Social media

11th Sep, 2018
ಪ್ರೀತಿಯ ನಿಶ್ರೀನ್ ಜಾಫ್ರಿ ಹುಸೇನ್ , ಬೆಂಬಲ ಸೂಚಿಸಿ ನೀವು ಬರೆದ ಆತ್ಮೀಯ ಪತ್ರಕ್ಕೆ ನಾನು ಆಭಾರಿಯಾಗಿದ್ದೇನೆ. 2002 ರಲ್ಲಿ ನೀವು, ನಿಮ್ಮ ಕುಟುಂಬ ಹಾಗು ಸಾವಿರಾರು ಅಮಾಯಕ ನಾಗರೀಕರು ಅನುಭವಿಸಿದ್ದನ್ನು ಊಹಿಸುವುದೂ ಕಷ್ಟ.  ನನ್ನ ಪತಿ ಮನೆಗೆ ಮರಳಿದ ಆ ರಾತ್ರಿ ನನಗಿನ್ನೂ...
14th Aug, 2018
►ಕಾಮರಾಜ ನಾಡಾರ್ , ಕೆಂಗಲ್ ಹನುಮಂತಯ್ಯ ಮನೆಯಲ್ಲಿ ತಂಗಿದ್ದರು    ►ನಾಲ್ಕು ವರ್ಷ ಶಿವರಾಮ ಕಾರಂತರ ಕಾರು ಚಾಲಕರಾಗಿದ್ದರು ಭಾರತದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನಹರೂ ಅವರಿಗೆ ಸಾರಥಿಯಾದ, ನಾಡಿನ ಸಾಕ್ಷಿ ಪ್ರಜ್ಞೆ ಡಾ. ಶಿವರಾಮ ಕಾರಂತರ ಕಾರು ಚಾಲಕರಾಗಿದ್ದ, ಅಪರೂಪದ ವ್ಯಕ್ತಿಯೊಬ್ಬರು ಸುಳ್ಯ...
07th Aug, 2018
ಮಹಿಳೆಯರು ತಾವು ಅಬಲೆಯರಲ್ಲ, ಸಬಲೆಯರು ಎಂದು ನಿರೂಪಿಸುತ್ತಾ ಎಲ್ಲಾ ಕೆಲಸಗಳಲ್ಲೂ ಮುಂಚೂಣಿಗೆ ಬರುತ್ತಿರುವುದನ್ನು ನಾವು ಕಾಣುತ್ತಲೇ ಇದ್ದೇವೆ. ಇದೀಗ ಅಡಿಕೆ ಮರವೇರಿ ಮದ್ದು ಸಿಂಪಡಣೆ ಸರದಿ. ಸುಳ್ಯದ ಮಹಿಳೆಯೊಬ್ಬರು ಇದನ್ನೂ ಸಾಧ್ಯವಾಗಿಸಿದ್ದಾರೆ. ಹೆಣ್ಣಾದವಳು ಮನೆಯೊಳಗಿನ ನಾಲ್ಕು ಗೋಡೆಗಳ ಮಧ್ಯೆ ಇರುವಂತಹ ಕಾಲವಿತ್ತು. ಆದರೆ...
29th Jun, 2018
ಸಿಯೋಲ್ (ದಕ್ಷಿಣ ಕೊರಿಯ), ಜೂ. 29: ದಕ್ಷಿಣ ಕೊರಿಯ ರಾಜಧಾನಿಯಲ್ಲಿ ಏಳು ದಶಕಗಳ ಅಮೆರಿಕ ಸೈನಿಕರ ಉಪಸ್ಥಿತಿಯನ್ನು ಅಮೆರಿಕದ ಶುಕ್ರವಾರ ಔಪಚಾರಿಕವಾಗಿ ಕೊನೆಗೊಳಿಸಿದೆ ಹಾಗೂ ಇಲ್ಲಿನ ತನ್ನ ಸೇನಾ ಕಮಾಂಡನ್ನು ಉತ್ತರ ಕೊರಿಯ ಫಿರಂಗಿ ವ್ಯಾಪ್ತಿಯಿಂದ ದೂರಕ್ಕೆ ಸಾಗಿಸಿದೆ. ಅಮೆರಿಕದ ಸೇನಾ ಕಮಾಂಡನ್ನು...
15th May, 2018
Last Take 40 ಸ್ಥಾನಗಳು 100-120 ಆಗುವಂತಹ ಅಚ್ಚರಿಗಳು ಘಟಿಸುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಒಂದೋ ಆಡಳಿತ ಪಕ್ಷದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಇರಬೇಕು, ಇಲ್ಲವಾದರೆ ಪ್ರತಿಪಕ್ಷದ ಪರ ಅಲೆ ಇರಬೇಕು. 1989, 1999, 2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಆಡಳಿತ...
08th May, 2018
ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಹಾಗೂ ಭಾರತೀಯ ಸೇನೆಯ ಭಾಗವಾಗಿರುವ ಮುಧೋಳ ನಾಯಿಗಳಿಂದ ಕಾಂಗ್ರೆಸ್ ಪಕ್ಷ ದೇಶ ಭಕ್ತಿ ಕಲಿಯಬೇಕಾಗಿದೆಎಂದು ಭಾರತದ ಪ್ರಧಾನ ಮಂತ್ರಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಅವರು ರಾಹುಲ್ ಗಾಂಧಿಯ ಹೆಸರಿತ್ತಿಲ್ಲ. ಆದರೆ ಜೆ ಎನ್ ಯು ಗೆ ಅಂದು ಹೋಗಿದ್ದು ರಾಹುಲ್ ಗಾಂಧಿಯವರೇ. ಅಲ್ಲಿ ಹಾಕಿದ್ದರೆಂದು ಪ್ರಧಾನಿಯವರು ಹೇಳಿರುವ ಘೋಷಣೆಗಳ ಕುರಿತ ಸತ್ಯ ಇವತ್ತಿನವರೆಗೂ ಬಯಲಾಗಿಲ್ಲ. ಆ ಘೋಷಣೆಗಳನ್ನು ಹಾಕಿದವರು ಯಾರು ಎಂಬುದೂ ಇಂದಿಗೂ...
07th May, 2018
ಯಾವುದೇ ಚುನಾವಣೆಯಿರಲಿ,ಟಿವಿ ಚಾನೆಲ್‌ಗಳು ಅದನ್ನು ವರದಿ ಮಾಡುವ ರೀತಿಯು ಕೇವಲ ಬಾಹ್ಯತೋರಿಕೆಯದ್ದಾಗಿರುತ್ತದೆಯೇ ಹೊರತು ಅದರ ಆಳಕ್ಕಿಳಿಯುವ ಪ್ರಯತ್ನಗಳು ನಡೆಯುವುದಿಲ್ಲ. ನಾಯಕರ ಬೆನ್ನು ಬೀಳುವುದೇ ಚಾನೆಲ್‌ಗಳ ಸ್ವಭಾವವಾಗಿದೆ. ಯಾವುದೇ ಚಾನೆಲ್ ಸತ್ಯಶೋಧನೆಯ ಗೋಜಿಗೆ ಹೋಗುತ್ತಿಲ್ಲ,ಅದರ ಬದಲು ಚರ್ಚೆಯ ಹೆಸರಿನಲ್ಲಿ ಇಬ್ಬರು ವಕ್ತಾರರನ್ನು ಆಮಂತ್ರಿಸಿ...
04th May, 2018
ಸನ್ಮಾನ್ಯ ಪ್ರಧಾನಿಗಳಿಗೆ ಗೌರವಪೂರ್ವಕ ವಂದನೆಗಳು,  ತಾವು ಮೊದಲು ನಿಶ್ಚಯಿಸಿದ 15 ಭಾಷಣಗಳನ್ನು ಇದೀಗ ಬದಲಾಯಿಸಿ, ಒಟ್ಟು 21 ಬಾರಿ ಕರ್ನಾಟಕದಲ್ಲಿ ಭಾಷಣ ಮಾಡಿ ವಿರೋಧಿಗಳನ್ನು ಹಿಮ್ಮೆಟ್ಟಿಸಲಿದ್ದೀರಿ ಎಂದು ತಿಳಿದೆ. ಈ ಸಂಖ್ಯೆಗೂ ಪರಶುರಾಮರು 21 ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರ ನಾಶ ಮಾಡಿದ್ದಕ್ಕೂ...
20th Apr, 2018
ನ್ಯಾಯಮೂರ್ತಿ ಲೋಯಾ  ಶಂಕಾಸ್ಪದ ಸಾವಿನ ತನಿಖೆ ಏಕೆ ಒಂದು ಹಗರಣವಾಗಿದೆ ಎಂದು ನಿಮಗೆ ತಿಳಿಯಬೇಕಿದ್ದರೆ ಇದನ್ನು ಓದಿ: 1.ಸೊಹ್ರಾಬುದ್ದೀನ್ ಎನ್‍ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ವಕೀಲರಾಗಿದ್ದವರೇ ಲೋಯಾ ಸಾವಿನ ತನಿಖೆ ನಿಲ್ಲಿಸಲು ಮಹಾರಾಷ್ಟ್ರ ಸರಕಾರದ  ವಕೀಲರಾಗಿದ್ದಾರೆ. 2. ಪ್ರಮುಖ ಬಿಜೆಪಿ ನಾಯಕರೊಬ್ಬರಿಗೆ ಹತ್ತಿರವಾಗಿದ್ದ ವ್ಯಕ್ತಿಯೊಬ್ಬರು...
30th Mar, 2018
ರಾಜ್ಯ  ಮತ್ತು ರಣಜಿ ತಂಡಗಳ ಮಟ್ಟದಲ್ಲಿ ಕಟ್ಟುನಿಟ್ಟು ಇರುತ್ತದೆಯೇ ಎಂದು ನನಗೆ ಅಷ್ಟು ಗೊತ್ತಿಲ್ಲ. ಏಕೆಂದರೆ ನಾನು ಆ ಹಂತದಲ್ಲಿ ಆಡಿಲ್ಲ. ಆದರೆ ರಾಜ್ಯ ಮಟ್ಟಕ್ಕಿಂತ ಒಂದೇ ಹಂತ ಕೆಳಗಿರುವ ಕ್ಲಬ್ ತಂಡಗಳಲ್ಲಿ ವಂಚಕ ಹಾಗು ಚೆಂಡು ವಿರೂಪಗೊಳಿಸುವ ಆಟಗಾರರ ಪಡೆಯೇ...
15th Mar, 2018
ನಿನ್ನ ಸಿನಿಮಾಗಳನ್ನು ಯಾವ ವಯಸ್ಸಿನಲ್ಲಿ ನೋಡಲು ಶುರು ಮಾಡಿದೆ ಅನ್ನುವುದು ನನಗಷ್ಟು ನೆನಪಿಲ್ಲ. ಆದರೆ ನೀನು ನನ್ನೆದೆ ಗೂಡೊಳಗೆ ಇಂಚಿಂಚೆ ಇಳಿದದ್ದು ಮಾತ್ರ ‘ರಂಗೀಲಾ’ದಿಂದ. ಅಲ್ಲಿಂದಿಲ್ಲಿಯ ತನಕ ನನ್ನ ಪಾಲಿಗೆ ನೀನೊಂದು ‘ಅನಿವಾರ್ಯ’. ಸಿನಿಮಾ ಅನ್ನುವುದು ನಿರ್ದೇಶಕನ ಪ್ರಬಲ ಮಾಧ್ಯಮ ಎಂದು ಬಲವಾಗಿ...
09th Jan, 2018
ಸಿಯೋಲ್ (ದಕ್ಷಿಣ ಕೊರಿಯ), ಜ. 9: ದಕ್ಷಿಣ ಕೊರಿಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯದ ಸ್ಪರ್ಧಿಗಳು ಭಾಗವಹಿಸಲು ಸಾಧ್ಯವಾಗುವಂತೆ ಅಗತ್ಯವಾದರೆ ಆ ದೇಶದ ವಿರುದ್ಧ ವಿಧಿಸಲಾಗಿರುವ ದಿಗ್ಬಂಧನಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗುವುದು ಎಂದು ದಕ್ಷಿಣ ಕೊರಿಯ ಮಂಗಳವಾರ ಹೇಳಿದೆ. ಉತ್ತರ...
13th Mar, 2017
ನಮ್ಮ ಮುಂದಿನ ರಕ್ಷಣಾ ಸಚಿವರಾಗಿ ನೇಮಕಗೊಂಡಿರುವುದಕ್ಕೆ ಅರುಣ್ ಜೇಟ್ಲಿ ಯವರಿಗೆ ಅಭಿನಂದನೆಗಳು. ರಕ್ಷಣೆಯಲ್ಲಿ ಭರ್ಜರಿ ಅನುಭವ ಹೊಂದಿರುವುದಕ್ಕಾಗಿಯೇ ಜೇಟ್ಲಿಯವರಿಗೆ ವಿತ್ತ ಸಚಿವ ಮತ್ತು ರಕ್ಷಣಾ ಸಚಿವರ ದ್ವಿಪಾತ್ರಗಳನ್ನು ನೀಡಲಾಗಿದೆ ಎನ್ನುವುದು ನನಗೆ ಖಚಿತವಿದೆ. ಭಾರತೀಯ ಆರ್ಥಿಕತೆಗೆ ಅವರ ವೌಲ್ಯವರ್ಧಿತ ಪ್ರಯತ್ನಗಳನ್ನು ನಾವು ಈಗಾಗಲೇ...
15th Feb, 2017
ಮುಂಬೈ, ಫೆ. ೧೫ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಏಳು ದೇಶಗಳ 104  ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೇಶಾದ್ಯಂತ ಭಾರೀ ಪ್ರಶಂಸೆಗೆ , ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆ ತಾನೇ 20 ಉಪಗ್ರಹ ಉಡಾವಣೆ ಮಾಡಿದ್ದನ್ನು...
08th Feb, 2017
ಉತ್ಕೃಷ್ಟ ದರ್ಜೆಯವೆಂದು, ಕೊಲೆಸ್ಟ್ರಾಲ್ ಮುಕ್ತ (ಇದು ಇನ್ನೊಂದು ದೊಡ್ಡ ಕಥೆ!) ಡಬಲ್ ರೀಫೈನ್ಡ್ ಎಂದೆಲ್ಲಾ ಹೇಳಿಕೊಳ್ಳುವ ಹೆಸರಾಂತ ಬ್ರಾಂಡುಗಳ ಬಹುತೇಕ ಎಣ್ಣೆಗಳ ಬೆಲೆಗಳು 70 ರಿಂದ ಶುರು ಆಗಿ 130--140ರಲ್ಲಿ ನಿಲ್ಲುತ್ತವೆ. ಬಹುತೇಕ ಎಣ್ಣೆಗಳು ಆಯಾ ಎಣ್ಣೆಕಾಳುಗಳಿಗೆ ಸಂಬಂಧಿಸಿದ ವಾಸನೆ, ಬಣ್ಣ...
22nd Jan, 2017
ಬೆಂಗಳೂರು, ಜ. 22 : ತಮಿಳುನಾಡಿನ ಜನರ ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಜಲ್ಲಿಕಟ್ಟು ಕುರಿತ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ ಬೆನ್ನಲ್ಲೇ ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕಂಬಳದ ಕುರಿತ ಚರ್ಚೆ ಗರಿಗೆದರಿದೆ. ತಮಿಳುನಾಡಿನ ಪ್ರತಿಭಟನೆಗೆ  ಕೇಂದ್ರ ಸರ್ಕಾರವೇ...
07th Dec, 2016
ಕರ್ನಾಟಕದ ಭಾಜಪದ ಮೇಲುಸ್ತುವಾರಿ ಹೊಂದಿರುವ ಪೊಲಸಾನಿ ಮುರಳೀಧರ ರಾವ್ (ಆಂಧ್ರದ ಹಿಂದುಳಿದ ಸಮುದಾಯವಾದ ವೇಲುಮ ಸಮುದಾಯದವರು) ಮತ್ತೊಮ್ಮೆ ಗುಡುಗಿದ್ದಾರೆ. ಈ ಗುಡುಗು ಅಡಗುವುದೋ, ಮಳೆಯಾಗಿ ಸುರಿಯುವುದೋ, ಸಿಡಿಲಾಗಿ ಬಡಿದು ಈಶ್ವರಪ್ಪನವರನ್ನು ಬಲಿ ತೆಗೆದುಕೊಳ್ಳುವುದೋ ಗೊತ್ತಿಲ್ಲ. ಈಶ್ವರಪ್ಪನವರಿಗೆ ಈಗ ಒದಗಿ ಬಂದಿರುವ ಪರಿಸ್ಥಿತಿ ಕುರುಬ...
06th Dec, 2016
ರಾಯಚೂರು ಸಾಹಿತ್ಯ ಸಮ್ಮೇಳನ. ಡಿಸೆಂಬರ್ 2, 3 ಮತ್ತು 4ರಂದು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಈ ಕನ್ನಡದ ಹಬ್ಬ ಹಲವು ಕಾರಣಗಳಿಂದ ನನಗೆ ವಿಶಿಷ್ಟವಾಗಿ ಕಂಡಿತು. ಮೊದಲನೆಯದಾಗಿ, ಇದರ ಅಚ್ಚುಕಟ್ಟಾದ ನಿರ್ವಹಣೆ. ಪ್ರತಿದಿನ ಸುಮಾರು 7000 ಪ್ರತಿನಿಧಿಗಳು ಮತ್ತು 30,000 ಇತರೆ...
16th Nov, 2016
ಇವರು ನಮ್ಮೂರಿನ ಅಪ್ರತಿಮ ತಂತ್ರಜ್ಞ 65-70 ವರ್ಷ ವಯಸ್ಸಿನ ಗಫೂರ್ ಸಾಬ್. ಓದಿದ್ದು ನಾಲ್ಕೋ ಐದನೇ ತರಗತಿ. ಮಿಕ್ಸಿ,ಟಿ.ವಿ,ಫ್ಯಾನ್ ನಿಂದ ಹಿಡಿದು ಮುರಿದ ಕೊಡೆ, ಹಾಳಾದ ಟಾರ್ಚ್ ವರೆಗೆ ಎಲ್ಲವನ್ನೂ ರಿಪೇರಿ ಮಾಡಬಲ್ರು. ಬಸ್ ಸ್ಟ್ಯಾಂಡ್ ಹತ್ರ ಒಂದು ಚಿಕ್ಕ ಗೂಡಂಗಡಿಲಿ...
11th Oct, 2016
ಇದು ಯುವ ಬ್ರಿಗೇಡ್ ನೇತಾರರಿಂದ ಕೊಲೆಗೀಡಾದ RTI ಕಾರ್ಯಕರ್ತ ವಿನಾಯಕ ಬಾಳಿಗಾ ನೆತ್ತರು ಅಂಟಿದ ಕಂಪೌಂಡು ಗೋಡೆ. ಬಾಳಿಗಾ ಅವರ ಮನೆಯ ಮುಂದಿನ ರಸ್ತೆಯಲ್ಲಿ ಈ ರಕ್ತ ಅಂಟಿದ ಗೋಡೆ ಈಗಲೂ ನಡೆದ ಕ್ರೌರ್ಯಕ್ಕೆ, ಬ್ರಿಗೇಡ್ ಬಾಯ್ ಗಳ ಮಾನಸಿಕ ಗಲೀಜಿಗೆ...
25th Sep, 2016
ಅದೊಂದು ದಿನ ನಾನು ನಮ್ಮ ಕರ್ನಾಟಕದ ಕಾಶ್ಮೀರ ಎಂದು ಕರೆಯುವ ಬೀದರಿನ ಪ್ರಮುಖ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದೆ. ಪಕ್ಕದಲ್ಲೇ ನನ್ನ ಹಾಗೇ ಒಂದು ಕುಟುಂಬ ಬಸ್‌ಗಾಗಿ ಕಾಯುತ್ತಾ ಕುಳಿತಿತ್ತು. ಒಂದು 10 ವರ್ಷ ಪ್ರಾಯದ ಹುಡುಗ...
08th Sep, 2016
ಕಾವೇರಿ ನದಿನೀರು ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಬರೆಯಬೇಕೆಂದು ನನ್ನ ಕೈ ತುರಿಸುತ್ತಿರುವುದು ನಿಜ, ವೃತ್ತಿಯನ್ನು ಮತ್ತು ದೆಹಲಿಯನ್ನು ಮಿಸ್ ಮಾಡುತ್ತಿರುವುದು ಕೂಡಾ ನಿಜ. ನಾನು 2000ನೇ ವರ್ಷದಲ್ಲಿ ದೆಹಲಿಗೆ ಹೋದವನು, ಅದಕ್ಕಿಂತ ಮೊದಲೇ ಅಲ್ಲಿ ಕನ್ನಡಪ್ರಭದ ವರದಿಗಾರರಾದ ಡಿ.ಉಮಾಪತಿ ಮತ್ತು...
07th Sep, 2016
ಸುಪ್ರೀಂಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡುವುದನ್ನು ಹೊರತುಪಡಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇರೆ ಆಯ್ಕೆಗಳಿತ್ತೇ? ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಕೆಲ ಸಲಹೆಗಳಂತೆ ಸುಪ್ರೀಂಕೋರ್ಟ್ ಸೂಚನೆಯನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಿತ್ತು. ಆಗ ಜನರಿಗೆ ಪ್ರೀತಿಪಾತ್ರರಾಗುತ್ತಿದ್ದರು ಮತ್ತು ಮುಂದಿನ ಚುನಾವಣೆಯಲ್ಲಿ...
05th Sep, 2016
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ, ಸಂಘ ಪರಿವಾರದ ಬೆಂಬಲಿಗರ ಪ್ರಾಬಲ್ಯ ಎದ್ದು ಕಾಣುವ ಅಂಶ. ಇದು ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪರಾಕಾಷ್ಠೆ ತಲುಪಿತ್ತು. ನರೇಂದ್ರ ಮೋದಿ ಅವರ ಪರ ಜನಾಭಿಪ್ರಾಯ ರೂಪಿಸುವಲ್ಲಿ ಈ ಸಾಮಾಜಿಕ ಜಾಲತಾಣಗಳ ಬೆಂಬಲಿಗರು ಬಹುದೊಡ್ಡ ಪಾತ್ರ ವಹಿಸಿದ್ದರು....
01st Sep, 2016
ಸಹೃದಯರಾದ ಶ್ರೀ ಸುರೇಶ್ ಕುಮಾರ್ ಅವರಿಗೆ ಪ್ರೀತಿಯ ನಮಸ್ಕಾರಗಳು. ಈ ಬಹಿರಂಗ ಪತ್ರದ ಉದ್ದೇಶ ತಾವು ಆಗಸ್ಟ್ 30ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆದ ಎರಡು ಪ್ರತ್ಯೇಕ ಸ್ಟೇಟಸ್ಗಳು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಶ್ರೀ ದಿನೇಶ್ ಅಮೀನ್ ಮಟ್ಟು ಅವರು...
29th Aug, 2016
‘ದಿನೇಶ್, ನೀವು ಬದಲಾಗಿಬಿಟ್ಟಿದ್ದೀರಿ, ಪ್ರಜಾವಾಣಿಯಲ್ಲಿದ್ದಾಗ ನಾವು ನಿಮ್ಮ ಅಭಿಮಾನಿಗಳು, ಎಷ್ಟು ಚೆನ್ನಾಗಿ ಬರೆಯುತ್ತಿದ್ದೀರಿ. ಆದರೆ ಇತ್ತೀಚೆಗೆ ಯಾಕೋ ನೀವು ಬರೀ ಬಿಜೆಪಿ, ಆರ್ ಎಸ್ ಎಸ್, ಮೋದಿ ವಿರುದ್ಧವೇ ಮಾತನಾಡುತ್ತಿದ್ದೀರಿ, ಬರೆಯುತ್ತಿದ್ದೀರಿ.. ನೀವು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿದ್ದೀರಿ. ಇದು ಸರಿ ಅಲ್ಲ...
11th Jul, 2016
ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಕೇಂದ್ರದ ಬಿಜೆಪಿ ಸರಕಾರ ಇಡೀ ದೇಶವನ್ನೇ ಜಾನುವಾರುಗಳನ್ನು ಕೊಲ್ಲುವ ಕಸಾಯಿಖಾನೆಗಳಿಂದ ತುಂಬಿಸಲು ಹೊರಟಿದೆ. ಕಳೆದ ಡಿಸೆಂಬರ್‌ನಲ್ಲಿ ಇಂಥದೊಂದು ‘ ಸರಕಾರಿ ಕಸಾಯಿಖಾನೆ ಅಭಿವೃದ್ಧಿ ಯೋಜನೆ‘ಗೆ ಕೇಂದ್ರದ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿ ಇಲಾಖೆಯ ರಾಜ್ಯಮಂತ್ರಿ ಸಾಧ್ವಿ ನಿರಂಜನ...
09th Jul, 2016
ಈ ಕೆಳಗೆ ನಾನು ಪ್ರಕಟಿಸಿರುವುದು ಈ ದಿನ ನನಗೆ ಮಿತ್ರ ಯು. ಹೆಚ್. ಉಮರ್ ರಿಂದ ಬಂದಿರುವಂತಹ ಒಂದು ವಾಟ್ಸಪ್ ಸಂದೇಶ. ನನಗೂ ಅಷ್ಟೇ, ಡಾ. ಝಾಕಿರ್ ನಾಯ್ಕರ ಧರ್ಮ ಪ್ರಚಾರದ ವೈಖರಿಯ ಬಗ್ಗೆಯಾಗಲೀ, ಅವರ ಕಾರ್ಯಕ್ರಮಗಳ ಬಗ್ಗೆಯಾಗಲೀ ಸಹಮತವಿಲ್ಲ. ನಾನು ಅವರ...
09th Jul, 2016
"ನಿಮ್ಮ ಸರದಿಗಾಗಿ ಕಾಯುತ್ತಾ  ಮೂರ್ಖರಾಗಬೇಡಿ" "ಅವರು ಮೊದಲು ಯಹೂದಿಗಳನ್ನು ಹುಡುಕುತ್ತಾ ಬಂದರು. ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಯಹೂದಿಯಾಗಿರಲಿಲ್ಲ. ನಂತರ ಅವರು ಕ್ರೈಸ್ತರನ್ನು ಹುಡುಕಿಕೊಂಡು ಬಂದರು. ಆವಾಗಲೂ ನಾನು ಸುಮ್ಮನಿದ್ದೆ. ಯಾಕೆಂದರೆ ನಾನು ಕ್ರೈಸ್ತನಾಗಿರಲಿಲ್ಲ. ಬಳಿಕ ಅವರು ಕಮ್ಯೂನಿಸ್ಟರನ್ನು ಹುಡುಕುತ್ತಾ ಬಂದರು. ಆವಾಗಲೂ ನಾನು ಸುಮ್ಮನಿದ್ದೆ....
21st Jun, 2016
ಸಚಿವ ಸಂಪುಟ ಪುನರ್ರಚನೆಯಲ್ಲಿ ಮಂತ್ರಿ ಪದವಿ ಕಳಕೊಂಡ ಕೆಲವರು ನೀರಿನಿಂದ ಹೊರಬಿದ್ದ ಮೀನಿನಂತೆ ಪರದಾಡುತ್ತಿರುವುದನ್ನು ನೋಡಿ ಕನ್ನಡಿಗರು ತಲೆ ತಗ್ಗಿಸಿ ನಿಂತಿದ್ದಾರೆ. ಅಂತಹ ಸಂದರ್ಭದಲ್ಲೇ ಮಂತ್ರಿ ಪದವಿ ಕಳಕೊಂಡಿರುವ ಕಿಮ್ಮನೆ ರತ್ನಾಕರ್ ಅವರು ನೀಡಿರುವ ಪ್ರತಿಕ್ರಿಯೆ ಪ್ರತಿಯೊಬ್ಬ ರಾಜಕಾರಣಿಗೆ ಮಾದರಿಯಾಗಿದೆ. ಇಡೀ...
Back to Top