ಕಲೆ - ಸಾಹಿತ್ಯ

12th May, 2017
ಕೃತಿಯ ವಿವರ: ಪುಸ್ತಕ: ಪುಣ್ಯಕೋಟಿ ಪ್ರಕಾಶನ: ಚಿನ್ಮಯಿ ಪ್ರಕಾಶನ c/o ಮಣಿಕಂಠ ಬಿಳ್ಳೂರು ಮೂಡಿಗೆರೆ-577132 ದೂ.: 8762267491 ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಜಾನುವಾರುಗಳ ಸಂತತಿಯು ಅಧಿಕವಾಗಿ ಲಭ್ಯ ಇರಬೇಕಿತ್ತು. ಹಿಂದೆಲ್ಲ ಬಹುತೇಕ ರೈತರು ಕೃಷಿ ಹಾಗೂ ತೋಟಗಾರಿಕೆಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಪರಿಗಣಿಸಿ ಹಾಲು ಹಾಗೂ ಕೊಟ್ಟಿಗೆ ಗೊಬ್ಬರವನ್ನು ತಾವೇ ಉತ್ಪಾದಿಸಿಕೊಳ್ಳುತ್ತಿದ್ದರು....
10th Dec, 2016
ಇತ್ತೀಚೆಗೆ, ನನ್ನೂರಿಗೆ ಹೋಗಿ ಬಂದೆ. ಕಣ್ಣು ಹಾಯಿಸಿದಲ್ಲೆಲ್ಲ ಕರಿ ಹೊಲ, ಹೊಲತುಂಬ ಓಡ್ಯಾಡುವ ಬಿಸಿಲುಗುದುರೆ. ದೂರದಲ್ಲೆಲ್ಲೊ ಊಳಿಡುವ ನವಿಲುಗಳು, ಹಸಿವನ್ನೇ ಮೇವಾಗಿಸಿಕೊಂಡ ಜಾನುವಾರು, ನೆರಳು ಸುಳಿದಲ್ಲಿ ಅರೆಬೆತ್ತಲೆಯ ಪಾಪದ ಜನರು. ವಸಂತನ ದಾರಿ ಕಾದು ಕಾದು ಸೂರ್ಯ ಕೆಂಡವಾದ. ಬಂದವನು ಓಡುನಡಿಗೆಯಲೇ ಹೋದ. ಬಿಸಿಲುಂಡ ಧರೆಯ ದಾಹ ನೀಗದ ನಿರ್ದಯಿಯಾದ. ನೇಗಿಲ ಮೊನೆ ನಾಟಿತಷ್ಟೆ, ಬೀಜ ಮೊಳಕೆಯೊಡೆಯಲಿಲ್ಲ. ಸಾಲ ಯಾರ ಮುಲಾಜಿಗೂ ಕಾಯದೆ ಬೆಳೆದು ಬೇಲಿ...
20th Nov, 2016
   ತಾ ನೇಯದ ಬಟ್ಟೆಯನು ತೊಡುತ್ತಿರುವ ತಾ ಬೆಳೆಯದ ರೊಟ್ಟಿಯನು ತಿನ್ನುತ್ತಿರುವ ತಾ ಬೆಳೆಸದಾ ದ್ರಾಕ್ಷಿ ತೋಟಗಳಿಂದ ಹರಿವ ವೈನನು ಸವಿಯುತ್ತಿರುವ ಆ ದೇಶಕ್ಕಾಗಿ ಮರುಕ ಪಡು ! ಪೀಡಕನನ್ನೇ ನಾಯಕನೆಂದು ತಿಳಿದಿರುವ ಮಿನುಗು ಮಾತುಗಳನ್ನಾಡಿ ದೋಚುವ                      ...
16th Oct, 2016
ಭಾರತದಲ್ಲಿ ಹೋರಾಟದ ದಿಕ್ಕನ್ನೇ ಬದಲಿಸಿದ ಮಹಾತ್ಮಾ ರಕ್ತಪಾತವಿಲ್ಲದ ಹೋರಾಟವನ್ನು ಕಲಿಸಿದ ಪುಣ್ಯಾತ್ಮಾ ಪ್ರಾಮಾಣಿಕತೆಯಿಂದ ಬದುಕು ಸವೆಸಿದ ಪುಣ್ಯಾತ್ಮಾ ಗೋಡ್ಸೆಯ ಗುಂಡಿಗೆ ಬಲಿಯಾಗಿ ಆದ ಹುತಾತ್ಮಾ ಅನುಕ್ಷಣವೂ ಸತ್ಯದೊಂದಿಗೆ ಪ್ರಯೋಗ ನಡೆಸಿದ ವೀರ ಸತ್ಯದ ಪಾರದರ್ಶಕವಾಗಿ ಜೀವನ ಚರಿತ್ರೆ ಬರೆದಿಟ್ಟ ಧೀರ ಜಗತ್ತಿಗೆ ಶಾಂತಿಯ ಬೋಧಿಸಿ ಆಚರಿಸಿದ ಮಹಾವೀರ ಗುಂಡಿಗೆ ಬಲಿಯಾಗಿ, ಆದ...
10th Oct, 2016
 1 ಅವರು, ಜಾತಿಯ ಅಲಗು ತಿವಿದು ಹುಬ್ಬೇರಿಸಿದರು. ನಾವು,  ಒಂದೇ ಒಂದು ಪದ ಮಾತನಾಡಲಿಲ್ಲ 2 ಅವರು, ನಮ್ಮ ಅಂಡಿನ ಮೇಲೆ ದಣಿವಿಲ್ಲದೆ ಒದೆಯುವಾಗ ಅವಡುಗಚ್ಚಿ ಸಹಿಸಿಕೊಂಡೆವು ಅವು, ನಾವೇ ಹೊಲಿದ ಚಪ್ಪಲಿಗಳೆಂದು 3 ಮುಗ್ಧ ರಕ್ತದ ಹನಿಗಳು ತೊಟ್ಟಿಕ್ಕುವುದು, ಅವರು, ದೇಶ ಪ್ರೇಮದ ಸೋಗಿನಲಿ ಬಿಳಿ ಅಂಗಿಯ ಚುಂಗು ಹಿಡಿಯುವುದು ಇದ್ಯಾವುದೂ ಹೊಸತಲ್ಲ ಮನುಕುಲದಷ್ಟು ಪುರಾತನ 4 ಅವರ, ಹಿಂಸೆಯ ವ್ಯಾಪಾರ ಬೀದಿಯಲಿ ನಮ್ಮ ಕನಸಿನ ಕೂಸುಗಳು ಬಿಡಿಗಾಸಿಗೆ ಬಿಕರಿಯಾಗುತ್ತವೆ. 5 ನಮ್ಮೊಳಗೆ ಹಸಿವು, ಅವಮಾನಗಳು ಹಾಸಿ ಹೊದ್ದು...
04th Oct, 2016
  ಶತಶತಮಾನಗಳಿಂದ ಶೋಷಣೆಗೊಳಗಾದೆ ನಾಲ್ಕು ಗೋಡೆಯ ಮಧ್ಯೆ ಜೀವನ ಕಳೆದೆ ನಿನ್ನನ್ನು ನರಕದ ಬಾಗಿಲು ಎಂದರೂ ಸುಮ್ಮನಾದೆ ಏಕೆ, ನೀನೇಕೆ ಧ್ವನಿ ಎತ್ತಲಿಲ್ಲ ಹೆಣ್ಣೆ? ನಿನಗೆ ಮೋಕ್ಷವಿಲ್ಲ ಎಂದು ಬೋಧಿಸಿದವು ಧರ್ಮಗಳು, ಬಾಲ್ಯದಲ್ಲಿ ತಂದೆಯ ರಕ್ಷಣೆಯಲ್ಲಿ ಯೌವನದಲ್ಲಿ ಗಂಡನ ರಕ್ಷಣೆಯಲ್ಲಿ, ಹಾಗೂ ವೃದ್ಧಾಪ್ಯದಲ್ಲಿ ಮಗನ ರಕ್ಷಣೆಯಲ್ಲಿ ಬದುಕಬೇಕು ಎಂದರೂ, ಎಲ್ಲವನ್ನೂ ಕೇಳಿಯೂ ಕೇಳಿಸದಂತೆ...
13th Sep, 2016
ಎಲ್ಲೆಲ್ಲೋ ಹೊತ್ತಿ ಉರಿಯುತ್ತಿದ್ದ ಮನೆಗಳ ಧಗಿಧಗಿಸುವ ಜ್ವಾಲೆಯ ಬಿಸಿ ಸೂರ್ಯನ ಸುಡುಬಿಸಿಲಿನೊಂದಿಗೆ ಸೇರಿಕೊಂಡು, ಸಂಜೆಯ ಸೆಕೆ ಸಹಿಸಲು ಅಸಾಧ್ಯವಾಯಿತು. ಹಠಾತ್ತನೆ ಗುಂಡಿನ ಸಪ್ಪಳ ಕೇಳಿಸಿತು. ಪೊಲೀಸರು ಬರುವುದರೊಳಗಾಗಿಯೇಇಡೀ ರಸ್ತೆ ನಿರ್ಜನವಾಯಿತು.. ಎಲ್ಲೆಲ್ಲೂ ಲೂಟಿ, ಗಲಭೆಗಳು ನಡೆಯುತ್ತಿದ್ದವು. ಈಗ ಕಂಡಲ್ಲಿ ಕೊಳ್ಳಿಯಿಡುವ ಕೆಲಸ ವ್ಯಾಪಕವಾಗಿ...
06th Sep, 2016
"ಅಗೆ, ಓಯ್ ಖಡ್‍ಗೆ ಜರಾ... (ಏಯ್ ನಿಲ್ಲೆ ಅಲ್ಲಿ)" "ಪಲಟ್ ನಾ ಜರಾ ಚಹರಾ ತೋ ದಿಖಾಗೆ" (ತಿರುಗೆ... ಸ್ವಲ್ಪ ಮುಖಾನಾದ್ರೂ ತೋರಿಸೆ) ರಿಫಾತ್ ಹೆದರಿಕೆಯಿಂದ ಬ್ಯಾಗು ಗಟ್ಟಿಹಿಡಿದು ಬುರ್ಖಾ ಮೇಲೆತ್ತಿ ಓಟಕ್ಕಿತ್ತಳು. ಅವಳ ಹಿಂದೆ ಪಡ್ಡೆ ಹುಡುಗರ ದಂಡೊಂದು `ಜಿಂಕೆ ಮರಿನಾ... ನೀ ಜಿಂಕೆ...
14th Aug, 2016
ದುರ್ಬೀನಿಟ್ಟು ಹುಡುಕಿದರೂ ಆ ಗೋಮಾತೆಯ ಒಸಡಿಗೆ ಚುಚ್ಚುವುದು ಬೆಣಚುಕಲ್ಲು ಮುಳ್ಳು ಪೊದರು ಗೋಮಾಳ ಮಾತ್ರ ಮಕ್ಕಳ ಪಠ್ಯಪುಸ್ತಕದಲ್ಲಿ; ಪರಿಸ್ಥಿತಿ ಹೀಗಿರುವಾಗ ಎಲ್ಲಿಂದ ಬರಬೇಕು ಗೋಮಯ, ಗೋ ಮೂತ್ರ ಆ ತಾಯಿಗೆ? ಮನ ಶುದ್ಧಿ ಮನೆ ಶುದ್ಧಿಗೆ ಬೇಕು ಗೋಮೂತ್ರ ಸೆಗಣಿ ಲಂಗ ತೊಟ್ಟ ಪೋರಿ ಬುಟ್ಟಿ ಗಿಂಡಿಗೆ ಹಿಡಿದು ಪುಣ್ಯಕೋಟಿಯ ಹಿಂದೆ ಸುತ್ತಿದ್ದೇ ಬಂತು ತದೇಕ ಚಿತ್ತದಿಂದ...
08th Aug, 2016
 ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೇ ಬೇರೇನೂ ಹೇಳುವುದಿಲ್ಲ. ಸತ್ಯದ ಶತ್ರು ಸುಳ್ಳಲ್ಲ, ಸಿಟ್ಟು. ನಿನಗೆ ಸಿಟ್ಟು ಬಂದರೆ ನಾನು ಬರೆಯೋದು ಸತ್ಯ ಅಂತ ಆಯ್ತು. ಹಸ್ತಿನಾವತಿ ಎಂಬ ಪಟ್ಟಣಕ್ಕೆ ಮಂತ್ರಿಗಳುಂಟು, ರಾಜರಿಲ್ಲ. ಯಜ್ಞ ಯಾಗಾದಿಗಳು ಸಾಂಗವಾಗಿ ನಡೆಯುವುವು. ಸ್ಲಂಗಳು ಇರುವುವು, ಇದಲ್ಲದೆ ಒಂದು...
05th Jul, 2016
ಮನೆಯ ಚಪ್ಪಲಿ ಸ್ಟಾಂಡಿನತ್ತ ಕಣ್ಣು ಹೊರಳಿತು; ಅಲ್ಲಿ ನಾನಿದ್ದೆ, ದುಬಾರಿ ಬ್ರಾಂಡೆಡ್ ಶೂವಿನಲ್ಲಿ; ತಂಗಿಯೂ ಇದ್ದಳು,ನನಗಿಂತ ಏನೂ ಕಮ್ಮಿ ಇರದೇ; ಅಮ್ಮನದೂ ಪರವಾಗಿಲ್ಲ, ಚಪ್ಪಲಿ ಹೊಸತೇ.. ಇನ್ನೊಂದು ಚಪ್ಪಲಿದೆ ಅಲ್ಲಿ, ವರುಷ ಕಳೆದ, ಸವೆದು ಮುಗಿದ ಹರಿದ ಕಡೆಯೆಲ್ಲ ಹೊಲಿಗೆಗಳು ತುಂಬಿದ್ದು; ಅದು ಮನೆಯ ಯಜಮಾನ ಅಪ್ಪನದು ಅಪ್ಪ ಯಾವತ್ತೂ ಹಾಗೇ, ನನಗೆ ದುಬಾರಿ...
10th Apr, 2016
ಭಾರತಾಂಬೆ ಯಾರು? ಹುಡುಕಾಟದಲ್ಲಿ ನಾನು; ತಡಕಾಡಿದೆ ನಾಡು ಏರಿದೆ ಹಲವು ಗುಡ್ಡ ಕಾಡು; ಎಲ್ಲಿಯೂ ನಾ ಅವಳ ಕಾಣಲಿಲ್ಲ!! ನಾನವಳಿಗೆ ಕೃತಘ್ನನಂತೆ, ಅಚ್ಚರಿಯೆನಗೆ! ಪರಿಚಯವಿಲ್ಲದವಳಿಗೇಕೆ ನನ್ನ ವಂದನೆ? ವಂದಿಸದಿದ್ದರೇಕೆ ನಿಂದನೆ!! ಅವಳ ಹುಡುಕಾಟದಲಿಂದು ಹಳ್ಳಿಗೆ ಬಂದೆ; ನೀರಡಿಕೆ ನೆರಳಾದವಳು ನೆರೆದ ಕೂದಲಿನಜ್ಜಿ! ನನಗರಿವಿಲ್ಲದ ಜಿಜ್ಞಾಸೆ ‘ಅಮ್ಮಾ...ನೀನೇದಾರೂ ಭಾರತ ಮಾತೆಯೇ?’ ಛೀ, ತಮಾಷೆ ಮಗೂ ಎಂದಷ್ಟೇ ಹಲುಬಿದಳು! ಪೇಟೆಗೆ ಹೋದೆ, ತುಂಬಾ ವಿಚಾರಿಸಿದೆ! ಸೈಕೋ ಎಂದು ಮೂದಲಿಸಿದರಷ್ಟೆ... ನಿಲ್ದಾಣದ ಬದಿಯಲಿದ್ದ ನಿರ್ಗತಿಕ ಅಮ್ಮನಲ್ಲೂ ಕೇಳಿದೆ ಅವಳು ಕೆಕ್ಕರಿಸಿ...
16th Mar, 2016
ನೈಟ್ ಶಿಫ್ಟ್ ಕೆಲಸ ಮುಗಿಸಿ ಮನೆ ಕಡೆ ಹೊರಟಿದ್ದೆ. ಆನ್ ದಿ ವೇ ನಮ್ " ಮನ್ಸೋರೆ" ಮನೆಗೋಗಿ ಬೇಗ ಎಬ್ಬಿಸಿ ಕಾಟ ಕೊಟ್ಟು ಹೋಗಣ ಅಂತ ಮನ್ಸೋರೆ ಮನೆ ಮುಂದೆ ಗಾಡಿ ಪಾರ್ಕ್ ಮಾಡ್ತಿದ್ದೆ. ಅಲ್ಲಿ ತಳ್ಳೋಗಾಡೀಲಿ ಸೊಪ್ಪುತರಕಾರಿ ಮಾರೋ...
12th Jan, 2016
ಜಾಗತಿಕ ಕನ್ನಡ ಕವನ ಸ್ಪರ್ಧೆಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೈಸೂರು ಅಸೋಸಿಯೇಷನ್ ಮುಂಬೈಗೆ 90 ವರ್ಷ ತುಂಬುತ್ತಿರುವುದರಿಂದ ಈ ಸಂಭ್ರಮದ ಆಚರಣೆಯ ಪ್ರಯುಕ್ತವಾಗಿ  ಮೈಸೂರು ಅಸೋಸಿಯೇಷನ್ ಜಾಗತಿಕ ಕನ್ನಡ ಕವನ ಸ್ಪರ್ಧೆಯನ್ನು ಆಯೋಜಿಸಿದೆ. ►ಈ ಸ್ಪರ್ಧೆಯಲ್ಲಿ ಇಡೀ ವಿಶ್ವದಾದ್ಯಂತ ಇರುವ ಎಲ್ಲಾ ಕನ್ನಡಿಗರು ಭಾಗವಹಿಸಬಹುದಾಗಿದೆ....
Back to Top