ಪ್ರಾರ್ಥಿಸುತ್ತೇನೆ’’ ನಾನು ಹೆಜ್ಜೆ ಮುಂದಿಟ್ಟೆ. ‘‘ಫಾತಿಮಾ...’’ ಮತ್ತೆ...
05th Oct, 2016
ಧಾರವಾಹಿ-31 ‘ಹೀಗೆ ನಾಲ್ಕು ತಿಂಗಳು ಹತ್ತು ದಿನ ಕಳೆಯಿತು. ನನ್ನ ಇದ್ದತ್‌ನ ದಿನಗಳು ಮುಗಿದಿತ್ತು. ಅಂದು ಬೆಳಗ್ಗೆ ಮತ್ತೆ ಮನೆಯಲ್ಲಿ ಹತ್ತಿರದ ಬಂಧುಗಳು, ನೆರೆಹೊರೆಯವರು ಸೇರಿದರು. ನನ್ನಮ್ಮ ಸ್ನಾನ ಮಾಡಿಸಿದರು. ಹೊಸ ಜರಿಸೀರೆ ಉಡಿಸಿದರು. ಇದ್ದತ್‌ನ ಕಾರ್ಯಕ್ರಮಕ್ಕಾಗಿ ನಿನ್ನಜ್ಜ ನನಗೆ ಹೊಸ ಸೀರೆ ತಂದಿದ್ದರು. ನನ್ನ...
01st Oct, 2016
ಧಾರವಾಹಿ- 30 ಹೀಗೆ ಮೂರು ದಿನ ಕಳೆಯಿತು. ಆ ಮೂರು ದಿನವೂ ನನಗೆ ಊಟ, ತಿಂಡಿ ಎಲ್ಲ ಕೋಣೆಗೆ ಬರುತ್ತಿತ್ತು. ಇಡೀ ಮನೆ ತುಂಬಾ ಜಿಂಕೆಯಂತೆ ಓಡಾಡುತ್ತಿದ್ದ ನಾನಾಗ ಕೈದಿಯಂತಾಗಿ ಬಿಟ್ಟಿದ್ದೆ. ನನ್ನ ಭಾವನೆಗಳೆಲ್ಲ ಸತ್ತು ಹೋಗಿತ್ತು. ಅಂದು ನನ್ನ ಗಂಡನ ಮೂರನೆ ದಿನದ...
28th Sep, 2016
‘‘ಸಾಕು, ನಿದ್ದೆ ಮಾಡಿದ್ದು ಏಳು. ಹೆಣ್ಣು ಮಕ್ಕಳು ಸೂರ್ಯ ಹುಟ್ಟಿದ ಮೇಲೆ ಹೀಗೆ ನಿದ್ದೆ ಮಾಡಬಾರದು, ಏಳು.’’ ತಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟಾಗ ಬೊಚ್ಚು ಬಾಯಿ ಅಗಲಿಸಿ ಅಜ್ಜಿ ನಗುತ್ತಾ ಕೋಲೂರಿ ನಿಂತಿದ್ದರು. ತಾಹಿರಾ ಮಲಗಿದಲ್ಲಿಯೇ ನಕ್ಕಳು. ಅಜ್ಜಿ ಖುಷಿಯಾಗಿರುವುದು ಕಂಡು ಅವಳಿಗೆ ಸಂತೋಷವಾಗಿತ್ತು. ‘‘ಏಳು...
24th Sep, 2016
ಧಾರಾವಾಹಿ-28 ನಾನು ಅವರ ತಲೆಯನ್ನು ನನ್ನ ಹೆಗಲಿಗೆ ಒರಗಿಸಿ ಅಪ್ಪಿಹಿಡಿದೆ. ಕೈಯಿಂದ ಬಾಯಿ ಒರೆಸಿದೆ. ರಕ್ತ! ಬಾಯಿ ತುಂಬಾ ರಕ್ತ! ನಾನು ಭಯದಿಂದ ಕಂಪಿಸಿದೆ. ಹೊರಗೆ ಕಾರು ಬಂದು ನಿಂತ ಸದ್ದು. ನಿನ್ನಜ್ಜ ಒಳಗೆ ಬಂದವರು ರಕ್ತ ನೋಡಿ ಕಂಗಾಲಾಗಿ ಬಿಟ್ಟಿದ್ದರು. ಅವರ...
21st Sep, 2016
‘‘ಮಧ್ಯಾಹ್ನ ಊಟಕ್ಕೆ ಬನ್ನಿ’’ ನಾನು ಅವರ ಬಳಿ ಹೋಗಿ ಹೇಳಿದೆ. ಅವರು ಒಂದು ಕ್ಷಣ ನಿಂತರು. ಅವರ ಮುಖದ ತುಂಬಾ ನಗು. ಸಂತಸ. ‘‘ಬರ್ತೇನೆ, ವಿಶೇಷ ಅಡುಗೆ ಆಗಬೇಕು... ಏನು ಮಾಡ್ತೀ?’’ ಅವರು ಹುಬ್ಬೇರಿಸಿ ಕೇಳಿದರು. ನನಗೆ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು. ‘‘ನಿಮಗೇನು...
17th Sep, 2016
ಧಾರವಾಹಿ26 ಅಂದು ನಾನು ನನ್ನ ಗಂಡನನ್ನು ಸ್ನಾನ ಮಾಡಿಸಿ, ನನ್ನ ಭುಜವನ್ನೇ ಆಧಾರವಾಗಿಸಿ ನಡೆಸಿಕೊಂಡು ಬಂದು ಚಾವಡಿಯಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸಿ ತಲೆ ಒರೆಸುತ್ತಿದ್ದೆ. ಇದ್ದಕ್ಕಿದ್ದಂತೆ ಗಂಡ ನನ್ನ ಸೊಂಟವನ್ನು ಬಳಸಿ ತಬ್ಬಿಕೊಂಡರು. ನಾನು ಬಿಡಿಸಿಕೊಳ್ಳಲಿಲ್ಲ. ಯಾಕೆಂದರೆ ಅವರು ನನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದರು. ಎಷ್ಟೋ...
14th Sep, 2016
--ಅಜ್ಜನ ಮೇರು ವ್ಯಕ್ತಿತ್ವದ ಆ ನೆನಪು...-- ‘‘ಅಜ್ಜನ ಹೆಂಡತಿಗೆ ಏನಾಗಿತ್ತು ಅಜ್ಜಿ...’’ ತಾಹಿರಾ ಕಣ್ಣ ರೆಪ್ಪೆಬಡಿಯಲು ಮರೆತವಳಂತೆ ಕುಳಿತು ಕೇಳಿದಳು. ‘‘ನೀನು ಸುಮ್ಮನೆ ಮಧ್ಯದಲ್ಲಿ ಬಾಯಿ ಹಾಕಬಾರದು. ನಾನು ಹೇಳುತ್ತೇನೆ. ನೀನು ಬಾಯಿ ಮುಚ್ಚಿ ಕುಳಿತು ಕೇಳಬೇಕು’’ ತನ್ನ ನೆನಪುಗಳನ್ನು ತುಂಡರಿಸಿದ ಮೊಮ್ಮಗಳ...
10th Sep, 2016
ಅಲ್ಲೊಂದು ಮುಳಿ ಹುಲ್ಲಿನ ಮನೆ. ಮನೆಯಲ್ಲಿ ನಾನು, ತಂದೆ, ತಾಯಿ, ತಂಗಿ ಒಟ್ಟು ನಾಲ್ವರು. ನಮ್ಮದು ತುಂಬಾ ಬಡ ಕುಟುಂಬ. ಮನೆ ಪಕ್ಕ ತಂದೆಗೆ ಒಂದು ಕಟ್ಟಿಗೆ ಮಾರುವ ಡಿಪೋ ಇತ್ತು. ಟ್ಟಿಗೆ ಡಿಪೋ ಎಂದರೆ ಒಡೆದ ಕಟ್ಟಿಗೆಯಲ್ಲ. ಸುಮಾರು ಮೂರು...
07th Sep, 2016
--ಅಜ್ಜಿ-ಮೊಮ್ಮಗಳ ‘ಪ್ರೇಮ’ ಸಂವಾದ-- ‘‘ಬರ್ತಾರೆ... ಬರ್ತಾರೆ... ಈವತ್ತು ಯಾವ ವಾರ?’’ ‘‘ಬುಧವಾರ’’ ‘‘ನಾಳೆ ಬರ್ತಾರೆ... ನಾಳೆ’’ ‘‘ಅದೇನು ನಾಳೆ ಬರುವುದು?’’ ‘‘ನಾಳೆ ಒಳ್ಳೆಯ ದಿನ ಅಲ್ಲವಾ?’’ ‘‘ನಾಳೆ ಎಂತದು ಒಳ್ಳೆಯ ದಿನ?’’ ‘‘ನಾಳೆ ಶುಕ್ರವಾರ ರಾತ್ರಿ ಅಲ್ಲವಾ? ಪೆದ್ದಿ, ನಿನಗೆ ಅಷ್ಟೂ ಗೊತ್ತಿಲ್ಲವಾ?’’ ಅಜ್ಜಿ ಹುಸಿ ಕೋಪ ತೋರಿಸಿದರು. ‘‘ಅದೇನು ಶುಕ್ರವಾರ ರಾತ್ರಿ...
03rd Sep, 2016
--ಅಜ್ಜಿಯ ಕಲಂಬಿಯಲ್ಲಿದ್ದ ಐಶ್ವರ್ಯ!-- ಭಾಗ - 3 ಮೊಮ್ಮಗಳು ಬಂದ ಮೇಲೆ ಅಜ್ಜಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದರು. ನಡೆಯಲು ಈಗ ಅವರಿಗೆ ಕೋಲಿನ ಅಗತ್ಯವಿರಲಿಲ್ಲ. ಮೊದಲಿನಂತೆ ಮಾತು ಮಾತಿಗೂ ಕೋಪ ಬರುವುದಿಲ್ಲ. ಹಟ ಮಾಡುತ್ತಿರಲಿಲ್ಲ. ಈಗ ಅವರಿಗೆ ಮೊಮ್ಮಗಳೆಂದರೆ ಪ್ರಾಣ. ಬೆಳಗ್ಗೆ ಎದ್ದ ತಕ್ಷಣ...
31st Aug, 2016
--ಅಳಿಯನ ಮನೆಯ ಆ ಹೆಣ್ಣು...-- ‘‘ಊಟ ಮಾಡಿ ಹೋಗಿ...’’ ಆ ಹೆಣ್ಣು ಅವರ ಬಳಿ ಬಂದು ಹೇಳಿತು. ಅವಳ ಕಣ್ಣಲ್ಲಿ ನೀರಿತ್ತು. ‘‘ಇವಳು ಸಾರಾ. ಇವಳಿಗೆ ತಂದೆ, ತಾಯಿ, ಬಂಧುಗಳೂಂತ ಯಾರೂ ಇಲ್ಲ. ಅನಾಥೆ...’’ ಮೌಲವಿ ಅಜ್ಜನ ಹಿಂದೆ ನಿಂತು ಹೆಂಡತಿಯನ್ನು ಪರಿಚಯಿಸಿದರು. ಅವರ...
27th Aug, 2016
--ದ್ರೋಹಕ್ಕೆ ಚೇತರಿಸದ ಮನೆ-ಮಗಳು -- ಅಜ್ಜಿ, ಆಕಾಶವೇ ಕಳಚಿ ತಲೆ ಮೇಲೆ ಬಿದ್ದವರಂತೆ ಕಂಗಾಲಾಗಿ ಬಿಟ್ಟಿದ್ದರಂತೆ. ‘‘ಜಮೀಲಾ ಹೇಳಿದ್ದು ನಿಜವಾ...?’’ ಅಳಿಯನ ಮುಂದೆ ಕುಳಿತು ಅಜ್ಜ ಶಾಂತವಾಗಿ ಕೇಳಿದರು. ಮೌಲವಿ ಮಾತನಾಡಲಿಲ್ಲ. ಅವರ ಹಣೆ ಬೆವರತೊಡಗಿತ್ತು. ‘‘ನಾನು ಮಾತನಾಡುತ್ತಿರುವುದು ಕೇಳಿಸ್ತಾ ಇದೆಯಾ ನಿನಗೆ... ಜಮೀಲಾ ಹೇಳಿದ್ದು ನಿಜವಾ...’’...
24th Aug, 2016
--ದೊಡ್ಡಮ್ಮನ ಬದುಕಲ್ಲಿ ಬಿರುಗಾಳಿ-- ಮದುವೆಯಾದ ಮೇಲೆ, ಹಸನ್ ಮೌಲವಿ ಈ ಮನೆಗೆ ಅಳಿಯನಾಗಿ ಬಂದ ಮೇಲೆ ಈ ಮನೆಯ, ನಿನ್ನಜ್ಜನ ಗೌರವ ಇನ್ನೂ ಹೆಚ್ಚಾಯಿತು. ಮನೆಗೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಾಯಿತು. ನಿನ್ನ ದೊಡ್ಡಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಖ್ಯಾತ ಪಂಡಿತ, ಎಲ್ಲರೂ ಗೌರವಿಸುವ...
20th Aug, 2016
--ದೊಡ್ಡಮ್ಮನ ವೈಭವದ ಮದುವೆ-- ‘‘ಎಲ್ಲ ಗಂಡಸರು ಹಾಗಿರ್ತಾರಾ? ಐದು ಬೆರಳು ಒಂದೇ ತರ ಇದೆಯಾ... ಕೆಲವರು ಇರ್ತಾರೆ... ಸಹಿಸಬೇಕು... ಬೇರೆ ದಾರಿ ಇಲ್ಲ...’’ ‘‘ನನ್ನ ಗಂಡ ನೋಡು... ಒಂದು ದಿನ ನನ್ನ ನೋಯಿಸಿದವರಲ್ಲ... ನನ್ನ ಕಣ್ಣಿಂದ ಒಂದು ತೊಟ್ಟು ಕಣ್ಣೀರು ಬೀಳಿಸಿದವರಲ್ಲ... ಎಲ್ಲ ಅವರವರು...
17th Aug, 2016
--ದೊಡ್ಡಮ್ಮನ ಕಣ್ಣಲ್ಲಿ ನೋವಿನ ಆಳ-- ‘‘ನಾನು ಹೋಗುವುದಿಲ್ಲ...ನೀವೆಷ್ಟು ಹೇಳಿದರೂ ನಾನು ಹೋಗುವುದಿಲ್ಲ..., ನನಗೆ ಅವರ ಮುಖ ನೋಡಲು ಇಷ್ಟವಿಲ್ಲ...’’ ಅಪರಿಚಿತ ಧ್ವನಿ. ‘‘ಯಾಕೆ ಹೋಗುವುದಿಲ್ಲ...ಅವನು ನಿನ್ನ ಗಂಡ ಅಲ್ಲವಾ... ಅವನ ಕೊನೆಯ ದಿನಗಳಲ್ಲಾದರೂ ನಿನಗೆ ಅವನನ್ನು ಕ್ಷಮಿಸಬಾರದಾ...’’ ಅಜ್ಜಿಯ ಮಾತು. ಮಧ್ಯಾಹ್ನ ಊಟ ಮಾಡಿ ಮಲಗಿದ್ದ...
13th Aug, 2016
--ಆಪತ್ತಿನಿಂದ ರಕ್ಷಿಸಿದ ಗೆಳೆಯ-- ಎಲ್ಲ ಜಾತಿಯ ಮಕ್ಕಳನ್ನು ಒಟ್ಟಿಗೆ ಸಾಲಾಗಿ ಕೂರಿಸಿ ಹೊಟ್ಟೆ ತುಂಬಾ ನಾನು- ಅಜ್ಜ ಬಡಿಸುತ್ತಿದ್ದೆವು. ಊಟ ಆದ ಮೇಲೆ ಗಂಧವನ್ನು ತೇದಿ ಎಲ್ಲ ಮಕ್ಕಳ ಗಲ್ಲದ ಕೆಳಭಾಗಕ್ಕೆ ಬೆರಳಲ್ಲಿ ನಾಮದಂತೆ ಹಚ್ಚುತ್ತಿದ್ದೆವು. ಆನಂತರ ಎಲ್ಲ ಮಕ್ಕಳಿಗೆ ಒಂದೊಂದು ನಾಣ್ಯವನ್ನು...
Back to Top