ಈ ಹೊತ್ತಿನ ಹೊತ್ತಿಗೆ

15th Jul, 2018
ಮಲೆನಾಡಿನ ಮಳೆಗಾಲ ಅದೆಷ್ಟು ಸುಂದರ. ಕಾದಂಬರಿಯ ದಾರಿಗಳಲ್ಲಿ ಸಾಮಾಜಿಕ ಅಸಮಾನತೆಯ ಹೋರಾಟ, ಪರಿಸರ, ಬದುಕಿನ ಪಡಿಪಾಟಿಲು ವರ್ಣ ರಂಜಿತವಾಗಿ ಚಿತ್ರಿತವಾಗಿದೆ. ಕುವೆಂಪು ಅವರಿಗಿರುವ ದೈವ ಭಕ್ತಿ, ವೈಚಾರಿಕತೆಯು ಓದುಗರನ್ನು ಆಕರ್ಷಿಸದಿರದು. ಒಂದು ಧಾರ್ಮಿಕ ಹೊತ್ತಗೆಯಂತೆ, ಬಂಡಾಯ ಸಾಹಿತ್ಯದಂತೆ, ಅಸಮಾನತೆಯ ವಿರುದ್ಧ ಹೋರಾಟದ...
03rd Jun, 2018
12ನೆ ಶತಮಾನದ ಶರಣದ ಬದುಕು, ಚಿಂತನೆಗಳು ಬರೆದಷ್ಟು ಮುಗಿಯುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಸವ ಚಿಂತನೆ ಮತ್ತೆ ಮುನ್ನೆಲೆಗೆ ಬಂದಿದೆ. ವೈದಿಕ ಚಿಂತನೆಯ ಬೂದಿಯಿಂದ ಮುಚ್ಚಿ ಹೋಗಿರುವ ಬಸವ ಚಿಂತನೆಗಳ ಕೆಂಡ ಧಗ್ಗೆಂದಿದೆ. ಮನು ಚಿಂತನೆಯ ವಿರುದ್ಧ ತನ್ನ ಧ್ವನಿಯನ್ನು ಮತ್ತೆ ಮೊಳಗಿಸಿದೆ....
03rd Mar, 2018
ಏಕ ವ್ಯಕ್ತಿ ಯಕ್ಷಗಾನ ಎಂಬ ಹೊಸ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಈ ಕಲೆಗೆ ಹೊಸ ಆಯಾಮ ನೀಡಿ, ಸಾವಿರಾರು ಏಕವ್ಯಕ್ತಿ ಪ್ರದರ್ಶನವನ್ನು ನೀಡಿರುವ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯರ ಸಾಧನೆಯ ಸಮಗ್ರ ಚಿತ್ರಣವನ್ನು ‘ಏಕವ್ಯಕ್ತಿ ಯಕ್ಷಗಾನ ಸಾಧಕ-ಮಂಟಪ ಪ್ರಭಾಕರ ಉಪಾಧ್ಯ’ ಕೃತಿ ನೀಡುತ್ತದೆ....
19th Dec, 2017
ಶಿಕ್ಷಣದ ಕುರಿತಂತೆಯೂ ಸೃಜನಶೀಲತೆಯ ಕುರಿತಂತೆಯೂ ಡಾ. ಮಹಾಬಲೇಶ್ವರ ರಾವ್ ಹಲವು ಬಾರಿ ಬರೆದಿದ್ದಾರೆ. ಸೃಜನಶೀಲತೆಯ ಕುರಿತಂತೆ ತೀವ್ರ ಅಧ್ಯಯನ ಮಾಡಿದ ಹಿರಿಮೆಯೂ ಅವರಿಗಿದೆ. ಹಾಗೆಯೇ ಹೇಗೆ ಶಿಕ್ಷಣ ಅಂಕ ಪಟ್ಟಿಗಳಿಗೆ ಸೀಮಿತವಾಗಿ ಯಾಂತ್ರಿಕವಾಗಿದೆ ಎನ್ನುವುದರ ಬಗ್ಗೆಯೂ ಅವರು ಸಾಕಷ್ಟು ಬರೆದಿದ್ದಾರೆ. ಶಿಕ್ಷಣವನ್ನು...
21st Oct, 2017
ವೈದಿಕ ಹಿನ್ನೆಲೆಯ ಸಾಂಪ್ರದಾಯಿಕ ಮದುವೆಗಳು ಹೇಗೆ ಅರ್ಥಹೀನ ಮತ್ತು ಅದು ಮಹಿಳೆಯರ ಸ್ವಾಭಿಮಾನಕ್ಕೆ ತರುವ ಧಕ್ಕೆ ಏನು ಎನ್ನುವುದನ್ನು ವಿವರಿಸುವ ಕೃತಿ ಪೆರಿಯಾರ್ ಅವರ ‘ಸ್ವಾಭಿಮಾನದ ಮದುವೆಗಳು’. ಪೆರಿಯಾರ್ ದ್ರಾವಿಡ ಜನರ ಏಳಿಗೆಗಾಗಿ ಆತ್ಮಗೌರವ ಚಳವಳಿಯನ್ನು ಆರಂಭಿಸಿದವರು. 1925ರ ಸಂದರ್ಭದಲ್ಲಿ ಇದೊಂದು...
14th Oct, 2017
ಕನ್ನಡ ಕಾವ್ಯ ಲೋಕದಲ್ಲಿ ಎಂ. ಆರ್. ಕಮಲಾ ಅವರ ಹೆಸರು ಚಿರಪರಿಚಿತ. ‘ಶಕುಂತಲೋಪಾಖ್ಯಾನ’ ಕವನ ಸಂಕಲನದ ಮೂಲಕ ಸಹೃದಯರ ಗಮನ ಸೆಳೆದ ಕಮಲಾ ಅವರ ‘ಕತ್ತಲ ಹೂವಿನ ಹಾಡು’ ಅನುವಾದ ಅವರನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಅರಬ್ ಮಹಿಳಾ ಕಾವ್ಯಗಳನ್ನು...
07th Oct, 2017
ಭಾರತ ಹಲವು ನುಡಿ ಸಮುದಾಯಗಳಿರುವ ನಾಡು. ಬಹುಭಾಷಿಕತೆ ಈ ನಾಡಿನ ಒಂದು ಚಹರೆ. ಪಶ್ಚಿಮದ ವಿದ್ವಾಂಸರು ಬಹುಭಾಷಿಕತೆಯೇ ಭಾರತದ ಏಳ್ಗೆಗೆ ಅಡ್ಡಿಯಾಗಿರುವ ಸಂಗತಿಯೆಂದು ವಾದಿಸುವುದನ್ನು ನೋಡಿದ್ದೇವೆ. ಈ ನಿಲುವನ್ನು ಒಪ್ಪುವ ಚಿಂತಕರು ನಾಡಿನ ಒಳಗೂ ಇದ್ದಾರೆ. ಆಡಳಿತ ನಡೆಸುವವರು ರೂಪಿಸುವ ಭಾಷಾ...
30th Sep, 2017
ಈ ದೇಶಕ್ಕೆ ಬೆಳಕು ನೀಡಿದ್ದು ಸಂಸ್ಕೃತವಲ್ಲ, ಪಾಲೀ ಭಾಷೆ. ಸಂಸ್ಕೃತ ವಿದ್ವಾಂಸರ ಭಾಷೆಯಾಗಿ ಮೇಲ್‌ಜನರ ಭಾಷೆಯಾಗಿ ಸಾಯುತ್ತಾ ಬರುತ್ತಿದ್ದಾಗ, ಪಾಲಿ ಭಾಷೆ ಜನ ಸಮೂಹದ ಮಧ್ಯೆ ಬೆಳೆಯುತ್ತಾ ಹೋಯಿತು. ಬೌದ್ಧ ಧರ್ಮ ದೇಶಾದ್ಯಂತ ಹರಡಿದ್ದು ಪಾಲಿಯ ಮೂಲಕವೇ ಆಗಿದೆ. ಪಾಲಿ ಭಾಷೆಯ...
09th Sep, 2017
ಇದು ದೇಶ ಗ್ರಾಮೀಣ ಸಮಸ್ಯೆಗಳನ್ನು ಒಂದಿಷ್ಟಾದರೂ ಗಂಭೀರವಾಗಿ ತೆಗೆದುಕೊಂಡಿದೆಯೆಂದರೆ ಅದರ ಹಿಂದೆ ಹಿರಿಯ ಪತ್ರಕರ್ತ ಪಿ. ಸಾಯಿನಾಥರ ಕೊಡುಗೆ ಬಹುದೊಡ್ಡದು. ಅವರ ಚಿಂತನೆ, ಬರಹಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ‘ಅಸಮಾನತೆಯ ಜಾಗತೀಕರಣ’ ಪಿ.ಸಾಯಿನಾಥರ ಭಾಷಣ ಮತ್ತು ಲೇಖನವನ್ನೊಳಗೊಂಡ ಪುಟ್ಟ ಕೃತಿ. 2005ರ...
02nd Sep, 2017
ಬರಗೂರು ಅವರನ್ನು ಎರಡು ನೆಲೆಗಳಲ್ಲಿ ನಾವು ನೋಡಬಹುದು. ಒಂದು ಬಂಡಾಯ ಚಳವಳಿಯ ಮೂಲಕ. ಇನ್ನೊಂದು ಕನ್ನಡ ಪರ ಹೋರಾಟಗಾರರಾಗಿ. ಕನ್ನಡದ ಕುರಿತಂತೆ ಎಲ್ಲ ಆಯಾಮಗಳಲ್ಲಿ ಮಾತನಾಡುವ ನೈತಿಕ ಹಕ್ಕನ್ನು ಹೊಂದಿದವರು ಬರಗೂರು ರಾಮಚಂದ್ರಪ್ಪ. ಕನ್ನಡದ ವಿಷಯ ಬಂದಾಗ ಭಾವೋದ್ರೇಕದಿಂದ ವರ್ತಿಸುವ ಬದಲು...
26th Aug, 2017
ದೇಶದ ಖ್ಯಾತ ವಿದ್ವಾಂಸರಾಗಿರುವ ಇರಾವತಿ ಕರ್ವೆ ತಮ್ಮ ‘ಯುಗಾಂತ’ ಕೃತಿಯ ಮೂಲಕ ಕನ್ನಡ ಸಾಹಿತ್ಯ ಪ್ರಿಯರಿಗೂ ಚಿರಪರಿಚಿತರು. ಇದೀಗ ಅವರ ‘ನಮ್ಮ ಸಂಸ್ಕೃತಿ’ ಸಂಸ್ಕೃತಿ ಚಿಂತನೆಯ ಬಿಡಿ ಬರಹಗಳನ್ನು ಚಂದ್ರಕಾಂತ ಪೋಕಳೆಯವರು ಕನ್ನಡಕ್ಕಿಳಿಸಿದ್ದಾರೆ. ಇರಾವತಿ ಕರ್ವೆಯವರ ಮೂಲ ಮರಾಠಿ ಗ್ರಂಥದಲ್ಲಿ ಒಟ್ಟು ಹದಿನಾಲ್ಕು...
19th Aug, 2017
‘ಕೋರೆಗಾಂವ್ ವಿಜಯೋತ್ಸವ-ಅಸ್ಪಶ್ಯರ ಮೊದಲ ಸ್ವಾತಂತ್ರ ಸಂಗ್ರಾಮ’ ಮಹದೇವಕುಮಾರ್ ಅವರ ಈ ಕಿರು ಪುಸ್ತಕ ಬಾಬಾ ಸಾಹೇಬ್ ಅಂಬೇಡ್ಕರ್‌ರ ಸಂಶೋಧನೆ ಆಧಾರಿತ ಕೋರೆಗಾಂವ್ ವಿಜಯೋತ್ಸವದ ಕುರಿತಾದುದು. ಕೋರೆಗಾಂವ್ ಯುದ್ಧ ಈ ದೇಶದ ಇತಿಹಾಸ ಮತ್ತು ಸ್ವಾತಂತ್ರದ ವ್ಯಾಖ್ಯಾನಗಳಿಗೆ ಹೊಸ ನೋಟವನ್ನು ನೀಡುತ್ತದೆ. ಈ...
12th Aug, 2017
ತೆಲುಗು ಸಾಹಿತ್ಯವು ವಾಸ್ತವವಾದಿಯಾಗುವಂತೆ ದಲಿತ ಸಾಹಿತ್ಯ ಒತ್ತಾಯಿಸಿತು. ರೋಮ್ಯಾಂಟಿಕ್ ಕವಿತೆಯ ಏಕತಾನತೆ ಮತ್ತು ಪುನರುಜ್ಜೀವನ ಕಾಲದ ನವೋದಯ ಕವಿತೆಯಿಂದ ದೂರ ಸರಿದು ದಲಿತ ಕವಿತೆ ಸ್ಥಾನ ಸೃಷ್ಟಿಸಿಕೊಂಡಿತು. ಸ್ವಾತಂತ್ರೋತ್ತರ ಕಾಲದಲ್ಲಿ ಬೆಚ್ಚಗೆ ಕುಳಿತು ಬರೆಯುತ್ತಿದ್ದ ಓಲೈಕೆ ಕವಿಗಳನ್ನು ಆರು ಜನ ದಿಗಂಬರ...
15th Jul, 2017
ಬಿಜೆಪಿ ಕೋಮುವಾದಿ ಮತ್ತು ಜಾತಿವಾದಿ ಎಂದು ದೇಶದ ಪ್ರಗತಿಪರ ಶಕ್ತಿಗಳು ಖಂಡಿಸಿದಾಗ ಕಾಂಗ್ರೆಸ್ ಪುಳಕಗೊಳ್ಳುತ್ತದೆ. ಆದರೆ ಆಳುವ ವರ್ಗಗಳ ಮುಂಚೂಣಿ ಪಡೆಯಾದ ಕಾಂಗ್ರೆಸ್ ಅದಕ್ಕಿಂತ ಭಿನ್ನವಾಗಿದೆಯೇ? ಕೋಮುವಾದ ಕುರಿತಂತೆ ಅದರ ದಾಖಲೆ ಬಹುತೇಕ ಮಟ್ಟಿಗೆ ಅನುಮಾನಾಸ್ಪದವಾಗಿದೆ. ದಲಿತರ ಸಮಸ್ಯೆಗಳ ಕುರಿತಂತೆ ಅದರ ವ್ಯವಹಾರಗಳು...
Back to Top