ಸಂಪಾದಕೀಯ

21st Sep, 2018
ಸೈನಿಕರ ತ್ಯಾಗಗಳನ್ನು ಸ್ಮರಿಸುತ್ತಲೇ ನಾವು ಆಧುನಿಕ ಭಾರತದ ಹಿರಿಮೆಯನ್ನು ಕೊಂಡಾಡಬೇಕಾಗುತ್ತದೆ. ಸ್ವಾತಂತ್ರೋತ್ತರ ದಿನಗಳಲ್ಲಿ ಭಾರತ ವಿಶ್ವದಲ್ಲಿ ಆತ್ಮವಿಶ್ವಾಸದೊಂದಿಗೆ ತಲೆಯೆತ್ತಿ ನಿಂತಿದ್ದರೆ ಅದರ ಹಿಂದೆ ಸಹಸ್ರಾರು ಸೈನಿಕರ ತ್ಯಾಗ ಬಲಿದಾನವಿದೆ. ಭಾರತದ ಅತಿ ದೊಡ್ಡ ಹೆಗ್ಗಳಿಕೆಯೆಂದರೆ, ಸೇನೆ ಎಂದಿಗೂ ಪ್ರಜಾಸತ್ತೆಯ ಮೇಲೆ ತನ್ನ...
20th Sep, 2018
ಬ್ಯಾಂಕ್‌ಗಳ ವಿಲೀನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಇದನ್ನು ಸರಕಾರ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆ ಎಂದು ಕರೆಯುತ್ತಿದೆ. ಪಾವತಿಯಾಗದ ಸಾಲಗಳ ಬೃಹತ್ ಹೊರೆಯಿಂದ ಆರ್ಥಿಕವಲಯವನ್ನು ರಕ್ಷಿಸಲು ಸರಕಾರ ಹತ್ತು ಹಲವು ಯಡವಟ್ಟುಗಳನ್ನು ಮಾಡುತ್ತಾ ಇನ್ನಷ್ಟು ಆಪತ್ತುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ನೋಟು ನಿಷೇಧದ...
19th Sep, 2018
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಳೆದ ಒಂದೂವರೆ ತಿಂಗಳಿನಿಂದ ಏರುತ್ತಲೇ ಇದೆ. ರೂಪಾಯಿ ವೌಲ್ಯ ಪಾತಾಳವನ್ನು ಕಂಡಿದೆ. ಇವೆರಡರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಜೀವನಾವಶ್ಯಕ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಈ ಕುರಿತು ಕಾಂಗ್ರೆಸ್ ಮತ್ತು ಎಡಪಂಥೀಯ ಸಂಘಟನೆಗಳು ರಾಷ್ಟ್ರವ್ಯಾಪಿ ಬಂದ್ ಮತ್ತು ಹರತಾಳವನ್ನು...
18th Sep, 2018
ಮೇನಕಾಗಾಂಧಿಯ ವ್ಯಕ್ತಿತ್ವದಲ್ಲೂ ಅವರು ತೆಗೆದುಕೊಳ್ಳುವ ನಿಲುವುಗಳಲ್ಲೂ ಹಲವು ವಿರೋಧಾಭಾಸಗಳನ್ನು ನೋಡುತ್ತಾ ಬಂದಿದ್ದೇವೆ. ಪ್ರಾಣಿಗಳ ಬಗ್ಗೆ ಅತೀವ ಕಾಳಜಿಯನ್ನು ಹೊಂದಿರುವವರಂತೆ ನಟಿಸುವ ಇವರು, ಮನುಷ್ಯರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತಂತೆ ಅಷ್ಟೇ ತೀವ್ರವಾಗಿ ಮಾತನಾಡಿರುವುದು ಕಡಿಮೆ. ಪ್ರಾಣಿ ದಯೆಯ ಬಗ್ಗೆ ಮಾತನಾಡುವ ಈಕೆಗೆ...
17th Sep, 2018
ಒಂದೆಡೆ ನರೇಂದ್ರ ಮೋದಿಯವರ ಬಹು ಚರ್ಚಿತ ಸ್ವಚ್ಛತಾ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಮಗದೊಂದೆಡೆ ಗೋವುಗಳನ್ನು ಸಾಕಲು ಗೋಶಾಲೆಗಳಿಗಾಗಿ ಸರಕಾರ ಕೋಟ್ಯಂತರ ಹಣವನ್ನು ಚೆಲ್ಲುತಿರುವ ವರದಿಗಳು ಪುಂಖಾನುಪುಂಖವಾಗಿ ಹೊರ ಬೀಳುತ್ತಿವೆ. ಇದೇ ಸಂದರ್ಭದಲ್ಲಿ ಸರಕಾರದ ಈ ಯೋಜನೆಗಳನ್ನು ಅಣಕಿಸುವ ಎರಡು ವರದಿಗಳು ಮಾಧ್ಯಮಗಳ...
16th Sep, 2018
ಭೂಮಿ ಹದವಾಗುವ ಮುನ್ನವೇ ಬೀಜ ಬಿತ್ತಿ ಬೆಳೆ ತೆಗೆಯಲು ಹೊರಟಾಗ ಏನೆಲ್ಲ ಸಂಭವಿಸಬಹುದೋ, ಅದೇ ಸದ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದೊಳಗೆ ನಡೆಯುತ್ತಿದೆ. ಎಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆಯೋ ಎಂಬ ಭಯದಲ್ಲಿ ಆತುರಾತುರವಾಗಿ, ನಿಶ್ಶರ್ಥವಾಗಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮಾಡಿದ ಮೈತ್ರಿ...
14th Sep, 2018
ವಿದೇಶದಲ್ಲಿ ಕುಳಿತೇ, ಕೇಂದ್ರ ಸರಕಾರದ ಮೇಲೆ ವಿಜಯಮಲ್ಯ ಬಾಂಬ್ ಸಿಡಿಸಿದ್ದಾರೆ. ತನ್ನ ಮೂಗಿಗೆ ನೀರು ಹತ್ತಿರವಾಗುತ್ತಿದ್ದಂತೆಯೇ ಮಲ್ಯ ಹೆಗಲ ಮೇಲೆ ಕುಳಿತಿದ್ದ ಜೇಟ್ಲಿಯನ್ನು ಕೆಳಗೆ ತಳ್ಳಿ ಅವರ ಮೇಲೇರಿ ಜೀವ ರಕ್ಷಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ. ಭಾರತ ತೊರೆಯುವ ಮುನ್ನ ತಾನು ಕೇಂದ್ರ ಹಣಕಾಸು...
12th Sep, 2018
ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ದೇಶಾದ್ಯಂತ ಯಶಸ್ವೀ ಬಂದ್ ನಡೆಯಿತು. ಈ ಬಂದ್‌ನ ಯಶಸ್ಸಿನ ಹೆಗ್ಗಳಿಕೆಯನ್ನು ನಿಸ್ಸಂಶಯವಾಗಿ ನರೇಂದ್ರ ಮೋದಿಯವರೇ ಹೊರಬೇಕು. ಇಡೀ ದೇಶ ಯಾವುದೋ ರಾಜಕೀಯ ಪಕ್ಷಗಳ ಒತ್ತಡಕ್ಕೆ ಬಲಿಯಾಗಿ ನಡೆದ ಬಂದ್ ಇದಾಗಿರಲಿಲ್ಲ. ಸ್ವಯಂ ಪ್ರೇರಿತವಾಗಿ ದೇಶ ಸ್ಪಂದಿಸಿದ್ದು...
11th Sep, 2018
2025ರ ಹೊತ್ತಿಗೆ ಭಾರತದಲ್ಲಿ ವೃದ್ಧರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಲಿದೆ ಎನ್ನುವ ವರದಿಯೊಂದು ಈಗಾಗಲೇ ಹೊರಬಿದ್ದಿದೆ. ಅಂದರೆ ವೃದ್ಧರು-ಯುವಕರ ನಡುವಿನ ಅನುಪಾತದಲ್ಲಿ ಗಮನೀಯ ಏರಿಳಿತವಾಗಲಿದೆ. ಈ ಏರಿಳಿತಗಳ ಪರಿಣಾಮಗಳನ್ನು ಇದೀಗ ಚೀನಾ ಅನುಭವಿಸುತ್ತಿದೆ. ಈ ಏರಿಳಿತಗಳಿಗೆ ಮುಖ್ಯ ಕಾರಣವೇ, ‘ಒಂದು ಮಗು ಸಾಕು’...
10th Sep, 2018
ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ ಕೇಂದ್ರದ ನರೇಂದ್ರ ಮೋದಿ ಸರಕಾರದ ವಿರುದ್ಧ ಜನತೆ ಎಷ್ಟು ಅಸಮಾಧಾನಗೊಂಡಿದ್ದಾರೆ ಎಂಬುದು ಸೋಮವಾರ ನಡೆದ ಭಾರತ ಬಂದ್‌ನಿಂದ ಸ್ಪಷ್ಟವಾಗಿದೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಹಾಗೂ ಜನಪರ ಸಂಘಟನೆಗಳು ಇಂಧನ...
09th Sep, 2018
 2014ರ ಚುನಾವಣೆಯನ್ನು ಎದುರಿಸುವಲ್ಲಿ ಮೋದಿ ನೇತೃತ್ವದ ಬಿಜೆಪಿ ಮೊದಲ ಅಸ್ತ್ರವಾಗಿ ಬಳಸಿಕೊಂಡದ್ದು ಪೆಟ್ರೋಲ್ ದರವನ್ನು. ಪೆಟ್ರೋಲ್‌ಗೆ ಬೆಂಕಿಯನ್ನು ಸುರಿದು ತಮ್ಮ ಭಾಷಣಗಳನ್ನು ಹರಿಯ ಬಿಟ್ಟರು. ಚುನಾವಣಾ ಪೂರ್ವದಲ್ಲಿ ಅವರು ಮಾಡಿದ ಸಾಲು ಸಾಲು ಭಾಷಣಗಳೇ ಇಂದು ಮೋದಿಯನ್ನು ಮರು ಪ್ರಶ್ನಿಸುತ್ತಿವೆೆ. ಮೋದಿಯ...
07th Sep, 2018
ದಲಿತರ ಮೇಲೆ ದೌರ್ಜನ್ಯ ನಡೆಸುವುದು, ಮೇಲ್ಜಾತಿಯ ಜನರ ಸಂವಿಧಾನದತ್ತ ಹಕ್ಕಾಗಿದೆಯೇ? ದಲಿತ ದೌರ್ಜನ್ಯ ತಡೆ ಕಾಯ್ದೆಯ ಮೂಲಕ ಆ ಹಕ್ಕನ್ನು ಮೊಟಕು ಗೊಳಿಸುವ ಪ್ರಯತ್ನ ನಡೆದಿದೆಯೆ? ಗುರುವಾರ ಸಂಘಪರಿವಾರ ಸಂಘಟನೆಗಳು ಉತ್ತರ ಭಾರತದಲ್ಲಿ ಹಮ್ಮಿಕೊಂಡ ‘ಭಾರತ ಬಂದ್’ ಪ್ರತಿಭಟನೆ ಇಂತಹದೊಂದು ಅನುಮಾನ...
06th Sep, 2018
ಉಗ್ರವಾದ, ಭಯೋತ್ಪಾದನೆ ದೇಶದ ಮಾತ್ರವಲ್ಲ ವಿಶ್ವದ ಸಮಸ್ಯೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಉಗ್ರವಾದಿಗಳು, ಭಯೋತ್ಪಾದಕರು ಆಕಾಶದಿಂದ ಇಳಿದವರೂ ಅಲ್ಲ. ಬಲಿಷ್ಟ ರಾಷ್ಟ್ರಗಳ ರಾಜಕೀಯ ಅತಿರೇಕಗಳ ಸೃಷ್ಟಿಯಾಗಿದೆ ಉಗ್ರವಾದ. ಭಾರತದಲ್ಲಿ ನಕ್ಸಲರ ಹುಟ್ಟಿನ ಹಿಂದೆಯೂ ಇದೇ ಕತೆಯಿದೆ. ಈಶಾನ್ಯ ಭಾರತದಲ್ಲಿ ಆದಿವಾಸಿಗಳ ಮೇಲೆ...
05th Sep, 2018
ತಾನು ತಿನ್ನುವುದಿಲ್ಲ ಇನ್ನೊಬ್ಬರನ್ನು ತಿನ್ನಲು ಬಿಡುವುದಿಲ್ಲ ಎಂದು ಹೇಳಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ‘‘ಈ ದೇಶದಲ್ಲಿ 70 ವರ್ಷಗಳ ಕಾಲ ಅಧಿಕಾರದಲ್ಲಿದ್ದವರು ಮೋಸ ಮಾಡಿದ್ದಾರೆ. ಅದನ್ನು ನಾನು ಸರಿಪಡಿಸುತ್ತೇನೆ’’ ಎಂದು ಹೇಳಿ ಅವರು ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾಯಿತು....
04th Sep, 2018
ಬಹುಶಃ ಕರ್ಕರೆ ನೇತೃತ್ವದ ಎಟಿಎಸ್ ತಂಡ ಮಾಲೇಗಾಂವ್ ಸ್ಫೋಟದ ತನಿಖೆಯನ್ನು ಮಾಡುತ್ತಾ ಮಾಡುತ್ತಾ ಮೊದಲ ಬಾರಿಗೆ, ಈ ದೇಶದೊಳಗೆ ಹರಡಿಕೊಳ್ಳುತ್ತಿರುವ ಕೇಸರಿ ಉಗ್ರ ಸಂಘಟನೆಗಳ ಬೇರುಗಳನ್ನು ಗುರುತಿಸಿತು ಮತ್ತು ಆ ಬಳಿಕ ತನಿಖೆ ನಡೆಸುತ್ತಿದ್ದ ಇಡೀ ತಂಡ ನಿಗೂಢವಾಗಿ ದುಷ್ಕರ್ಮಿಗಳ ದಾಳಿಗೆ...
03rd Sep, 2018
ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲು ಪಕ್ಷಗಳು ತಂತ್ರಗಳನ್ನು ರೂಪಿಸುತ್ತಿವೆ. ಎಲ್ಲ ಪಕ್ಷಗಳ ಏಕೈಕ ಗುರಿ ಗೆಲ್ಲುವುದೇ ಹೊರತು, ಗೆಲ್ಲುವುದಕ್ಕಾಗಿ ತಾವು ಆಯ್ಕೆ ಮಾಡಿಕೊಂಡಿರುವ ಅಥವಾ ಮಾಡಿಕೊಳ್ಳಬೇಕಾದ ದಾರಿಗಳ ಕುರಿತಂತೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಹೇಗಾದರೂ ಸರಿ, ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವುದಷ್ಟೇ ಅವುಗಳ ಸದ್ಯದ...
02nd Sep, 2018
ಸರ್ವರಿಗೆ ಆರೋಗ್ಯ, ಸರ್ವರಿಗೆ ಶಿಕ್ಷಣ ಎನ್ನುವ ಪದವನ್ನು ನಮ್ಮ ನಾಯಕರು ಸದಾ ಪ್ರಸ್ತಾಪಿಸುತ್ತಲೇ ಇರುತ್ತಾರೆ. ಆದರೆ, ಶಿಕ್ಷಣ ಮತ್ತು ಆರೋಗ್ಯದಿಂದ ಈ ದೇಶದ ಒಂದು ದೊಡ್ಡ ಸಮೂಹ ದೂರ ಸರಿಯುತ್ತಿದೆ. ಸರಕಾರಿ ಆಸ್ಪತ್ರೆಗಳು ಮತ್ತು ಸರಕಾರಿ ಶಾಲೆಗಳ ದುರವಸ್ಥೆಯೇ ನಮ್ಮ ಆರೋಗ್ಯ...
31st Aug, 2018
‘ನೋಟು ನಿಷೇಧದ’ ವೈಫಲ್ಯಗಳ ಕುರಿತಂತೆ ದೇಶಾದ್ಯಂತ ಟೀಕೆಗಳ ಮಹಾಪೂರವೇ ಹರಿದು ಬರುತ್ತಿರುವ ಸಂದರ್ಭದಲ್ಲಿ, ವಿತ್ತ ಸಚಿವ ಅರುಣ್ ಜೇಟ್ಲಿ ಬೀಸು ಹೇಳಿಕೆಗಳ ಮೂಲಕ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಹವಣಿಸಿದ್ದಾರೆ. ನೋಟು ನಿಷೇಧದ ಉದ್ದೇಶವೇ, ದೇಶದೊಳಗಿರುವ ಕಪ್ಪು ಹಣವನ್ನು ಹೊರತೆಗೆಯುವುದಾಗಿತ್ತು ಎಂದು ಘೋಷಣೆಯ...
30th Aug, 2018
‘‘ಹಿಮಾಲಯವನ್ನು ಅಗೆದು ಹಿಡಿದದ್ದೇನು?’’ ಕೊನೆಗೂ ಉತ್ತರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಅಧಿಕಾರ ಹಿಡಿದ ಸರಕಾರ, ಹೊರಟದ್ದು ದೇಶದೊಳಗಿರುವ ಕಪ್ಪು ಹಣವನ್ನು ಮಟ್ಟ ಹಾಕುವುದಕ್ಕೆ. ದೇಶದಲ್ಲಿ ಇಂದು ಕಪ್ಪು ಹಣ ಸಂಗ್ರಹವಾಗಿರುವುದು ಮಠಗಳು, ದೇವಸ್ಥಾನಗಳ ಹುಂಡಿಗಳಲ್ಲಿ...
29th Aug, 2018
ಹಿಟ್ಲರ್ ಕಾಲದ ಜರ್ಮನಿಯ ದಿನಗಳು ಭಾರತದಲ್ಲಿ ಮರುಕಳಿಸಿವೆ. ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು ಕವಿ, ಸಾಹಿತಿಗಳು, ವಕೀಲರ ಮೇಲೆ ಫ್ಯಾಶಿಸ್ಟ್ ಪ್ರಭುತ್ವ ಕೆಂಗಣ್ಣು ಬೀರಿದೆ. ಇವರು ಯಾರನ್ನೂ ಕೊಲ್ಲಲಿಲ್ಲ, ಯಾರ ಆಸ್ತಿಯನ್ನೂ ಲಪಟಾಯಿಸಲಿಲ್ಲ, ದನದ ಮಾಂಸ ತಿಂದರೆಂದು ಅಮಾಯಕರನ್ನು ಸಾಯಿಸಲಿಲ್ಲ, ಸಾಯಿಸಿ...
29th Aug, 2018
ನಿಮ್ಮ 'ವಾರ್ತಾ ಭಾರತಿ' ಇಂದು ತನ್ನ ಪ್ರಯಾಣದ 15 ವರ್ಷಗಳನ್ನು ಪೂರ್ತಿಗೊಳಿಸಿ 16ನೇ ವರ್ಷವನ್ನು ಪ್ರವೇಶಿಸಿದೆ. ಸಂಭ್ರಮದ ಈ ಸಂದರ್ಭದಲ್ಲಿ ಮಾಧ್ಯಮ ರಂಗದ ಕುರಿತಂತೆ ಒಂದಿಷ್ಟು ಆತ್ಮಾವಲೋಕನ ಇಲ್ಲಿದೆ; ನಮ್ಮ ಸಮಾಜದಲ್ಲಿ ಜನಸಾಮಾನ್ಯರೇ ಮಾಧ್ಯಮಗಳ ಪ್ರಧಾನ ಬಳಕೆದಾರರು. ಆದರೆ ಈ ಜನಸಾಮಾನ್ಯರು, ತಾವು...
27th Aug, 2018
ನೆರೆಯಿಂದ ತತ್ತರಿಸಿದ ಕೊಡಗನ್ನು ವೀಕ್ಷಿಸಲು ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಸಭೆಗೆ ಆಗಮಿಸಿದಾಗ ಅವರನ್ನು ಪರಿಸರ ತಜ್ಞರ ತಂಡವೊಂದು ಭೇಟಿ ಮಾಡಿತು. ಈ ಪರಿಸರವಾದಿಗಳಲ್ಲಿ ನಿವೃತ್ತ ಸೇನಾಧಿಕಾರಿಗಳು ಇದ್ದರು ಎನ್ನುವುದು ಬಹುಮುಖ್ಯ ಅಂಶ....
26th Aug, 2018
ಅಸ್ಪಶ್ಯವಾಗಿದ್ದ ಬಿಜೆಪಿಯ ಜೊತೆಗೆ ಇತರ ರಾಜಕೀಯ ಪಕ್ಷಗಳು ಕೈಜೋಡಿಸಿ, ಎನ್‌ಡಿಎ ಸ್ಥಾಪನೆಗೆ ಕಾರಣವಾದುದು ಅಟಲ್ ಬಿಹಾರಿ ವಾಜಪೇಯಿ ವ್ಯಕ್ತಿತ್ವ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೋದಿಯ ಮಾತಿನ ಅಬ್ಬರ, ಕಪಟ ರಾಜಕೀಯಗಳ ಆಯಸ್ಸು ಎಷ್ಟು ಸಮಯ ಎನ್ನುವುದನ್ನು ಅರಿತವರಿಲ್ಲ. ಆದರೆ ಬಿಜೆಪಿಗೆ ವಾಜಪೇಯಿ...
24th Aug, 2018
ಯಾವುದೇ ಒಂದು ದೇಶ ಇನ್ನೊಂದು ದೇಶದ ಸ್ನೇಹ ಹಸ್ತದ ಬಲವಿಲ್ಲದೆ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಭಾರತ ಸ್ವತಂತ್ರಗೊಂಡಾಗ ಅದನ್ನು ಆಧುನಿಕಗೊಳಿಸುವುದಕ್ಕಾಗಿ ಕೈಚಾಚಿದ ಹತ್ತು ಹಲವು ಮಿತ್ರದೇಶಗಳನ್ನು ನಾವು ಈ ಸಂದರ್ಭದಲ್ಲಿ ನೆನೆದುಕೊಳ್ಳಬೇಕಾಗಿದೆ. ಅವುಗಳು ನಮ್ಮ ಜೊತೆಗೆ ಬಲವಾಗಿ ನಿಲ್ಲದೇ ಇದ್ದಿದ್ದರೆ, ಭಾರತ ವಿಶ್ವದಲ್ಲಿ...
23rd Aug, 2018
ಆಶ್ರಮ ಎನ್ನುವ ಪದಕ್ಕೆ ಭಾರತೀಯ ಭಾಷೆಯಲ್ಲಿ ದೊಡ್ಡಅರ್ಥವಿದೆ. ಆಶ್ರಯ ನೀಡುವುದಷ್ಟೇ ಅಲ್ಲ, ಅದರಾಚೆಗಿನ ಆಧ್ಯಾತ್ಮಿಕ ಸಂಬಂಧವೂ ಜೊತೆಗೆ ಕೂಡಿಕೊಳ್ಳುತ್ತದೆ. ಋಷಿಮುನಿಗಳ ಗುಡಿಸಲಿಗೆ ಆಶ್ರಮ ಎಂದು ಕರೆಯುತ್ತಾರೆ. ಸನ್ಯಾಸಿಗರಿರುವ ಪ್ರದೇಶಗಳಿಗೂ ಆಶ್ರಮ ಎಂದು ಕರೆಯುವುದಿದೆ. ಇಂದಿನ ದಿನಗಳಲ್ಲಂತೂ ಭಾರತದಲ್ಲಿ ಶಾಲೆ, ಕಾಲೇಜುಗಳಿಗಿಂತಲೂ ದೊಡ್ಡ...
21st Aug, 2018
ಚಿಂತಕ, ನಿರ್ದೇಶಕ ಅಮಿತ್ ಮಧೇಸಿಯಾ ‘‘ಸರ್ಚಿಂಗ್ ಫಾರ್ ಸರಸ್ವತಿ’’ ಎನ್ನುವಂತಹ ಸಾಕ್ಷ ಚಿತ್ರವೊಂದನ್ನು ತೆಗೆದಿದ್ದಾರೆ. ಪುರಾಣ ಕಾಲದಲ್ಲಿ ಅಥವಾ ಋಗ್ವೇದ ಕಾಲದಲ್ಲಿ ಇತ್ತು ಎನ್ನುವ ಸರಸ್ವತಿ ಎಂಬ ನದಿಯ ಹುಡುಕಾಟಕ್ಕಾಗಿ ಮುಂದಾಗಿರುವ ಸರಕಾರದ ನಿಲುವನ್ನು ನಿಕಷಕೊಡ್ಡುವ ಸಾಕ್ಷ ಚಿತ್ರ ಇದು. ಮೋದಿ...
20th Aug, 2018
ಈ ಶತಮಾನದಲ್ಲೇ ಕಂಡರಿಯದಂತಹ ಭೀಕರ ಪ್ರವಾಹಕ್ಕೆ ಕೇರಳ ಸಾಕ್ಷಿಯಾಗಿದೆ. ಕಳೆದ ಎರಡು ವಾರಗಳಿಂದ ‘ದೇವರನಾಡು’ ಕೇರಳವನ್ನು ತತ್ತರಿಸುವಂತೆ ಮಾಡಿದ ನೆರೆ,ಭೂಕುಸಿತದಿಂದಾಗಿ ಈ ತನಕ 300ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರವಿವಾರ ಕೇರಳಕ್ಕೆ ಧಾವಿಸಿ, ನೆರೆಪೀಡಿತ ಪ್ರದೇಶಗಳ ವೈಮಾನಿಕ...
20th Aug, 2018
ಕೊಡಗು, ಕೇರಳದಲ್ಲಿ ಮಳೆ ತುಸು ಇಳಿಮುಖವಾಗಿದೆಯಾದರೂ, ಅದರ ದುಷ್ಪರಿಣಾಮಗಳು ಮಾತ್ರ ಹೆಚ್ಚುತ್ತಿವೆ. ತುಂಬಿ ಹರಿಯುತ್ತಿರುವ ನೀರಿನ ಕಾರಣದಿಂದಾಗಿ ಈವರೆಗೆ ತೀರಾ ಒಳ ಪ್ರದೇಶಗಳಿಗೆ ತಲುಪುವುದು ಕಷ್ಟವಾಗಿತ್ತು. ಹಲವು ಪ್ರದೇಶಗಳು ಸಂಪರ್ಕಕ್ಕೆ ಸಿಕ್ಕಿಲ್ಲದೇ ಇರುವುದರಿಂದ ಸಾವು ನೋವುಗಳನ್ನು ಲೆಕ್ಕ ಹಾಕುವುದು ಕಷ್ಟವಾಗುತ್ತಿತ್ತು. ಇದೀಗ...
17th Aug, 2018
ಕೊಡಗು ಎರಡು ವಿಷಯಗಳಿಗಾಗಿ ಸದಾ ಸುದ್ದಿಯಲ್ಲಿರುತ್ತದೆ. ಒಂದು ‘ಪ್ರತ್ಯೇಕ ರಾಜ್ಯ’ದ ಹೆಸರಿನಲ್ಲಿ. ಮಗದೊಂದು ‘ನೆರೆಯ ಕಾರಣಕ್ಕಾಗಿ’. ಪ್ರತ್ಯೇಕ ರಾಜ್ಯದ ಕೂಗಿಗೂ ಒಂದು ನಿರ್ದಿಷ್ಟ ಕಾರಣವಿದೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ ನಾಯಕರು ಕೊಡಗನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎನ್ನುವುದು ಪ್ರತ್ಯೇಕ ರಾಜ್ಯದ ಕೂಗಿಗೆ ಮುಖ್ಯ...
16th Aug, 2018
ಬಿಜೆಪಿಯ ಹಿಂದುತ್ವ ರಾಷ್ಟ್ರೀಯವಾದ ತನ್ನ ಉದಾರವಾದಿ ಮಾರ್ಗದಿಂದ ಉಗ್ರವಾದಿ ಮಾರ್ಗಕ್ಕೆ ಹೊರಳುತ್ತಿರುವ ದಿನಗಳನ್ನು ಸಂಕೇತಿಸುವಂತೆ ಹಿರಿಯ ರಾಜಕೀಯ ಮುತ್ಸದ್ದಿ, ಆರೆಸ್ಸೆಸ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾಗಿದ್ದಾರೆ. ವಾಜಪೇಯಿ ಸಾರ್ವಜನಿಕ ರಾಜಕಾರಣದಿಂದ ದೂರ ಉಳಿದು ಒಂದು ದಶಕವೇ ಉರುಳಿದೆ....
Back to Top