ಝಲಕ್

7th May, 2018
ಮಾಡದ ತಪ್ಪಿಗಾಗಿ ಒಬ್ಬ ಜೈಲಿಗೆ ಹೋದ. ಸುಮಾರು ಒಂದು ವರ್ಷ ಜೈಲಿನಲ್ಲಿ ಕಳೆದು ಬಂದ. ಇದೀಗ ಆತನನ್ನು ಕಂಡರೆ ಊರೇ ನಡುಗುತ್ತದೆ. ಇರಿಯುತ್ತಾನೆ, ದೋಚುತ್ತಾನೆ. ಪೊಲೀಸರು ಮಾತ್ರ ಈವರೆಗೆ ಬಂಧಿಸಿಲ್ಲ.
6th May, 2018
ಆತ ಗುಜರಿ ಆಯುವವನು. ಮನೆಯೊಂದರ ಯಜಮಾನ ಆತನನ್ನು ಕೂಗಿ ಮನೆಯಲ್ಲಿರುವ ಒಂದಿಷ್ಟು ಹಳೆ ಸಾಮಾನುಗಳನ್ನು ತೂಗಿ ಕೊಟ್ಟ. ಕಾಗದ ಪತ್ರಗಳನ್ನೆಲ್ಲ ತೂಗಿ ಅದರ ಬೆಲೆಯನ್ನು ಗುಜರಿ ಆಯುವವನು ಕೊಟ್ಟು ಬಿಟ್ಟ. ಗುಜರಿ...
30th April, 2018
ಮರವೊಂದು ಕೊಡಲಿಯ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿತ್ತು. ಸಂತ ಕೇಳಿದ ‘‘ಮರವೇ ಕೊಡಲಿ ಇರುವುದೇ ಮರವನ್ನು ಕತ್ತರಿಸಲು. ಮತ್ತೇಕೆ ನೀನು ಅದಕ್ಕೆ ಮತ ಹಾಕುತ್ತಿದ್ದೀಯ?’’
26th March, 2018
ಒಂದು ಅಕ್ಕಿ ಕಾಳು ಎಷ್ಟು ಭಾರವಿರಬಹುದು? ಈ ಪ್ರಶ್ನೆಗೆ ಒಬ್ಬ ಮನುಷ್ಯ ‘‘ಅಯ್ಯೋ....ಅದರಲ್ಲಿ ಭಾರವೇನು ಬಂತು?’’ ಎಂದ. ಇರುವೆ ಹೇಳಿತು ‘‘ಅಬ್ಬಬ್ಬಾ...ಒಂದು ಅಕ್ಕಿ ಕಾಳನ್ನು ಹೊರುವುದೆಂದರೆ ಆತ ಸಾಧಾರಣ...
21st March, 2018
ಅದೊಂದು ಊರು. ಆ ಊರಲ್ಲಿ ಗಂಡ-ಹೆಂಡತಿ. ಅವರಿಬ್ಬರು ತುಂಬಾ ಪ್ರೀತಿಸುತ್ತಿದ್ದರು. ಒಮ್ಮೆ ಅದೇನು ಕಾರಣವೋ ಇಬ್ಬರ ನಡುವೆ ಭೀಕರ ಜಗಳವಾಯಿತು. ಗಂಡ ಹೆಂಡತಿ ಬೇರೆ ಬೇರೆಯಾದರು. ಆ ಊರಿಗೆ ಚುನಾವಣೆ ಬಂತು. ಗಂಡ ಚುನಾವಣೆಗೆ...
17th March, 2018
ಸಂತನ ತಿಳುವಳಿಕೆಯನ್ನು ಪರೀಕ್ಷಿಸಲು ಶಿಷ್ಯನೊಬ್ಬ ಮುಷ್ಟಿಯೊಳಗೆ ಗುಬ್ಬಚ್ಚಿಯೊಂದನ್ನು ಬಚ್ಚಿಟ್ಟುಕೊಂಡು ಬಂದ. ಆತ ಸಂತನಲ್ಲಿ ಕೇಳಿದ ‘‘ಗುಬ್ಬಚ್ಚಿ ಬದುಕಿದೆಯೇ, ಸತ್ತಿದೆಯೇ?’’
12th March, 2018
ಸರ್ವಾಧಿಕಾರಿ ಹಂತಹಂತವಾಗಿ ಆ ಚಿಂತಕನ ಚಿಂತನೆಗಳನ್ನೆಲ್ಲ ಸಾಯಿಸಿದ. ಬಳಿಕ ಅದರ ಮೇಲೇ ಆ ಚಿಂತಕನ ಪ್ರತಿಮೆಯನ್ನು ನಿಲ್ಲಿಸಿದ.
9th March, 2018
ಬಸ್ ನಿಲ್ದಾಣದಲ್ಲಿ ತಾಯಿಯ ಕೈಯಲ್ಲಿ ಮಗುವೊಂದು ರಚ್ಚೆ ಹಿಡಿದು ಅಳುತ್ತಿತ್ತು. ಆಕೆಯ ಒಂದು ಕೈಯಲ್ಲಿ ಮಗುವಿದ್ದರೆ, ಇನ್ನೊಂದು ಕೈಯಲ್ಲಿ ಆಗಷ್ಟೇ ಕೊಂಡುಕೊಂಡ ಹಾಲಿನ ಡಬ್ಬವಿತ್ತು.  
6th March, 2018
ಆತ ನಗರದಲ್ಲಿ ಬಸ್‌ಗಾಗಿ ಕಾಯುತ್ತಿದ್ದ. ಅಷ್ಟರಲ್ಲಿ ಯಾರೋ ಕೂಗಿ ಹೇಳಿದರು ‘‘ಸಾರ್, ಯಾರೋ ನಿಮ್ಮನ್ನು ಕರೆಯುತ್ತಿದ್ದಾರೆ’’ ‘‘ಯಾರು?’’ ಆತ ಮರು ಪ್ರಶ್ನಿಸಿದ.
3rd March, 2018
ತುಂಬಾ ಅಪರೂಪಕ್ಕೆ ಸಿಕ್ಕಿದ ಆತನನ್ನು ಗುರುತು ಹಿಡಿದು ಕರೆದರು ‘‘ಯಾಕೆ? ಈಗ ನೀನು ಮೊದಲಿನಂತೆ ಸಿಗುವುದೇ ಇಲ್ಲ’’ ‘‘ಸಾರ್...ನನ್ನ ಮೊಬೈಲ್ ಕಳೆದು ಹೋಯಿತು. ನಿಮ್ಮ ನಂಬರ್ ಕೂಡ ಅದರ ಜೊತೆಗೇ ಕಳೆದು ಹೋಯಿತು...’’
24th February, 2018
ಮಗುವನ್ನು ತಾಯಿ ಮನೆಯಲ್ಲಿ ಕನ್ನಡ ಮಾತನಾಡುವುದಕ್ಕೆ ಬಿಡುತ್ತಿರಲಿಲ್ಲ. ಮಾತನಾಡಿದಾಗಲೆಲ್ಲ ತಾಯಿ ''ಇಂಗ್ಲಿಷ್‌ನಲ್ಲಿ ಮಾತನಾಡು'' ಎಂದು ಬೆದರಿಸುತ್ತಿದ್ದಳು. ಅದೊಂದು ದಿನ ಅವರು ಪಕ್ಷಿಧಾಮಕ್ಕೆ ಭೇಟಿ ನೀಡಿದರು.
19th February, 2018
ಉಪದೇಶಗಳ ಗೊಬ್ಬರ ಹಿತ್ತಲಲ್ಲಿ ಕೊಳೆಯುತ್ತಿದೆ. ಆದರೇನು ಮಾಡುವುದು? ಬಿತ್ತುವುದಕ್ಕೆ ಬೀಜವಿಲ್ಲ. ಉಳುವುದಕ್ಕೆ ಗದ್ದೆಯಿಲ್ಲ!
6th February, 2018
  ಕಾಲೇಜಿನಲ್ಲಿ ತನ್ನ ಹಿಂದೆಯೇ ಸುಳಿದಾಡುತ್ತಿದ್ದ ಹುಡುಗನ್ನು ಕಂಡೂ ಕಾಣದಂತೆ ಖುಷಿ ಪಡುತ್ತಿದ್ದ ಹುಡುಗಿ ಬಳಿಕ ಆತನನ್ನು ಮರೆತು ಯಾರನ್ನೋ ಮದುವೆಯಾದಳು. ಮಕ್ಕಳು, ಗಂಡ ಈ ಬದುಕಿನ ನಡುವೆ ಸಮಯ ಓಡಿದ್ದೇ ತಿಳಿಯಲಿಲ್ಲ....
5th February, 2018
ಕಂಬಳಿ ಮಾರುವವನ ಬಳಿ ಚಳಿಗೆ ಹೊದೆಯಲು ಒಂದು ಕಂಬಳಿಯೂ ಇರಲಿಲ್ಲ. ಆಗಷ್ಟೇ ಮನೆಯೊಂದನ್ನು ಕಟ್ಟಿ ಮುಗಿಸಿದ ಕಾರ್ಮಿಕ, ರಾತ್ರಿ ಬೀದಿ ಬದಿಯಲ್ಲಿ ನಿದ್ರಿಸುತ್ತಿದ್ದಾನೆ. ಅಡುಗೆ ಕೆಲಸ ಮುಗಿಸಿದ ಕೆಲಸದಾಕೆ, ಒಂದು ತಟ್ಟೆ...
29th January, 2018
ಬದುಕಿನ ಕೊನೆಯ ದಿನಗಳಲ್ಲಿ ಅಜ್ಜಿ ತನ್ನ ಮೊಮ್ಮಗನ ಬಳಿ ಸತ್ಯ ಬಿಚ್ಚಿಟ್ಟಳು ‘‘ಮಗಾ, ನಿನ್ನಜ್ಜನದು ಸಹಜ ಸಾವಾಗಿರಲಿಲ್ಲ. ಪಾಯಸದಲ್ಲಿ ನಾನೇ ವಿಷ ಹಾಕಿ ಅವರಿಗೆ ಕೊಟ್ಟೆ’’ ಮೊಮ್ಮಗ ಆಘಾತದಿಂದ ಕೇಳಿದ ‘‘ಸ್ವತಃ ಗಂಡನಿಗೆ...
27th January, 2018
‘‘ನಿನಗೆ ಗೊತ್ತಾ, ನಮ್ಮ ಮನೆಯಲ್ಲಿ ಮಾತನಾಡುವ ಗಿಳಿಯೊಂದಿದೆ’’ ‘‘ಏನು ಮಾತನಾಡುತ್ತದೆ?’’
22nd January, 2018
‘‘ದೇವರಿಗೆ ಅರ್ಪಿಸಲು ನಿಮ್ಮ ಮನೆಯ ಅಂಗಳದಲ್ಲಿ ಅರಳಿರುವ ಹೂವುಗಳನ್ನು ಕೊಯ್ದುಕೊಳ್ಳಲೇ?’’ ‘‘ಬೇಡ, ಬೇಡ. ಅದು ಅರಳುತ್ತಿರುವುದೇ ನನ್ನ ಗೆಳತಿ ಮುಡಿದುಕೊಳ್ಳಲಿ ಎನ್ನುವ ಕಾರಣಕ್ಕಾಗಿ’’ -ಮಗು
21st January, 2018
‘‘ನಿಮ್ಮ ವಯಸ್ಸೆಷ್ಟು?’’ ‘‘ಲೆಕ್ಕ ಹಿಡಿದರೆ ನನಗೀಗ 42 ವರ್ಷ. ಆದರೆ ಕೆಲವು ದಿನಗಳನ್ನು ನಾನು ಹತ್ತಿಪ್ಪತ್ತು ವರ್ಷಗಳ ಕಾಲ ಬದುಕಿದ್ದೇನೆ. ಆದುದರಿಂದ ನನಗೆ ಇಷ್ಟೇ ವರ್ಷ ಎಂದು ಲೆಕ್ಕ ಹಾಕುವುದು ಕಷ್ಟ’’
16th January, 2018
ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಿಂದ ಜಾಮೀನು ಪಡೆದು ಹೊರಗೆ ಬಂದ ಯುವಕನೊಬ್ಬ ಅನ್ಯ ಧರ್ಮೀಯನ ಜೊತೆಗೆ ಮಾತನಾಡಿದ ಆರೋಪದಲ್ಲಿ ಹುಡುಗಿಯೊಬ್ಬಳಿಗೆ ಥಳಿಸಿ ‘ಸಂಸ್ಕೃತಿ ರಕ್ಷಕ’ ಎನಿಸಿಕೊಂಡ.  
15th January, 2018
‘‘ದೇವರನ್ನು ಹತ್ತಿರವಾಗಿಸುವುದು ಹೇಗೆ ಗುರುಗಳೇ?’’ ಶಿಷ್ಯ ಕೇಳಿದ. ‘‘ಹೆಚ್ಚು ಹೆಚ್ಚು ಸೂಕ್ಷ್ಮಜ್ಞರಾಗುವುದು’’ ಸಂತ ಹೇಳಿದ. ‘‘ಹಾಗೆಂದರೆ?’’ ‘‘ಪುಟ್ಟ ನಕ್ಷತ್ರವೊಂದನ್ನು ಹಗಲಿನ ಆಕಾಶದಲ್ಲೂ ಗುರುತಿಸುವಷ್ಟು...
Back to Top