ನನ್ನೂರು ನನ್ನ ಜನ

13th Mar, 2018
ಕಳೆದ 2016ರ ಆಗಸ್ಟ್ 17ರಿಂದ ಪ್ರತೀ ಬುಧವಾರ ನಿಮ್ಮ್‌ಂದಿಗೆ ನಾನು ಹುಟ್ಟಿ ಬೆಳೆದ, ಬಾಳಿದ, ಬಾಳುತ್ತಿರುವ ಊರುಗಳನ್ನು ಅಲ್ಲಿನ ಜನಪದರ ಜೊತೆಗೆ ಅವರು ನನ್ನವರಾದ ಬಗ್ಗೆ, ಊರುಗಳೆಲ್ಲಾ ನನ್ನೂರು ಆದ ಬಗ್ಗೆ ಅನುಭವಗಳನ್ನು ನನ್ನ ಗ್ರಹಿಕೆಯಲ್ಲಿ ಗ್ರಹಿಸಿ ಹಂಚಿಕೊಂಡಿದ್ದೇನೆ. ಒಂದರ್ಥದಲ್ಲಿ ಋಣಭಾರವನ್ನು...
06th Mar, 2018
‘ಲೋಹಿತ್‌ನಗರ’ ಎಂದು ಕಂಟ್ರಾಕ್ಟರರೇ ನಾಮಕರಣ ಮಾಡಿದ್ದು ಮಹಾನಗರ ಪಾಲಿಕೆಯಿಂದ ಅನುಮೋದನೆಯೂ ಆಗಿರಬಹುದು. ಈ ಬಡಾವಣೆಗೆ ಬಂದ ನಾವೆಲ್ಲರೂ ಹೊಸಬರೇ. ಆದರೆ ನನಗೆ ಸ್ಥಳೀಯವಾದ ದಡ್ಡಲ್‌ಕಾಡು, ಗೊಲ್ಲಚ್ಚಿಲ್, ನೆಕ್ಕಿಲಗುಡ್ಡೆ, ದೇರೆಬೈಲು ಇವುಗಳೆಲ್ಲ ಪರಿಚಿತವಾದ್ದರಿಂದ ನಾವಿದ್ದ ನಿವೇಶನ ಗೊಲ್ಲಚ್ಚಿಲ್ ಆಗಿದ್ದುದರಿಂದ ನಮ್ಮ ವಿಳಾಸದಲ್ಲಿ ಅದನ್ನೇ...
27th Feb, 2018
ಕೃಷ್ಣಾಪುರದ ಮನೆ ಮಾರಾಟವಾದ ಬಳಿಕ ಅಷ್ಟೊಂದು ಮೊತ್ತದ ನಿರ್ವಹಣೆ ತಿಳಿಯದ ನಾವು ಸಾಲ ಇಟ್ಟುಕೊಂಡು ನಿದ್ದೆಗೆಡುವ ಬದಲು ಜೀವವಿಮಾ ನಿಗಮದ ಸಾಲವನ್ನು ತೀರಿಸುವುದೇ ಸೂಕ್ತವೆಂದು ನಿರ್ಧರಿಸಿ ಸಾಲ ತೀರಿಸಿದೆವು. ಆಗ ಸಾಲ ನೀಡಿದ ಅಧಿಕಾರಿಯವರೇ ಇದ್ದುದರಿಂದ ಯಾಕೆ ಇಷ್ಟು ಬೇಗ ಸಾಲ...
20th Feb, 2018
ಮಂಗಳೂರಿನ ನಮ್ಮ ಹೊಸ ಮನೆಯಿರುವ ಬಡಾವಣೆಗೆ ಕಂಟ್ರಾಕ್ಟರ್ ಬಿ.ಆರ್.ಆಚಾರ್‌ರವರು ತಮ್ಮ ಮಗ ಲೋಹಿತ್‌ನ ಹೆಸರಿನೊಂದಿಗೆ ಲೋಹಿತ್ ನಗರ ಎಂದು ಹೆಸರು ಇಟ್ಟಿದ್ದರು. ಈ ಹೆಸರು ಕಾರ್ಪೊರೇಶನ್‌ನಲ್ಲಿ ದಾಖಲೀಕರಣದೊಂದಿಗೆ ಅನುಮತಿ ಪಡೆದಿತ್ತೇ ಇಲ್ಲವೇ ಎಂಬ ಪ್ರಶ್ನೆ ಆಗ ನಮಗೆ ಗೋಚರಿಸಿರಲಿಲ್ಲ. ಈಗ ಹೀಗೆ...
13th Feb, 2018
ನಮ್ಮ ಬಡವಾಣೆಯಲ್ಲಿ ಮನೆಗಳು ಸಿದ್ಧಗೊಳ್ಳುತ್ತಿದ್ದಂತೆಯೇ ಅನೇಕ ಮನೆಗಳ ಮಾಲಕರು ಅವುಗಳನ್ನು ಬಾಡಿಗೆಗೆ ಕೊಟ್ಟದ್ದೂ ಇದೆ. ಯಾಕೆಂದರೆ ಅವರೆಲ್ಲಾ ದೂರದ ಊರುಗಳಲ್ಲಿದ್ದು ಉದ್ಯೋಗಿಗಳಾಗಿದ್ದರು. ತಮ್ಮ ಸ್ವಂತ ಊರಲ್ಲಿ ನಿವೃತ್ತಿಯಾದ ಮೇಲೆ ಸ್ವಂತ ಸೂರು ಒಂದಿರಲಿ ಎಂಬ ಆಸೆಯಿಂದ ಮನೆ ಕಟ್ಟಿಕೊಂಡವರು. ಬಹುಶಃ ಆಗ...
06th Feb, 2018
 ನಾವು ಮಂಗಳೂರಲ್ಲಿ ಮನೆ ಕಟ್ಟಿರುವ ವಿಷಯ ನನ್ನೂರಿನಲ್ಲಿ ಸುದ್ದಿ ಆಯಿತು. ಮಂಗಳೂರಲ್ಲಿ ಮನೆ ಕಟ್ಟಿಕೊಂಡರೆ ಈ ಮನೆ ಹಿತ್ತಲನ್ನು ಮಾರಾಟ ಮಾಡಬಹುದು ಎಂಬುದನ್ನು ಯಾರಾದರೂ ಊಹಿಸಿದರೆ ಅದು ಸಹಜವೇ. ಈ ಹಿನ್ನೆಲೆಯಲ್ಲಿ ಈ ಊರಿನಲ್ಲಿ ತನ್ನ ವೃತ್ತಿಯಿಂದಾಗಿ ಮನೆ ಹಿತ್ತಲು ಕೊಂಡು...
30th Jan, 2018
ನನ್ನ ಬದುಕಿನಲ್ಲಿ ಬಾಲ್ಯದಿಂದ ಹದಿ ಹರೆಯದ ವರೆಗಿನ ಹದಿನೇಳು ವರ್ಷಗಳನ್ನು ನನ್ನ ಪ್ರೀತಿಯ ಹುಟ್ಟೂರು ಬಿಜೈಯಲ್ಲಿ ಕಳೆದುದು ಸುದೀರ್ಘವಾದ ಕಾಲವಾದರೂ ಅದರಲ್ಲಿ ಮುಗ್ಧತೆಯ ಕಾಲವೇ ಹೆಚ್ಚು. ಇದೀಗ ಕಾಟಿಪಳ್ಳ ಕೃಷ್ಣಾಪುರದ ವಾಸ್ತವ್ಯ ಹನ್ನೆರಡು ವರ್ಷಗಳದ್ದಾದರೂ ಅದು ನನ್ನ ಬದುಕಿನ ಅನೇಕ ಅನುಭವಗಳನ್ನು...
23rd Jan, 2018
ದೇಶದ ರಾಜಕೀಯ ದೇಶದ ಹಳ್ಳಿಗಳಿಗೂ ತಲುಪಿ ಅಭಿವೃದ್ಧಿಗಿಂತ ಹೆಚ್ಚು ಆತಂಕವನ್ನು ಉಂಟು ಮಾಡಿದ ವಿಚಾರ ಎಲ್ಲರೂ ಅನುಭವಿಸಿದ ಸತ್ಯವಾದರೂ ಅದನ್ನು ಆತಂಕ ಎಂದು ಭಾವಿಸದೆ ಒಂದು ಧರ್ಮದ ಜಯ, ಈ ದೇಶ ಆ ಧರ್ಮಕ್ಕೆ ಮಾತ್ರ ಸೇರಿದ್ದು ಎಂಬ ಭಾವ ಹರಡುವುದಕ್ಕೆ...
09th Jan, 2018
ಪಾಪಪ್ರಜ್ಞೆಯಿಂದ ನರಳುವ ಮನಸ್ಸುಗಳು ಕೇವಲ ಕೃಷ್ಣಾಪುರದಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆಗಳಿಂದ ಹೊರಬರಲು ಹಲವು ದಾರಿಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿತ್ತು. ಮತ್ತೆ ದೇಶದ ಐಕ್ಯತೆ, ಸೌಹಾರ್ದಗಳ ಮರು ಸ್ಥಾಪನೆಗೆ ವೈಯಕ್ತಿಕ ಹಾಗೂ ಸಂಘಟಿತ ರಚನಾತ್ಮಕ ಕಾರ್ಯಗಳು ನಮ್ಮ ತಿಳಿವಿಗೂ ದೊರೆಯುತ್ತಿತ್ತು. ಈ ನಡುವೆ...
02nd Jan, 2018
ಅಯೋಧ್ಯೆಯೆನ್ನುವುದು ರಾಮಾಯಣ ಕಾವ್ಯದ ಹಿನ್ನೆಲೆಯಲ್ಲಿ ದಶರಥನ ರಾಜ್ಯ. ಅದರ ರಾಜಧಾನಿ ಸಾಕೇತ. ಪಕ್ಕದ ರಾಜ್ಯ ಕೋಸಲ, ಕೌಸಲ್ಯೆ ಅಲ್ಲಿನ ರಾಜಕುಮಾರಿ ದಶರಥನ ಪಟ್ಟದ ರಾಣಿ. ಶ್ರೀರಾಮಚಂದ್ರನ ತಾಯಿ. ಇದು ಹಿಂದೂಧರ್ಮಕ್ಕೆ ಅನುಸಾರವಾಗಿರುವಂತಹ ಆದಿಕವಿ ಎಂದು ಪ್ರಖ್ಯಾತನಾದ ವಾಲ್ಮೀಕಿಯ ಕೃತಿಯಲ್ಲಿ ಉಲ್ಲೇಖವಾದದು. ಸಂಸ್ಕೃತ...
26th Dec, 2017
ನಮ್ಮ ಹತ್ತು ವರ್ಷಗಳ ಸುದೀರ್ಘ ವಾಸ್ತವ್ಯದಲ್ಲಿ ನೀರಿಗಾಗಿ ಪಟ್ಟ ಬವಣೆಯನ್ನು ಈಗಾಗಲೇ ಹೇಳಿದ್ದೇನೆ. ನಳ್ಳಿ ನೀರಾದರೂ ಎಲ್ಲರ ಹಿತ್ತಲಲ್ಲಿ ತೆಂಗಿನ ಮರಗಳು ನಳನಳಿಸುತ್ತಾ ಕಾಯಿಗಳ ಭಾರದಿಂದ ತೂಗುತ್ತಿದ್ದುವು. ಆದುದರಿಂದ ನಮ್ಮ ಹಿತ್ತಲಲ್ಲೂ ಒಂದೆರಡಲ್ಲ ಸುಮಾರು ಹತ್ತು ಗಿಡಗಳನ್ನು ಹಾಕಿದ್ದೆವು. ಅವುಗಳಲ್ಲಿ ಒಂದು...
19th Dec, 2017
ಸುರತ್ಕಲ್‌ನ ಶ್ರೀನಿವಾಸನಗರದಲ್ಲಿರುವ ಅಂದಿನ ಕೆಆರ್‌ಇಸಿ (ಕರ್ನಾಟಕ ರೀಜಿನಲ್ ಇಂಜಿನಿಯರಿಂಗ್ ಕಾಲೇಜು)ಯಲ್ಲಿ ಪ್ರಾಧ್ಯಾಪಕರಾಗಿದ್ದ ಪಾ.ದೇವರಾಜ್ ಮತ್ತು ಮೂಲ್ಕಿ ವಿಜಯಾ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅಡ್ಯನಡ್ಕ ಕೃಷ್ಣಭಟ್ಟರು ಜೊತೆ ಸೇರಿ ‘ವಿಜ್ಞಾನ ಲೋಕ’ ಎಂಬ ಪತ್ರಿಕೆ ಹೊರತರುತ್ತಿದ್ದರು. ನಾನು ಗಣಪತಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಪ್ರಾರಂಭದ...
12th Dec, 2017
ಕಾಟಿಪಳ್ಳದಲ್ಲಿ ದೇವಸ್ಥಾನಗಳಿರಲಿಲ್ಲ ಎಂದು ಬರೆದಿದ್ದೆ. ಅದು ನಿಜವೂ ಹೌದು. ಆದರೆ ನಮ್ಮೆದುರೇ ಒಂದಲ್ಲ ಎರಡು ದೇವಸ್ಥಾನಗಳು ನಿರ್ಮಾಣಗೊಂಡದ್ದನ್ನು ನೋಡುವ ಅವಕಾಶವೂ ನಮಗೆ ಸಿಕ್ಕಿತ್ತು ಎನ್ನುವುದೂ ನಿಜವೇ. ಕಾಟಿಪಳ್ಳ ಎನ್ನುವ ಕೆಲವು ಬಸ್ಸುಗಳ ಕೊನೆಯ ನಿಲ್ದಾಣದ ಬಳಿಯಲ್ಲಿ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಸಾಕಷ್ಟು...
05th Dec, 2017
ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟುಗಳನ್ನೊಳಗೊಂಡಂತೆ ಅಲ್ಲಿನ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ನರು ಪಣಂಬೂರು, ಬೈಕಂಪಾಡಿ ಗಳಿಂದ ವಲಸೆ ಬಂದಾಗ ಅವರು ಆರಾಧಿಸುವ ದೈವ ದೇವರು ಕೂಡಾ ಜೊತೆಗೇ ವಲಸೆ ಬಂದಿರಬೇಕಲ್ಲವೇ? ಬಂದಿರಲೇಬೇಕು ಎನ್ನುವುದು ತರ್ಕ. ಬಾರದೆ ಉಳಿದಿರಬಹುದು ಎಂಬುದು ಕೂಡಾ ಊಹೆ. ಬೇರೆ ಬೇರೆ...
28th Nov, 2017
1984-85ರ ಆಸುಪಾಸಿನಲ್ಲಿ ಟಿವಿ ಎನ್ನುವ ಮಾಯಾ ಪೆಟ್ಟಿಗೆ ನನ್ನೂರಿಗೂ ಬಂತು. ನನ್ನ ಮನೆಗಲ್ಲ. ಸುತ್ತಲಿನ ಪುನರ್ವಸತಿ ವಲಯದ ನಿವಾಸಿಗಳ ಮನೆಯಲ್ಲೂ ಅಲ್ಲ. ಸರಕಾರದ ಖಾಲಿ ಜಾಗಗಳಲ್ಲಿ ಮನೆ ಕಟ್ಟಿಕೊಂಡ ಬಡವರ ಮನೆಗಳಿಗೆ ಟಿವಿ ಬಂತು. ಅವರ ಮನೆಗಳು ಸಕ್ರಮವಾಗಿರಬಹುದು. ಮನೆ ನಂಬ್ರ...
21st Nov, 2017
ಕಾಟಿಪಳ್ಳದ ಊರು ಭೌಗೋಳಿಕವಾಗಿ ಕಾಡು ಗುಡ್ಡಗಳ ಪ್ರದೇಶವೇ ಆಗಿದ್ದು ಗುಡ್ಡಗಳ ನಡುವಿನ ತಗ್ಗಿನಲ್ಲಿ ಪಳ್ಳಗಳು ಇದ್ದುದು ಆ ನೀರಿನ ಪಳ್ಳಗಳಲ್ಲಿ ಕಾಟಿಗಳು ಅಂದರೆ ಕಾಡು ಕೋಣಗಳು ಇರುತ್ತಿದ್ದುವು ಎನ್ನುವುದು ಊಹೆಯಲ್ಲ. ಕುತ್ತೆತ್ತೂರು, ಬಾಳ, ಕಾನ, ಕಳವಾರು, ಸೂರಿಂಜೆಗಳಲ್ಲಿದ್ದ ನಿವಾಸಿಗಳ ಅನುಭವದ ಸತ್ಯಗಳು....
14th Nov, 2017
ನನ್ನೂರಿನ ಕಾಲೇಜಿನ ಉಪನ್ಯಾಸಕರು ಹಾಗೂ ಅವರ ಶಿಷ್ಯೆ ನನ್ನ ಮನೆಯ ದಾರಿಯ ಹುಡುಗಿ ಕಾಣೆಯಾದುದು ಮತ್ತೆ ಪತ್ತೆಯಾದುದು, ಅವರಿಬ್ಬರೂ ಸತಿಪತಿಗಳಾಗಿ ಕಾನೂನಿನ ರಕ್ಷಣೆಯಲ್ಲಿದ್ದಾರೆ ಎಂದು ತಿಳಿದಾಗ ಇಂದಿನ ಪರಿಭಾಷೆಯ ಮರ್ಯಾದಾ ಹತ್ಯೆಗೆ ಮುಂದಾಗಿದ್ದ ಯುವಕರಿಗೆ ಈ ದೇಶದ ಕಾನೂನಿನ ಪರೋಕ್ಷ ಪರಿಚಯವಾದಂತಾಯಿತು....
31st Oct, 2017
ನನ್ನ ಮಕ್ಕಳು ಬಾಲವಾಡಿಯಿಂದ ತೊಡಗಿ ಹೈಸ್ಕೂಲು ಸೇರುವ ಹಂತಕ್ಕೆ ಬಂದಾಗ ಕೃಷ್ಣಾಪುರದ ನಮ್ಮ ವಾಸ್ತವ್ಯಕ್ಕೂ ಒಂದು ದಶಕವಾಯಿತು. ನನ್ನ ಮಕ್ಕಳಂತೆಯೇ ನಮ್ಮ ಸುತ್ತಮುತ್ತಲ ಮನೆಯ ಮಕ್ಕಳೂ ಹಾಗೆಯೇ ಬೆಳೆದು ದೊಡ್ಡವರಾದರು. ಅನೇಕ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಯ ವಿದ್ಯೆಯೊಂದಿಗೆ ಶಾಲೆಗೂ ವಿದಾಯ...
24th Oct, 2017
ವರುಷ ಕಳೆದಂತೆ ಸುರತ್ಕಲ್ ಕಾಲೇಜಿಗೆ, ಮಂಗಳೂರಿನ ಕಾಲೇಜುಗಳಿಗೆ ಬರುವ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿತ್ತು. ಮಂಗಳೂರಿಗೆ ಅಲೋಶಿಯಸ್ ಕಾಲೇಜು ಹಾಗೂ ಬದ್ರಿಯಾ ಕಾಲೇಜಿಗೆ ಬರುತ್ತಿದ್ದ ಹುಡುಗರನೇಕರಿಗೆ ನಮ್ಮ ಪರಿಚಯವಾಯ್ತು. ಅವರಲ್ಲಿ ಕೆಲವರಿಗೆ ನಾವು ಸಾಹಿತಿಗಳು ಎಂದು ತಿಳಿದು ಆ ಬಗ್ಗೆ ನಮ್ಮಲ್ಲಿ...
17th Oct, 2017
ಮಂಗಳೂರಿನಿಂದ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸಿಟಿ ಬಸ್ಸುಗಳಿರುವ ರಸ್ತೆಗಳೆಂದರೆ ಮಂಗಳೂರಿನ ಉತ್ತರ ಹಾಗೂ ದಕ್ಷಿಣ ದಿಕ್ಕಿಗಿರುವ ರಾಷ್ಟ್ರೀಯ ಹೆದ್ದಾರಿ. ಆಗ ಹೆದ್ದಾರಿಯ ಸಂಖ್ಯೆ 17. ಈಗ 66 ಸಂಖ್ಯೆ ಆಗಿದೆ. ತಲಪಾಡಿಗೆ ಹೋಗುವ 42, 43 ನಂಬ್ರದ ಬಸ್ಸುಗಳ ಹಾಗೆಯೇ ಸುರತ್ಕಲ್,...
10th Oct, 2017
ವರ್ಷ ಕಳೆದಂತೆ ಬೆಳಗ್ಗೆ ಮಂಗಳೂರಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿತ್ತು. ಸುರತ್ಕಲ್ ವಿದ್ಯಾದಾಯಿನಿ ಸಂಸ್ಥೆಗಳಿಗೆ, ಗೋವಿಂದದಾಸ ಕಾಲೇಜಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಂಖ್ಯೆಯೂ ಹೆಚ್ಚುತ್ತಿತ್ತು. ಕೃಷ್ಣಾಪುರದ ಸುರತ್ಕಲ್‌ವರೆಗೆ ನಿಂತುಕೊಂಡೇ ಹೋಗುವುದು ಸಾಮಾನ್ಯವಾಯಿತು. ಕುಳಿತಂತಹ ವಿದ್ಯಾರ್ಥಿಗಳು ಯಾರಾದರೂ ನನ್ನ ಬ್ಯಾಗುಗಳನ್ನು ತಾವು ತೆಗೆದುಕೊಂಡು ಇಳಿಯುವಾಗ ತಮ್ಮ...
03rd Oct, 2017
ನಮ್ಮ ಮಕ್ಕಳಿಬ್ಬರೂ ವಿದ್ಯಾದಾಯಿನಿ ಸಂಸ್ಥೆಗಳ ವಿದ್ಯಾರ್ಥಿಗಳಾದರೂ ನಮಗೆ ಆ ಶಿಕ್ಷಣ ಸಂಸ್ಥೆಗಳಿಗಿಂತ ಗೋವಿಂದ ದಾಸ ಕಾಲೇಜು ಬೇರೆ ಬೇರೆ ಕಾರಣಗಳಿಂದ ಹತ್ತಿರವಾಯಿತು. ಪ್ರಾಂಶುಪಾಲರಿಂದ ಎಚ್. ಗೋಪಾಲಕೃಷ್ಣರಾಯರ ಪರಿಚಯದ ಸಂದರ್ಭವನ್ನು, ಸಂಬಂಧವನ್ನು ಈಗಾಗಲೇ ತಿಳಿಸಿದ್ದೇನೆ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು ಡಾ. ಸೀತಾರಾಮ...
26th Sep, 2017
ನನ್ನ ಮಕ್ಕಳಿಬ್ಬರೂ ಸೈಂಟ್‌ಆ್ಯನ್ಸ್‌ನ ಕನ್ನಡ ಮಾಧ್ಯಮದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರು. ಬೆಳಗ್ಗೆ ಸಂಜೆ ಅಪ್ಪನ ಜತೆಯಲ್ಲಿ ಪ್ರಯಾಣ. ಕೆಲವು ಸಂಜೆಗಳಲ್ಲಿ ಅವರನ್ನು ಕರೆತರುವ ಜವಾಬ್ದಾರಿ ನನಗೂ ಇರುತ್ತಿತ್ತು. ಈ ನಡುವೆ ನನ್ನ ಮನೆ ಕೆಲಸಕ್ಕೆ ನೆರವಾಗಲು ನನ್ನವರ ದೂರದ ಸಂಬಂಧಿ...
19th Sep, 2017
ಸುಮಾರು ಮೂವತ್ತು ವರ್ಷಗಳ ಹಿಂದೆ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭವು ನಗರಗಳಲ್ಲಿ ಸಂಜೆ 5ರಿಂದ 8 ಅಥವಾ 10 ಗಂಟೆಯೊಳಗೆ ಮುಗಿಯುತ್ತಿತ್ತು. ಹಳ್ಳಿಗಳಲ್ಲಿ ಸಂಜೆ 7 ಅಥವಾ 8 ಗಂಟೆಗೆ ಪ್ರಾರಂಭಿಸಿ ತಡರಾತ್ರಿ ಒಂದು ಅಥವಾ ಎರಡು ಗಂಟೆಯವರೆಗೂ ನಡೆಯುತ್ತಿತ್ತು. ಮರುದಿನ...
12th Sep, 2017
ಕುಡಿತ ಎನ್ನುವುದು ಮಾನಸಿಕ ದಾಸ್ಯ ಎನ್ನುವುದು ವ್ಯಕ್ತಿಗತವಾದಂತೆಯೇ ಅದರ ಕಾರಣಗಳ ಶೋಧಗಳಲ್ಲಿ ಅದರ ಹೊಣೆಯನ್ನು ಕುಟುಂಬಿಕರು ಮಾತ್ರವಲ್ಲ, ಸಮುದಾಯ, ಒಟ್ಟು ಸಮಾಜವು ಹೊರಬೇಕಾಗಿದೆ ಎನ್ನುವುದು ವೈದ್ಯರು ನೀಡುವ ತಿಳುವಳಿಕೆಯಿಂದ ಸಾಬೀತು ಆಗುತ್ತದೆ. ವ್ಯಕ್ತಿಗೆ ಕೌಟುಂಬಿಕವಾಗಿ ದೊರೆಯುವ ಪ್ರೀತಿ, ಗೌರವಗಳಂತೆಯೇ, ಆತನ ವೃತ್ತಿಗೆ,...
05th Sep, 2017
ಕೃಷ್ಣಾಪುರದ ಬಾರಗ ರಸ್ತೆಯಲ್ಲಿದ್ದ ಭವಾನಿಶಂಕರ್ ಮತ್ತು ಯೋಗೀಶ್ ಇವರು ವಿವಾಹಿತರಾಗಿ ಅವರಿಬ್ಬರ ಮಡದಿಯರು ನನ್ನ ಜೊತೆಗೆ ಮಂಗಳೂರಿನ ಪ್ರಯಾಣಕ್ಕೆ ದೊರೆತವರು. ಒಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರೆ, ಇನ್ನೊಬ್ಬರು ರಥಬೀದಿಯಲ್ಲಿದ್ದ ಗೋಲ್ಡ್ ಸ್ಮಿತ್ ಕೋ ಆಪರೇಟಿವ್ ಬ್ಯಾಂಕಲ್ಲಿ ಉದ್ಯೋಗಿ ಯಾಗಿದ್ದವರು. ಇವರ ಜೊತೆಗೆ...
29th Aug, 2017
ನಮ್ಮ ಹಿತ್ತಲಿನ ಮಣ್ಣು ಕೃಷ್ಣಾಪುರ ಯುವಕ ಮಂಡಲದ ಸ್ಟೇಜ್‌ಗೆ ಉಪಯೋಗವಾಯ್ತು ಎಂದು ಈ ಮೊದಲೇ ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಕೃಷ್ಣಾಪುರ ಯುವಕ ಮಂಡಲದ ಕಾರ್ಯದರ್ಶಿಯಾಗಿದ್ದ ಸುಧಾಕರ ಕಾಮತ್ ಶ್ರೀಧರ ಹೊಳ್ಳ ಇವರು ನಮಗೆ ಹೆಚ್ಚು ಪರಿಚಿತರಾದರು. ಯುವಕ ಮಂಡಲ ನಡೆಸುತ್ತಿದ್ದ ಕಾರ್ಯಕ್ರಮಗಳಿಗೆ...
22nd Aug, 2017
ಇದೀಗ ಅಪ್ಪ ಮಗಳು ನನಗಿಂತ ಮೊದಲು ಮಂಗಳೂರಿಗೆ ಶಾಲೆಗೆ ಹೊರಡುತ್ತಿದ್ದರು. ಬೆಳಗ್ಗಿನ ತಿಂಡಿ ಮುಗಿಸಿ ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿಕೊಂಡು ಹೋಗುತ್ತಿದ್ದರು. ಕನ್ನಡ ಮಾಧ್ಯಮದ ಶಾಲೆಯಾದುದರಿಂದ ನನ್ನ ಚುರುಕಾದ ಮಗಳಿಗೆ ಓದು ಬರಹಗಳು ಕಷ್ಟವಾಗಿರಲಿಲ್ಲ. ದಿನಾ ಸಂಜೆ ಹೆಚ್ಚಾಗಿ ಮಗಳನ್ನು ಕರೆತರಲು ಸೈಂಟ್...
15th Aug, 2017
ಕಾಟಿಪಳ್ಳ, ಕೃಷ್ಣಾಪುರದಲ್ಲಿ ಒಟ್ಟು ಸಮಾಜವನ್ನು ಜಾತಿ, ಧರ್ಮಗಳ ಭೇದ ಇಲ್ಲದೆ ಗ್ರಹಿಸುವಲ್ಲಿ, ಇಲ್ಲಿನ ವ್ಯವಸ್ಥೆಗಳಲ್ಲಿ ಕಂಡ ವಿಶೇಷತೆಗಳನ್ನು ಅಂದರೆ ಕೌಟುಂಬಿಕ ಸಮಾಜವನ್ನು ನೋಡಿದಾಗ ಮೇಲ್ನೋಟಕ್ಕೆ ಆಶ್ಚರ್ಯವಾಗಿತ್ತು. ವರ್ಣಸಂಕರ, ಜಾತಿಸಂಕರಗಳನ್ನು ವಿರೋಧಿಸುವ ಈ ವರ್ತಮಾನ ಕಾಲದಲ್ಲಿಯೂ ವರ್ಣಸಂಕರ, ಜಾತಿಸಂಕರಗಳು ನಡೆಯುತ್ತಲೇ ಇರುವುದೂ ಕೂಡಾ...
08th Aug, 2017
ಮಗಳನ್ನು ಬಾಲವಾಡಿಗೆ ಕರೆದೊಯ್ಯುತ್ತಿದ್ದ ಮಾವ ಅಂದು ಬೆಳಗ್ಗೆ ಹೋಗಿಬಿಟ್ಟು ಬಂದಿದ್ದರು. ಮಧ್ಯಾಹ್ನ ಕರೆದೊಯ್ಯಲು ಎಂದಿನಂತೆ ಹೊರಟಿದ್ದರು. ಚಿಕ್ಕಮಕ್ಕಳಾದುದರಿಂದ ಎಲ್ಲ ಮಕ್ಕಳ ಮನೆಯಿಂದಲೂ ಯಾರಾದರೂ ಬಂದು ಕರೆದೊಯ್ಯಬೇಕಾಗಿತ್ತು. ಬಾಲವಾಡಿಯ ಟೀಚರ್ ಆ ಎಲ್ಲ ಮಕ್ಕಳು ಹೋದ ಬಳಿಕವೇ ಶಾಲೆಗೆ ಬೀಗ ಹಾಕಿ ಹೋಗುವ...
Back to Top