ಭೀಮ ಚಿಂತನೆ

08th Nov, 2018
ಮೊದಲ ಮಹಾಯುದ್ಧ ಮುಗಿದ ನಂತರ ಯೂರೋಪ್‌ನ ಬಹುತೇಕ ದೇಶಗಳಿಗೆ ಪ್ರಜಾಸತ್ತೆಯು ದೇಶಕ್ಕೂ ಸಮಾಜಕ್ಕೂ ಹಿತವಲ್ಲವೆಂದು ಅನಿಸತೊಡಗಿತು. ರಶ್ಯ ದೇಶವು ಕಮ್ಯುನಿಸಂನ ತತ್ವಜ್ಞಾನವನ್ನು ಸ್ವೀಕರಿಸಿ, ಅದುವೇ ಎಲ್ಲ ದೇಶಗಳಿಗೆ ಶ್ರೇಯವೆಂದು ಪ್ರಚಾರ ಮಾಡಿತು. ಜರ್ಮನಿಯಲ್ಲಿ ನಾಝಿಸಮ್ ಆರಂಭವಾಗಿ, ಅದೂ ಅಂತೆಯೇ ಪ್ರಚಾರ ನಡೆಸಿ,...
01st Nov, 2018
ಭಾಗ-2 ರಾಜ್ಯ ಸಂಸ್ಥೆಯು ಸಮಾಜದಲ್ಲಿ ಎಲ್ಲದಕ್ಕೂ ಹೆಚ್ಚು ಶ್ರೇಷ್ಠವಾದ ಸಂಸ್ಥೆಯೆಂದು ಫ್ಯಾಶಿಸಂ ನಂಬುತ್ತದೆ. ಸಮಾಜವು ಒಂದು ಸಾವಯವ, ಏಕಾತ್ಮ ವಸ್ತುವಾಗಿದ್ದು ವ್ಯಕ್ತಿಗಳು ಅದರ ಘಟಕಾಂಶರು. ದೇಹಕ್ಕಾಗಿ ಅವಯವ ಹಾಗೂ ಜೀವಕೋಶಗಳು ಇರುವಂತೆ ವ್ಯಕ್ತಿಗಳು ಸಮಾಜಕ್ಕಾಗಿ ಇರುತ್ತಾರೆ. ರಾಷ್ಟ್ರ ಇಲ್ಲವೇ ರಾಜ್ಯವೆಂದರೆ ಸಮಾಜದ ಅಭಿವೃದ್ಧಿಗೊಂಡ...
25th Oct, 2018
ಭಾಗ-1 ಮೊದಲ ಮಹಾಯುದ್ಧದ ತರುವಾಯ ಇಟಲಿಯಲ್ಲಿ ಉದಯಕ್ಕೆ ಬಂದ ಸಂಪೂರ್ಣ ಆಧುನಿಕ ಸರ್ವಾಧಿಕಾರಿ ರಾಜಕೀಯ ವಿಚಾರಪ್ರಣಾಲಿಕೆ. ಇಟಲಿಯ ಅಡಚಣೆ ಹಾಗೂ ಗೊಂದಲದ ಪರಿಸ್ಥಿತಿಯಲ್ಲಿ ಫ್ಯಾಶಿಸಂ ಹುಟ್ಟಿಕೊಂಡಿತು. ಬೆನಿತೊ ಮುಸಲೋನಿಯು ಹೊಸದಾಗಿ ಬೆಳೆಯುವ ಈ ಚಳವಳಿ ಹಾಗೂ ಸಂಘಟನೆಯ ಮುಂದಾಳುತನವನ್ನು ವಹಿಸಿದ್ದನು. ಶುರುವಿನಲ್ಲಿ ಅವನು...
04th Oct, 2018
ಭಾಗ-3 ಈ ಸ್ಥಿತಿಯನ್ನು ಕುರಿತು ಯೋಚಿಸಿದಾಗಲೆಲ್ಲ ನನಗೆ ಬಿಸ್ಮಾರ್ಕ್ ಹಾಗೂ ಬರ್ನಾರ್ಡ್ ಶಾ ಅವರ ಮಾತುಗಳು ನೆನಪಾಗುತ್ತವೆ. ಬಿಸ್ಮಾರ್ಕ್, ‘‘ರಾಜಕೀಯವೆಂದರೆ ಅಸಂಭವನೀಯವಾದ ಒಂದು ಸಂಗತಿಯನ್ನು ಸಾಧಿಸುವ ಆಟವಲ್ಲ. ರಾಜಕೀಯವೆಂದರೆ ಸಂಭವನೀಯವಾದ ಸಂಗತಿಯನ್ನು ಸಾಧ್ಯಗೊಳಿಸುವ ಆಟ’’, ಎಂದಿರುವನು. ಕೆಲವೇ ದಿನಗಳ ಕೆಳಗೆ ಬರ್ನಾರ್ಡ್ ಶಾ, ‘‘ಒಳ್ಳೆಯ...
06th Sep, 2018
1919ರಲ್ಲಿ ಜರ್ಮನಿಯಲ್ಲಿ ಸ್ಥಾಪನೆಗೊಂಡ ನ್ಯಾಶನಲ್ ಸೋಸಿಯಲಿಸ್ಟ್ ವರ್ಕರ್ಸ್ ಪಾರ್ಟಿಯ ಮೂಲ ಜರ್ಮನ್ ಅಧ್ಯಕ್ಷರಿಂದಾಗಿ ಅದಕ್ಕೆ ‘ನಾಝೀ ಪಕ್ಷ’ ಎಂಬ ಹೆಸರು ರೂಢಿಗೆ ಬಂದಿತು. ಹಿಟ್ಲರ್‌ನು 1920ರಲ್ಲಿ ಆ ಪಕ್ಷದ ಸದಸ್ಯನೂ, ತರುವಾಯದಲ್ಲಿ ಅದರ ಪರಮೋಚ್ಚ ನಾಯಕನೂ ಆದನು. ಇದಕ್ಕೂ ಮೊದಲು ಇಟಲಿಯಲ್ಲಿ ಮುಸಲೋನಿಯ...
30th Aug, 2018
ಬ್ರಿಟಿಷರು ನೂರೈವತ್ತಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳಿದರು. ಈ ಆಳ್ವಿಕೆಯ ಕಾಲಕ್ಕೂ, ಭಾಷಾವಾರು ಪ್ರಾಂತ ರಚನೆಯ ಪ್ರಶ್ನೆಯು ಸತತವಾಗಿ ತಮ್ಮೆದುರಿಗೆ ಇರುವಾಗಲೂ ಬ್ರಿಟಿಷರು ಅದನ್ನು ಮಾಡಲಿಲ್ಲ. ಅವರು ಬಹು ಭಾಷೆಗಳುಳ್ಳ ಪ್ರಾಂತಗಳ ಜನರ ‘ಸಂಸ್ಕೃತಿಯ ಐಕ್ಯ’ದ ಕೂಗಾಟವನ್ನು ಲೆಕ್ಕಿಸದೆ, ಗಟ್ಟಿಯಾದ...
24th Aug, 2018
ಭಾಗ-7 1914ರ ಮಹಾಯುದ್ಧದಲ್ಲಿ ತಿಲಕರು, ಯುದ್ಧದಲ್ಲಿ ಷರತ್ತಿಲ್ಲದೆ ಸಹಾಯ ಮಾಡಬಾರದೆಂದು ದೇಶದಲ್ಲೆಲ್ಲ ಪ್ರಸಾರ ಮಾಡಿದ್ದರು. ಆ ವೇಳೆ ಗಾಂಧಿ ಅವರು ತಿಲಕರನ್ನು ವಿರೋಧಿಸಿ, ಷರತ್ತಿಲ್ಲದ ಸಹಾಯವನ್ನು ಪುರಸ್ಕರಿಸಿದ್ದರು. ಆ ವೇಳೆ ಅವರು ಮುಂಬೈಯ ನಾಮದಾರ್ ಶಾಸ್ತ್ರಿ ಅವರಿಗೆ ಬರೆದ ಪತ್ರ, ‘ಟೈಮ್ಸ್ ಆಫ್...
17th Aug, 2018
ಭಾಗ-6 ಹಿಂದೂಸ್ಥಾನಿಯರಿಗೂ, ಬ್ರಿಟಿಷರಿಗೂ ಪರಸ್ಪರ ಕಾಳಜಿಯಿರಬೇಕಾದ ಕಾರಣವಿಲ್ಲ. ಅವರೊಳಗೆ ರಕ್ತಮಾಂಸದ ಸಂಬಂಧವಿಲ್ಲ. ಇದಕ್ಕೊಂದು ಕಾರಣವಿದೆಯೆಂದು ನಮಗನಿಸುತ್ತದೆ. ಇಂಗ್ಲಿಷ್ ರಾಜ್ಯವೊಂದು ಸಾಮ್ರಾಜ್ಯವಾಗಿದ್ದು, ಅದರ ವಿಸ್ತಾರದ ಮೇಲೆ ಅನೇಕರ ಕಣ್ಣಿದೆ. ಪೃಥ್ವಿಯ ಪೃಷ್ಠಭಾಗದ ವಿಸ್ತೀರ್ಣ 5 ಕೋಟಿ, 55 ಲಕ್ಷ ಚದರ ಮೈಲು. ಇದರ ಪೈಕಿ...
09th Aug, 2018
ಭಾಗ-5 1924 ಮೇ 29ರ ಯಂಗ್ ಇಂಡಿಯಾದ ಅಂಕಣದಲ್ಲಿ ಹಿಂದೂ-ಮುಸ್ಲಿಂ ದಂಗೆಯ ಬಗ್ಗೆ ಬರೆಯುತ್ತಾ ಗಾಂಧಿ, ಹೀಗೆ ವಿಚಾರ ವ್ಯಕ್ತಪಡಿಸಿದ್ದಾರೆ. ‘‘ಇಂದು ನಾನು ಸುತ್ತಲೂ ಕಾಣುತ್ತಿರುವುದು ಅಹಿಂಸೆಯ ವಿರೋಧದ ಪ್ರತಿಕ್ರಿಯೆ.. ಹಿಂಸೆಯ ಅಲೆಯೊಂದೆದ್ದಿರುವುದು ಭಾಸವಾಗುತ್ತಿದೆ. ಹಿಂದೂ-ಮುಸ್ಲಿಂ ಕ್ಷೋಭೆ ಉತ್ತುಂಗಕ್ಕೇರಿದೆ. ದೇಶದೆದುರು ನಾನೆಂದೂ ಅಹಿಂಸೆಯ ಆತ್ಯಂತಿಕ...
02nd Aug, 2018
ಭಾಗ-4 ಪಾಶವಿ ಶಕ್ತಿಯ ಉಪಯೋಗ ಎಂದೂ ಮಾಡಲಾರೆವೆನ್ನುವುದು ಅವಿಚಾರತನವಷ್ಟೇ. ಅಮೆರಿಕದಲ್ಲಿ ನೀಗ್ರೋಗಳು ಅನೇಕ ವರ್ಷಗಳ ಪರ್ಯಂತ ಗುಲಾಮಗಿರಿಯಲ್ಲಿ ಮುಳುಗಿದ್ದರು. ಅದರ ಉಚ್ಚಾಟನೆಗಾಗಿ ಪಾಶವಿ ಶಕ್ತಿಯ ಪ್ರಯೋಗ ಮಾಡಬೇಕಾಯ್ತು. ನೈತಿಕ ಬಲವನ್ನೇ ನಂಬಿಕೊಂಡಿದ್ದರೆ, ಈ ನೀಗ್ರೋಗಳು ಗುಲಾಮಗಿರಿಯಿಂದ ಇದುವರೆಗೆ ಮುಕ್ತರಾಗುತ್ತಿದ್ದರೋ, ಇಲ್ಲವೋ ಎಂಬುದು ಸಂಶಯ....
26th Jul, 2018
ಭಾಗ-3 ಈ ಹಿಂಸೆ-ಅಹಿಂಸೆಯ ವಾದದಲ್ಲಿ ಗಾಂಧಿ ಅವರ ಪಕ್ಷ ಹಿಡಿಯುವವರು, ಗಾಂಧಿ ಅವರು ಪ್ರಾಮಾಣಿಕರೆಂಬ ವಾದವನ್ನು ಮುಂದು ಮಾಡುತ್ತಾರೆ. ಈ ಸಮಸ್ಯೆಯ ನಿರ್ಣಯಕ್ಕೆ ಬರುವಲ್ಲಿ ಪ್ರಾಮಾಣಿಕತೆಗೆ ಮಹತ್ವವೇನೂ ಇಲ್ಲವೆಂದು ನಮಗನಿಸುತ್ತದೆ. ಗಾಂಧಿ ಅವರ ಪ್ರಾಮಾಣಿಕತೆ, ಅಪ್ರಾಮಾಣಿಕತೆ ಬಗ್ಗೆ ವಿಚಾರ ಮಾಡುವುದರಿಂದ ಪ್ರಯೋಜನವೇನೂ ಇಲ್ಲ....
19th Jul, 2018
ಭಾಗ-2 ಕೊನೆಗೆ 1927ರಲ್ಲಿ ಗಾಂಧಿ ಅವರು, ತನ್ನ ಸಹಕಾರಿ ಮಿತ್ರ ಮಿಸ್ಟರ್ ಪೊಲಕ್ ಅವರಿಗೆ ಪತ್ರ ಬರೆದು, ‘‘ಬ್ರಿಟಿಶ್ ಸರಕಾರವು ಹಿಂದೂಸ್ಥಾನಕ್ಕೆ ವಸಾಹತು ಸ್ವರಾಜ್ಯ ಕೊಟ್ಟರೆ ಅದರಲ್ಲೇ ನಾವು ಸಮಾಧಾನ ಕಾಣುವೆವು’’ಎಂದರುಹಿದರು. ಸಂಪೂರ್ಣ ಸ್ವಾತಂತ್ರದ ವಿಷಯದಲ್ಲಿ ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಡೆಸಿದಾಟ ಕಂಡು,...
12th Jul, 2018
ಭಾಗ-1 1940 ಜೂನ್-ಜುಲೈ ತಿಂಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎರಡು ಮಹತ್ವದ ನಿರ್ಣಯ ಕೈಗೊಂಡರು. ಆ ಪೈಕಿ ಮೊದಲ ನಿರ್ಣಯವು ಜೂನ್ 22ರಂದು ವರ್ಧಾದಲ್ಲಿ ನಡೆದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಸಭೆಯಲ್ಲಿ ಜಾರಿಗೆ ಬಂದಿತು. ಅಹಿಂಸೆಗೆ ಹಿಂದೂಸ್ಥಾನದ ರಾಜ್ಯ ಕಾರುಭಾರದಲ್ಲಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ...
05th Jul, 2018
ಬಲಿರಾಜ ಮತ್ತು ವಾಮನ ಅವರ ವಿಷಯವಾಗಿ ಜ್ಞಾನಕೋಶದಲ್ಲಿ ಈ ಕೆಳಗೆ ಕಂಡಂತೆ ಮಾಹಿತಿ ಕೊಟ್ಟಿದೆ: ‘‘ವಾಮನ: ನಡೆಯುತ್ತಿರುವ ಮನ್ವಂತರದಲ್ಲಿ ಏಳನೆಯ ಪರ್ಯಾಯದವರೆಗೂ ತ್ರೇತಾಯುಗದ ಕಶ್ಯಪರಿಂದ ಹಿಡಿದು ಅದಿತಿಯವರೆಗೆ ಗೊತ್ತಿದ್ದಂತೆ ವಿಷ್ಣುವಿನ ಅವತಾರವಾಗಿದೆ.’’ ‘‘ಬಲಿ: ಪ್ರಹ್ಲಾದ ಪುತ್ರ ವಿರೋಚನನ ಮಗ. ಇವನು ಇಂದ್ರ ಪದವಿಯ ಸಲುವಾಗಿ...
28th Jun, 2018
ಅಸ್ಪಶ್ಯರ ಪ್ರಗತಿಯ ಸಲುವಾಗಿ ಮತ್ತು ಅವರ ಚಳವಳಿ ವಿಸ್ತೃತಗೊಳಿಸಲು ಯಾವ ವರಿಷ್ಠ ವರ್ಗದ ಜನರು ಮನಃಪೂರ್ವಕವಾಗಿ ಪ್ರಯತ್ನಪಟ್ಟರೋ, ಅದರಲ್ಲಿ ಕೋಲ್ಹಾಪುರದ ರಾಜರ್ಷಿ ಛತ್ರಪತಿ ಶಾಹೂ ಮಹಾರಾಜರು ಅಗ್ರಗಣ್ಯರಾಗಿದ್ದರು. ಇಷ್ಟೇ ಅಲ್ಲದೆ ಮಹಾರಾಷ್ಟ್ರದಲ್ಲಿ ಅಸ್ಪಶ್ಯರ ಚಳವಳಿಗೆ ವ್ಯಾಪಕ ಮತ್ತು ಚಿರಾಯು ಸ್ವರೂಪ ಸ್ವಲ್ಪ...
21st Jun, 2018
ಭಾಗ-5 5. ಆಶ್ಚರ್ಯವೆಂದರೆ ಅಸ್ಪಶ್ಯ ಸಮಾಜದ ವತಿಯಿಂದ ಸೈಮನ್ ಕಮಿಷನ್‌ಗೆ ಸಹಕರಿಸಿದಾಗ, ಇದೇ ಜನರೇ ನಮ್ಮನ್ನು ದೇಶದ್ರೋಹಿ ಎನ್ನುತ್ತಿದ್ದರು. ವಾಸ್ತವದಲ್ಲಿ ನಿಜವಾದ ದೇಶದ್ರೋಹಿ ಅವರೇ ಆಗಿದ್ದರು. ತಮ್ಮ ಸ್ವಾರ್ಥಕ್ಕಾಗಿ ಒಂದು ದೊಡ್ಡ ಸಮಾಜವನ್ನೇ ದಲಿತಾವಸ್ಥೆಯಲ್ಲಿ ಕಟ್ಟಿಹಾಕಿರುವುದು ಇವರೇ ಆಗಿದ್ದಾರೆ. ಇವರನ್ನು ನಾವು ಬ್ರಾಹ್ಮಣಗ್ರಸ್ತ...
14th Jun, 2018
ಭಾಗ-4 ಯಾರು ನಮ್ಮನ್ನು ದೇಶದ್ರೋಹಿ ಎಂದು ಹೇಳುತ್ತಾರೋ ಅವರು ಮೊದಲು ಈ ಪ್ರಶ್ನೆಗಳಿಗೆ ಉತ್ತರ ನೀಡಲಿ, ಅಮೇಲೆ ಅಸ್ಪಶ್ಯರ ಮೇಲೆ ಸ್ವಾಭಿಮಾನಶೂನ್ಯತೆಯ ಮುದ್ರೆಯನ್ನು ಒತ್ತುವವರು ಮುಂದೆ ಬರಲಿ. ಬ್ರಹ್ಮದ್ವೇಷ, ದೇಶದ್ರೋಹ ಮುಂತಾದ ಖಾಯಂ ಠಸ್ಸೆಯ ಆರೋಪಗಳಿಂದ ಬೆದರಿ ಓಡುವ ನಾಜೂಕು ಪ್ರಕೃತಿಯಲ್ಲಿಲ್ಲ ಈಗ...
07th Jun, 2018
ಭಾಗ-3 ಆದ್ದರಿಂದ ಬ್ರಿಟಿಷ್ ಸರಕಾರದ ಮೇಲೆ ನಂಬಿಕೆ ಇಟ್ಟ ಅಸ್ಪಶ್ಯ ಬಂಧುಗಳಿಗೆ ನಮ್ಮ ಸೂಚನೆ ಏನೆಂದರೆ, ಬ್ರಿಟಿಷರು ನಿಜವಾಗಿ ಶಿಬಿಯ ಅವತಾರವೇ, ಎನ್ನುವುದನ್ನು ಅವರು ಸ್ಪಷ್ಟಪಡಿಸಿಕೊಳ್ಳಬೇಕು. ಒಂದು ಕಡೆ ರಾಜನಿಗೆ ಶರಣಾಗಿ ದಯೆಯನ್ನು ಬೇಡುವ ಪಾರಿವಾಳ ಮತ್ತು ಇನ್ನೊಂದು ಕಡೆ ಶಾಸ್ತ್ರದ ಪ್ರಕಾರ...
31st May, 2018
ಭಾಗ- 2   ಸ್ವರಾಜ್ಯ ಕೇಳುವಾಗ 6 ಕೋಟಿ ಪ್ರಜೆಗಳನ್ನು ಅದುಮಿ ಹಿಡಿದಿಡುವಾಗ ಯಾರಾದರೂ ದೋಷಾರೋಪಣೆ ಮಾಡಿಯಾರು ಎಂದು ಸ್ವಚ್ಛ ಮನಸ್ಸಿನಿಂದ ಸ್ವರಾಜ್ಯ ಬೇಡುವ ಹಾಗಿಲ್ಲ ಎಂದು ಕೆಲವು ಕಾಂಗ್ರೆಸಿಗರು 1917ನೇ ಇಸವಿ ಅಸ್ಪಶ್ಯತಾ ನಿವಾರಣೆಯ ಸೋಗು ಹಾಕಿ ಒಂದು ಠರಾವು ಪಾಸು...
24th May, 2018
ಭಾಗ-1 ಮಂಗಳವಾರ, ಅಕ್ಟೋಬರ್ 23, 1928ರ ವಿಜಯದಶಮಿಯ ಸುಮೂಹೂರ್ತದಂದು ಅಸ್ಪಶ್ಯ ವರ್ಗದ ವತಿಯಿಂದ ಡಾ. ಅಂಬೇಡ್ಕರ್ ಮತ್ತು ಡಾ. ಸೋಲಂಕಿಯವರು ಸೈಮನ್ ಕಮಿಷನ್ ಎದುರಿಗೆ ಪುರಾವೆ ನೀಡಲು ನಿಂತಿದ್ದರು. ಅಲ್ಲಿ ಅಸ್ಪಶ್ಯ ವರ್ಗದ ವತಿಯಿಂದ ನಾಲ್ಕು ಬೇಡಿಕೆಗಳನ್ನು ಮುಂದಿಡಲಾಗಿತ್ತು.  1. ಮುಂಬೈ ಇಲಾಖೆಯಲ್ಲಿ ಸಂಪೂರ್ಣ...
17th May, 2018
ಭಾಗ -2 ನಾವು ಯಾವ ಅಭಿಪ್ರಾಯದಿಂದ ಮಸೂದೆ ಮುಂದಿಟ್ಟೆವೋ ಅದರ ಮುಖ್ಯ ಆಧಾರ ಅಂದರೆ ಮುಂಬೈ ಸರಕಾರದ 1899 ಇಸವಿಯ ನಂ. 3074ರ ಸರಕಾರಿ ಗೊತ್ತುವಳಿ ಇದೇ ಆಗಿತ್ತು. ಈ ಗೊತ್ತುವಳಿಯಲ್ಲಿ ಸ್ಪಷ್ಟವಾಗಿ ಘೋಷಣೆ ಮಾಡಿದ್ದರು. ‘‘ಮಹಾರ್‌ಗೆ ಕೊಡಮಾಡುವ ಕೂಲಿ ರೈತಾಪಿ ಕೆಲಸಕ್ಕೆ...
10th May, 2018
ಭಾಗ-1 ಕಳೆದ ವರ್ಷ ‘ಮಹಾರ್ ಮತ್ತು ಅವರ ಭೂಮಾಲಕತ್ವ’ ಎನ್ನುವ ವಿಷಯದ ಮೇಲೆ ನಾವು ನಾಲ್ಕು ಸಂಪಾದಕೀಯ ಬರೆದಿದ್ದೆವು. ಅದರಲ್ಲಿ ಮಹಾರ್‌ಗಳ ಭೂಮಾಲಕತ್ವ ಹೇಗೆ ಅಧಃಪತನ ಹೊಂದುತ್ತಿದೆ ಮತ್ತು ಅದನ್ನು ಮುಂದೂಡಿದುದರಿಂದ ಭೂಮಾಲಕತ್ವದ ಕಾಯ್ದೆಯಲ್ಲಿ ಎಂಥ ಸುಧಾರಣೆ ಮಾಡುವುದು ಅವಶ್ಯ ಎನ್ನುವುದನ್ನು ಸಂಗೋಪಾಂಗವಾಗಿ...
04th May, 2018
ಅಮರಾವತಿಯ ಕೆಲವು ಮಾದಿಗರು ಅಮರಾವತಿಯಿಂದ ಬಿಡುಗಡೆಯಾಗುವ ‘ಉದಯ್’ ಅನ್ನುವ ಪತ್ರಿಕೆಯಲ್ಲಿ ಬರೆದಿರುವ ಒಂದು ಪತ್ರದ ಪ್ರಕಾರ ಅಲ್ಲಿಯ ಮಾದಿಗರು ಬಹುಶಃ ಈ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಅನಿಸುತ್ತದೆ. ‘ತಾ.28ರಂದು ಇಲ್ಲಿಯ ದಲಿತರ ಜಾಹೀರು ಸಭೆಯಲ್ಲಿ ಹಂಚಲಾದ ಒಂದು ಪ್ರಕಟನಾ ಪತ್ರ (ಹಸ್ತ ಪತ್ರಿಕೆ)....
03rd May, 2018
ಅಮರಾವತಿಯ ಕೆಲವು ಮಾದಿಗರು ಅಮರಾವತಿಯಿಂದ ಬಿಡುಗಡೆಯಾಗುವ ‘ಉದಯ್’ ಅನ್ನುವ ಪತ್ರಿಕೆಯಲ್ಲಿ ಬರೆದಿರುವ ಒಂದು ಪತ್ರದ ಪ್ರಕಾರ ಅಲ್ಲಿಯ ಮಾದಿಗರು ಬಹುಶಃ ಈ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ ಅನಿಸುತ್ತದೆ. ‘ತಾ.28ರಂದು ಇಲ್ಲಿಯ ದಲಿತರ ಜಾಹೀರು ಸಭೆಯಲ್ಲಿ ಹಂಚಲಾದ ಒಂದು ಪ್ರಕಟನಾ ಪತ್ರ (ಹಸ್ತ ಪತ್ರಿಕೆ)....
19th Apr, 2018
ಭಾಗ-2 ಬೌದ್ಧ ಧರ್ಮದ ವಿರುದ್ಧ ಬೆಳೆದ ಪ್ರವೃತ್ತಿ ಮತ್ತೆ ಜಾತಿಭೇದದ ಕಡೆ ವಾಲಿತು. ಅದಕ್ಕೆ ಸರಿಯಾದ ಮಾರ್ಗ ಸಿಗದೆ ದಿನಗಳೆದಂತೆ ಅದು ಹೆಚ್ಚೆಚ್ಚು ಗಟ್ಟಿಯಾಗುತ್ತ ಹೋಗಿ ಕಡೆಗೆ ಯಾವ ಸ್ಥಿತಿ ತಲುಪಿತೆಂದರೆ ಮೊದಲಿನ ನಾಲ್ಕು ಜಾತಿಗಳು ನಾಲ್ಕು ಸಾವಿರ ಜಾತಿಗಳು ಹಾಗೂ ಉಪ...
05th Apr, 2018
ಭಾಯಿ ಪರಮಾನಂದರ ಜಾತಿಪಾತಿ ಮುರಿಯುವ ಉದ್ದೇಶ - ಹಿಂದೂ ಸಾಮ್ಯವಾದಿ ಸಂಸ್ಥೆಯ ಉದ್ದೇಶ ಹಾಗೂ ಕಾರ್ಯಕಲಾಪಗಳು - ಅನೇಕ ಹಿಂದೂ ಜನರಿಗೆ ಒಪ್ಪಿಗೆಯಾಗುತ್ತಿವೆ ಅನ್ನುವುದು ಸಂತೋಷದ ಸಂಗತಿ. ಇದನ್ನು ಪುಷ್ಟೀಕರಿಸುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಮುಂಬೈ ಚಿಂಚಪೋಕಳಿಯ ಸೋಶಿಯಲ್ ಸರ್ವಿಸ್ ಲೀಗ್‌ನವರು...
29th Mar, 2018
ಭಾಗ-3 ನಾವು ಸೂಚಿಸಿರುವ ಎರಡು ಉಪಾಯಗಳನ್ನು ಕೇಳಿ ಮೇಲ್ಜಾತಿಯ ಜನ ನಮ್ಮನ್ನು ಅವಿಚಾರಿಗಳಂದಾರು ಅನ್ನುವುದನ್ನು ನಾವು ಬಲ್ಲೆವು. ಆದರೆ ದಲಿತರು ಈ ಉಪಾಯಗಳನ್ನು ಬಳಸದೆ ಬೇರೆ ಮಾರ್ಗವಿದೆಯೇ? ಇದಲ್ಲದಿದ್ದರೆ ಅವರೇನು ಮಾಡಬೇಕು? ಅನ್ನುವ ಪ್ರಶ್ನೆಯನ್ನು ನಾವು ಮೇಲ್ಜಾತಿಯ ಜನರನ್ನು ಕೇಳಲಿಚ್ಛಿಸುತ್ತೇವೆ. ಎಲ್ಲ ಜನರಿಗೆ...
15th Mar, 2018
ಭಾಗ -1 ಮಹಾಡ್‌ನ ಚವ್‌ದಾರ್ ಕೆರೆ ಸಾರ್ವಜನಿಕವಾದದ್ದು. ಅಲ್ಲಿ ಎಲ್ಲ ಜಾತಿಯ ಜನ ಯಾವುದೇ ತೊಡಕಿಲ್ಲದೆ ನೀರು ತುಂಬಬಹುದು. ಯಾರೂ ಯಾರಿಗೂ ತಡೆಯುವುದಿಲ್ಲ. ಆದರೆ ಅದೇ ಕೆರೆಗೆ ಮಾದಿಗರು, ಚಮ್ಮಾರರು ನೀರು ತುಂಬಿದರೆ ಹಿಂದೂ ಮೇಲ್ಜಾತಿಯವರಿಗದು ಸರಿ ಬರುವುದಿಲ್ಲ ಅನ್ನುವುದು ಮಹಾಡ್‌ನ ಪ್ರಕರಣದಿಂದ...
08th Mar, 2018
ಹಿಂದೂಗಳಲ್ಲಿ ಹೆಣ್ಣೆಂದರೆ ಗಂಡಸಿನ ಭೋಗದ ವಸ್ತು ಅನ್ನುವ ಸಾಮಾನ್ಯ ನಂಬಿಕೆಯಿದೆ. ಹಾಗೂ ಗಂಡಸಿನ ಇಚ್ಛೆಯನ್ನರಿತು ಬಾಳಬೇಕು ಅನ್ನುವ ರೂಢಿಯಿದೆ. ಹೆಣ್ಣು ಭೋಗದ ವಸ್ತು ಅನ್ನುವ ಅನಿಸಿಕೆಯಿಂದ ಆಕೆಯ ಶರೀರವನ್ನು ವಸ್ತ್ರ ಒಡವೆಗಳಿಂದ ಅಲಂಕರಿಸುವುದರಲ್ಲಿ ಸಾಕಷ್ಟು ಪ್ರೀತಿ ಹಾಗೂ ಹಣ ಖರ್ಚಾಗುತ್ತದೆ ನಿಜ....
22nd Feb, 2018
ಇಂಗ್ಲಿಷರ ಶಾಸನ ಹಿಂದೂಸ್ಥಾನದಲ್ಲಿ ಶುರುವಾಗಲು, ಹಿಂದೂಗಳು ಮಾಡಿದ ಸಹಾಯದ ಅನೇಕ ಪಟ್ಟು ಸಹಾಯವನ್ನು ಅಸ್ಪಶ್ಯರು ಮಾಡಿದ್ದರು. ಇಂಗ್ಲಿಷರ ಸೈನ್ಯದಲ್ಲಿ ಸಾಕಷ್ಟು ಸೈನಿಕರು ಅಸ್ಪಶ್ಯರೇ ಇದ್ದರು. ಆಕಾರ್ಟಿನ ಮುತ್ತಿಗೆಯಲ್ಲಿ ಅಸ್ಪಶ್ಯ ಸೈನಿಕರು ಅನ್ನದ ಗಂಜಿಯನ್ನು ಕುಡಿದು ಮತ್ತು ಇಂಗ್ಲಿಷ್ ಸೈನಿಕರಿಗೆ ಅನ್ನ ತಿನ್ನಲು...
Back to Top