ಟಾಪ್ ಸುದ್ದಿಗಳು

ತೂತುಕುಡಿ, ಮೇ 23: ವೇದಾಂತ್ ಲಿಮಿಟೆಡ್‌ನ ತಾಮ್ರದ ಘಟಕ ಸ್ಟರ್ಲೈಟ್ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಬುಧವಾರ ಕೂಡ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಹಾರಿಸಿದ ಗುಂಡಿಗೆ ಯುವಕನೋರ್ವ ಬಲಿಯಾಗಿದ್ದಾನೆ.

 ತಿರುವನಂತಪುರ, ಮೇ 23: ಹತ್ತು ಜನರ ಸಾವಿಗೆ ಕಾರಣವಾದ ನಿಪಾಹ್ ವೈರಸ್ ಸೋಂಕನ್ನು ನಿಯಂತ್ರಿಸಲಾಗಿದೆ ಎಂದು ಬುಧವಾರ ಹೇಳಿರುವ ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ಆತಂಕಪಡುವ ಅಗತ್ಯ ಇಲ್ಲ ಎಂದಿದ್ದಾರೆ.

ಉತ್ತರ ಪ್ರದೇಶ, ಮೇ 23: ಆಸ್ಪತ್ರೆಗೆ ದಾಖಲಿಸಲು ವೈದ್ಯರು ಅನುಮತಿ ನಿರಾಕರಿಸಿದ ಕಾರಣ ಮಹಿಳೆಯೊಬ್ಬರು ರೈಲ್ವೆ ನಿಲ್ದಾಣದ ಶೌಚಾಲಯವೊಂದರಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಎತಾ ಎಂಬಲ್ಲಿ ನಡೆದಿದೆ.

ಅಟ್ಲಾಂಟ, ಮೇ 23: ಅಮೆರಿಕಾದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕರಿಯ ಮಹಿಳೆಯೋರ್ವರು ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅಟ್ಲಾಂಟ ಮೂಲದ ವಕೀಲೆ ಸ್ಟೇಸಿ ಅಬ್ರಹಾಂರನ್ನು ಜಾರ್ಜಿಯಾದ ಡೆಮೊಕ್ರಾಟಿಕ್ ಪಕ್ಷ ನೂತನ ಗವರ್ನರ್ ಆಗಿ ಆಯ್ಕೆ ಮಾಡಿದೆ....

ಕೋಲ್ಕತಾ, ಮೇ 23: ನಾಯಕ ದಿನೇಶ್ ಕಾರ್ತಿಕ್(52 ರನ್, 38 ಎಸೆತ) ಹಾಗೂ ಆಲ್‌ರೌಂಡರ್ ರಸ್ಸಲ್(ಔಟಾಗದೆ 49,25 ಎಸೆತ) ಸಾಹಸದ ನೆರವಿನಿಂದ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಐಪಿಎಲ್‌ನ ಎಲಿಮಿನೇಟರ್ ಪಂದ್ಯದ...

ಬೆಂಗಳೂರು, ಮೇ 23: ಇಂದು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು.

ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ...

ತಿರುವನಂತಪುರ, ಮೇ 23: ನಿಪಾಹ್ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಕೇರಳ ಸರಕಾರ, ರಾಜ್ಯದ ಉತ್ತರ ಜಿಲ್ಲೆಗಳಾದ ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್ ಹಾಗೂ ಕಣ್ಣೂರಿಗೆ ಭೇಟಿ ನೀಡದಂತೆ ಪ್ರವಾಸಿಗಳಲ್ಲಿ ವಿನಂತಿಸಿದೆ....

ಬೆಂಗಳೂರು, ಮೇ 23: ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿಟ್ಟು ರೈತರ 53 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಬೇಕು ಎಂಬ ವಿಚಾರದಲ್ಲಿ ಹಿಂದಕ್ಕೆ ಸರಿಯಲ್ಲ, ಪಲಾಯನ ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು...

ಬೆಂಗಳೂರು, ಮೇ 23: ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ವಿಧಾನಸಭೆಯಲ್ಲಿ ಮೇ 25ರ ಶುಕ್ರವಾರ ನಡೆಯಲಿದೆ.

ಲಂಡನ್, ಮೇ 23: ಮಾನ್ಸೂನ್ ತಿಂಗಳಲ್ಲಿ ಸಂಭವಿಸುವ ನೆರೆ ಹಾವಳಿ ಮತ್ತು ಭೂಕುಸಿತದಿಂದಾಗಿ ಬಾಂಗ್ಲಾದೇಶದ ಕಾಕ್ಸ್ ಬಝಾರ್‌ನಲ್ಲಿರುವ ಒಂದೂವರೆಯಿಂದ ಎರಡು ಲಕ್ಷದಷ್ಟು ರೊಹಿಂಗ್ಯಾ ನಿರಾಶ್ರಿತರು ಅಪಾಯದಲ್ಲಿದ್ದಾರೆ ಎಂದು ವಿಶ್ವಸಂಸ್ಥೆ...

ಜಮ್ಮು, ಮೇ 23: ಜಮ್ಮು ವಲಯದ ಅಂತಾರಾಷ್ಟ್ರೀಯ ಗಡಿಗುಂಟ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಹಾಗೂ ಬಿಎಸ್‌ಎಫ್ ಸಿಬ್ಬಂದಿ ಸೇರಿದಂತೆ 30 ಮಂದಿ ಗಾಯಗೊಂಡಿದ್ದಾರೆ ಇದರೊಂದಿಗೆ ಪಾಕಿಸ್ತಾನ...

ಚೆನ್ನೈ,ಮೇ 23: ಆರೆಸ್ಸೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಕ್ಕಾಗಿ ತಮಿಳರನ್ನು ಕೊಲ್ಲಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.

ಬೆಳಗಾವಿ, ಮೇ 23: ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ ಆಗುತ್ತಿದ್ದು, ಈ ಮ್ಯಾರೇಜ್ ಅನಧಿಕೃತವಾಗಿದೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಬೆಳಗಾವಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲಕ್ನೋ, ಮೇ 23: ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಸರಕಾರದ ಸಚಿವ ಸಂಪುಟವು ರಾಜ್ಯದ ಮದ್ರಸಾಗಳಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಎಂಡ್ ಟ್ರೈನಿಂಗ್ (ಎನ್‍ಸಿಇಆರ್ ಟಿ) ಪಠ್ಯಪುಸ್ತಕಗಳನ್ನು ಪರಿಚಯಿಸಲು...

ಅಹ್ಮದಾಬಾದ್, ಮೇ 23: ಜಿಲ್ಲೆಯ ಧೊಲ್ಕಾ ಪಟ್ಟಣದಲ್ಲಿ 'ಸಿನ್ಹ್' ಎಂಬ ಉಪನಾಮೆಯನ್ನು ಹೆಸರಿನ ಜತೆ ಬಳಸುವ ವಿಚಾರವಾಗಿ ದಲಿತ ಮತ್ತು ಮೇಲ್ಜಾತಿಯವರ ನಡುವೆ ಸಂಘರ್ಷ ನಡೆದಿದೆ. 

ಬೆಂಗಳೂರು, ಮೇ 23: ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಪ್ರಧಾನಿ ಮೋದಿ, ಅಮಿತ್ ಶಾರ ಅಶ್ವಮೇಧಯಾಗದ ಕುದುರೆಯನ್ನು ರಾಜ್ಯದಲ್ಲಿ ಕಟ್ಟಿ ಹಾಕುವುದು ನಾವೇ ಎಂದು ಹೇಳಿದ್ದೆ. ಅದರಂತೆ, ಕಾಂಗ್ರೆಸ್ ಜೊತೆ ಸೇರಿ ಆ ಕೆಲಸ...

ಬೆಂಗಳೂರು, ಮೇ 23: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಗೆ ಪ್ರಮುಖ ಕಾರಣಕರ್ತರಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ಗೆ ಉಪ ಮುಖ್ಯಮಂತ್ರಿ ಹುದ್ದೆ ಕಲ್ಪಿಸದಿರುವ ಪಕ್ಷದ ನಾಯಕರ ವಿರುದ್ಧ ಡಿ.ಕೆ.ಸಹೋದರರು ತೀವ್ರ ಅಸಮಾಧಾನ...

ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 23: ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 1ನೆ ತರಗತಿಗೆ ದಾಖಲಾಗಲು ಮಗುವಿಗೆ ಕನಿಷ್ಟ ವಯೋಮಿತಿ 5 ವರ್ಷ 5 ತಿಂಗಳಿಗೆ ನಿಗದಿಪಡಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಬೆಂಗಳೂರು, ಮೇ 23: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಸಂಬಂಧ ಎಐಸಿಸಿ ಅಧ್ಯಕ್ಷ...

ಬೆಂಗಳೂರು, ಮೇ 23: ಪ್ರಾದೇಶಿಕ ಪಕ್ಷಗಳ ಜೊತೆ ಸಂಘರ್ಷಕ್ಕೆ ಮುಂದಾಗುವವರು ನಾಶವಾಗಲಿದ್ದಾರೆ(ಜೋ ಹಮ್ ಸೇ ಟಕ್‌ರಾಯೆಗಾ, ವೋ ಚೂರ್ ಚೂರ್ ಹೋಜಾಯೇಗಾ) ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

Back to Top