ಪ್ರಚಲಿತ

11th Nov, 2018
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಆಧುನಿಕ ಭಾರತದ ನಿರ್ಮಾಪಕ ಎಂದು ಕರೆಯುತ್ತೇವೆ. ಸ್ವಾತಂತ್ರಾ ನಂತರ ಈ ದೇಶ ಸಾಧಿಸಿದ ಪ್ರಗತಿಯಲ್ಲಿ ಅವರ ಕೊಡುಗೆ ತುಂಬಾ ಮಹತ್ತರವಾದದ್ದು. ನಮ್ಮ ಸಾರ್ವಜನಿಕ ರಂಗದ ಉದ್ಯಮಗಳು, ನೀರಾವರಿ ಯೋಜನೆಗಳು, ರಸ್ತೆ ರೈಲು ಸಂಪರ್ಕ,...
04th Nov, 2018
ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಆರೆಸ್ಸೆಸ್‌ನ ಗುರಿ ಏನು ಎಂಬುದು ಪದೇ ಪದೇ ಬಯಲಾಗುತ್ತಲೇ ಇದೆ. ಸರ್ವರಿಗೂ ಸಮಾನತೆಯನ್ನು ನೀಡಿ, ಜಾತಿ ಮತ್ತು ಲಿಂಗ ತಾರತಮ್ಯ ಕೊಂಚವಾದರೂ ನಿವಾರಿಸಿದ ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಿ ಮತ್ತೆ ಜಾತಿ...
28th Oct, 2018
ಕನ್ನಡ ರಾಜ್ಯೋತ್ಸವ ಮತ್ತೆ ಬಂದಿದೆ. ಅಕ್ಕಪಕ್ಕದ ರಾಜ್ಯದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡನಾಡು ಒಂದಾಗಿ ಆರು ದಶಕಗಳೇ ಗತಿಸಿದವು. ರಾಷ್ಟ್ರಕವಿ ಕುವೆಂಪು ಅವರು ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ವರ್ಣಿಸಿದರು. ಇಂಥ ಸೌಹಾರ್ದದ ತಾಣದಲ್ಲಿ ಇತ್ತೀಚೆಗೆ ಜನಾಂಗ ದ್ವೇಷದ...
21st Oct, 2018
ಬಂಡಾಯ ಸಾಹಿತ್ಯ ಸಮ್ಮೇಳನ ಎಲ್ಲೇ ನಡೆದರೂ ಶ್ರೀಗಳು ಅಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಬಂಡಾಯ ಜಗದ್ಗುರು ಈಗ ನಿರ್ಗಮಿಸಿದ್ದಾರೆ. ದೇಶ ಫ್ಯಾಶಿಸಂನತ್ತ ದಾಪುಗಾಲು ಇಡುತ್ತಿರುವಾಗ, ಕಣ್ಣೆದುರು ಕಗ್ಗತ್ತಲು ಕವಿಯುತ್ತಿರುವಾಗ, ಇಂತಹ ಸ್ವಾಮಿಗಳ ನಿರ್ಗಮನ ಸೃಷ್ಟಿಸುವ ಶೂನ್ಯವನ್ನು ತುಂಬುವುದು ಕಷ್ಟ. ಹುಟ್ಟಿದ ಜೀವಿ ಸಾಯಲೇಬೇಕು. ಇದು...
14th Oct, 2018
ಇಂಥ ಅಪರೂಪದ ವ್ಯಕ್ತಿ ಕಲ್ಲೆ ಅವರು ಎಲ್ಲಿದ್ದಾರೆ ಎಂಬುದು ಗೊತ್ತೇ ಇರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ, ರಾಜ್ಯೋತ್ಸವ ಪ್ರಶಸ್ತಿ ಕೂಡ ಅವರಿಗೆ ಬಂತು. ಕಲ್ಲೆ ಅವರು ತಾವೆಂದೂ ಅರ್ಜಿ ಹಾಕಿ, ಪ್ರಶಸ್ತಿ ಪಡೆಯುವವರಲ್ಲ. ಆದರೆ, ದಿನೇಶ್ ಅಮೀನ್‌ಮಟ್ಟು, ಸರಜೂ ಕಾಟ್ಕರ್ ಮುಂತಾದವರು...
07th Oct, 2018
ಕಡು ಬಡತನದಲ್ಲಿ ಬದುಕು ಕಟ್ಟಿಕೊಂಡ ಹಸನ್ ನಯೀಂ ಸುರಕೋಡರಿಗೆ ಉರ್ದು ಬರುತ್ತಿರಲಿಲ್ಲ. ಉರ್ದು ಕಲಿಯಲು ಬಯಸಿದ ಅವರು ರಾಮದುರ್ಗದ ಉರ್ದು ಶಿಕ್ಷಕರೊಬ್ಬರನ್ನು ಗೊತ್ತು ಮಾಡಿಕೊಂಡು ಒಂದು ಕರಾರಿನ ಮೇಲೆ ಉರ್ದು ಕಲಿತರು. ತನಗೆ ಕನ್ನಡ ಕಲಿಸಿದರೆ, ಉರ್ದು ಕಲಿಸುವುದಾಗಿ ಆ ಶಿಕ್ಷಕರು...
30th Sep, 2018
ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಮನುಷ್ಯ ಸಮಾನತೆ ಬಗ್ಗೆ ಭಿನ್ನಮತ ಇರಲಿಲ್ಲ. ಗಾಂಧೀಜಿಗೆ ಆ ಕಾಲಘಟ್ಟದಲ್ಲಿ ದೇಶಕ್ಕೆ ಸ್ವಾತಂತ್ರ ಪಡೆಯುವುದು ಮುಖ್ಯವಾಗಿತ್ತು. ಅದಕ್ಕಾಗಿ ಉಳಿದೆಲ್ಲ ಅಂಶಗಳನ್ನು ಅವರು ಕಡೆಗಣಿಸಿದರು. ಆದರೆ ಬಾಬಾ ಸಾಹೇಬರು ಎತ್ತಿದ ಪ್ರಶ್ನೆ ಅದಲ್ಲ....
23rd Sep, 2018
ಹಿಂದುತ್ವ ಎಲ್ಲರನ್ನೂ ಒಳಗೊಳ್ಳಬೇಕೆಂದು ಆರೆಸ್ಸೆಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಇಂತಹ ಮಾತು ಸಂಘದ ನಾಯಕರಿಂದ ಇದೇ ಮೊದಲ ಬಾರಿ ಕೇಳಿ ಬರುತ್ತಿಲ್ಲ. ಗೋಳ್ವಾಲ್ಕರ್ ನಂತರ ಬಂದ ಸರಸಂಘಚಾಲಕರೆಲ್ಲ ಒಂದಿಲ್ಲೊಂದು ಬಾರಿ ಇಂತಹ ಮಾತನ್ನು ಹೇಳುತ್ತಲೇ ಬಂದಿದ್ದಾರೆ. ಆದರೆ ರಾಷ್ಟ್ರೀಯ...
16th Sep, 2018
ಮೊದಲ ಬಾರಿಗೆ ಜಯದೇವ ಆಸ್ಪತ್ರೆಗೆ ಭೇಟಿ ನೀಡಿದವರು ಯಾರೂ ಸಹ ಇದು ಸರಕಾರದಿಂದ ನಡೆಸಲ್ಪಡುತ್ತದೆ ಎಂದರೆ ನಂಬುವುದಿಲ್ಲ. ಸೌಕರ್ಯಗಳ ಕೊರತೆ ಮತ್ತು ಸಮಸ್ಯೆಗಳ ಗೂಡಿನಂತೆ ಕಾಣಸಿಗುವ ಸರಕಾರಿ ಆಸ್ಪತ್ರೆಗಳಿಗೆ ಅಪವಾದ ಎಂಬಂತಿರುವ ಜಯದೇವ ಆಸ್ಪತ್ರೆ ಆವರಣದಲ್ಲಿ ಎಲ್ಲಿ ಹೋದರೂ ಅಲ್ಲಿ ಶುಚಿತ್ವ...
09th Sep, 2018
ಮೂಢನಂಬಿಕೆ ವಿರುದ್ಧ ಸ್ಟೇಟಸ್ ಹಾಕಿದ್ದಕ್ಕೆ ಅಶ್ರಫ್‌ರನ್ನು ಬಂಧಿಸುವುದಾದರೆ, ಬಹಿರಂಗವಾಗಿ ಹತ್ಯೆಗೆ ಪ್ರಚೋದಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಂಧಿಸಬೇಕು. ಆತ ಬಹಿರಂಗ ಸಭೆಯೊಂದರಲ್ಲಿ ಮಾತನಾಡುತ್ತ, ನಾನು ಗೃಹಸಚಿವನಾದರೆ, ಬುದ್ಧಿಜೀವಿಗಳನ್ನೆಲ್ಲ ಸಾಲಾಗಿ ನಿಲ್ಲಿಸಿ ಗುಂಡಿಕ್ಕುವೆ ಎಂದು ಹೇಳಿದ್ದರು. ಕೇಂದ್ರದ ಇನ್ನೊಬ್ಬ...
02nd Sep, 2018
ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಕೊಂದವರಿಗೆ ಹಾರ ಹಾಕಿ ಸ್ವಾಗತಿಸಿದವರನ್ನು ತಮ್ಮ ಪಕ್ಷದಲ್ಲಿ ಇಟ್ಟುಕೊಂಡವರು ಪ್ರಧಾನಿ ಹತ್ಯೆಯ ಸಂಚಿನ ಕತೆ ಹೆಣೆದು ಈ ದೇಶದ ಹಿರಿಯ ಚಿಂತಕ ಆನಂದ ತೇಲ್ತುಂಬ್ಡೆೆ, ಕವಿ ವರವರ ರಾವ್, ಪತ್ರಕರ್ತ ಗೌತಮ ನವ್ಲಾಖಾ, ನ್ಯಾಯವಾದಿ ಸುಧಾ...
26th Aug, 2018
ನೆರೆ, ಬರಗಾಲದಂತಹ ಪ್ರಕೃತಿ ಪ್ರಕೋಪದ ಸಂದರ್ಭದಲ್ಲಿ ಮನುಷ್ಯರಾದವರು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಹಲವು ಉದಾಹರಣೆಗಳು ಕೇರಳ ಮತ್ತು ಕೊಡಗಿನ ದುರಂತದ ಸನ್ನಿವೇಶದಲ್ಲಿ ನಮ್ಮ ಕಣ್ಣೆದುರು ಗೋಚರಿಸಿವೆ. ಹಾಗೆಯೇ, ಹೇಗೆ ನಡೆದುಕೊಳ್ಳಬಾರದು ಎಂಬುದಕ್ಕೆ ಕೆಲ ಕೆಟ್ಟ ಉದಾಹರಣೆಗಳೂ ಇವೆ. ತಾಯಿಯ ಗರ್ಭದಿಂದ ಹೊರಗೆ...
19th Aug, 2018
ದೀರ್ಘಕಾಲದವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿಯವರಿಗೆ ಸಮಗ್ರ ದೇಶದ ಕಲ್ಪನೆ ಇನ್ನೂ ಮೂಡಿಲ್ಲ ಎಂಬಂತೆ ಭಾಸವಾಗುತ್ತದೆ. ಭಾರತದಲ್ಲಿ 30 ರಾಜ್ಯಗಳಿವೆ. ರಾಜ್ಯ ಸರಕಾರಗಳಿದ್ದರೂ ಮತ್ತು ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಅವುಗಳ ಅಭಿವೃದ್ಧಿ ಮತ್ತು ಅಲ್ಲಿನ ಜನರ ಅಹವಾಲಿಗೆ ಸ್ಪಂದಿಸುವ ಹೊಣೆ ಪ್ರಧಾನಿಗೆ ಇರುತ್ತದೆ....
12th Aug, 2018
ಆಗಸ್ಟ್ 15. ಸ್ವಾತಂತ್ರ ದಿನಾಚರಣೆ. ಪ್ರತಿ ವರ್ಷ ಈ ದಿನ ಸಮೀಪಿಸಿದಾಗಲೆಲ್ಲ ಮಾಧ್ಯಮಗಳಲ್ಲಿ ಸೂಕ್ಷ್ಮ ಸಂಗತಿಯೊಂದನ್ನು ಗಮನಿಸಬಹುದು. ದೇಶದ ಕಾನೂನು ಸುವ್ಯವಸ್ಥೆ ಮತ್ತು ಭದ್ರತೆಗೆ ಭಯೋತ್ಪಾದಕರಿಂದ ಧಕ್ಕೆಯಾಗಲಿದೆ. ಸ್ವಾತಂತ್ರ ದಿನಾಚರಣೆ ಸಮಾರಂಭಕ್ಕೆ ಭಂಗ ಉಂಟಾಗಲಿದೆ. ವಿಮಾನ ನಿಲ್ದಾಣ, ಬಸ್-ರೈಲು ನಿಲ್ದಾಣ ಸೇರಿದಂತೆ...
05th Aug, 2018
ಈಗ ಮಾಧ್ಯಮವೆಂದರೆ ಪತ್ರಿಕೆ ಮಾತ್ರವಲ್ಲ, ಅದರ ವ್ಯಾಪ್ತಿ ವಿಸ್ತಾರವಾಗಿದೆ. ಮುದ್ರಣ ಮಾಧ್ಯಮದ ಜೊತೆಗೆ ದೃಶ್ಯ ಮಾಧ್ಯಮವೂ ಸೇರಿಕೊಂಡಿದೆ. ಡಿಜಿಟಲ್ ಪತ್ರಿಕೆಗಳು ಬಂದಿವೆ. ಸಾಮಾಜಿಕ ಜಾಲತಾಣವು ಕ್ರಿಯಾಶೀಲವಾಗಿದೆ. ಆದರೆ ಮಾಧ್ಯಮಗಳಲ್ಲಿ ಮೊದಲಿನ ಸ್ವಾತಂತ್ರದ ಗಾಳಿ ಬೀಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್...
29th Jul, 2018
ಅಪಾರ ತ್ಯಾಗ-ಬಲಿದಾನದಿಂದ ಕಟ್ಟಿದ ಅಖಂಡ ಕರ್ನಾಟಕವನ್ನು ಒಡೆದು ಹೋಳು ಹೋಳು ಮಾಡುವ ಅಪಸ್ವರ ಮತ್ತೆ ಕೇಳಿ ಬರುತ್ತಿವೆ. ಈ ಅಪಸ್ವರಗಳಿಗೆ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಈ ಹಿಂದಿನಂತೆ ಅಖಂಡ ಭಾರತ ನಿರ್ಮಿಸಲು ಹೊರಟವರ ಪಕ್ಷದಿಂದಲೇ ಅಖಂಡ ಕರ್ನಾಟಕವನ್ನು ವಿಭಜಿಸುವ ಮಾತುಗಳು ಕೇಳಿ...
22nd Jul, 2018
ಕಳೆದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರನ್ನು ನೇರವಾಗಿ ಟೀಕಿಸಿದ ಇಬ್ಬರೇ ಇಬ್ಬರು ಕಾಂಗ್ರೆಸ್ ನಾಯಕರೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್ ಖರ್ಗೆ. ಇಂತಹ ದಿಟ್ಟ ಹಿನ್ನೆಲೆ ಹೊಂದಿರುವ ಖರ್ಗೆಯವರಿಗೆ ನ್ಯಾಯವಾಗಿ ಮುಖ್ಯ ಮಂತ್ರಿಯಾಗುವ ಅವಕಾಶ ದೊರೆಯಬೇಕಾಗಿತ್ತು....
15th Jul, 2018
ಏಕಕಾಲಕ್ಕೆ ಚುನಾವಣೆ ಎಂಬುದು ಯಾವುದೇ ಸರಕಾರವನ್ನು ಮತದಾನದ ಮೂಲಕ ಕೆಳಗಿಳಿಸಲು ಚುನಾಯಿತ ಶಾಸಕರು ಮತ್ತು ಲೋಕಸಭಾ ಸದಸ್ಯರಿಗೆ ಇರುವ ಹಕ್ಕಿನ ಮೇಲೆ ಕಡಿವಾಣ ಹಾಕಿದಂತಾಗುತ್ತದೆ. ಬಹುಮತ ಹೊಂದಿರುವ ಒಂದು ಆಳುವ ಪಕ್ಷ, ಸದನದ ವಿಸರ್ಜನೆಗೆ ಶಿಫಾರಸು ಮಾಡಿ, ಮಧ್ಯಂತರ ಚುನಾವಣೆ ನಡೆಸುವುದಕ್ಕೆ...
08th Jul, 2018
ಇಲ್ಲಿ ಕೋಮುವಾದ ಎರಡು ವಿಧಗಳಲ್ಲಿ ಆಕ್ರಮಣಕ್ಕೆ ಸಜ್ಜಾಗಿದೆ. ಒಂದೆಡೆ ಚಿಂತಕರನ್ನು ಕೊಂದು ಭೀತಿಯ ವಾತಾವರಣವನ್ನು ನಿರ್ಮಿಸುತ್ತಿದೆ. ಇನ್ನೊಂದೆಡೆ ಪ್ರಭುತ್ವದ ಅಧಿಕಾರ ಸೂತ್ರವನ್ನು ಚುನಾವಣೆಯ ಮೂಲಕ ಹಿಡಿದು ಜನಪರ ಹೋರಾಟಗಾರರನ್ನು, ಮಾನವಹಕ್ಕುಪರ ಕಾರ್ಯಕರ್ತರನ್ನು ನಕ್ಸಲರೆಂದು ಕರೆದು ಜೈಲಿಗೆ ತಳ್ಳುತ್ತಿದೆ. ಹಾಗಾಗಿ ಭಿನ್ನ ದನಿಗಳು...
01st Jul, 2018
ಭೀಮಾ ಕೋರೆಗಾಂವ್‌ನಲ್ಲಿ ಶಾಂತಿಯುತವಾಗಿ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅಮಾಯಕ ದಲಿತರ ಮೇಲೆ ಹಲ್ಲೆ, ಗೂಂಡಾಗಿರಿ ಮಾಡಿದವರು ಹಿಂದುತ್ವವಾದಿ ಗೂಂಡಾಗಳು. ಈ ಗುಂಪು ಹಿಂಸಾಚಾರ ಆರೋಪಕ್ಕೊಳಗಾಗಿರುವ ಸಂಭಾಜಿ ಭೀಡೆ ಮತ್ತು ಮಿಲಿಂದ ಏಕ್‌ಬೋತೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಮಹಾರಾಷ್ಟ್ರದ ಬಿಜೆಪಿ ಸರಕಾರ...
24th Jun, 2018
ದೇಶದ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿರುವ ಮನುವಾದಿ ಫ್ಯಾಶಿಸ್ಟ್ ಶಕ್ತಿಗಳಿಂದ ನಮ್ಮ ಸಂವಿಧಾನವೇ ಅಪಾಯದ ಅಂಚಿಗೆ ಸಿಲುಕಿದೆ. ಈ ಸಂವಿಧಾನವನ್ನು ಕಾಪಾಡಬೇಕಾದರೆ ತುರ್ತಾಗಿ ಈಗಿನ ಕೇಂದ್ರ ಸರಕಾರ ಬದಲಾಗಬೇಕು. ಎಲ್ಲ ಪ್ರತಿಪಕ್ಷಗಳು ಒಂದಾಗಿ ಮೋದಿ ಬಿಜೆಪಿಯನ್ನು ಪ್ರಭುತ್ವದಿಂದ ದೂರವಿಡಬೇಕು. ಹಿಂದುತ್ವವಾದಿ ಭಯೋತ್ಪಾದಕ...
18th Jun, 2018
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂದಗಿಯ ಶ್ರೀರಾಮ ಸೇನೆಯ ಕಾರ್ಯಕರ್ತ ಪರಶುರಾಮ ವಾಗ್ಮೋರೆ ಬಂಧನದ ವರದಿ ಗೊತ್ತಾಗುತ್ತಿದ್ದಂತೆ ನನಗೆ ನಲವತ್ತು ವರ್ಷಗಳ ಹಿಂದಿನ ಬಿಜಾಪುರ ಜಿಲ್ಲೆ ಒಮ್ಮೆಲೇ ನೆನಪಿಗೆ ಬಂತು. ನಾವೆಲ್ಲ ಓಡಾಡಿದ, ಒಡನಾಡಿದ, ರಂಜಾನ್ ದರ್ಗಾ ಮತ್ತು ನನ್ನಂಥವರ...
10th Jun, 2018
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಉದಾಯವಾದಿಯಂತೆ ಕಾಣಿಸಿಕೊಳ್ಳಲು ಯತ್ನಿಸುತ್ತದೆ. ಅದು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಾಮಾಜಿಕ ಮಾನ್ಯತೆ ಗಳಿಸಲು ಯತ್ನಿಸುತ್ತಲೇ ಇದೆ. ಆದರೆ, ಅದು ನಡೆದು ಬಂದ ದಾರಿ ದ್ರೋಹದ ದಾರಿಯಾದುದರಿಂದ ಭಾರತದ ಪ್ರಜ್ಞಾವಂತರು ಅದನ್ನು ತಿರಸ್ಕರಿಸುತ್ತಲೇ...
03rd Jun, 2018
ವರ್ಗರಹಿತ, ಜಾತಿರಹಿತ ಸಮಾಜದ ಕನಸು ಕಾಣುವವರಿಗೆ ಇದು ಅತ್ಯಂತ ಕೆಟ್ಟ ಕಾಲ. ಇಂಥ ಕಾಲಘಟ್ಟದಲ್ಲಿ ನಾವು ಸೈದ್ಧಾಂತಿಕ ಶತ್ರುಗಳೊಂದಿಗೆ ಮಾತ್ರವಲ್ಲ ನಮ್ಮನಮ್ಮಾಳಗೆ ಹೊಡೆದಾಡುವ, ಕೆಸರೆರಚುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ದಟ್ಟ ನಿರಾಸೆಯ ಕಾಲದಲ್ಲೂ ಅಲ್ಲೊಂದು ಮಿಂಚು ಹುಳುವಿನಂತಹ ಬೆಳಕಿನ ಕಿರಣಗಳು ಮೂಡುತ್ತಿವೆ....
27th May, 2018
ಸಮ್ಮಿಶ್ರ ಸರಕಾರವನ್ನು ಸಾಧ್ಯವಾದಷ್ಟು ಬೇಗ ಕೆಡವಬೇಕು ಮತ್ತು ತಾನು ಪುನಃ ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ಹೊಂಚು ಹಾಕುತ್ತಿದೆ. ಶೀಘ್ರವೇ ಮರು ಚುನಾವಣೆ ನಡೆಸಿ, ಬಹುಮತ ಗಳಿಸುವ ಇರಾದೆ ಹೊಂದಿದೆ. ಅದಕ್ಕಾಗಿಯೇ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ವೈಮನಸ್ಸು ಉಂಟು...
20th May, 2018
ರಾಜ್ಯದ ಅಧಿಕಾರ ಸೂತ್ರವನ್ನು ಸರದಿಯಂತೆ ಹಂಚಿಕೊಳ್ಳುತ್ತ ಬಂದ ಮೇಲ್ಜಾತಿ ಮತ್ತು ಮೇಲ್ವರ್ಗಗಳಿವೆ. ಶೇ. 69ರಷ್ಟು ಜನ ಸಮುದಾಯವನ್ನು ಪ್ರತಿನಿಧಿಸುವ ಅವಕಾಶ ವಂಚಿತ ಸಮುದಾಯದ ದಕ್ಷ, ಪ್ರಾಮಾಣಿಕ ರಾಜಕೀಯ ಅಧಿಕಾರದಲ್ಲಿರುವವರನ್ನು ಸಹಿಸಲಿಲ್ಲ. ಜಾತಿರಹಿತ ಸಮಾಜದ ಬಗ್ಗೆ ನಾವು ಎಷ್ಟೇ ಮಾತನಾಡಿದರೂ ಭಾರತದಂತಹ ದೇಶದಲ್ಲಿ ಅನೇಕ...
06th May, 2018
ಈ ಚುನಾವಣೆ ಭಾರತದ ಜನತಂತ್ರದ ಭವಿಷ್ಯ ನಿರ್ಧರಿಸಲಿದೆ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನ ಈ ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕೋ ಇಲ್ಲ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಪ್ರತಿಪಾದಿಸುವ ಮನುವಾದಿ ಹಿಂದುತ್ವ ಈ ದೇಶವನ್ನು ಪ್ರಪಾತಕ್ಕೆ ತಳ್ಳಬೇಕೋ ಎಂಬುದನ್ನು ನಿರ್ಧರಿಸುವ ಚುನಾವಣೆ. ಕರ್ನಾಟಕವನ್ನು ಬಾಧಿಸುತ್ತಿರುವ...
29th Apr, 2018
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ 13 ದಿನ ಬಾಕಿಯುಳಿದಿದೆ. ಹೇಗಾದರೂ ಮಾಡಿ, ಮತ್ತೆ ಕರ್ನಾಟಕವನ್ನು ಕಬಳಿಸಬೇಕು ಎಂದು ಬಿಜೆಪಿ ಮಾತ್ರವಲ್ಲ, ನೇರವಾಗಿ ಸಂಘ ಪರಿವಾರ ಕಣಕ್ಕಿಳಿದಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿರೋಧಿಸುತ್ತಿರುವ, ಪಲ್ಲಕ್ಕಿ ಮೇಲೆ ಕುಳಿತುಕೊಳ್ಳುವ ಪಂಚಪೀಠಗಳ ಜಗದ್ಗುರುಗಳು ಈಗ...
22nd Apr, 2018
ದೇಶದ ಭವಿಷ್ಯದ ದೃಷ್ಟಿಯಿಂದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಕೈಗೊಂಡ ಒಮ್ಮತದ ತೀರ್ಮಾನ ಆಶಾದಾಯಕವಾಗಿದೆ. ಇದರ ಜೊತೆಗೆ ಈ ದೇಶ ಕಂಡ ಮಹಾನ್ ರಾಜಕೀಯ ಮುತ್ಸದ್ದಿ, ಸಂಸದೀಯ ಪಟು ಹಾಗೂ ಎಲ್ಲ ಸಮು ದಾಯಗಳ ಗೌರವಕ್ಕೆ ಪಾತ್ರರಾದ ಸೀತಾರಾಮ್ ಯೆಚೂರಿ ಪಕ್ಷದ ಪ್ರಧಾನ...
15th Apr, 2018
ಕಾಂಗ್ರೆಸ್ ಪಕ್ಷ ನವ ಉದಾರವಾದಿ ಆರ್ಥಿಕ ನೀತಿಯನ್ನು ಪ್ರತಿಪಾದಿಸಿ ದರೂ ಭಾರತ ಮತನಿರಪೇಕ್ಷ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯ ಬೇಕೆಂಬ ನಿಲುವಿಗೆ ಬದ್ಧವಾಗಿದೆ. ಬ್ರಾಹ್ಮಣರಿಂದ ಹಿಡಿದು ದಲಿತ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರು ಕಾಂಗ್ರೆಸ್‌ನ ಸಂಘಟನಾ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಈ ಎಲ್ಲ ಸಮುದಾಯಗಳ...
Back to Top