ಯುದ್ಧ

26th Jun, 2017
ಭಟ್ಟರು ರಿಕ್ಷಾದಿಂದ ಇಳಿದವರು ಕಬೀರನನ್ನೇ ಒಂದು ಕ್ಷಣ ದಿಟ್ಟಿಸಿದರು. ಅವರ ಕಣ್ಣಾಲಿ ತುಂಬಿತ್ತು. ‘‘ನೀನು ಇಲ್ಲೇ ನಿಂತು ನನಗಾಗಿ ಕಾಯುತ್ತಿರು. ಈಗ ಬಂದೆ ನಾನು. ಮತ್ತೆ ವಾಪಾಸ್ ಮನೆಗೆ ಹೋಗಲಿಕ್ಕಿದೆ...’’ ಎಸ್‌ಟಿಡಿ ಬೂತ್‌ನಿಂದ ತನ್ನಲ್ಲಿರುವ ದೂರವಾಣಿ ಸಂಖ್ಯೆಯಿಂದ ಭಟ್ಟರು ಫೋನಾಯಿಸಿದರು. ಅವರು ಫೋನಾಯಿಸಿದ್ದು ಪಪ್ಪು...
22nd Jun, 2017
ಮನೆಯಲ್ಲಿ ದಂಪತಿ ಆತಂಕದಿಂದ ಪಪ್ಪುವಿನ ದಾರಿ ಕಾಯುತ್ತಿದ್ದರು. ದೂರದಲ್ಲಿ ಒದ್ದೆಯಾಗುತ್ತಾ ಪಪ್ಪು ಬರುತ್ತಿರುವುದು ನೋಡಿದರು. ಹೇಗಾದರೂ ಸರಿ, ಬಂದನಲ್ಲ ಎಂದು ಇಬ್ಬರಿಗೂ ಸಮಾಧಾನವಾಯಿತು. ‘‘ಎಲ್ಲಿಗೆ ಹೋದದ್ದೋ?’’ ಅನಂತಭಟ್ಟರು ಕೇಳಿದರು. ‘‘ನೇತ್ರಾವತಿ ನೀರು ಕೆಂಪಾಗಿದೆ ಅಪ್ಪಾ....ನೀರಿನ ಬದಲು ರಕ್ತ ಹರೀತಾ ಇದೆ.....’’ ‘‘ನೆರೆಯ ಕೆಸರು ನೀರು ಕಣೋ...ಒಂದೆರಡು...
17th Jun, 2017
ಹೀಗೇ ಅದು ಇದು ಮಾತನಾಡುತ್ತಾ ಅವರು ಮತ್ತೆ ನಿದ್ದೆಗೆ ಶರಣಾಗಿದ್ದರು. ಹೊರಗಡೆ ಜಿಟಿಪಿಟಿ ಮಳೆ ಸುರಿಯುತ್ತಲೇ ಇತ್ತು. ಅನಂತ ಭಟ್ಟರು ನಿದ್ದೆ ಹೋಗಿ ಒಂದು ತಾಸು ಕಳೆದಿರಬಹುದು. ಇದಕ್ಕಿದ್ದಂತೆ ಅದೇನೋ ಸದ್ದು ಅವರನ್ನು ಎಚ್ಚರಿಸಿತು. ಎದ್ದು ಕುಳಿತು ಕಣ್ಣುಜ್ಜಿಕೊಂಡರು. ಯಾರೋ ಬಾಗಿಲು...
14th Jun, 2017
ಒಂದು ದಿನ ಪತ್ನಿಯನ್ನು ನೋಡು ನೋಡುತ್ತಾ ತಟ್ಟನೆ ಕೇಳಿಯೇ ಬಿಟ್ಟರು ‘‘ನಿನಗಾದರೂ ಅವನು ಸೇನೆ ಸೇರದಂತೆ ತಡೆಯಬಹುದಿತ್ತಲ್ಲ? ನೀನೇಕೆ ಹಟ ಹಿಡಿಯಬಾರದಿತ್ತು?’’ ಲಕ್ಷ್ಮಮ್ಮ ಆ ಮಾತಿಗೆ ಪ್ರತಿಕ್ರಿಯಿಸಲೇ ಇಲ್ಲ. ‘‘ಬಹುಶಃ ನೀನು ಅವತ್ತು ಹಟ ಹಿಡಿದಿದ್ದರೆ ನನಗೂ ಒಂದು ನಿರ್ಧಾರ ತಳೆಯಲು ಸುಲಭವಾಗುತ್ತಿತ್ತು....
10th Jun, 2017
ಯುನಿಟ್‌ಗೆ ಬಂದ ಪಪ್ಪು ಎರಡು ದಿನ ಯಾರೊಂದಿಗೂ ಮಾತನಾಡಿರಲಿಲ್ಲ. ಅಪ್ಪಯ್ಯ ಬಂದು ಎರಡು ಬಾರಿ ಅವನನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಪಪ್ಪು ಸಿಡಿದಿದ್ದ ‘‘ಒಬ್ಬ ಸೈನಿಕನಾಗಿ ವೆಂಕಟನ ಬಗ್ಗೆ ತಪ್ಪಾಗಿ ಮಾತ ನಾಡಲು ನಾಚಿಕೆಯಾಗುವುದಿಲ್ಲವೆ ನಿನಗೆ?’’ ಆ ಮಾತಿಗೆ ಅಪ್ಪಯ್ಯ ಆವಕ್ಕಾಗಿದ್ದ. ‘‘ಆ ವಿಷಯ ಈಗ್ಯಾಕೆ? ಊರಿನಲ್ಲಿ...
07th Jun, 2017
ಅಂದು ರಾತ್ರಿ ಅನಂತಭಟ್ಟರು ಅಕ್ಷರಶಃ ವ್ಯಗ್ರರಾಗಿದ್ದರು. ಗುರೂಜಿಯೂ ಪರೋಕ್ಷವಾಗಿ ಪಪ್ಪುವನ್ನು ಸಂಪ್ರದಾಯ ಬಿಟ್ಟವನು ಎಂದೇ ಹೇಳಿ ಬಿಟ್ಟರಲ್ಲ? ಅವರಿಗೆ ತೀರಾ ಆಘಾತವಾಗಿತ್ತು. ‘‘ಹೂಂ...ಸಂಪ್ರದಾಯ, ದೇಶ ಎರಡನ್ನೂ ಬಿಟ್ಟು ಹೋದವರು ಯಾರು ಎನ್ನುವುದು ಇಡೀ ಊರಿಗೆ ಗೊತ್ತಿದೆ. ಜಾನಕಿ ಅಮೆರಿಕದಲ್ಲಿ ಕ್ರಿಶ್ಚಿಯನ್ ಪ್ರೊಫೆಸರ್ ಒಬ್ಬನನ್ನು...
03rd Jun, 2017
‘‘ನೀವು ಗುರೂಜಿಯನ್ನು ಭೇಟಿಯಾಗಲಿಲ್ಲವೇ?’’ ‘‘ಅವರು ಯಾರು?’’ ‘‘ಅದೇ ಶಾಖೆ ನಡೆಸುತ್ತಾರಲ್ಲ? ಭಾಷಣ ಮಾಡುತ್ತಾರೆ....’’ ‘‘ಯಾರು ಶ್ಯಾಂಭಟ್ಟರ...? ಯಾರೋ ಹೇಳಿದರು ಅವರ ಮನೆಗೆ ಹೋಗಿ ವಿಷಯ ಹೇಳಿ ಅಂತ. ಅವರ ಮನೆಗೆ ಒಂದು ಹತ್ತು ಬಾರಿಯಾದರೂ ಹೋಗಿದ್ದೆ. ಆದರೆ ಅವರು ಒಮ್ಮೆಯೂ ಮಾತನಾಡಲು ಸಿಗಲಿಲ್ಲ..’’ ಪಪ್ಪುವಿಗೆ ಒಳಗೊಳಗೆ...
31st May, 2017
‘‘ಎಲ್ಲರೂ ಹಾಗೆ ಹೇಳಿದರೆ ದೇಶವನ್ನು ಕಾಪಾಡುವವರು ಯಾರು? ಹಾಗಾದರೆ ಇಡೀ ಊರು ಮೊನ್ನೆ ನನ್ನ ಮಗನಿಗೆ ಸನ್ಮಾನ ಮಾಡಿತಲ್ಲ? ಸುಮ್ಮನೆ ಸನ್ಮಾನ ಮಾಡಿದರಾ? ಆ ಯೋಗ್ಯತೆ ಇದ್ದುದರಿಂದ ತಾನೇ ಸನ್ಮಾನ ಮಾಡಿರುವುದು...’’ ‘‘ಈ ಸನ್ಮಾನ, ಗಿನ್ಮಾನ ಎಲ್ಲ ಪೊಲಿಟಿಕ್ಸ್ ಭಟ್ಟರೆ. ಲೆಕ್ಕದ ಮೇಷ್ಟ್ರಿಗೆ...
28th May, 2017
ಪಪ್ಪು ಕೂಡ ನಸು ನಕ್ಕ. ಮಗನ ಮುಖದ ಮಂದಹಾಸ ಕಂಡು ತಾಯಿಯ ಮನಸ್ಸು ಸಮಾಧಾನವಾಯಿತು. ಹಾಗಾದರೆ ನಾಳೆ ಪದ್ಮನಾಭರು ಬರುವುದೊಂದೇ ಬಾಕಿ. ಈತನ ರಜೆ ಮುಗಿಯುವುದರೊಳಗಾಗಿ ಎಲ್ಲ ಕಾರ್ಯಕ್ರಮಗಳನ್ನೂ ಮುಗಿಸಿ ಬಿಡಬೇಕು. ಮರುದಿನ ಮನೆಯಲ್ಲಿ ಸಡಗರ. ಪಪ್ಪುವನ್ನು ಬೇಗನೆ ಎಬ್ಬಿಸಿ ಸಿದ್ಧಗೊಳಿಸಿದರು...
24th May, 2017
‘‘ಪ್ರತಾಪ ಸಿಂಹ ನಮ್ಮ ಊರಿನ ಸಿಂಹದ ಮರಿ. ಭಾರತ ಮಾತೆಯ ರಕ್ಷಣೆಗಾಗಿ ಹಗಲಿರುಳು ಗಡಿಯಲ್ಲಿ ಹೋರಾಡುತ್ತಿರುವ ಹಿಂದೂ ತರುಣ. ಸದಾ ಕಾಲು ಕೆದರಿ ಜಗಳಕ್ಕೆಳೆಯುವ ಪಾಕಿಸ್ತಾನ ಇಂದು ಬಾಯಿ ಮುಚ್ಚಿ ಕುಳಿತಿದ್ದರೆ ಅದರಲ್ಲಿ ನಮ್ಮ ಊರಿನ ತರುಣ ಪ್ರತಾಪ ಸಿಂಹನ ಘರ್ಜನೆಯ...
20th May, 2017
ಅದೊಂದು ಬೆಳಗ್ಗೆ ಪಪ್ಪು ಅಂಗಳದಲ್ಲಿ ಕೆಲಸ ಮಾಡುತ್ತಿದ್ದಾಗ ಮೇಲಧಿಕಾರಿ ಬಂದವನೇ ಪಪ್ಪುವಿನ ಅಂಗಿ ಎಳೆದು, ಕೆನ್ನೆಗೆ ಛಟೀರ್ ಎಂದು ಬಾರಿಸಿದ. ‘‘ನನ್ನ ಹೆಂಡತಿಯ ಜೊತೆಗೆ ಅಗೌರವವಾಗಿ ನಡೆದುಕೊಳ್ಳುವಷ್ಟು ಧೈರ್ಯವೆ?’’ ಎಂದ. ಪಪ್ಪುವಿಗೆ ಏನೂ ಅರ್ಥವಾಗಲಿಲ್ಲ. ಅವನಿಗೆ ತೀವ್ರ ಅವಮಾನವಾಗಿತ್ತು. ಅಳು ಉಕ್ಕಿ ಬಂತು....
17th May, 2017
‘‘ಅವಳು ಅಮೆರಿಕಕ್ಕೆ ಹೋಗಿದ್ದಾಳೆ...ಅದೇನೋ ಥೀಸಿಸ್ ಬರೆಯುತ್ತಾಳಂತೆ...’’ ಪಪ್ಪು ಮುಂದುವರಿಸಿದ. ‘‘ನೀನು ಆ ಪತ್ರವನ್ನಾದರೂ ಆಕೆಗೆ ಕೊಡಬಹು ದಿತ್ತಲ್ಲ?’’ ಪಪ್ಪು ಉತ್ತರಿಸಲಿಲ್ಲ. ಅವನು ಸೀದಾ ಎದ್ದು ಮಲಗುವುದಕ್ಕೆ ಹೊರಟ. ಒಂದು ಸಿಗರೇಟು ಎಳೆದು ಮುಗಿಸಿ ಅಪ್ಪಯ್ಯ ಮಲಗುವ ಕಡೆ ಹೋದರೆ ಅಲ್ಲಿ ಪಪ್ಪು ಇರಲಿಲ್ಲ. ಒಳಗೆ...
13th May, 2017
ದಿನಕಳೆದಂತೆ ಅವನಿಗೆ ಊರು ಅಪರಿಚಿತ ಅನ್ನಿಸ ತೊಡಗಿತು. ತನ್ನ ಸ್ಥಳ ಇದಲ್ಲ. ಎಲ್ಲೋ ದೂರದಲ್ಲಿರುವ ಸೇನಾ ಶಿಬಿರವೇ ತನ್ನ ಸ್ಥಳ. ಇಲ್ಲಿ ಯಾರೂ ತನ್ನವರಿಲ್ಲ ಎನ್ನುವ ಏಕಾಂತತೆ. ಒಮ್ಮೋಮ್ಮೆ, ಈ ತಾಯಿಯೂ ಅಪರಿಚಿತರಂತೆ ಮಾತನಾಡುತ್ತಿದ್ದಾರೆ ಅನ್ನಿಸುತ್ತಿತ್ತು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಆಗಾಗ...
10th May, 2017
ಹೀಗೆ ಕೆಲ ದಿನ ಕಳೆದ ಬಳಿಕ ಮನೆಯಲ್ಲೇ ಅಕ್ಕ ಪಕ್ಕ ಕೆಲಸ ಮಾಡುವುದು, ತೆಂಗಿನ ಬುಡವನ್ನು ಬಿಡಿಸುವುದು ಮಾಡತೊಡಗಿದ. ‘‘ಅಯ್ಯೋ ಈ ಕೆಲಸಕ್ಕೆಲ್ಲ ಬೇರೆ ಜನರಿದ್ದಾರೆ ಮಗಾ’’ ಎಂದು ಲಕ್ಷ್ಮಮ್ಮ ಹೇಳಿದರೆ ಪಪ್ಪು ಅದನ್ನು ಕಿವಿಗೆ ಹಾಕುತ್ತಿರಲಿಲ್ಲ. ‘‘ಸೇನೆಯಲ್ಲಿ ನಮ್ಮದು ಇದೇ ಕೆಲಸ ಅಮ್ಮ....
07th May, 2017
‘‘ಅರೇ ಗೊತ್ತಿಲ್ಲವೇ? ನಾನು ಅಮೆರಿಕಕ್ಕೆ ಹೋಗೋದು ಇಡೀ ಊರಿಗೆ ಗೊತ್ತು. ಹೆಚ್ಚಿನ ಓದಿಗಾಗಿ ಹೋಗುತ್ತಿದ್ದೇನೆ. ನಾನೊಂದು ಥೀಸಿಸ್ ಕೂಡ ಮಾಡುತ್ತಿದ್ದೇನೆ. ನನಗೆ ಶಾಲೆಯಲ್ಲಿ ಒಂದು ಸನ್ಮಾನ ಕಾರ್ಯಕ್ರಮ ಕೂಡ ಇತ್ತು. ನೀನೂ ಇರಬೇಕಾಗಿತ್ತು ಅದನ್ನು ನೋಡಲು....ಇಲ್ಲೇ ಕೂತಿರು. ಚಾ ತರ್ತೇನೆ’’ ಜಾನಕಿ ಅಡುಗೆ...
03rd May, 2017
ಸುಮಾರು ಒಂದು ತಿಂಗಳ ರಜೆ. ಅಪ್ಪನಿಗೆ ಫೋನ್‌ನಲ್ಲೇ ತಾನು ಬರುತ್ತಿರುವ ಸುದ್ದಿ ತಿಳಿಸಿದಾಗ ಅವರು ಗದ್ಗದಿತರಾಗಿದ್ದರು. ‘‘ಬಾ ಮಗಾ...ಬೇಗ ಬಾ... ತಾಯಿ ಕಾಯ್ತಿ ಇದ್ದಾಳೆ ಇಲ್ಲಿ’’ ಹೌದು ತಾಯಿ ಕಾಯುತ್ತಿದ್ದಾಳೆ. ಜೊತೆಗೆ ಅಪ್ಪಾಜಿ, ಗುರೂಜಿ, ಜಾನಕಿ ಕೂಡ. ಅವನೂ ಭಾವುಕನಾಗಿದ್ದ. ಆ ಬಳಿಕ...
29th Apr, 2017
‘‘ಒಂದು ಯುದ್ಧವನ್ನು ಗೆದ್ದರೆ ಮಾತ್ರ ಅವಳ ಎದುರು ಮುಖಕ್ಕೆ ಮುಖ ಕೊಟ್ಟು ನನ್ನ ಪ್ರೇಮವನ್ನು ಹೇಳಲು ನನಗೆ ಧೈರ್ಯ’’ ‘‘ಅಂದರೆ ನಿನ್ನ ಪ್ರೇಮವನ್ನು ಅರುಹುವುದಕ್ಕಾ ಗಿಯೇ ಗಡಿಯಲ್ಲಿ ಒಂದು ಯುದ್ಧ ನಡೆಯಬೇಕೇ?’’ ‘‘ನಡೆದರಷ್ಟೇ ಸಾಲುವುದಿಲ್ಲ....ಶತ್ರುಗಳ ನೂರು ತಲೆಗಳನ್ನಾದರೂ ಚೆಂಡಾಡಬೇಕು...ಜಾನಕಿ ಅದನ್ನು ಕೇಳಿ ರೋಮಾಂಚನಗೊಳ್ಳಬೇಕು...ಗುರೂಜಿ ನನ್ನನ್ನು...
26th Apr, 2017
ಅಪ್ಪಯ ಹೇಳಿದ ಸುದ್ದಿ ಸುಳ್ಳಿನ ಕಂತೆ ಎನ್ನುವುದಕ್ಕೆ ಅತೀ ದೊಡ್ಡ ಸಾಕ್ಷಿಯಾಗಿ ಜಾನಕಿಯಿದ್ದಳು. ವೆಂಕಟನ ಎದೆಗೆ ಎಷ್ಟು ಗುಂಡು ಬಿದ್ದಿತ್ತು ಎನ್ನುವುದನ್ನು ಸ್ಪಷ್ಟ ವಾಗಿ ಹೇಳಿದ್ದಳು ಜಾನಕಿ. ಗುರೂಜಿ ಎಲ್ಲವನ್ನೂ ಆಕೆಗೆ ವಿವರಿಸಿದ್ದಾರೆ. ವೆಂಕಟ ಯುದ್ಧ ಭೂಮಿಯಲ್ಲಿ ಪಾಕಿಸ್ತಾನಿಯರ ವಿರುದ್ಧ ಹೇಗೆ...
22nd Apr, 2017
ಮೀನಾಕ್ಷಿ ಎದ್ದು ಜಾನಕಿಯ ಪೆಟ್ಟಿಗೆಯನ್ನು ಸಿದ್ಧಪಡಿಸತೊಡಗಿದಳು. ಅಪ್ಪಾಜಿಯ ಗಾಂಭೀರ್ಯ ಮತ್ತು ವೌನವೇ ಜಾನಕಿಗೆ ಎಲ್ಲವನ್ನೂ ತಿಳಿಸುತ್ತಿತ್ತು. ಅವಳು ಎದ್ದು ಪ್ರಯಾಣಕ್ಕೆ ಸಿದ್ಧವಾದಳು. ಜಾನಕಿಯ ಬಟ್ಟೆ ಬರೆ, ಪುಸ್ತಕಗಳ ಪೆಟ್ಟಿಗೆಯನ್ನು ಮೀನಾಕ್ಷಿಯೇ ಕಾರಿನಲ್ಲಿಟ್ಟಳು. ಕೊನೆಯ ಬಾರಿ ಮೀನಾಕ್ಷಿಯನ್ನು ತಬ್ಬಿಕೊಂಡ ಜಾನಕಿ ಕಾರು ಹತ್ತಿದಳು. ಈಗ...
19th Apr, 2017
ತಿಂಗಳುಗಳ ಮೇಲೆ ತಿಂಗಳು ಉರುಳುತ್ತಿದ್ದವು. ಜಾನಕಿ ಗಂಭೀರವಾದಳು. ಮೀನಾಕ್ಷಿಯ ಜೊತೆಗಿನ ಒಡನಾಟವನ್ನೂ ಬಿಟ್ಟು ಪುಸ್ತಕಕ್ಕೆ ಇನ್ನಷ್ಟು ಅಂಟಿಕೊಂಡಳು. ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ಹತ್ತಿರವಾಗ ತೊಡಗಿತ್ತು. ಪರೀಕ್ಷೆಗೆ ಬೇಕಾದ, ಹೊರ, ಒಳ ತರಬೇತಿಗೆ ಜಾನಕಿ ಸಿದ್ಧಳಾಗತೊಡಗಿದಳು. ಅದೊಂದು ಶನಿವಾರ ಮಧ್ಯಾಹ್ನ ಮೀನಾಕ್ಷಿಯ ಜೊತೆಗೆ...
15th Apr, 2017
ಪುತ್ತೂರು ತಲುಪುವಾಗ ಶ್ಯಾಮಭಟ್ಟರು ‘‘ಮಗಳೇ...’’ ಎಂದು ಕರೆದರು. ತಂದೆಯ ಕಡೆಗೆ ನೋಡಿದಳು ಜಾನಕಿ. ‘‘ಮಗಳೇ...ಪಠ್ಯದ ಕಡೆಗೆ ಮಾತ್ರ ಗಮನ ಕೊಡು. ಪಠ್ಯದ ಕಡೆಗೆ ಮಾತ್ರ...’’ ಎಂದರು. ‘‘ಆಯಿತು ಅಪ್ಪಾಜಿ’’ ಎಂದಳು ಜಾನಕಿ. ತಂದೆಗೆ ತಾನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಇಷ್ಟವಿಲ್ಲವೋ... ‘‘ನೋಡು...ಒಳ್ಳೆಯ ಅಂಕ ಬಂದರೆ, ಮುಂದಕ್ಕೆ...
12th Apr, 2017
 ಜಾನಕಿಯ ಸಂಭ್ರಮಗಳು, ಮುಸ್ತಫಾನ ಹೆಮ್ಮೆಗಳ ನಡುವೆಯೇ ಮೊದಲ ಹಂತದ ಪರೀಕ್ಷೆ ಅವರಿಗೆ ಎದುರಾಗಿತ್ತು. ಅದಕ್ಕಾಗಿ ತಯಾರಿ ನಡೆಯುತ್ತಿತ್ತು. ಎಲ್ಲರೂ ತಮ್ಮ ತಮ್ಮ ಪುಸ್ತಕದೊಳಗೆ ಸೇರಿಕೊಳ್ಳತೊಡಗಿದರು. ಜಾನಕಿ, ಮುಸ್ತಫಾರೂ ಈ ಬಾರಿ ಪರೀಕ್ಷೆಗೆ ಹೆಚ್ಚು ಆದ್ಯತೆ ನೀಡಿದ್ದರು. ಪರೀಕ್ಷೆ ಇನ್ನೇನು ಮುಗಿಯುತ್ತಿರಬೇಕು ಎನ್ನುವಷ್ಟರಲ್ಲಿ...
08th Apr, 2017
ಎರಡನೆ ವರ್ಷಕ್ಕೆ ಕಾಲಿಡುವಷ್ಟರಲ್ಲಿ ಜಾನಕಿ ಹತ್ತು ಹಲವು ಹೊಸ ವಿಷಯಗಳನ್ನು ಕಲಿತಿದ್ದಳು. ಅದರಲ್ಲಿ ಮುಖ್ಯವಾಗಿ ಮುಸ್ತಫಾ ಮತ್ತು ಅವನ ಜಾತಿಯವರ ಕುರಿತಂತೆ. ಆ ಜಾತಿಯವರಲ್ಲಿ ಒಳ್ಳೆಯವರೂ ಇದ್ದಾರೆ ಎನ್ನುವುದು ಮೊದಲ ವರ್ಷದ ಕಲಿಕೆಯ ಸಂದರ್ಭದಲ್ಲಿ ಅವಳು ಮನನ ಮಾಡಿಕೊಂಡ ಬಹುಮುಖ್ಯ ವಿಷಯ. ಆದರೆ...
05th Apr, 2017
ಇದೆಲ್ಲ ನಡೆದು ಮೂರು ನಾಲ್ಕು ತಿಂಗಳಾಗಬಹುದು. ಒಂದು ದಿನ ಜಾನಕಿಯನ್ನು ಜ್ವರ ಅಂಟಿಕೊಂಡಿತು. ಜ್ವರ ಎಷ್ಟು ತೀವ್ರವಾಗಿತ್ತು ಎಂದರೆ ನಾಲ್ಕು ದಿನ ತರಗತಿಗೆ ಹಾಜರಾಗುವುದಕ್ಕೆ ಸಾಧ್ಯವಾಗಲಿಲ್ಲ. ಊರಿನಿಂದ ತಂದೆ, ತಾಯಿ ಇಬ್ಬರೂ ತಕ್ಷಣ ಕಾರು ಮಾಡಿಕೊಂಡು ಬಂದರು. ಜಾನಕಿ ಮನೆಯಲ್ಲಿ ವಿಶ್ರಾಂತಿ...
01st Apr, 2017
ಅಂದು ರವಿವಾರ. ಇದಿನಬ್ಬರು ಜವಳಿ ಅಂಗಡಿಯನ್ನು ಸಂಜೆ ಆರು ಗಂಟೆಗೇ ಮುಚ್ಚಿದರು. ಸಾಧಾರಣವಾಗಿ ಶುಕ್ರವಾರ ಅವರ ಅಂಗಡಿಗೆ ರಜೆ. ಉಳಿದಂತೆ ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತು ಗಂಟೆಯವರೆಗೂ ತೆರೆದಿರುತ್ತದೆ. ಅಂದು ಅಂಗಡಿ ಮುಚ್ಚಿದವರು ಮನೆಯ ದಾರಿ ಹಿಡಿಯದೆ ನೇರವಾಗಿ ಪುತ್ತೂರಿನ ನಗರವನ್ನು...
25th Mar, 2017
ಆದರೆ ಜಾನಕಿಗೆ ಅದನ್ನು ಒಪ್ಪುವುದು ತೀರಾ ಕಷ್ಟವಾಗುತ್ತಿತ್ತು. ತನ್ನೆದುರೇ ‘ಸುಗ್ರೀವನ ಹೆಂಡತಿಯ ಹೆಸರು’ ಹೇಳಿದ್ದನಲ್ಲ! ಅವನಿಗೆ ರಾಮಾಯಣದ ಬಗ್ಗೆ ತುಂಬಾ ಗೊತ್ತಿದೆ ಎಂದು ಆಗಲೇ ಅನ್ನಿಸಿತ್ತು. ಆದರೆ ಈಗ ಮೀನಾಕ್ಷಿ ಹೇಳುವುದು ಕೇಳಿದರೆ? ಅದೂ ಗುಣಕರ್ ಸಾರ್ ಸುಳ್ಳು ಯಾಕೆ ಹೇಳಬೇಕು?...
22nd Mar, 2017
ಅಷ್ಟರಲ್ಲಿ ‘‘ಎಂತ...ಎಂತ...ಎಂತ...’’ ಎನ್ನುತ್ತಾ ಸುಧಾಕರ, ನರೇಶ ಓಡಿ ಬಂದರು. ‘‘ನಾವು ಮುಸ್ತಫಾನಲ್ಲಿ ಮಾತನಾಡಲಿಕ್ಕೆ ಬಂದದ್ದು...ನಿಮ್ಮೆಟ್ಟಿಗಲ್ಲ...’’ ಸತೀಶನ ಜೊತೆಗಿದ್ದಾತ ಹೇಳಿದ. ‘‘ಎಂತ ಮಾತನಾಡುವುದು...ನೀವು ಯಾರು, ಮೇಷ್ಟ್ರ? ನಮ್ಮ ಕ್ಲಾಸಿನೊಳಗೆ ಹೇಗೆ ಕಾಲಿಟ್ಟಿರಿ?’’ ಸುಧಾಕರ ಜೋರಲ್ಲಿ ಕೇಳಿದ. ‘‘ಯಾಕೆ ಕಾಲಿಡಬಾರದು? ಇದೇನು ಕಾಂಗ್ರೆಸ್ ಕಚೇರಿಯಲ್ಲವಲ್ಲ’’ ಸತೀಶ್ ಹೇಳಿದ. ಇದು ನರೇಶ್‌ನನ್ನು...
18th Mar, 2017
ಜಾನಕಿಯ ಕುರಿತಂತೆ ಮುಸ್ತಫಾನ ದುರದೃಷ್ಟ ಮುಗಿಯಲಿಲ್ಲ. ಅದು ಮುಂದುವರಿಯುತ್ತಲೇ ಇತ್ತು. ವಿವೇಕ ಶ್ರೀ ಕಾಲೇಜಿನಲ್ಲಿ ಪ್ರತೀ ವರ್ಷ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಇದೊಂದು ಐಚ್ಛಿಕ ಪರೀಕ್ಷೆ. ಇಷ್ಟವಿದ್ದವರು ಭಾಗವಹಿಸಬಹುದಿತ್ತು. ಅದರ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿತ್ತು. ಕಾಲೇಜಿನಿಂದ ಸುಮಾರು 30 ಮಂದಿ...
15th Mar, 2017
‘‘ಅದೆಂತ ಕಿಸೆಯಲ್ಲಿ? ಯಾರು ಕೊಟ್ಟದ್ದು ಪೆನ್ನು?’’ ಸಣಕಲು ವಿದ್ಯಾರ್ಥಿ ಕೇಳಿದ. ‘‘ಕನ್ನಡ ಪಂಡಿತರು ಕೊಟ್ಟದ್ದು. ಬಹುಮಾನವಾಗಿ’’ ಮುಸ್ತಫಾ ಮೆಲ್ಲಗೆ ಉತ್ತರಿಸಿದ. ‘‘ಕೊಟ್ಟದ್ದೋ...ಎಗರಿಸಿದ್ದೋ...’’ ಇನ್ನೊಬ್ಬ ತನ್ನ ತೋರು ಬೆರಳನ್ನು ಮುಸ್ತಫಾನ ಹಣೆಗೆ ಚುಚ್ಚಿ ಕೇಳಿದ. ‘‘ಕೊಟ್ಟದ್ದು. ಬಹುಮಾನವಾಗಿ ಕೊಟ್ಟದ್ದು...’’ ಮುಸ್ತಫಾ ಜೋರಲ್ಲಿ ಹೇಳಿದ. ‘‘ಯಾವ ದೇಶ ಸೇವೆ ಮಾಡಿದ್ದಕ್ಕೆ...
11th Mar, 2017
ಮುಸ್ತಫಾ ತಲೆಯಾಡಿಸಿದ್ದ. ಮತ್ತು ಆ ಬಗ್ಗೆ ತನ್ನ ತಂದೆಯ ಬಳಿ ಒಂದಿಷ್ಟು ಮಾಹಿತಿ ಸಂಗ್ರಹಿಸಿ ಭಾಷಣ ರೂಪಿಸಿದ್ದ. ಮುಸ್ತಫಾನ ತಂದೆಯ ಹೆಸರು ಇದಿನಬ್ಬ ಬ್ಯಾರಿ. 60ರ ದಶಕದಲ್ಲೇ ಎಸೆಸೆಲ್ಸಿ ಕಲಿತವರು. ಪುಸ್ತಕ ಓದುವ ಅಭ್ಯಾಸ ಅವರಿಗೆ ಚೆನ್ನಾಗಿಯೇ ಇತ್ತು. ಪುತ್ತೂರಿನಲ್ಲೇ ಸಣ್ಣದೊಂದು...
Back to Top